ಒಟ್ಟು 8 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(40ನೇ ವರ್ಷದ ವರ್ಧಂತಿ) ಕ್ಷಿಪ್ರ ಪ್ರಸಾದಕರ ದೊರೆಯೆ ಅಜಭವಾ- ದ್ಯ ಪ್ರಮೇಯಾ ಸಂತಸುಗುಣಾಬ್ಧಿ ಹರಿಯೆ ಪ. ಇಳೆಯೊಳಗೆ ನಾ ಬಂದು ಕಳೆದೆ ನಾಲ್ವತ್ವರುಷ ಉಳಿದ ಪರಿಮಿತಿಯರಿಯೆ ಗಳಿತವಾಯಿತು ದೇಹ ಬಳಲಿದೆನು ಬಯಲಾಸೆ ಬಲೆಯೊಳಿಂದಿನವರೆಗು ನಳಿನನಾಭನೆ ನಿನ್ನ ನಂಬಿದೆನು ಮನವರಿತು ಮುಳುಗಲಾರೆನು ಮೋಹ ಕಡಲ ಮಾಧವನೆ ತಿಳಿಯದೆ ನಿನಗೆ ಪೊನ್ನೊಡಲ ಮುಂದಿಂತು ದುರಿತ ಸಿಡಿಲ 1 ದೇವಾಧಿದೇವ ತವ ಸೇವಾನುಕರನ ಹೊ- ನ್ನಾವರದೊಳಿರಿಸಲಿನ್ಯಾವನರಸಲಿ ಕೃಷ್ಣ ಭಾವ ಶುದ್ಧಿಯನರಿತು ಭಜನೆ ಮಾಡುವದೆಂತು ಸಾವಕಾಶವಿದ್ಯಾಕೆ ಸಾಹಿತ್ಯಗಳು ಜೋಕೆ ನಿತ್ಯ ಕೈಗೊಂಬ ಕೀರ್ತಿ ಸಂ- ಭಾವನಾ ಸುಖವ ನಾನುಂಬಾ ತರವ ಸಂ- ಭಾವಿಸು ದಯಾಂಬೋಧಿ ದೀನಾವಲಂಬ 2 ರಕ್ಕಸಾಂತಕ ನೀನೆ ದಿಕ್ಕೆಂದು ನಿನ್ನಿದಿರು ಬಿಕ್ಕಿ ಬಿರಿದಳಲುವೆನು ಸೊಕ್ಕಿ ಕಾಡುವ ದೊಡ್ಡ ಜಕ್ಕಣಿಯ ಕಾಲಿಂದ ತಿಕ್ಕಿ ತೀರಿಸು ನಿನಗ- ಶಕ್ಯವಾವುದು ಸ್ವರ್ಣಪಕ್ಷ್ಯೇಂದ್ರಗಮನಕರ ಚಕ್ರಭೂಷಣ ವೆಂಕಟೇಶದಾಸ ಜನ ಕಕ್ಕರದಿ ತೋರು ಸಂತೋಷ ಭಕ್ತಿಫಲ ದಕ್ಕುವಂದದಿ ಮಾಡು ದುರಿತಾಬ್ಧಿಶೋಷ 3
--------------
ತುಪಾಕಿ ವೆಂಕಟರಮಣಾಚಾರ್ಯ
ಆವ ಪರಿಯಲಿ ನಿಮ್ಮನೊಲಿಸಿ ಮೆಚ್ಚಿಪ ವಿಧವುರವೆಯಷ್ಟು ತೋರದಲ್ಲ ಪ ದೇವ ದೇವೇಶ ನೀನೆಂದು ನಂಬಿರಲು ಕೃ-ಪಾವಲೋಕನದಿ ಸಲಹೊ ದೇವಅ ಫಣಿರಾಜನಾಸನದಿ ಕುಳಿತಿಹಗೆ ಅರಿವೆಯಾಸನವ ನಾನೆಂತ್ಹಾಸಲಿಘನವಾದ ಗಂಗೆಯನು ಪಡೆದವಗೆ ಕಲಶ ನೀರನದೆಂತು ಮೈಗೆರೆಯಲಿತನುವಿನ ಪರಿಮಳವು ಘಮಘಮಿಪನಿಗೆ ಸುಚಂದನವದೆಂತು ನಾ ಪೂಸಲಿಅನವರತ ನಾಭಿಯೊಳು ಶತಪತ್ರವಿಹಗೆ ಮಿಕ್ಕಿನ ಪೂವ ಮುಡಿಸಲೆಂತೈ ದೇವ 1 ಸುರುಚಿರೋಜ್ವಲ ಪೀತವಾಸನಿಗೆ ಉಡುಗೊರೆಯಅರಿವೆಯೇನನು ಪೊದಿಸಲಿವರ ಕೌಸ್ತುಭವು ಕೊರಳೊಳಗೆ ಇಪ್ಪವಗೆ ಆ-ಭರಣವಾವುದ ತೊಡಿಸಲಿತರಣಿ ಶತಕೋಟಿತೇಜನ ಮುಂದೆ ಹ್ಯಾಗೆ ನಾ-ಪೆರತೊಂದು ದೀಪವಿಡಲಿನೆರಹಿದ ಫಣಿಪತಿಯ ಸ್ತೋತ್ರದೂರನ ನಾನುಸ್ಮರಿಪೆನೆಂತಯ್ಯ ದೇವ ದೇವ 2 ವನಜಜಾಂಡ ಕೋಟಿಯುದರಂಗೆ ಆವುದನುಉಣಿಸಿ ತೃಪ್ತಿಯ ಮಾಡಲಿಅನಿಮಿಷರಿಗಮೃತವನ್ನೆರೆದವನ ತೃಷೆಯ ನೀ-ರಿನೊಳೆಂತು ಸಂತವಿಡಲಿವಿನತೆಯಾತ್ಮಜ ಪಕ್ಷದನಿಲನಿರೆ ಬೇರೆ ಬೀ-ಸಣಿಗೆಯನ್ನೇಂ ಬೀಸಲಿಅಣುರೇಣು ಪರಿಪೂರ್ಣ ಮೂರುತಿಗೆ ನಾ ಪ್ರದ-ಕ್ಷಿಣೆಯೆಂತು ಸುತ್ತಿಬರಲಿ ದೇವ 3 ಮಿಗೆ ಫಣಿಯ ಫಣದಾತಪತ್ರವಿರುವಂಗೆ ನೆರ-ಳಿಗೆ ಕೊಡೆಯನೇಂ ಪಿಡಿಯಲಿಪಗಲಿರುಳು ಸಾಮಗಾನ ಪ್ರಿಯನ ಮುಂದೆ ಗೀ-ತಗಳ ನಾನೇಂ ಪಾಡಲಿಜಗವರಿಯೆ ಲಕ್ಷ್ಮೀದೇವಿಪತಿಗೆ ಎಷ್ಟು ಹೊ-ನ್ನುಗಳ ದಕ್ಷಿಣೆಯ ಕೊಡಲಿನಿಗಮತತಿ ಕಾಣದಿಹ ಮಹಿಮನಿಗೆ ನಮಿಸುವಬಗೆಯ ನಾನರಿವೆನೆಂತೈ ದೇವ 4 ಒಲಿಸುವುದನರಿಯೆ ಮೆಚ್ಚಿಸುವ ಬಗೆಯರಿಯೆ ಹೊ-ಗಳುವ ಹೊಲಬ ನಾನರಿಯೆನುತಿಳಿದುದಿಲ್ಲವು ಷೋಡಶೋಪಚಾರದ ಪೂಜೆ-ಗಳಲೊಂದು ಪರಿಯಾದರೂನೆಲೆಯ ಕಾಣೆನು ನಿಗಮಶಾಸ್ತ್ರ ನವವಿಧ ಭಕ್ತಿ-ಯೊಳಗೊಂದು ಬಗೆಯಾದರೂಅಳಿಲಸೇವೆಯನೊಪ್ಪಿಸಿಕೊಂಡು ಶರಣನ ಸಲಹೊನೆಲೆಯಾದಿ ಕೇಶವನೆ ಸ್ವಾಮಿ - ಪ್ರೇಮಿ5
--------------
ಕನಕದಾಸ
ಎನ್ನನುದ್ಧರಿಸಲಾಗದೆ ಚೆನ್ನರಾಯ ಪ. ಎನ್ನನುದ್ಧರಿಸಲಾಗದೆ ಚೆನ್ನರಾಯ ಬಿನ್ನೈಸುವೆಇನ್ನು ಬೇರೆ ಗತಿಯ ಕಾಣೆ ನಿನ್ನ ಚರಣಕಮಲದಾಣೆ ಅ.ಪ. ನಿಗಮ ಉಸುರುತಿರಲು ನಿನ್ನಚರಣವನ್ನು ಶಿರದೊಳಾಂತೆ ಎನ್ನ ಮೇಲಣಕರುಣವಿಲ್ಲದದೇನುಕಾರಣ ಸಲಹಬೇಕುಸುರರ ಮಸ್ತಕದ ಸುಭೂಷಣ 1 ಹಿಂದೆ ನಾನನಾಥನಾಗಿ ಒಂದೆರಡ[ಲ್ಲಾ]ನೇಕ ಜನ್ಮದಿಬಂದು ನರಕಯಾತನೆಯಲ್ಲಿ ನೊಂದು ಬೆಂದು ಬಾಯಬಿಡುತಬಂದೆ ನಿನ್ನ ