ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನವವಿಧ ಭಕ್ತಿ ಶ್ರವಣ ಪಾವನವಾದ ಹರಿಕಥೆ ಪುರಾಣ ಮೊದ ಲಾದುದನು ಕೇಳುತ್ತಿ ಪರಮಾತ್ಮನನ್ನು ಹೃದಯ ಪೀಠದಲಿರಿಸಿ ಪೂಜಿಸುವ ಭಕ್ತನೇ ಶ್ರವಣ ಫಲ ಹೊಂದಿದವ ಶ್ರವಣಭಕ್ತಿಯಿದು 64 ದಾಸಕೂಟದ ಭಕ್ತರಿಂ ರಚಿತವಾದ ಸು ಶ್ರಾವ್ಯ ಹಾಡುಗಳನ್ನು ಪಾಡಿ ಕುಣಿಯುತ್ತ ದೇವರನು ನೆನೆನೆನೆದು ಧ್ಯಾನಿಸುವ ಭಕ್ತರೇ ಕೀರ್ತನದ ಭಕ್ತರೆಂದರಿ ಮನುಜ ನೀನು 65 ವ್ಯಾಸ ದಾಸರ ಕೂಟದಿಂದರಿತ ದೇವರನು ಮಾನಸದ ಮಂಟಪದಲ್ಲಿರಿಸಿ ಪೂಜಿಸುತ ಅದನೆ ಪೌನಃಪುನ್ಯದಿಂದ ಮೆಲುಕಾಡುವದು ಸ್ಮರಣಭಕ್ತಿಯಿದೆಂದು ತಿಳಿ ಮನುಜ ನೀನು 66 ಅವತಾರ ರೂಪಗಳ ಮೂರ್ತಿಗಳ ರಚಿಸುತಲಿ ನಿನ್ನ ಚಿತ್ತದ ದೇವರನ್ನಲ್ಲಿಯಿರಿಸಿ ಅವನ ಗುಣಗಳ ನೆನೆದು ಪಾದಸೇವೆಯ ಮಾಡೆ ಪಾದಸೇವನಭಕ್ತಿಯೆಂದು ತಿಳಿ ಮನುಜ 67 ಹೂ ತುಳಸಿ ಮೊದಲಾದ ವಸ್ತುಗಳ ಶೇಖರಿಸಿ ದೇವ ಮೂರ್ತಿಗಳನ್ನು ಇದಿರಲ್ಲಿಯಿರಿಸಿ ಷೋಡಶದ ಉಪಚಾರ ಪೂಜೆಗಳ ನಿತ್ಯದಲಿ ಮಾಡುವುದೆ ಅರ್ಚನದ ಭಕ್ತಿಯಿದು ತಿಳಿಯೈ 68 ಎದೆ ಶಿರಸು ಕಣ್ಣು ಮನ ಕೈಕಾಲು ಮೊಣಕಾಲು ವಾಗೆಂಬುದೆಂಟಂಗಗಳನು ಪಾದದೆಡೆಯೀಡಾಡಿ ನಮಿಸುವುದೇ ವಂದನವು ಸಾಷ್ಟಾಂಗನಮನವಿದು ತಿಳಿಯೈ 69 ದಾಸೋಹವೆಂಬುದನು ತಿಳಿದು ನೀನನವರತ ಫಲದ ಬಯಕೆಯ ತೊರೆದು ಸೇವೆಯನು ಮಾಡೆ ಸೇವಕನ ನಿನ್ನನ್ನು ತನ್ನ ಬಳಿಗೊಯ್ಯುವನು ಭವಬಂಧ ತೊರೆಯಿಸುತ ಪಾಲಿಸುವನವನು 70 ಸಚ್ಚಿದಾನಂದ ಸ್ವರೂಪದವ ಪರಮಾತ್ಮ ತನ್ನ ಗುಣಗಳನ್ನೆಲ್ಲ ಭಕ್ತರಿಗೆ ಕೊಡುವ ನೀರು ಹಾಲನು ನಂಬಿದಂತೆ ನಂಬುವನನ್ನು ಭಕ್ತರಕ್ಷಕನವನು ಮುಕ್ತಿದಾಯಕನು 71 ಕೃಷ್ಣನು ಪರಬ್ರಹ್ಮ ಕೃಷ್ಣನನು ವಂದಿಸುವೆ ಕೃಷ್ಣನಿಂದಲೆ ಸಕಲ ವಿಶ್ವಗಳ ಸೃಷ್ಟಿ ಸುಕೃತ ದುಷ್ಕøತವೆಲ್ಲ ಕೃಷ್ಣನಡಿಯಲಿ ಮುಡಿಯು ಕೃಷ್ಣನಲಿ ಮನವು 72 ಕಾಮಹತಕನು ರುದ್ರದೇವನಿಲ್ಲಿಯೆ ಇದ್ದು ಅಷ್ಟಯತಿಗಳ ಶುದ್ಧಮಾನಸರ ಮಾಡಿ ಬಾಲಯತಿಗಳ ಮೂಲಕವೆ ಪೂಜೆಯನು ಪಡೆದು ರಾರಾಜಿಸುವೆ ದೇವ ಕೃಷ್ಣರೂಪದಲಿ 73 ಭಾರ್ಗವೀಪತಿಯಾದ ಸಿರಿವರನು ಮಾಧವನು ಭಾರ್ಗವೀರೂಪವನು ಶುಕ್ರವಾರದಲಿ ತಾಳ್ದು ಭಕುತರ ಹೃದಯವನ್ನರಳಿಸುವೆ ನೀನು ಮೋಹಿನೀರೂಪವದು ಮೋಹಕವದಲ್ತೆ 74 ಬಲ್ಲಾಳ ವಂಶಜರು ಉಡುಪ ಕುಲದವರೆಂದು ಭಕುತ ಗುರುವಾದಿರಾಜರ ಹಸ್ತದಿಂದ ಮೂರು ಅವತಾರ ಚಿಹ್ನೆಯ ತಾಳ್ದ ಮಾರುತಿಯ ಆರಾಧ್ಯ ಭೂವರಾಹರ ಕೊಡಿಸಿ ಪೊರೆದೆ 75 ದುಷ್ಟ ಜನಮರ್ದನ ಜನಾರ್ದನನು ನೀನಿರುವೆ ನಿನ್ನ ರೂಪವೆ ಪಕ್ಷನಾಥ ಸೇವಿತವು ಚಕ್ರ ಶಂಖಾಸಿ ಪಾನದ ಪಾತ್ರೆಗಳ ಧರಿಸಿ ದುಷ್ಟ ಶಿಕ್ಷಣಕಾಗಿ ಕಾಳಿ ಸೇವಿಪಳು 76 ಜಮದಗ್ನಿಪುತ್ರನಾಗವತರಿಸಿ ನೀನೊಮ್ಮೆ ಕೊಡಲಿಯಿಂ ಕಡಿಕಡಿದು ದುಷ್ಟರಾಜರನು ನಕ್ಷತ್ರ ಮಂಡಲವ ಭೂ ಮಂಡಲವ ಮಾಡಿ ಪರಶುರಾಮನು ಎಂಬ ಪೆಸರನ್ನು ಪಡೆದೆ 77 ಪರಶುರಾಮನು ರಾಮ ಪರಶುರಾಮನು ಕೃಷ್ಣ ಒಬ್ಬನೇ ಹಲವಾರು ರೂಪಗಳ ತಾಳಿ ಸಾಸಿರದ ನಾಮದಿಂ ಸ್ತುತಿಸಿಕೊಳ್ಳುವೆ ಹರಿಯೆ ನಿನ್ನ ಮಾಯಾರೂಪ ತಿಳಿದವರು ಯಾರು? 