ಎಲ್ಲ್ಯಾಡಿ ಬಂದ್ಯೋ ನೀ ಹೇಳಯ್ಯನಿಲ್ಲು ನಿಲ್ಲು ಗೋಪಾಲಕೃಷ್ಣಯ್ಯಾ ಪ
ನೊಸಲಲ್ಲಿ ಕಿರುಬೆವರಿಟ್ಟಿದೆ ಅಲ್ಲಿಹೊಸಪರಿ ಸುದ್ದಿಯು ಹುಟ್ಟಿದೆಪುಸಿಯಲ್ಲ ಈ ಮಾತು ಮುಟ್ಟಿದೆ ನಿನ್ನ ನಸುನಗೆ ಕೀರ್ತಿ ಹೆಚ್ಚಿದೆ1
ಬೆರಳ ಉಂಗುರವೆಲ್ಲಿ ಹೋಗಿದೆ ನಿನ್ನಕೊರಳ ಪದಕವೆಲ್ಲಿ ನೀಗಿದೆಸರಕೆಲ್ಲ ಅವಳಲ್ಲಿ ಸಾಗಿದೆ ಆತರುಣಿ ಮಹಿಮೆ ಹೀಂಗಾಗಿದೆ 2
ಕಳ್ಳತನವ ಹೀಗೆ ಮಾಡಿದೆ ನಿನ್ನಸುಳ್ಳು ಕಡೆಗೆ ನಾ ನೋಡಿದೆಎಲ್ಲರಿಗೂ ಠಕ್ಕು ಮಾಡಿದೆಚೆಲುವ ರಂಗವಿಠಲ ನಗೆಗೀಡಾದೆ 3