ತನ್ನ ತಿಳಿದು ತಾನಾದಂಥ ಗುರುವಿನ ಪಾದವ ಹೊಂದುತನ್ನನರಿಯದ ಗುರುವ ಹೊಂದಬೇಡೆಂದೆಂದು ಪ
ನಿನ್ನನು ದೇವನೆಂದೆನ್ನುವಗೆ ಈಗ ಶರಣು ಮಾಡೋಅನ್ಯ ದೇವರನೆಂದೆನ್ನುವನ ಹಾದಿ ಹೋಗಬೇಡೋ 1
ಕೋಟಿರವಿ ತೇಜವ ಕಣ್ಣಲಿ ನೋಡುಬೂಟಿಕ ಕಾಯಕಗಳ ದೂರಮಾಡು 2
ಸೋಹಂ ಮಂತ್ರವ ಹೇಳದವನ ಸೆರಗ ಬಿಟ್ಟು ನೀನುಊಹಿಸುವ ಬೇರೆ ಗುರುವನು ಉತ್ತಮ ಅವನು3
ವಾಸನೆ ಕಳೆದಾತಂಗೆ ಒಪ್ಪಿಸಯ್ಯ ತನುವಆಸೆ ಹಚ್ಚುವವನತ್ತ ಬಿಡಲಿ ಬೇಡ ಮನವ 4
ಚಿದಾನಂದ ಗುರುವ ಹೊಂದು ಚಿನ್ಮಾತ್ರನಹೆ ಮದಮುಖ ಗುರುವ ಹೊಂದದಿರು ತಿಳಿ ಮುಂದೆ ನೀನು ಕೆಡುವೆ 5