78 ಮೇಘದೆಡೆಯಿರುವ ಮಿಂಚಿನ ಹಾಗೆ ನೀನೆಂದು ತಿಳಿಸಲ್ಕೆ ನೀನು ಮೇಘದ ವರ್ಣದವನು ನೀಲತೋಯದ ಮಧ್ಯದಲ್ಲಿರುವ ವಿದ್ಯುತ್ತಿನಂತಿರುವಿ ಯೆಂದು ಶ್ರುತಿ ಹೇಳುವುದು ತಿಳಿಯೈ79 ಪುರುಷೋತ್ತಮನೆ ನಿನ್ನ ಪುರವೆಯೆನ್ನಯ ದೇಹ ಉತ್ತಮನು ನೀನಿರುವೆ ಅಧಮ ನಾನಿರುವೆ ಅಜ್ಞಾನದಾಚ್ಛಾದಿಕೆಯನೆನಗೆ ಹಾಕುತಲಿ ಬಿಂಬರೂಪದಲಿದ್ದು ಬೆಳಗಿಸುವೆ ನನ್ನ 80 ಶ್ರವಣಮನನಾದಿ ಸಾಧನದ ಬಲದಿಂದ ನಾ ನನ್ನ ಮುಸುಕನು ತೆಗೆದರೂ ನೀನು ಎನ್ನ ಬಳಿಯಲ್ಲಿದ್ದು ಕಾಣದಿಹೆ ಪರಮಾತ್ಮ ನಿನ್ನ ಪರಮಾಚ್ಛಾದಿಕೆಯ ತೆಗೆದು ತೋರು 81 ಗೋವರ್ಧನೋದ್ಧಾರಿ ಸಿರಿವರನೆ ನೀನೊಮ್ಮೆ ನಾಭಿರಾಜನ ಪುತ್ರನಾಗಿಯವತರಿಸಿ ಅಜನಾಭವೆಂಬ ಮೋಡವನು ಸೃಷ್ಟಿಸಿ ನೀನು ಲೋಕದ ಕ್ಷಾಮವನು ಹೋಗಲಾಡಿಸಿದೆ 82 ನೀನೊಮ್ಮೆ ದಕ್ಷಿಣದ ಕರ್ಣಾಟಕಕೆ ಬಂದು ಅಜಗರದ ವೃತ್ತಿಯಲಿ ದೇಹವನು ತೊರೆದು ನಿರ್ವಾಣ ಬೌದ್ಧಮತ ಜೈನಾದಿ ಮತಗಳಿಗೆ ಮೂಲಪುರುಷನದಾಗಿ ಮೆರೆದೆ ಪರಮಾತ್ಮ 83 ಸತ್ವ ರಜ ತಮವೆಂಬ ಮೂರು ಗುಣ ಪ್ರಕೃತಿಯದು ಪ್ರಾಕೃತದ ದೇಹವನು ಹೊಂದಿದಾ ಜನರು ಹುಟ್ಟುಗುಣ ಮೂರರಿಂ ಕರ್ಮವನು ಮಾಡುತ್ತ ಸುಖ ದುಃಖವನು ಹೊಂದಿ ಜೀವಿಸುವರವರು 84 ಸತ್ಯಾತ್ಮಕನು ನೀನು ಚ್ಯುತಿಯಿಲ್ಲ ಸತ್ಯಕ್ಕೆ ಅಚ್ಯುತನ ನಾಮದಿಂ ಪಾಪ ಪರಿಹರಿಪೆ ಅಂತವಿಲ್ಲದುದಾತ್ಮ ಆತ್ಮರಕ್ಷಕನಾಗಿ ನಾಮದಲನಂತನೆನಿಸಿರುವೆ ಶ್ರೀಹರಿಯೇ 85 ವೇದರಕ್ಷಕನಾಗಿ ಗೋವುಗಳ ರಕ್ಷಿಸುತ ಗೋವಿಂದನಾಮವನು ಧರಿಸುತಲಿ ನೀನು ನಾಮತ್ರಯಗಳಿವನು ಕರ್ಮಾಂತದಲಿ ಪಠಿಸೆ ಕರ್ಮದೋಷದ ಪಾಪ ಪರಿಹಾರವಹುದು 86 ಸಚ್ಚಿದಾನಂದಸ್ವರೂಪ ಹರಿ ನೀನಿರುವೆ ನಿನ್ನ ರೂಪಗಳೆಲ್ಲ ಪೂರ್ಣವಾಗಿಹವು ಜ್ಞಾನವಾನೆಂದವನು ಹೆರವರ್ಗೆ ತಿಳಿಸುತಿರೆ ನಮ್ಮಲ್ಲಿ ಹೆಚ್ಚುವವು ಅದರಿಂದ ಪೂರ್ಣ 87 ಹರದಾರಿ ಸಾವಿರಾರಿದ್ದರೂ ನಾದವನು ಚಣದೊಳಗೆಯಾಕಾಶವಾಣಿ ಕೇಳಿಸುವದು ಕಾಣದಿಹ ವಿದ್ಯುತ್ತುರೂಪವನು ತಾಳಿದವ ದೇವನಲ್ಲದೆ ಬೇರೆ ಯಾರ ಮಾಯೆಯಿದು 88
