3. ನೀತಿಬೋಧೆ
ಓಲಗ ಸುಲಭವೋ ರಂಗೈಯನ ಪ
ಓಲಗ ಸುಲಭವೊ ಪುಸಿಯಲ್ಲ ಕರುಣಾಲ-ವಾಲನಾದ ಕರಿರಾಜ ವರದನ ಅ.ಪ
ದೂರ ಹೋಗಲಿಬೇಡ ತೊಡೆಯ ಗುದ್ದಲಿ ಬೇಡನೀರ ನೆರೆಯಬೇಡ ನಿಗಡದಲ್ಲಿರಬೇಡನಾರಾಯಣನೆಂಬ ನರನ ಯೋಗಕ್ಷೇಮಭಾರ ತನ್ನದೆಂಬ ಪ್ರಹ್ಲಾದ ವರದನ1
ಸಂತೇಲಿ ಮಾಡಿದ ಸಾಷ್ಟಾಂಗ ನಮಸ್ಕಾರದಂತೆ ಅಲ್ಲವೆ ಅನ್ಯರ ಭಜಿಸುವುದುಅಂತರಂಗದಲ್ಲಿ ಹರಿ ನೀನೆ ಗತಿಯೆಂದುಚಿಂತಿಸಿದರೆ ಕಾಯ್ವ ಶ್ರೀರಾಮಚಂದ್ರನ2
ತಪ್ಪು ಸಾಸಿರಗಳ ತಾಳಿ ರಕ್ಷಿಸುವತಪ್ಪು ಮೇಘವರ್ಣ ಕಾಂತಿಯಿಂದೊಪ್ಪುವಸರ್ಪಶಯನನಾದ ಸರ್ವಲೋಕೇಶÀನಅಪ್ರಮೇಯ ನಮ್ಮಪ್ಪ ಶ್ರೀಕೃಷ್ಣನ 3