ಸಂಗಬೇಡವೈ ಆಶಾ ಪ
ಸಂಗದಿಂದ ನಿನಗೆ ಅಂಗವೇ ಭಂಗವಾಹುದೈ ಅ.ಪ
ಇದ್ದ ಕಡೆ ಇರಲೀಸದು | ಅ
ಶುದ್ಧ ಮನುಜನಾದರೆಯು ಅ -
ವಿದ್ಯದಿ ಮುಳುಗಿಸುವುದು 1
ನೋಡಿದುದು ಬಯಸುವುದು | ಬಲು
ಮೋಡಿಯಿಂ ತಿರುಗಿಸುವುದು
ಮಾಡಿಸಿ ಮಾಡಿಸಿ ದಣಿಸುವುದು 2
ಹಣವಿದ್ದರು ಕಳೆವುದು | ದುರ್
ಮನದಿ ಸಾಲ ಮಾಡಿಸುವುದು
ಗುಣಿಯಲಿ ದುರ್ಗುಣವೇ ಕಾಣಿಸಿ
ಹೆಣಕೆ ಸಮವೆಂದೆನಿಸುವುದು 3
ಬೋಧೆಯ ಕೇಳಲೀಯದು | ಮನೋ
ವ್ಯಾಧಿಯಲ್ಲಿ ಕೃಶಿಸುವುದು
ಹಾದಿ ಹೋಕರ ಕಂಡವರಂತೆ
ಸಾಧನವ ಮಾಡಿಸುವುದು 4
ಅನ್ನಬಾರದನ್ನಿಸುವುದು
ತಿನ್ನಬಾರದ್ದು ತಿನ್ನಿಸುವುದು
ನನ್ನದೂ ನಾನೆಂಬ ಗರ್ವದಿ
ಇನ್ನೂ ಮುನ್ನೆ ಕೆಡಿಸುವುದು 5
ಆಗೋ ಕಾರ್ಯ ಮಾಡಲೀಯದು
ಹೋಗದೂರಿಗೇ ಹೊರಡಿಸುವುದು
ಭೋಗಗಳೊಳಪೇಕ್ಷೆ ಪುಟ್ಟಿಸಿ
ರೋಗದಿ ಬಳಲಿಸುವುದು 6
ಕೋಪಾದಿಗಳು ಹೆಚ್ಚುವುದು
ಪಾಪಬುದ್ದಿ ಪುಟ್ಟುವುದು
ಶರಣರಿಗಿದು ಸಲ್ಲದು 7