ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಧ್ಯಾಯ :ನಾಲ್ಕು ಪದ್ಯ ಮುಂದೆ ತ್ರೇತಾಯುಗವು ಬಂದಂಥ ಕಾಲದಲಿ ಇಂದಿರೇಶನು ರಾಮಯೆಂದು ದಶರಥನಲ್ಲಿ ಕಂದನಾಗ್ಯವತರಿಸಿ ತಂದೆ ಆಜ್ಞದಿ ಸೀತೆಯಿಂದ ಲಕ್ಷ್ಮಣನಿಂದ ಚಂದಾಗಿ ಬಡಗೂಡಿ ವನ ಚರಿಸಿ ಬಂದ ಯಮುನಾದ್ರಿಯಲಿ ನೊಂದು ನೀರಡಿಸಿ ತನ್ನ ಬಾಣದಿಂದ ಭೇದಿಸಿದಾ|| 1 ತಡವು ಇಲ್ಲದೆ ಭೂಮಿ ಒಡೆದು ಬಂದಿತು ಆಗ ಕಡು ಭೋಗವತಿ ನಾರಿಯು ಗುಡದಂಥ ಸವಿನೀರು ಕುಡಿದು ನರನಂತೆ ದೃಢನಿದ್ರೆಗೊಂಡ ಜಗದೊಡೆಯ ರಾಘವನು|| ದೃಢವಾಗಿ ಬಹುಕಾಲ ಬಿಡದೆ ಅಲ್ಲಿರುವ ಆ ಮೃಡನ ರಾಣಿಯು ತಾನು ನಡೆದು ಬಂದಳು ಅಲ್ಲೇ ಶರಗರಾದಿ ಕೈಯಲ್ಲಿ ಹಿಡಿದು, ಆರತಿಯನ್ನು ದೃಢಭಕುತ ಲಕ್ಷಣನು ದೃಢ ನಿದ್ರಿಗೊಂಡಂಥ ಒಡಿಯಗೆಚ್ಚರ ಮಾಡಗೊಡದೆ ಆಕೆಯ ಕಂಡು ನುಡಿದನೀಪರಿಯ|| ಪದ ರಾಗ:ಭೈರವಿ ಅಟತಾಳ ಸ್ವರ ಋಷಭ ದಾವಾಕಿ ಪೇಳಮ್ಮಾ|| ಬಂದವಳು ನೀ ದಾವಾಕಿ|| ದಾವಾಕಿ ಪೇಳಮ್ಮಾ ದಾವ ರಾಜನ ಸತಿ ದಾವ ಕಾರಣದಿಂದ ಧಾವಿಸಿಲ್ಲಿಗೆ ಬಂದೆ|| ಪ ಸುಂದರಿ ವಾಣಿಯೋ|| ಅಥವಾ ಮುಶುಂದನ ರಾಣಿಯೋ|| ಇಂದ್ರನ ರಾಣಿಯೋ|| ಚಂದ್ರನ ರಾಣಿಯೋ|| ಚಂದ್ರಮುಖಿಯೇ ನೀನು ಚಂದಾಗಿ ಪೇಳಮ್ಮಾ|| 1 ಭಾತೃರಾದವರು ನಾವು|| ಪರಸ್ಪರ ಪ್ರೀತಿಯಿಂದಿರುವೆವು|| ಸೀತಾವಿರಹದಿಂದ ಸೋತುಬಂದೆವು ಇಲ್ಲೆ ಮಾತೇ ಮೌನವು ಬಿಟ್ಟು ಮಾತಾಡು ಬ್ಯಾಗನೇ|| 2 ಬ್ರಹ್ಮಚರ್ಯವೆಂಬುದು|| ಈ ಕಾಲಕ್ಕೆ ನಮ್ಮಲ್ಲಿ ಇರುವುದು|| ತಮ್ಮ ಲಕ್ಷ್ಮಣ ನಾನು ನಿರ್ಮಲ ಗುಣರಾಮ ನಮ್ಮಣ್ಣನಿವ ಪರಬ್ರಹ್ಮಾನಂತಾಧ್ರೀಶಾ|| 3 ಆರ್ಯಾ ಲಕ್ಷ್ಮಣ ನಾಡಿದ ಮಾತೂ|| ಲಕ್ಷಿಗೆ ತರಲಿಲ್ಲ ದೇವಿ ಮಾತಾಡಿದನೂ ಹೀಗೆಂದೂ|| ಪದ ರಾಗ:ಧನ್ಯಾಸಿ ಆದಿತಾಳ ನಡಿ ನಡಿ £ಡಿ ನೀನು || ನುಡಿಯದ ಭಾಗಿಯೇನು|| ನ || ನಡಿ ನಡಿ ಹಿಂದಕು ಬಡಿವಾರೇನಿದು ಬಿಡು ಬ್ಯಾಗನೆ ನಿನ್ನ ಎನಗೆ ಬಿಡದೆ ಬಾಣದಿಂದೊಡೆವೆನು ನಾನು| ಪ ಎಕಾಂತ ಸ್ಥಳಕೆ ಕಾಲಕೆ ಒಬ್ಬಾಕೆ ಬರುವದಿದು ದಿಂದ ನೀ ಬೇಕಾದಲ್ಲೆ|| 1 ವನವನ ಚರಿಸುಲವ ವನವಾಸಿಗಳಿಗೆ ವನುತಿಯ ಸಂದರ್ಶನ ನಮಗ್ಯಾಕಿದು ಗುಣವಂತಿಯೆ ಅರಕ್ಷಣ ನಿಲ್ಲದಲೆ 2 ಕಾಲದಲಿ ಗದ್ದಲ ಮಾಡದೆ ಬುದ್ಧಿವಂತೆಯೆ|| 3 ಅನುಜನ ಈಪರಿ ಸಿಟ್ಟು || ಅನುಸರಿಸುತಾ ಎದ್ದ ನಿದ್ರೆಯನು ಬಿಟ್ಟು || ವನುತಿಯ ನೋಡಿದ ರಾಮ|| ವಿನಯದಿ ಮಾತಾಡಿವನು ಗುಣಧಾಮ || 1 ಪದ ರಾಗ:ದೇಶಿ ಅಟತಾಳ ಸ್ವರ :ಷಡ್ಜ ದಾರ್ಹೇಳಮ್ಮಯಾ ಉದಾರ್ಹಳಗಿರುವೆ ನೀ || ದಾರ್ಹೇಳಮ್ಮಯ|| ದಾರಿಲ್ಲಿ ಸ್ಥಳದಲ್ಲಿ ದಾರನ್ಹುಡುಕುವಿ ನಿ|| ದಾ|| ಪ ವನದಲ್ಲೆ ಇರುವಂಥ ವನದೇವತೆಯೇ ನೀ|| ದಾ|| ಮನಿಯಲ್ಲೇ ಇರುವಂಥ ಮನಿದೇವತೆಯೋ ನೀ || ದಾ|| 1 ಪ್ರಾಯಶ ಶ್ರೀಹರಿ ಮಾಯಾರೂಪಿಯೋ ನೀನು || ದಾ|| ಆಯಾದ ವಿಲ್ಲದೆ ಬಾಯಿಲೆ ಬಿಚ್ಚಾಡು || ದಾ||2 ಕ್ಲೇಶ ವೋಡಿಸುವಂಥ ಈಶನ ರಾಣಿಯೋ || ದಾ|| ದೋಷರಹಿ ತಾನಂತಾಧ್ರೀಶನ ರಾಣಿಯೋ|| 3 ಆರ್ಯಾ ಕೋಮಲತರ ವಚನಗಳೂ || ರಾಮನ ಬಾಯಿಂದ ಮಾತಾಡಿದಳು ಹೀಗೆಂದೂ|| 1 ಪದ ರಾಗ:ದೇಶೀ ಆಟತಾಳ ಸ್ವರ :ಷಡ್ಜÀ ಕೇಳೋ ರಾಮನೆ ನಿನಗ್ಹೇಳುವೆ ಗುರುತವ || ಕೇಳೋ ರಾಮ|| ಕೇಳುತ ನಿನ್ನ ಮಾತು ಬಾಳ್ಹಾನಂದಾಯಿತು || ಕೇಳೋ|| ಪ ವನದೇವತೆ ಅಲ್ಲ ಮನಿಯ ದೇವತೆ ಅಲ್ಲ || ಕೇ|| ವನಜಾಕ್ಷ ತುಳಜಾಯಂದ್ಯನಿ ಕೊಂಬುವೆ ನಾನೂ || ಕೇ|| 1 ಮಾಯಾರೂಪಿಯು ಅಲ್ಲ ಆಯಾಸಯನಗಿಲ್ಲ ||ಕೇ|| ಮಾಯಾರಮಣ ನಿನ್ನ ತಾಯಿ ಯಂದ್ಯನಿಸುವೆ || ಕೇ|| 2 ಶುದ್ಧ ಚಿನ್ಮಯ ಅನಂತಾದ್ರಿರಮಣ ನೀನು || ಕೇ|| ಸಿದ್ಧಾಗಿ ನಾ ಯಮುನಾದ್ರಿಯಲ್ಲಿರುವೆನು||3 ಆರ್ಯಾ ಕಾಯಜ ಪಿತ ಕೇಳಿದನೂ|| ಹಾಯಿದು ಏನೆಂದೂ|| ಮಾತನಾಡಿದನೂ || ಆಯತಾಕ್ಷಿ ಆದವಳೂ || ತಾಯಿಯು ಎನಗ್ನಾಂಗಾದಿ ನೀ ಪೇಳೆ|| 1 ರಾಮನ ಮಾತಿಗೆ ತುಳಜಾ || ಪ್ರೇಮದಿ ಮಾತಾಡಿದಳು ತಾವಿರಜಾ || ರಾಮಗ ಕಥಿ ಆದಂತಾ|| ನೇಮಿಸಿ ಹೇಳಿದಳು ಪೂರ್ವ ವೃತ್ತಾಂತಾ|| 2 ಪದ್ಯ ರಾಮಕೇಳು ಪೂರ್ವದಲ್ಲಿ ಜಮದಾಗ್ನಿಯು ಪರಶುರಾಮನಾಗಿರುವಿ ನೀನಾ ಮಹಾಮುನಿ ಪತ್ನಿ ನಾಮದಲೆ ರೇಣುಕಿಯು ನೀ ಮಗನು ಎನಗಾದಿ ಭೂಮಿಯಲಿ ಪ್ರಾಖ್ಯಾತ ನಾಮತಿ ಕೃತವೀರ್ಯಜನು ಕಾಮಧೇನುವು ಬಯಸಿ ಆ ಮುನಿಯ ಕೊಂದಿರಲು ಆಮ್ಯಾಲ ಪತಿಯಿಂದ ನೇಮದಲಿ ಸಹಗಮನ ನಾ ಮಾಡಿದೆನು|| 1 ಪತಿಯ ಪ್ರೇಮದಲಿ ಸ್ಮರಿಸಿ ಪರಶುರಾಮನು ಎನ್ನಸ್ಮರಿಸಿ ಕೈಮುಗಿದು ಈ ಪರಿಯು ಮಾತಾಡಿದನು ವರ ಮಾತೆಯನು ಕೂಡಿ ಇರದೆ ನೀ ಹೋದಿ ಸಂದರ್ಶನವು ಎಂದಿನ್ನ ತ್ವರದಿ ನೀ ಹೇಳೆನಗೆ ಕೇಳುತಲೆ ತ್ವರದಿಂದ ನಾನು ಸುಂದರ ರೂಪವ ತೋರಿ ಈ ಪರಿಯು ಮಾತಾಡಿದೆನು ವರಪುತ್ರ ಕೇಳು ಮುಂದಿರುವ ತ್ರೇತಾಯುಗವು ಬರುತಿರಲು ಆಗ ಸಂದರ್ಶನವ ಕೊಡವೆ|| 2 ಹೀಗೆಂದು ಹೇಳಿದ್ಯಾಗ ಆತಗ ನಾನು ಈಗ ಆತನೇ ನೀನು ರಾಘವನು ಆಗಿರುವಿ || ಹಿಂಗೆನಲು ಮುಂದೆ ಆ ರಾಘವನು ಕೊಟ್ಟಳಾಗ ತುಳಜಾದೇವಿ ಬ್ಯಾಗ ನಿನ್ನ ಕಾರ್ಯ ಚನ್ನಾಗಿ ಆಗುವುದೆಂದು || ನಾಗವೇಣಿಯು ತಾನು ಹೋಗಿಬರುವೆನೆಂದು ಆಗ ಅಲ್ಲೇವೇ ಗುಪ್ತಾಗಿ ಇರುವುವಳು|| 3 ಪದ ರಾಗ:ಶಂಕರಾಭರಣ ಆದಿತಾಳ ಸ್ವರ :ಮಧ್ಯಮಾ ತಂದನು ಕೇವಳ್ಹಾಗ್ನಿಯ ಸಾಕ್ಷಿಯಿಂದೆ|| 1 ಆದರೂ ಇಷ್ಟಾರ್ಥಗಳು ಕೊಡುವೋದು|| 2 ವರದ ಶ್ರೀರಾಮ ವರವು ಕೊಟ್ಟಿರುವಂಥಾ ತುಳಜಾ ದೇವಿಯ ದಿವ್ಯ ಮಹಿಮೆ || ಹರುಷದಿ ಕೇಳಿದರೆ ಹರುಷವ ಕೊಡುವುದು ಪರಿಹರಿಸೋದು ಕಷ್ಟವೆಲ್ಲಾ 3 ಪುತ್ರರು ಆಗುವರು ಪೌತ್ರರು ಆಗುವರು ಸತ್ಯಮಾತಿದು ಭಾವವ ಬಿಟ್ಟು|| 4 ಗ್ರಂಥವೆಂಬುವದಿಂದು || ಎಂಥಾದಾದರೂ ಎನೂ ಸಂತೋಷ ನಮ್ಮ ಗುರುಗಳಿಗೆ|| ಸಂತರೆಂಬುವರಿಗೆ ಸಂತೋಷಾಗಲಿ ನಮ್ಮಾನಂತಾದ್ರೀಶನೆ ನುಡಿಸಿದಾ|| 5 ಆರ್ಯಾ ವರ ಕವಿತಾ ರZನಕ್ಕೆ|| ತುಳಜಾದೇವಿಯ ದಿವ್ಯ ಚರಿತಕ್ಕೆ || ಚರಿಸದೆನ್ನ ಉಪಾಯಾ || ಗುರುಕೃಪೆಯಿಂದಾಯಿತು ನಾಲ್ಕು ಅಧ್ಯಾಯಾ|| 1 ಪದ ರಾಗ:ಪೂರ್ವಿ ಅಟತಾಳ ಸ್ವರ:ಮಧ್ಯಮಾ ನಿತ್ಯ ಮಂಗಳವನು ಕೊಟ್ಟು ಸಲಹುವ ತಾಯಿಗೆ|| ಪ ಘನತರ ಕೈಲಾಸ ಮನಿಯು ಮಾಡಿದವಳಿಗೆ|| ಅನುದಿನ ಅಲ್ಲಿರುವಂಥಾಕಿಗೆ | ಅನುಭೂತಿ ತಪಸಿಗೆ ಅನುಕೂಲಾಗುವೆನೆಂದು ಅನುಮಾನಿಲ್ಲದೆ ಬಂದಿರುವಾಕಿಗೆ|| 1 ಅಷ್ಟಭುಜಗಳುಳ್ಳಂಥಾಕಿಗೆ || ಅಷ್ಟೆಶ್ಚರ್ಯದಿಂದಿರುವಾಕಿಗೆ|| ದುಷ್ಟದೈತ್ಯನ ಕೊಂದಂಥಾಕೆಗೆ|| 2 ಅಮಿತ ಮಹಿಮೆ ಉಳ್ಳಂಥಾಕೆಗೆ|| ಯಮುನಾದ್ರಿಯಲಿ ಬಂದಿರುವಾಕೆಗೆ|| ಗಮನದಿಂದಲಿ ರಾಮ ಶ್ರಮಬಟ್ಟು ಅಲ್ಲೇ ವಿಶ್ರಾಮಿಸಲು ದರ್ಶನ ಕೆÀೂಟ್ಟಾಕೆಗೆ|| 3 ಕಾಮಿತ ಫಲವನು ಕೊಡುವಾಕೆಗೆ|| ರಾಮನು ಸಾವಿರ ನಾಮದಿ ಸ್ತುತಿಸಲು|| ಪ್ರೇಮದಿವರವು ಕೊಟ್ಟಂಥಾಕಿಗೆ|| 4 ಚಿಂತಿಸುವರ ಮುಂದ ನಿಂತಾಕೆಗೆ|| ಸಂತೋಷವನು ಕೊಡುವಂಥಾಕಿಗೆ|| ಅಂತರಂಗದಲ್ಲಿಹ ಚಿಂತೆಯ ಬಿಡಿಸಿ|| ಅನಂತಾದ್ರೀಶನ ತೋರುವಂಥಾಕೆಗೆ|| 5
--------------
ಅನಂತಾದ್ರೀಶ - ಕಥನಕಾವ್ಯಗಳು
ಇಂದಿರಾರಮಣನ ಮಂದಿರದಲ್ಲೆ ನಾ- ರಂದ ತಾ ಬರುತಿರಲು ಕಂಡು ಕೃಷ್ಣನು ಕರೆತಂದು ಮನ್ನಿಸಿ ಬಂದಕಾರಣವೇನೆಂದನು 1 ಕಾರಣವೇನುಂಟು ಕಾರಣಪುರುಷನ ಕಾಣಬೇಕೆಂದೆನುತ ಕಾಮಿಸಿಬಂದೆನೊ ಕೊರಳ ತುಳಸಿ ಮಾಲೆ ನೀಡೊ ನೀ ಎನಗೆಂದನು2 ಏನು ಬೇಡಿದರು ನಾ ಕÉೂಡುವೆನು ನಾರಂದ ಪ್ರಾಣಪದಕ ತುಳಸಿ ನೀಡಲಾರೆನೊ ಮುತ್ತಿನ್ಹಾರವ ಕೊಡುವೆ- ನೆಂದು ಹೇಳುತಿದ್ದನು ಹರಿಯು 3 ನೀಡದಿದ್ದರೆ ನಾನು ಬೇಡಿ ಬಿಡುವನಲ್ಲ ನೋಡಿಕೋಯೆಂದೆನುತ ಆಡಿದ ಮಾತು ತಪ್ಪುವರುಂಟೆ ಶ್ರೀಕೃಷ್ಣ ಹೋಗಿಬರುವೆನೆಂದನು 4 ಸತ್ಯಭಾಮೆಯ ಮನೆ ಹೊಕ್ಕನು ನಾರಂದ ಹೆತ್ತಮ್ಮ ಕೇಳೆನುತ ಸುತ್ತಿಬಂದೆನು ಸುರಲೋಕದ ವಾರ್ತೆಯ ವಿಸ್ತರಿಸ್ಹೇಳುವೆನು 5 ಇಂದ್ರಲೋಕದಲಿ ದೇವೇಂದ್ರ ಶಚಿಯ ಕೂಡ್ಯಾ ನಂದದಿ ಕುಳಿತಿದ್ದನೆ ಅ- ಲ್ಲಿಂದ ಕೈಲಾಸ ಮಾರುದ್ರ ಪಾರ್ವತಿದೇವಿ ಚೆಂದವನ್ವರಣಿಸಲೆ 6 ಸತ್ಯಲೋಕದಿ ಸರಸ್ವತಿ ಕೂಡಿ ಬ್ರಹ್ಮ ಭಾ ಳುತ್ಸವದಿಂದಿದ್ದನೆ ಹಸ್ತಿನಾವತಿಯ ಪಾಂಡವರು ದ್ರೌಪದಿದೇವಿ ಅರ್ಥಿಯ ನೋಡಿ ಬಂದೆ 7 