ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಭಾಗ್ಯಾದ ಲಕ್ಷ್ಮಿ ಹೋಗಮ್ಮ ದೊಡ್ಡಮ್ಮ ನೀ ಪ ಪೀಡೆಕಾಲುಗಳ ಮುಚ್ಚುತ ನೀವೋ ಡÉೂೀಡಿ ಪೋಗುತಲಿ ನಿಲ್ಲದೆ ವ್ಯಾಜ್ಯಗ- ಳಾಡುವ ಸ್ಥಳದಲಿ ನೆಲೆಯಾಗುತ ಹಾಳ ಗೋಡೆಯೊಳಿರುತಿಹ ಕತ್ತೆಯಂತೆ 1 ದೀಪದ ನೆರಳಲಿ ಕೋಪಿಯಮನದಲಿ ಲೋಪವಾದಕರ್ಮದಿ ಸಂತತವು ನಾಪರನೆಂಬುವ ಮಾಢನಲ್ಲಿ ನಿ- ವ್ರ್ಯಾಪಾರಿಯ ಚಿತ್ತದಿ ಯಾವಾಗಲು 2 ಪಾದ ಗದರಿಸುತಾಡುವ ಬಿರುನುಡಿಯಲಿ ನಿಂ- ದ್ಯದ ಮಾತಾಡುವವರÀ ಬಾಯಲಿನೀ ಮುದದೊಳಿದ್ದು ಅಜ್ಞಾನವ ಪಾಲಿಸೆ 3 ಪ್ರತಿದಿನದಲಿ ಅಳುತಿಹ ಸಂಸಾರದಿ ನೀ ಪತಿಯೊಡನವರೊಳಿರುತ ಮೂರ್ಖರಲಿಯ- ನೃತವಾಡಿಸಿ ನರಕವ ಪೊಂದಿಸಲು 4 ಮರವೆ ಸುಷುಪ್ತಿಯು ಬಹುವಿಧ ಮೋಹವು ನೆರೆನಂಬಿದವರಿಗೀವುತ ನೀಹಗ- ಲಿರುಳು ಕಲಿಯೊಡನೆ ಯೆಡೆಬಿಡದಲ್ಲಿಗೆ 5 ಹಾಳುಮಾಡಿಕೊಂಬುವ ಜನಗಳು ನಿ- ವೂಳಿಗವನು ಕೈಕೊಳ್ಳುತ ಬಿಡದೆ 6 ಗುರುರಾಮ ವಿಠಲನ ಶರಣ ಜನರ ಕ- ಣ್ದೆರದು ನೋಡದಿರು ಬೇಡುವೆ ನಿನ್ನನು ನಿರುತವು ನಿರ್ದಯ ಮಾಡುತ ದುರುಳರ ಪರಮ ಕೃಪಾದೃಷ್ಟಿಯಲಿ ನೋಡಲು 7
--------------
ಗುರುರಾಮವಿಠಲ
ಎಂಟಚ್ಚಮ್ಮ ಎಂದಿಗು ಬರಬೇಡಮ್ಮ ಪ ತುಂಟ ಪಟಿಂಗರ ಬಳಿಗೆ ಹೋಗಮ್ಮ ಅ.ಪ ನಿನ್ನ ಗಂಡ ಪಾಂಡವರನ್ನು ಬಾಧಿಸಿ ತನ್ನ ಬಾಯೊಳು ಹುಡಿಮಣ್ಣು ಹಾಕಿಕೊಂಡ 1 ಹುರಿದು ತಿಂಬ ಕಲಿಪುರಷ ಅಯ್ಯಯ್ಯೋ 2 ಗುರುರಾಮವಿಠಲಗೆ ಪರಮದ್ವೇಷಿಯು ಹರಿ ಶರಣರ ಬಾಧಿಸಿ ದುರಿತಗಳಿಸುವನು 3
--------------
ಗುರುರಾಮವಿಠಲ
ಬುದ್ಧಿಮಾತು ಹೇಳಿದರೆ ಕೇಳ ಬೇಕಮ್ಮ ಮಗಳೆ ಮನ ಶುದ್ದಳಾಗಿ ಗಂಡನೊಡನೆ ಬಾಳ ಬೇಕಮ್ಮ ಪ ಮಾತು ಮಾತಿಗೆ ಮಾತ ಜೋಡಿಸಿ ಆಡಬೇಡಮ್ಮಮಗಳೆ ಪ್ರೀತಿ ಪಡುವ ಗಂಡನೆಂದು ಹೆಮ್ಮೆ ಬೇಡಮ್ಮ ನೀತಿ ತಪ್ಪಿ ನಡಿಯಬೇಡ ಯೆಂದಿಗಾದರೂ ಮಗಳೆ ಸೋತು ನಡೆಯಲು ಲೇಸುಯೆಂದು ತಿಳಿಯ ಬೇಕಮ್ಮ 1 ಅತ್ತೆ ಮಾವ ಗಂಜಿ ಕೊಂಡು ನಡಿಯ ಬೇಕಮ್ಮ ಮಗಳೆ ಮತ್ತೆ ಪತಿಯ ಮನವ ಮೆಚ್ಚಿಸಿ ಬಾಳ ಬೇಕಮ್ಮ ದುಡಿಯ ಬೇಕಮ್ಮ ಮಗಳೆ ಚಿತ್ತದಲ್ಲಿ ಹರಿಯ ಭಕ್ತಿ ಬಿತ್ತಬೇಕಮ್ಮ 2 ನೋಟ ಆಟದಲ್ಲಿ ಮಮತೆ ಬಹಳ ಬೇಡಮ್ಮ ಮಗಳೆ ಕೊಟ್ಟು ಕ್ರಯವ ತಿಂಡಿ ತಿಂಬೊ ನಡತೆ ಬೇಡಮ್ಮ ಕೂಟ ಜನರ ಮಾತು ಕೇಳೆ ಕೇಡು ಕೇಳಮ್ಮ ಮಗಳೆ ಸಾಟಿ ನಾನು ಗಂಡಗೆಂದು ಹಠವು ಬೇಡಮ್ಮ 3 ಕ್ಲೇಶ ಕೇಳಮ್ಮ ಮಗಳೆ ಗಂಡ ತಂದುದೆ ದೊಡ್ಡದೆಂದು ಉಂಡು ಬಾಳಮ್ಮ ಗಂಡೀ ನಂತೆ ಮೆರೆಯ ಬಾರ್ದು ತಗ್ಗಿ ನಡೆಯಮ್ಮ ಮಗಳೆ ತೊಂಡಳಾಗಿ ಹರಿಗೆ ಬಾಳೆ ಸುಖವು ನಿನಗಮ್ಮ 4 ಹರಿಯು ಕೊಟ್ಟರೂಪವೆ ಛಂದ ಲಜ್ಜೆ ಬೇಡಮ್ಮ ಮಗಳೆ ಬರಿಯ ವೇಷ ನಾಟಕದಂತೆ ಮೋಸ ಕಾಣಮ್ಮ ಜರಿಯ ಬೇಡ ಹಿರಿಯರ ಮಾತು ಹಾನಿ ಹೌದಮ್ಮ ಮಗಳೆ ಮರಿಯೆ ಹರಿಯ ಭವವು ತಪ್ಪದು ಜೋಕೆ ನೋಡಮ್ಮ 5 ಸೊಲ್ಲು ಕೇಳಮ್ಮ ಮಗಳೆ ನಲ್ಲನ ಬಲುಮೆಗೆ ಒಳ್ಳೆ ಗುಣವೆ ಮುಖ್ಯ ತಿಳಿಯಮ್ಮ ಮಗಳೆ ಒಳ್ಳೆ ಮಾತನಾಡಿ ಸರ್ವರ ಹಿತವ ಕೋರಮ್ಮ 6 ಏನೇ ಬಂದರು ಜರಿದು ಪತಿಯ ನುಡಿಯ ಬೇಡಮ್ಮಮಗಳೆ ನಿನ್ನದೆಂದು ಪುಟ್ಟಿದ ಮನೆಯ ತಿಳಿಯ ಬೇಡಮ್ಮ ಮಾನವೆ ಮುಖ್ಯ ಮಾನಿನೀಗೆ ತಿಳಿದು ಬಾಳಮ್ಮಾ ಮಗಳೆ ಮಾನವು ನೀಡೆ ಮಾನವು ಬಾಹೋದು ಮರ್ಮ ತಿಳಿಯಮ್ಮ 7 ನಾನು ನಾನು ನಾನೆಂಬೋದೆ ಹೀನ ಕೇಳಮ್ಮಾ ಮಗಳೆ ಸಾನುರಾಗದ ನುಡಿಯೆ ಸಕ್ಕರೆ ಕೀರ್ತಿ ಉಳಿಸಮ್ಮ ಸ್ನಾನ ಪಾನದಲ್ಲೇ ಮುಳುಗದೆ ಹರಿಯ ಸೆನೆಯಮ್ಮ ಮಗಳೆ ಶ್ರೀನಿವಾಸನ ಭಕ್ತರ ಪೂಜೆ ಯತ್ನದಿ ಮಾಡಮ್ಮಾ 8 ಪರರ ಸಿರಿಯ ನೋಡಿ ಮನದಿ ಕೊರಗ ಬೇಡಮ್ಮ ಮಗಳೆ ಹರಿಯು ನೀಡಿಹ ಸಿರಿಯೆ ಸಾಕುಯೆಂದು ಸುಖಿಸಮ್ಮ ಯರವಿನಿಂದ ಒಡವೆ ವಸ್ತ್ರ ಧರಿಸ ಬೇಡಮ್ಮ ಮಗಳೆ ಅರಿತು ಹರಿಯ ಗುಣಗಳ ಮನದಿ ನೆನೆದು ನೆನೆಯಮ್ಮ 9 ಸತತ ನಗೆ ಮೊಗಳಾಗಿ ಬಾಳು ಗಂಟು ಬೇಡಮ್ಮ ಮಗಳೆ ಸತತ ಕಾಯುವ ಹರಿಯೇಯೆಂದು ದೃಢದಿ ಭಜಿಸಮ್ಮ ಕೇಳಮ್ಮಾ ಮಗಳೆ ನಿತ್ಯ ಸುಖಿಸಮ್ಮ 10 ಪತಿಯ ಭಕ್ತಿಯೆ ತಾರಕ ನಿನಗೆ ಧೋರಣೆ ಬೇಡಮ್ಮ ಮಗಳೆ ಪತಿಯ ಜರಿಯುತ ವ್ರತಗಳ ಮಾಡೆ ಫಲವೇ ಇಲ್ಲಮ್ಮ ರತಿಯಿಂ ನುಡಿದಿಹೆ ಶೃತಿಗಳಸಾರ ಯುಕ್ತಿಗಳಮ್ಮ ಮಗಳೆ ಮೊರೆಯ ಹೋಗಮ್ಮ 11
--------------
ಕೃಷ್ಣವಿಠಲದಾಸರು