ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಶರಣು ಮಧ್ವಗುರು ಶರಣೆಂಬೋದೆ ಬೀಜ ಮಂತ್ರ ಇಹಪರಕಿದೆ ಸಾಧನವೆಂದು ನಂಬಿಬಿಟ್ಟೆ ಹಲವು ತಂತ್ರ ಪ.ಹರಿಕೊಡದಾರು ಕೊಡುವರಿಲ್ಲ ನರರನು ಬೇಡಲ್ಯಾಕೆ ಶ್ರೀಹರಿಕೊಟ್ಟರುಂಟು ಹಗಲಿರುಳು ಒಣಹಂಬಲ್ಯಾಕೆ1ಇದು ನನ್ನದದು ನನ್ನದೆಂದು ಬರಿದೆ ಹೊತ್ತು ಹೋಯಿತಲ್ಲ ಶ್ರೀಪದುಮನಾಭನ ಕೃಪೆ ಭಕುತಿದಾರಿಯ ಹೊಂದಿ ಪಡೆಯಲಿಲ್ಲ 2ಎರವಿನ ಸತಿಸುತ ಪಶು ಧಾನ್ಯ ಒಂದೊಂದಾಗ್ಯಗಲುವಾಗ ಗತಹರುಷನಾಗಿ ರಂಗನಂಘ್ರಿಯ ಮರೆದುಂಡೆನಿರಯಭೋಗ3ಕರ್ಮತ್ರಯಗಳು ಕರಗವೆ ಶ್ರೀನಿವಾಸನೊಲುಮೆಯಿಂದ ದುಷ್ಕರ್ಮಾರಣ್ಯವು ಸುಟ್ಟು ಹೋಗದೆ ನಾಮಾಗ್ನಿಯಿಂದ 4ಬೇಡಿದುದೀವ ಪ್ರಸನ್ವೆಂಕಟೇಶನ ಬೇಡಬೇಕು ಅವನಹಾಡುತ ಹೊಗಳುತ ಜನ್ಮಾಯುಷ್ಯವ ಹೋಗಾಡಬೇಕು 5
--------------
ಪ್ರಸನ್ನವೆಂಕಟದಾಸರು