ಬಿಡೋ ಬಿಡು ಮನುಜ ಭ್ರಾಂತಿಯ
ಪಡಕೊ ನಿನ್ನೊಳು ತಿಳಿಯುವ್ಹಾಂಗ ಸದ್ಗುರು ಭಕ್ತಿಯ ಧ್ರುವ
ಬುಡದಲಿ ಫಲವಿರಲಿಕ್ಕೆ ಅಡರುವದ್ಯಾಕೊ ತುದಿಗೆ
ಪಡಬ್ಯಾಡೋ ನಾನಾ ಸಾಯಾಸ ತೊಡಕಿ ಬೀಳುವ 1
ಕಾಶಿಗೆ ಹೋಗಬೇಕೆಂದು ಕಾಸಿನ ಚಾಲವರಿಕ್ಯಾಕ
ಆಸಿ ಅಳಿದರೊಂದೇ ಸಾಕು ಭಾಸುದು ತನ್ನೊಳಗೆ 2
ದೇವರೆ ತಾ ದೂರಿದ್ದರೆ ಆವದೊ ನಿನ್ನ ಕಾವ ದೈವ
ಠಾವಿಕಿ ಮಾಡಿಕೊಳ್ಳೊ ಸಾವಧ ವಾಗಿ 3
ಹೇಳಿಕೊಡುವ ಸ್ವಾಮಿ ಬೆಳಗ ತಾ ಝಾಡಿ 4
ಸಾಯಾಸವಿಲ್ಲದೆ ಮಹಿಪತಿಗೆ ಶ್ರಯದೋರಿತು ಗುರುವಾಕ್ಯದಲಿ
ಆಯಿತು ಮಾಡಿದ ಗುರು ತಾಯಿತಂದೆನಗೆ 5