ಗಜವದನಾ ಸುಂದರವದನನೆ ವೋ ಪ
ಭುಜಗಬಂಧನಪಾದಾ ಭಜಿಪೆನಹುದೊ ರಾಜಾ ಅ.ಪ
ಗೌರೀನಂದನ ಸರ್ವಸಿದ್ಧಿ ಪ್ರದಾಯಕ
ಶೌರೀ ಮೂಷಕವಾಹನ ಕುಶಲ ಅಂತಕದೇವ 1
ದೇವಿಜನಿತ ಪುತ್ರಾಭಾವ ಲಂಬೋದರನೇ
ಪಾವನಂಘ್ರಿಯ ತೋರೋ ಪಾಶ ಅಂಕುಶ ಹಸ್ತಾ 2
ಅಸುರಸಿಂಧುಕನರಿದೂ ವಸುಧೆ ಬಾಧಿಸುತಿರೆ
ನಶಿದು ಹೋಗಲಿಯೆಂದ ನಾರಾಯಣನೆ ದೇವಾ 3
ಬಾಲನಾಗಿರೆ ಚೆಲ್ವ ಬಾಲೆಯೀಶ್ವರಿಯೊಳೊ
ಫಾಲಲೋಚನ ಶಂಭೋ 4
ನಮಿಸುವ ಪ್ರಮಧಾರಿಗಮಿತ ಫಲವನೀವಾ
ಕಮಲಜಪಿತನಾದದಾ ಕಾಣುವರಿಗೆ ಬ್ರಹ್ಮ5
ನಿತ್ಯ ಮಂಗಳನಾಮ
ಪ್ರತ್ಯಕ್ಷಮಾದಾ ಮದ್ಗುರುವೇ ತುಲಸೀರಾಮಾ 6