ಬ್ಯಾಡವೊ ಕುವಾದಿ ಬ್ಯಾಡವೊ ಪ
ಬ್ಯಾಡವೊ ಕೇಳು ಕುವಾದಿ ನೀ
ನಾಡುವದುಚಿತವಲ್ಲ ಧಾದಿ | ಆಹಾ |
ಮೂಢ ನಿನಿಗದಾವ ಖೋಡಿ ಬೋಧಿಸಿದನೊ
ನಾಡಿಗೊಡಿಯ ರಂಗಗೀಡು ನೇನೆಂಬದುಅ.ಪ
ಎಲ್ಲ ಜೀವರು ದೇವವೊಂದೆ ಭೇದ
ವಿಲ್ಲೆಂದಾಡುವುದು ಧಂದೆ ಯಮ
ಕೊಲ್ಲದೆ ಬಿಡ ನಿನ್ನ ಮುಂದೆ ನಿನ್ನ
ಹಲ್ಲು ಮುರಿವನೊಂದೊಂದೆ || ಆಹಾ ||
ಉಳ್ಳಿಗಡ್ಡಿಯ ಉದ್ದಿ ಬೆಳ್ಳಗೆ ತೊಳೆದರೆ
ಅಲ್ಲಕ್ಕೆ ಸರಿಯೇನೊ ಬಲ್ಲವರೊಪ್ಪಾರು 1
ಇದ್ದು ನೀ ಇಲ್ಲೆಂತೆಂಬಿ ಕಾಲಿ
ಲೊದ್ದರೆ ಬಲು ನೊಂದು ಕೊಂಬಿ ಇ
ಲ್ಲಿದ್ದವರೆಲ್ಲ ಬ್ರಹ್ಮ ನಾನೆಂಬಿ ಆ ಪರ
ಬುದ್ಧಿಯಿಂದ ಶುದ್ಧ ಎಂತೆಂಬಿ || ಆಹಾ ||
ಬಿದ್ದುಹೋಯಿತು ನಿನ್ನ ಸಿದ್ದಾಂತವೆಲ್ಲವು
ಸದ್ದು ಎನ್ನ ಕೂಡ ಗೆದ್ದು ಹೋಗಲಾರಿ ಬ್ಯಾಡವೊ 2
ಒಬ್ಬ ಬ್ರಹ್ಮ ಎಲ್ಲಾ ಮಾಯವೊ ಇ
ನ್ನೊಬ್ಬನೆ ಎಲ್ಲಿಹ ಸುಖವೊ
ಕುಹಕ ಶಾಸ್ತ್ರವೆಲ್ಲ ಮೃಷವೋ
ಉಬ್ಬಿ ಆಡುವುದು ನಿರಯವು || ಆಹಾ ||
ಈ ಬಗೆಯಾಯಿತು ನಿನಗೊಬ್ಬಗೆ ಈ ಮಾತು ಬ್ಯಾಡವೊ 3
ಒಂದೆ ಆದರೆ ನಿನಗೆಲ್ಲ ನಿನ
ತಂದೆಯಿಂದ ನೀ ಪುಟ್ಟಿದ್ದೆಲ್ಲ ನಿನ್ನ
ತಂದೆ ನೀನು ಒಂದೆ ಎಲ್ಲಿ ಇನ್ನು
ಛಂದಾಗಿ ನೀ ತಿಳಿಯೊ ಸೊಲ್ಲ || ಆಹಾ ||
ಸತಿ ನಿನಗೇನಾದಳೊ ಮನುಜ
ಮಂದ ಮತಿಯೆ ತಾಯಿಗಂಡ ನೀನಾದೆಲ್ಲೋ 4
ಅನ್ನಕ್ಕೆ ಪರಬ್ರಹ್ಮನೆಂಬಿ ಈಗ
ಅನ್ನ ಚಲ್ಲಲು ದೋಷವೆಂಬಿ ನಿತ್ಯ
