ಕವಿ ಮಾತುಗಳ ಕೇಳಿ ಕೆಟ್ಹೋಗಬೇಡಿರಿಕವಿ ನಾಶ ತನವೆಂದು ಹೇಳಲಿಲ್ಲಶಿವನ ತಿಳಿದು ನಿಮ್ಮಶಿವನೆಂದು ಕಂಡರೆ ಸಾಕ್ಷಾತ್ ಬ್ರಹ್ಮನೆ ನೀವೆಯೆಲ್ಲಾ ಪ
ಸೋಗೆಗಣ್ಣುಗಳೆಂದು ಹೇಳಿದನಲ್ಲವೇಸೋಗೆಗಣ್ಣಿನ ಸೀಳ ಹೇಳಲಿಲ್ಲಮೂಗನು ಸಂಪಿಗೆ ನನೆಯೆಂದನಲ್ಲವೆಮೂಗಿನ ಸಿಂಬಳ ಹೇಳಲಿಲ್ಲ 1
ಬಾಯಿ ಕರ್ಪೂರದ ಕರಡಿಗೆ ಎಂದನಲ್ಲವೆಬಾಯೊಳಗಣ ಲೊಟ್ಟೆ ಹೇಳಲಿಲ್ಲಕಾಯವು ಕನಕದ ಬಾಳ ಎಂದನಲ್ಲವೆಕಾಯ ದುರ್ಗಂಧವ ಹೇಳಲಿಲ್ಲ 2
ಮಂದಗಮನೆ ಎಂದು ನಡೆಗಂದನಲ್ಲವೆಹಂದಿದುಟಿಯನದ ಹೇಳಲಿಲ್ಲಸುಂದರ ಸರ್ಪವೇಣಿ ಎಂದನಲ್ಲವೆಸಂದಿ ಸಂದಿಯ ಹೇನ ಹೇಳಲಿಲ್ಲ3
ನರದೇಹವನು ಕೊಂಡಾಡಿದನಲ್ಲವೆನರದೇಹ ನರಕವೆಂದ್ಹೇಳಲಿಲ್ಲಗುರು ಚಿದಾನಂದ ಸದ್ಗುರುನಾಥನ ನಂಬಿಶರೀರವ ಕಳೆ ಎಂದು ಹೇಳಲಿಲ್ಲ4