ದ್ವಾರಾವತಿಗೆ ಬಂದೆ ದೇವಿ ನಿಮ್ಮರಸನು ನಾರಿ ರುಕ್ಮಿಣಿ ಸಹಿತ ಭಾಳ ಸಂಭ್ರಮದಿಂದ ಕುಳಿತಿದ್ದ ಕಣ್ಹಬ್ಬವಾಗಿ ನಾ ಬಂದೆನಿಲ್ಲೆ 8 ಕರೆದು ರುಕ್ಮಿಣಿ ಕರದಿಂದೆ ಆಲಂಗಿಸಿ ತೊಡೆಯಮ್ಯಾಲಿಟ್ಟಿದ್ದನೆ ಅರಳುಮಲ್ಲಿಗೆ ತುರುವಿ(ಬೀ) ನಲ್ಲಿಟ್ಟು ನಿನಗಿನ್ನು ಸರಿಯಿಲ್ಲವೆಂತೆಂಬನೆ 9 ಹಾರಪದಕ ಇಬ್ಬರಿಟ್ಟಾಭರಣ ಬ್ಯಾರೆ ಬ್ಯಾರಾಗಿ ತೋರವಲ್ಲೆ ಸೂರ್ಯಚಂದ್ರರು ಕೂಡಿದಂಥ ಮುಖವು ನೋಡಿ ನಾ ಬೆರಗಾಗಿದ್ದೆನೆ 10 ಸತ್ಯಭಾಮೆಯೆ ನಿನ್ನ ಹೆತ್ತ ತಾಯಿತಂದೆ ಮಿರ್ತಾಗಿದ್ದರೆ ನಿನಗೆ ಕೊಟ್ಟರೀ ಕಪಟನಾಟಕ ದಯಹೀನಗಿ- ನ್ನೆಷ್ಟು ನಾ ಸೈರಿಸಲೆ 11 ಒಂದೊಂದು ಗುಣಗಳ ವರಣಿಸಲಿಕ್ಕೆ ಹ ನ್ನೊಂದೊ (ದ್ವ?) ರುಷವು ಸಾಲದೆ ಕಂಡು ಬಂದ್ವಾರ್ತೆಯ ಖರೆಯ ನಾ ಹೇಳುವೆ ಸಂದೇಹ ಮಾಡದಿರೆ 12 ಕೇಳಿ ಸತ್ಯಭಾಮೆ ತಾಳಲಾರದೆ ಮುನಿ ಪಾದದ ಮ್ಯಾಲೆ ಬಿದ್ದು ಹೇಳಿ ಉಪಾಯ ಮುಂದಕೆ ಪೋಗೊ ಶ್ರೀ- ಕೃಷ್ಣ ತಾನೊಲಿದಿರುವಂದದಿ13 ದಾನವಾಂತಕÀನ ನೀ ದಾನವÀ ಮಾಡಲು ದಾವಜನ್ಮಕÀು ನಿನ್ನನು ತಾನಗಲದೆ ಮುಂದೆ ಸೇರಿಕೊಂಡಿರುವೊ ಉಪಾಯ ಹೇಳುವೆನೆಂದನು 14 ರಂಗರಾಯನ ಕರೆತಂದುಕೊಟ್ಟವರಿಗೆ ಹಿಂಗದೆ ಸೌಭಾಗ್ಯವ ಎಂದೆಂದಿಗವರ ರಕ್ಷಿಸುವೋನೆಂದೆನುತಲಿ ಅಂಗನೆಯರನಟ್ಟಿದಳು 15 ದೂತೇರ ಸಹಿತಾಗಿ ಬಂದು ತಾ ಭರದಿಂದೆ ಪ್ರೀತಿಲೆ ಸತ್ಯಭಾಮ ಮಾತುಳಾಂತಕ ನಮ್ಮ ಮನೆಗೆ ಬಾರೆನುತ ಶ್ರೀ- ನಾಥನೆಯೇಳೆಂದಳು16 ಮಡದಿ ರುಕ್ಮಿಣಿ ಭಾಮೆ ಮಂದಿರಕ್ಕೊ ್ಹೀಗುವೆ ಕಡುಕೋಪ ಮಾಡದಿರೆ ತಡೆಯದೆ ನಾಳೆ ಬರುವೆನೆಂದು