ಚನ್ನಾಗಿ ಪರಿಪೂರ್ತಿಗೊಂಬಿ ಈ
ಅನ್ನ ನಾನು ವೊಂದೆ ಎಂಬೀ || ಆಹಾ ||
ನಿನ್ನ ದೇಹಕ್ಕೆ ರೋಗವು ಬಂದರೆ ನೀನು
ಅನ್ನವ ಬಿಟ್ಟಿನ್ನು ಚನ್ನಾಗಿ ಮಲುಗುವಿ 5
ಭೇದವಿಲ್ಲೆಂತೆಂದರೆ ನೀನು
ಮಾದಿಗರೆಲ್ಲ ಒಂದೇನೊ ಸರಿ
ಹೋದವರೆಂಜಲ ತಿನ್ನೋ ಕಹಿ
ಸ್ವಾದವು ನಿನಗಿಲ್ಲವಿನ್ನು ||ಆಹಾ||
ಓದನಾದರು ವೊಂದೆ ಮೇದ್ಯವಾದರು ವಂದೇ
ಭೇದವಿಲ್ಲದೆ ತಿಂದು ಹೋದಿಯೋ ನರಕಕ್ಕೆ 6
ಎಲ್ಲವೂ ಬ್ರಹ್ಮಸ್ವರೂಪಾ ಬ್ಯಾರೆ
ಇಲ್ಲೆಂದು ನಿನಗೆ ರೂಪಾ
ಭೇದವಿಲ್ಲೆಂತೆಂಬುವದು ನಿಶ್ಚಯವು ವಾಕು
ಸಲ್ಲದೆ ಇನ್ನು ಪೋದಾವು ||ಆಹಾ ||
ಬಲ್ಲಿದ ಪುರುಷನು ಮೆಲ್ಲನೆ ನಿನ್ನ ಸತಿ
ಯಲ್ಲಿ ಮಲಗಿದರೆ ನೆಲ್ಲಿ ನೀ ಸೈರಿಸಿ7
ನಾಶವಿಲ್ಲೆಂಬುದೆ ಸತ್ಯ ದೋಷ
ಮಿಥ್ಯ ಜಗ
ಭೃತ್ಯ ಬಿಡದೆ
ನಿತ್ಯ ||ಆಹಾ||
ದ್ವಾಸುಪರ್ಣವೆಂಬೊ ಈ ಶ್ರುತಿಗರ್ಥವು
ಲೇಸಾಗಿ ತಿಳಿಯದೆ ಘಾಶಿಪಡುವಿ ವ್ಯರ್ಥ 8
ಈಶನು ನೀನಾದರೇನು ಸರ್ವ
ದೇಶ ಪೋಷಿಸದೆ ಇಪ್ಪೋರೆ ನಿನ್ನ ಸಾ
ಹಸ ವ್ಯರ್ಥ ಮಾಡೋರೆ ಹರಿ
ದಾಸರು ಕಂಡು ಸಹಿಸೋರೆ ||ಆಹಾ ||
ಸತಿ ಸುತರು
ಕ್ಲೇಶ ಪಡುವುದು ಬಿಡಿಸಲಾರಿಯೊ ಲೇಶ 9
ಗುರುದೈವವಿಲ್ಲವೊ ನಿನಗೆ ಒಬ್ಬ
ಸರಿಯಿಲ್ಲ ಈ ಧರೆಯೊಳಗೆ
ಯಾರು ಹಿರಿಯ ಕಿರಿಯರಿಲ್ಲ ನಿನಗೆ ನೀನು
ಖರ ಶಬ್ದಕಿಂತ ಹೊರಗೆ ||ಆಹಾ ||
ಎರಡಿಲ್ಲಾಯೆಂಬೊದೆ ಇರುಳಿಲ್ಲ ಹಗಲಿಲ್ಲಾ
ನರಕ ಸ್ವರ್ಗ ವಂದೇ ಅರಿಯಾದೆ ಮುಳುಗುವಿ 10