--------------
ನಿಡಂಬೂರು ರಾಮದಾಸ
ನಿನ್ನ ದಾಸನು ನಾನು ಎಂತಾಹೆನಯ್ಯಅನ್ನಂತ ಅಪರಾಧಕಾಕರಾದವನು ಪ. ಅರುಣೋದಯವ ಜರಿದು ಆಹ್ನಿಕ ಕರ್ಮವ ತೊರೆದುಪೊರೆವ ನಿನ್ನಡಿಯ ಮರೆದುದುರುಳರಿಗೆ ಬಾಯ್ದೆರೆದು ದೈನ್ಯದಲಿ ಪಲ್ಗಿರಿದುಮರಿಯಾದೆಗೆಟ್ಟು ತಿರಿದುಇರುಳು ಹಗಲೆನ್ನದೆ ಈ ವಿಧದಿ ಹೊಟ್ಟೆಯಹೊರೆದು ಇದು ಪುಣ್ಯ ಇದು ಪಾಪವೆಂದರಿಯದವ 1 ಜಟ್ಟಿಗಳ ಮನೆಯ ನಾಯಂತೆ ಒಳ್ಳೆಬಟ್ಟೆಗಳತೊಟ್ಟವರ ಹಿಂದೆ ತಿರುಗಿಅಟ್ಟುಂಡು ಬಾಳಿಬದುಕಿದ ತಮ್ಮ ಹಿರಿಯರುಕೆಟ್ಟು ಮುರಿದುದನು ಪೇಳಿಉಟ್ಟ ಅರಿವೆಯ[ಕೋರಿ] ಹೊಟ್ಟೆ ಬಾಯನೆ ತೋರಿಕೊಟ್ಟುದಕೆÉ ತೃಪ್ತನಾಗದೆ ಅವರ ಬಯ್ವವನು 2 ವೃತ್ತಿ ಅಲ್ಲದ ಶೂದ್ರ ವೃತ್ತಿಗಳನನುಸರಿಸಿ ಅ-ಕೃತ್ಯ ಶತಗಳನು ಮಾಡಿಸತ್ಯ ಶೌಚಂಗಳ ಬಿಟ್ಟು ಶ್ರವಣ ಮನನಾದಿ ಪ್ರ-ಸಕ್ತಿಗಳ ಹೋಗಲಾಡಿಉತ್ತಮರು ತಾಯಿತಂದೆ ಗುರುಹಿರಿಯರುಗಳಅರ್ಥಗಳನಪಹರಿಸಿ ಅವರ ನಿಂದಿಸುವನು 3 ಪರ್ವ ಉಪರಾಗ ದ್ವಾದಶಿ ಅಯನಗಳಲ್ಲಿಸರ್ವವಿಹಿತಗಳ ಮೀರಿಉರ್ವಿಯೊಳು ಉಳ್ಳ ಯೋಗ್ಯರನೆಲ್ಲ ಹಳಿದೆನ್ನನಿರ್ವಾಹಗಳನೆ ತೋರಿದುರ್ವಿಚಾರದಿ ಸ್ವಲ್ಪಧನಕಾಗಿ ಎನ್ನೊಳಿಹಪೂರ್ವಸಂಚಿತಮಂತ್ರ ತುಚ್ಛರಿಗೆ ಮಾರಿದವ 4 ಛಲ ಚಾಡಿ ಡಂಭ ಮಿಥ್ಯಾಜ್ಞಾನ ದುರ್ವಿಷಯಕುಲಸತಿಯ ಕೂಡೆ ಕಲಹಕಳವು ಕಠಿಣೋಕ್ತಿ ದುಷ್ಟಾನ್ನಭೋಜನ ಮದುವೆ-ಗಳ ಮುರಿವ ಪಾಪಚಿಂತೆಹಳಿವ ಹರಿವಾಸರ ವ್ರತಭಂಗದಿಂದ ನಾನಾಗಿಸುಲಭ ಹಯವದನನ್ನ ಮರೆತ್ಹಾಳುಹರಟೆಯವ 5
--------------
