ಅನಂತ ಯೋನಿಯೊಳಗೆ ಅನಂತ ಜನ್ಮತಿರುಗಿಅನಂತ ಯುಗಯುಗಂಗಳಲಿ ಸತ್ತು ಹುಟ್ಟೆಅನಂತನಾಟವೆಯೆಂದು ಅರಿವು ಇಲ್ಲದೆ ಹೋಗಿಅನಂತ ದುಃಖಸಾಗರದಿ ಹಿರಿದು ಬಳಲುವಿರಿ 1
ವಿಶ್ವತೈಜಸ ಪ್ರಾಜ್ಞ ಮೂವರೆಂದೆನಿಸಿವಿಶ್ವದೊಳು ನಾನಾ ರೂಪಗಳ ತಾಳಿವಿಶ್ವದೊಳ ಹೊರಗೆಲ್ಲ ಪೂರ್ಣ ತಾನೆಂದೆನಲುವಿಶ್ವಾತ್ಮಕನು ನೀವು ಮತ್ತಾರು ತಿಳಿಯಿರೋ 2
ಮೂರವಸ್ಥೆಗಳಲ್ಲಿ ಮೂರು ಮೂರ್ತಿಗಳಾಗಿತೋರುತಿಹ ನಾನಾ ಬಗೆ ಲೀಲೆಗಳನುಭೂರಿ ಸಂಸಾರಗಳ ದುಃಖ ಸುಖವೆಂದೆನಿಸಿತೋರಿ ನೋಡಿಪನವನು ಮತ್ತಾರು ತಿಳಿಯಿರೋ 3
ಸತಿ ಪುರುಷರಾಗಿಹನು ಸುತನು ತಾನಾಗಿಹನುಖತಿಯು ಶಾಂತಿಯು ಕಾಮವಾಗಿ ತಾನಿಹನುಅತಿ ಕುಲಗಳಾಗಿಹನು ಅತಿ ಜಂತುವಾಗಿಹನುಮಿತಿಯಿಲ್ಲದಾಗಿಹನು ನೀವಾರು ತಿಳಿಯಿರೋ 4
ಈ ವಾಕ್ಯಗಳನೇ ನೀವಾರಮುಂದುಸುರದಲೆಸಾವದಾನದಿ ತಿಳಿದು ನೋಡಿದೇವ ಚಿದಾನಂದ ಗುರು ತಾನೀಗ ನಿಜವೆಂದುಸಾವದಾನದಿ ಕಂಡು ಕಡೆಹಾಯಿರೋ 5