ಶ್ರೀಕೃಷ್ಣ ಗ- ರುಡನ ಹೆಗಲೇರಿದ 17 ವಾರಕಾಂತೆಯರು ಬಾಜಾರ ಮಧ್ಯದಿ ಸೋಳಸಾವಿರ ಸತಿಯರನೆ ವಾರೆನೋಟದಿ ನೋಡಿ ನಗುತ ಸತ್ಯಭಾಮೆ ಬಾಗಿಲ ಮುಂದಿಳಿದ 18 ಎದುರಿಗೆ ನಿಂತು ತಾ ಚೆದುರೆ ಸತ್ಯಭಾಮೆ ಪದುಮ ಪಾದಕೆ ಎರಗಿ ಮುದದಿಂದ ಮುದ್ದು ಶ್ರೀಕೃಷ್ಣನ ಮುಂಗೈಯ್ಯ ಪಿಡಿದು ತಾ ನಡೆದಳಾಗ 19 ಕೃಷ್ಣರಾಯನೆ ನಿನ್ನ ಕೊಟ್ಟೇನು ದಾ ನವ ಬಿಟ್ಟೆನ್ನ ಅಗಲದಂತೆ ಸತ್ಯಭಾಮೆಯ ನೋಡಿ ನಗುತ ಈ ಕಾರ್ಯ ಅ- ಗತ್ಯಮಾಡೆಂದೆನುತ 20 ಎರೆದು ಪೀತಾಂಬರವುಡಿಸಿ ಮಾಣ Âಕ್ಯದ ಆ- ಭರಣವ ತಂದಿಟ್ಟಳು ತರಿಸಿ ತಾಂಬೂಲ ದಕ್ಷಿಣೆಯನ್ನು ಬ್ರಾಂಬರ ಕÀರೆಸಿದಳಾಕ್ಷಣದಿ 21 ಆಚಾರ್ಯ ನೀವ್ ಬನ್ನಿ ವಾಸುದೇವನ ದಾನ ಈ ಕ್ಷಣದಲ್ಲೆ ಕೊಡುವೆ ನಾಶರಹಿತ ನಮ್ಮ ಮನೆಯೊಳಗಿರಲಿಕ್ಕೆ ಗ್ರಾಚಾರವೇನೆಂದರು 22 ವಿದ್ಯಾರ್ಥಿಗಳು ಬನ್ನಿ ಮುದ್ದು ಶ್ರೀಕೃಷ್ಣನ ವಿಧ್ಯುಕ್ತದಲಿ ಕೊಡುವೆ ಮೂರ್ಜಗದೊಡೆಯ ತಾ ಮಂದಭಾಗ್ಯರ ಮನೇಲಿದ್ದಾನ್ಯಾತಕೆ ಎಂದಾರೆ 23 ಭಟ್ಟರೆ ನೀವ್ ಬನ್ನಿ ಸೃಷ್ಟಿಪತಿಯ ದಾನ ಕೊಟ್ಟು ಬಿಡುವೆನೆಂದಳು ಅಷ್ಟದರಿದ್ರರಿಗಾಲಕ್ಷ್ಮೀವಲ್ಲಭ ದಕ್ಕುವೋನಲ್ಲೆಂದರು 24 ಯತಿಗಳೆ ನೀವ್ ಬನ್ನಿ ಪೃಥಿವಿಗೊಡೆಯ (ನನು) ಹಿತದಿ ದಾನವ ಕೊಡುವೆ ಗತಿಯಿಲ್ಲ ನಮಗೆ ಶ್ರೀಪತಿ ಸಲಹÀಲು ನಿನ್ನ ಪತಿ ಬ್ಯಾಡ ನಮಗೆಂದರು&
--------------
ಹರಪನಹಳ್ಳಿಭೀಮವ್ವ
ಮನ್ನಿಸು ಮಾರಾರಿ ಮುದದಿಂದಲಿ ಎನ್ನ | ಯಿನ್ನು ದುರಿತಗಳನ್ನ ಹಾರಿಸಿ | ಎನ್ನನನುದಿನ ಪ ಅಮಿಶ್ರ ತತ್ವದಲಿ ಕಲಿ ವಿರಹಿತ ರುದ್ರ | ಹಮ್ಮಿನಿಂದಿತ್ತ ಸರ್ವವ ನೋಳ್ಪನೆ | ಬೊಮ್ಮನಾ ತತ್ವದಲಿ ಹೋಗಿಬರುವ ಪ್ರಬಲ್ಯ | ಉಮ್ಮೆಯರಸಾ ತಾಮಸ ಕಾರ್ಯದಧಿಪತಿ | ಒಮ್ಮೆ ಬಿಡದಲೆ ನರಹರಿಯ ನಾ | ಮಾಮ್ಮರತ ಮನದಲಿ ನೆನಸುವ ಸುಖದಿಂದಲಿ | ಅಮ್ಮಹಾ ವೈರಾಗ್ಯ ಭಾಗ್ಯವ | ಕಮ್ಮರದಿ ಕೊಡು ಕರುಣದಿಂದಲಿ 1 ನಂದಿವಾಹನ ನಾಗತಲ್ಪ ಕಲ್ಪಾಂತರ | ಚಂದಿರಮವ್ಯಾಳಿ ಚರ್ಚಕನಾಯಕ | ಕುಂದುಗೊರಳ ನೀಲಕಂಠಾಗಮನೈಯ್ಯ | ವಂದೀರೈದು ಸ್ಥಾನ ವಾಸವಾದ್ಯ || ಇಂದು ನಿನ್ನ ಪಾದದ್ವಂದ್ವ ನಂಬಿದೆ | ನಿಂದಕರ ಸಂಗತಿ ಸಂಗತಿಯಲಿಡದಲೇ | ಪೊಂದಿಸೋಮ ಜನರೊಳಗೆ ಎರ | ಡೊಂದುಪುರ ವಿನಾಶಾ ಈಶಾ 2 ನಿಖಿಳ ಶಾಂತ | ನಿಟಿಲನೇತ್ರ | ಮಂಗಳಾಂಗ ಶ್ರೀ ವಿಜಯವಿಠ್ಠಲನ | ಹಿಂಗದೆ ಮನದಲ್ಲಿ ನೆನೆಸುವರ | ಸಂಗಸುಖ ಸರ್ವದಾ ಸುಜನಪಾಲಕ | ಪೊಂಗರ್ಭಸುತ ಪತಿತ ಪಾವನ 3
--------------
ವಿಜಯದಾಸ
ಮೀಸಲಾಗಿ ನಿನ್ನದೊಂದು ಚೆಲ್ವರೂಪವನ್ನಿಡೋವಾಸುದೇವ ನಿನ್ನನಂತ ದಿವ್ಯರೂಪಗಳಲಿ ಎನಗೆ ಪ ಮಣಿವ ಭಕುತ ಜನರು ಕರೆದಕ್ಷಣಕೆ ಓಡಿಬಂದು ಮುಂದೆಕುಣಿದು ಕುಣಿದು ಕುಣಿದು ಹೋಗಿ ಬಂದುದಣಿದುಕೊಳುವ ಮೊದಲು ಎನಗೆ 1 ಎಷ್ಟು ನೋಡಿದರು ಎನಗೆತುಷ್ಟಿಯಿಲ್ಲವಯ್ಯ ಕೃಷ್ಣಅಷ್ಟಷ್ಟಕೆ ಹೋಗಿಬರುವಕಷ್ಟವೇಕೆ ದಯದಿ ಎನಗೆ 2 ಮಾಡಿದಘವ ಕುಟ್ಟಿ ಹಣಿವೆನೋಡಿ ನೋಡಿ ಪದಕೆ ಮಣಿವೆಹಾಡಿಹಾಡಿ ನಲಿದು ಕುಣಿವೆನಾಡೆ ಕುಣಿದು ತುಂಬ ತಣಿವೆ 3 ಸಾವಿರಾರು ಭಕ್ತಜನರುದೇವ ನಿನಗೆ ಗೈವೆಯೆಂತುಪಾವನಾತ್ಮ ಗದುಗು ವೀರನಾರಾಯಣ ದಯವ ತೋರಿ 4
--------------
ವೀರನಾರಾಯಣ