ವಾದಿರಾಜ
ಪಾದ 1ಹುಟ್ಟುಸಾವುಗಳ ಸುಳಿಯಲಿ ಸಿಕ್ಕಿಕಷ್ಟದಿಂದ ದುಃಖಪಡುತಿರುವರಕಷ್ಟವನು ಹೋಗಲಾಡಿಸುವಸ್ಟೃಗೆಲ್ಲ ಮುಖ್ಯದೈವವಾದ ನಿನ್ನ 2ಹೊಟ್ಟೆಬಟ್ಟೆಗಾಗಿ ನಾ ಮಾಡಿದಕೆಟ್ಟಜನಗಳ ಸೇವೆ ಸಾಕುಮಾಡಿಇಷ್ಟದೈವದ ಚಿದ್ರೂಪವ ನೆಟ್ಟನರಿಯುವ ದ್ಟೃುಂದ ನಿನ್ನ 3
--------------
ಹೊಸಕೆರೆ ಚಿದಂಬರಯ್ಯನವರು
ಸಂದು ಹೋಯಿತೀ ಕಾಲವು ವ್ಯರ್ಥಾ ಒಂದು ಬಾರಿ ಗೋವಿಂದ ಎನದÉ ಮಂದನಾಗಿ ಅತಿಮಾತಿಗೆ ಒಳಗಾಗಿ ಪ ಹುಟ್ಟಿದ ಮೊದಲು ----ಬಹು ಭ್ರಷ್ಟರ ಸಂಗದಿ ಬೆರೆದಾಡುತ ಸೃಷ್ಟಿಗೊಡೆಯ ಶ್ರೀಕೃಷ್ಣನ ಪಾದವ ಮುಟ್ಟಿ ಭಜಿಪರ ಮರದಾಡುತಾ ಕೆಟ್ಟ ಬುದ್ಧಿಯ ಗುರುಹಿರಿಯರ ಕಂಡು ಬೆಟ್ಟನಾಗಿ ಬಹು ಜಗಳಾಡುತಾ ನಿಷ್ಠರ ಕಂಡರೆ ನಿಂದೆಗೆ ಒಳಗಾಗಿ ಕಟ್ಟಕಡೆಗೆ ನರಕ ಘೋರವೇ ಸಿದ್ಧವಾಗಿ 1 ಹರಿಶರಣರ ಕೂಡನುದಿನ ಮನದಲಿ ದುರುಳ ಮಾತಿನಲಿ ದೂಷಿಸುತಾ ಪರಮಾತ್ಮನ ಕೃಪೆ ಪಡೆದ ಸುಜನರಾ ಪಾದಕೆ ಶಿರವೆರಗದೆ ಇರುತಾ ಶರಣರ ದ್ರೋಹದೊಳಿರುಳು ಹಗಲು ಇದು ಶಿಷ್ಟನು ನಾನೆಂದು ಹೇಳಿಕೊಳುತಾ ಗರುವತನದಿ------ ಹೀನನು ಆಗಿ ----------ರತನಾಗಿ ಇನ್ನೂ 2 ಅಂಡಜವಾಹನ ಪುಂಡರಿಕಾಕ್ಷನ ಕೊಂಡಾಡುವರನ ಕು-----ಡಿ ಕಂಡ ಕಂಡ------ನ ಮಹಾಮಹಿಮರನ ಪುಂಡನಾಗಿ ಇನ್ನು ಹೋಗಲಾಡಿ ಮಂಡಲದೊಡೆಯ 'ಶ್ರೀಮಹಾಹೆನ್ನೆವಿಠ್ಠಲನ’ ಕಂಡು ಪೂಜಿಸು----ಒಡನಾಡಿ ಗುಂಡತನದಿ-------ಕಾಲನ ದಂಡನೆಗೊಳಗಾಗಿ----ರಾರಿಯ ಮುಖ----ಗಿ 3
--------------
ಹೆನ್ನೆರಂಗದಾಸರು
