ನಿನ್ನ ಮಗನ ಲೂಟಿ ಘನವಮ್ಮ-ಕರೆದು |ಚಿಣ್ಣಗೆ ಬುದ್ಧಿಯ ಹೇಳೇ ಗೋಪಮ್ಮ ಪಶಿಶುಗಳ ಕೈಲಿದ್ದ ಬೆಣ್ಣೆಗೆ ಉಳಿವಿಲ್ಲ |ಪಸು-ಕರುಗಳಿಗೆ ಮೀಸಲುಗಳಿಲ್ಲ ||ಮೊಸರ ಮಡಕೆಯಲಿಮಾರಿಹೊಕ್ಕಂತಾಯ್ತು |ಶಶಿಮುಖಿಯರು ಗೋಳಿಡುತಿಹರಮ್ಮ1ಮರೆತು ಮಲಗಿದ್ದವರ ಮೊಲೆಗಳ ತಾನುಂಬ |ಕಿರಿಯ ಮಕ್ಕಳಿಗೆ ಮೊಲೆಹಾಲಿಲ್ಲವೊ ||ಹೊರಗೆ ಲೂಟಿ ಒಳಗೆ ಈ ಲೂಟಿ-ಎ-|ಚ್ಚರದ ಬಟ್ಟೆಯ ಕಾಣೆವಮ್ಮ ಗೋಪಮ್ಮ 2ಊರೊಳಗಿರಲೀಸ ಊರ ಬಿಟ್ಟು ಹೋಗಲೀಸ |ಈರೇಳು ಭುವನಕೆ ಒಡೆಯನಂತೆ ||ವಾರಿಜನಾಭಶ್ರೀ ಪುರಂದರವಿಠಲನ |ಕೇರಿಯ ಬಸವನ ಮಾಡಿ ಬಿಟ್ಟೆಯಮ್ಮ 3