ವಂದನೆ ನಿಂದ್ಯಗಳೊಂದೇ ನಿನಗೆ
ಗಂಧ ದುರ್ಗಂಧವು ವಂದೇ ಕೆಟ್ಟ
ಹಂದಿಯೆಲ್ಲ ನೀನು ವಂದೇ ನಿನ್ನ
ಕೊಂದರೆ ದೋಷವಿಲ್ಲವೆಂಬೆ ||ಆಹಾ||
ಎಂದಿಗೂ ಈ ಮಾತು ನಿಂದಾವೆ ನಿನಗಿನ್ನು
ಮುಂದಕ್ಕೆ ಬರಲಾರಿ ಮಂದಮತಿಯೆ ಖೋಡಿ11
ಜಗದೊಳಗೆ ನೀ ನಿಂತು ಇದು
ಜಗವಲ್ಲವೆಂಬೋದಕ್ಕಿಂತು ನೋಡಿ
ನಗುವರೋ ಅಶುದ್ಧ ಜಂತು ಜಿಂಹ್ವೆ
ಬಿಗಿದು ಕೋಯಿಸುವ ಯಮನಿಂತು ||ಆಹಾ ||
ಹಗಲು ಇರುಳು ವಂದೆ ನಗುತ ನಗುತಾ ಕಂಡು
ತೊಗಲು ದೇಹವು ನಿನ್ನದಗೆ ಮಾಡುವುದು ವ್ಯರ್ಥ 12
ಸ್ವಾಮಿ ನಿನಗೆ ಬ್ಯಾರಿಲ್ಲಾ ನಿತ್ಯ
ನೇಮ ಕರ್ಮವು ಬ್ಯಾರೆ ಸಲ್ಲ ಒಂದು
ಕಾಮಿನಿ ನಿನಗೆ ಬೇಕಲ್ಲ ಪೂರ್ಣ
ಕಾಮನು ನೀನೆಂಬೆಯಲ್ಲಾ ||ಆಹಾ||
ಗ್ರಾಮ ಭೂಮಿಗಳ್ಯಾಕೊ ತಾಮಸ ನಿನಗಿನ್ನು
ತಾಮಸರಿಗೆಲ್ಲ ಸ್ವಾಮಿಯಾಗಿರು ಹೋಗೋ 13
ಕಾಣದೆ ಬಗಳುವೆ ಮಾಯಿ ನಾಯಿ
ನಿನಗೆ ತಂದೆ ತಾಯಿ ಇನ್ನು
ಕಾಣುತ ಬೊಗಳೋದು ನಾಯಿ ಈ
ನಾಯಿ ಕಚ್ಚಿ ನೀ ಸಾಯಿ ||ಆಹಾ ||
ಬಾಯ ಮುರಿವಾ ನಿನ್ನ ನ್ಯಾಯದಿಂದಲಿ ವಾಯು
ಕಾಯ ಖಂಡ್ರಿಸುವನೊ 14
ಇಷ್ಟು ಹೇಳಿದರೆ ನೀ ಕೇಳಿ ನೀ ವ್ಯರ್ಥ
ನಿಷ್ಠುರಾಡಿ ನೀ ಬಾಳೀ ನಿನ್ನ
ಕಟ್ಟಿಗೆ ಮುರಿದಂತೆ ಶೀಳಿ ಬಾಯ
ಕುಟ್ಟಿ ತುಂಬುವ ಯಮಧೂಳಿ ||ಆಹಾ||
ಸೃಷ್ಟಿಗೊಡಿಯ ನಮ್ಮ ವಿಜಯವಿಠ್ಠಲನ ಮುಟ್ಟಿ ಭಜಿಸದಲೆ
ಭ್ರಷ್ಟ ಮನುಜ ನೀ ಅಷ್ಟವೆಂದೆಂಬೋದು ಬ್ಯಾಡವೊ 15