ಸಾಧಿಸು ಪರಲೋಕ ಮನವೆ ನೀ ಸಾಧಿಸು ಪರಲೋಕ ಪ ಮಾಧವನ ಮಹ ಪಾದದಾಸರಿಂದ ಶೋಧಿಸಿ ನಯದಿ ಸಂಪಾದಿಸಿ ಜ್ಞಾನವ ಅ.ಪ ಭೇದಬುದ್ಧಿ ಬಿಡೋ ಸುಜನರಿಂ ವಾದಿಸಿ ಕೆಡಬೇಡೋ ಆದರದಿಂದಲಿ ಸಾಧು ಸಂತರ ಸು ಬೋಧ ವಾಕ್ಯಗಳ ಮೋದದಿಂ ಕೇಳುತ 1 ರಾಗರಹಿತನಾಗೋ ಸಂಸಾರ ಭೋಗದಾಸೆ ನೀಗೋ ಯೋಗಿಗಳಿಗೆ ತಲೆವಾಗಿ ದಿಟದಿ ನೀ ಹೋಗಲಾಡಿಸಿ ಭವಬೇಗ ಸುಪಥಕ್ಹತ್ತಿ 2 ಕಾಮಿತಂಗಳ ಅಳಿಯೋ ತನುಧನ ಪ್ರೇಮಮೋಹ ಕಳೆಯೋ ಕಾಮಜನಕ ನಮ್ಮ ಭೂಮಿಜೆಪತಿ ಶ್ರೀ ರಾಮನಾಮಬೆಂಬ ವಿಮಾನವೇರಿ 3
--------------
ರಾಮದಾಸರು
ಹಿಂದೂ ಮುಂದೂ ಎಂದೆಂದಿಗೂ ಗೋವಿಂದನೆ ಎನಗೆ ಬಂಧು ಪ. ಮನೆಯೆಂಬೋದೆ ಸುಮ್ಮನೆ ಮಕ್ಕಳೆಂಬೋದೆ ದಂಧನೆಹಣವೆಂಬೋದೆ ಬಲುಬೇನೆ ಹಾರಿಹೋಗುವದು ತಾನೆ 1 ಮಂದಗಮನೆಯರ ಕೂಡಿ ಮದವೆಲ್ಲ ಹೋಗಲಾಡಿಮುಂದೆ ತೋರದಂತೆ ಬಾಡಿ ಮೋಸಹೋಗಲಾಡಬೇಡಿ2 ಪರಧನ ಪರಸತಿ ಪರಕ್ಕೆಬಾರದಿದು ಘಾಸಸಿರಿಹಯವದನನ ಚರಣ ಭಜಿಸಿ ಪಡೆಯೆಲೊ ಕರುಣ3
--------------
ವಾದಿರಾಜ
ಹ್ಯಾಂಗಾದರು ಎನ್ನ ನೀ ರಕ್ಷಿಸ ಬೇಕೋ ಸಾಗರಶಯನ ಕೃಷ್ಣಾ ಪ ಭಾಗವತರ ಸಂಗ ಬೇಗದಿಂದಲಿ ಇತ್ತು ಹೋಗಲಾಡಿಸು ಭವವ ಶ್ರೀ ಕೃಷ್ಣ ಅ.ಪ ಬಾಲೇರ ಸಲುವಾಗಿ ಕೀಳು ಜನರಲ್ಲಿ ಶೀಲ ಜರಿದು ಯಾಚಿಸಿ ಕಾಳಿ ಮರ್ಧನ ನಿನ್ನ ಒಲುಮೆಯ ಪಡೆಯದೆ ಕಾಲ ಬಲಿಗೆ ಸಿಕ್ಕೆನೊ ಶ್ರೀ ಕೃಷ್ಣ 1 ಅಂಗಜನಾಟಕೆ ಹಗಲಿರುಳೆನ್ನದೆ ಪರ ಅಂಗನೆರ ಕೂಡಿ ಮಂಗಳಮಹಿಮ ತುರಂಗ ವದನ ದೇವ ಭಂಗಕ್ಕೆ ಗುರಿಯಾದೆನೊ ಶ್ರೀ ಕೃಷ್ಣ 2 ದುರುಳರ ಸಂಗವನೆಲ್ಲ ಜರಿದು ಶ್ರೀ ನರಹರೆ ಕಾರುಣ್ಯದಲಿ ಭಕ್ತನ ಅರಿಷಟ್ಕರನೆ ಕೊಂದು ಕರಿವರದನೆ ಘೋರ ನರಕಕ್ಕೆ ಭಯ ತಪ್ಪಿಸೋ ಶ್ರೀಕೃಷ್ಣ 3
--------------
ಪ್ರದ್ಯುಮ್ನತೀರ್ಥರು