ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜನ್ಮವ್ಯರ್ಥವಾಯಿತು ಶಾಙ್ರ್ಗಧನ್ವ ನಿನ್ನನಂಬದೆ ಪ ಮನ್ಮಥನಾಟದಲ್ಲಿ ಮರೆತು ಹೋಗಿಕಾಲ ನಾಕಳದೇ ಅ.ಪ ಹೊಟ್ಟೆಗೋಸಗ ಕಾಡಿಬೇಡಿ ನಿಷ್ಟುರಗಳನಾಡುತಾ ಕೆಟ್ಟವನಿವನೆನಿಸಿ ಕೊಂಡು ಕೀರ್ತಿಶೂನ್ಯನಾಗುತಾ 1 ನಿತ್ಯಕರ್ಮಮಾಡದೆ ಗೃಹಕೃತ್ಯದಲ್ಲಿ ಬಳಲುವೆ ಸತ್ಯವೆಂಬುದು ಸ್ವಪ್ನದಲ್ಲಿಯು ಸಾಧ್ಯವಾಗದು ಜನರಿಗೆ2 ಸುಳ್ಳು ಹೇಳುವವನ ಜನರು ಒಳ್ಳೆವನಿವನೆಂಬರು ಬಲ್ಲ ಹಿರಿಯರಾಡುವ ನುಡಿ ಭಕ್ತಿಯಿಂದನಂಬರು 3 ಖಲರು ನಡಿಯಲಾರದೆಯಿದು ಕಲಿಯುಗವೆಂದು ನಿಂದಿಸೀ ಕೊಲೆಗೆ ಗುರಿಯಾಗಿ ಕಾಮ ಕ್ರೋಧಗಳಿಂದ ಬಂಧಿಸಿ 4 ಹೀನ ವಿದ್ಯಗಳೆಚ್ಚಿತು ಸುಜ್ಞಾನಬೋಧೆ ತಗ್ಗಿತು ಸ್ವಾನುಭವಕೆ ಹಾನಿಕರ ನಿಧಾನಿಸೇ ಧರ್ಮ ಕುಗ್ಗಿತು 5 ದುರ್ಗುಣಿಗಳ ತೃಪ್ತಿಪಡಿಸೆ ಭರ್ಗಗಾದರು ಸಾಧ್ಯವೇ ನಿರ್ಗಮಿಸುವಧ್ಹ್ಯಾಗೆ ನಾವಿನ್ನಿರುವುದು ಭೂಮಿಭಾರವೆ6 ಲೇಶ ಸಾಧನವಾಗುವದಿಲ್ಲ ಆಸೆ ಅಧಿಕವಾದುದರಿಂದ ಘಾಶಿಪಡುವದಲ್ಲದೆ ದೇಹಾಯ್ಸವೇಕೆ ಪಡುವೆನಾಂ 7 ಮಾನವಿಲ್ಲ ಜ್ಞಾನವಿಲ್ಲ ಮಮತೆಯೆಂಬೋದು ಬಿಡದಲ್ಲಾ ಹೀನಾರನಾಸೇವಿಸಲಾರೆ ಹಿತವ ಕಾಣೆ ಸಿರಿನಲ್ಲಾ8 ಇರುಳು ಹಗಲು ನಿನ್ನ ದಿವ್ಯ ಚರಣಸೇವೆ ಪಾಲಿಸೊಗುರುರಾಮ ವಿಠಲನೆ ಪಾಮರರ ಬಿನ್ನಹ ಲಾಲಿಸೊ9
--------------
ಗುರುರಾಮವಿಠಲ
ಧುಮ್ಮಸಾಲೆಯ ನೋಡಿ ಧುಮ್ಮಸಾಲೆಯಾ ಪ ಧುಮ್ಮಸಾಲೆಯ ನೋಡಿ ಘಮ್ಮವಾದ ಪ್ರಾಣಿಗಳು | ತಮ್ಮ ಸುದ್ದಿ ತಮಗಿಲ್ಲಾ ಹಮ್ಮಿನಿಂದಲಿ | ಧಿಮ್ಮಹಿಡಿದು ಭವದೊಳು ಸುಮ್ಮನೆವೆ ಕೆಟ್ಟು ಹೋದ | ಗ್ಯಾದರೆಯು ಪರಬೊಮ್ಮನಾಮ ನೆನೆಯಿರೋ 1 ವಿದ್ಯೆಯಿಂದ ವಾದಿಸುತ ಮುದ್ದಿಯಿಂದ ಕಣ್ಣು ಮುಚ್ಚಿ | ಸದ್ಯ ಶಕ್ತಿ ಯೌವನದಿ ಗುದ್ದಿ ಹೆಟ್ಟು ತಾ | ಪರಿ ನಿಜ | ಬುದ್ಧಿ ಹೋಗಾಡಿಸಿ ಅನಿರುದ್ಧನನ ಮರೆತಿರೋ 2 ಒಂದು ಕವಡಿಯಲಾಭ ತಮಗೆ ಹೊಂದದಿದ್ದರೆ ಸರಿ | ಬಂದು ನಿಂದು ಒಳ್ಳೆವರಾ ನಿಂದೆ ಮಾಡುತಾ | ಇಂದು | ಕೂಪ ಲಿಟ್ಟರೋ 3 ಉಡಗಿ ಬಿಟ್ಟು ಹುಡಿಯಹಚ್ಚಿ ಜಡಿಯಬಿಟ್ಟು ಸಿದ್ಧಗಾಗಿ | ಪೊಡವಿಲಿನ್ನು ಲಾಭಾ ಲಾಭಾ ನುಡಿಯ ಹೇಳುವಾ | ತುಡುಗರಿಗೆ ಹೋಗಿಕಾಲ ವಿಡಿದು ಗೋಂದಲ್ಹಾಕುವರು | ಕಡಲಶಯನನ ಭಜಿಸದೆವೆ ಅಡಲು ಬಿಟ್ಟು ಹೋದರೋ 4 ಸಿರಿಯ ಸುಖಗೀಪರಿ ಪರಿಯ ವೃತ ತಪದಿಂದಾ | ಚರಿಸಿ ನೋಡು ಕಣ್ಣು ವಿದ್ದು ಕುರುಡರಾದರೋ | ಗುರುಮಹಿಪತಿ ಸ್ವಾಮಿ ಚರಣ ನಂಬಿಯಚ್ಚರದಿ | ನಿರಪೇಕ್ಷ ಭಕ್ತಿಯಿಂದಾ ತರಣೋಪಾಯ ನೋಡರೋ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು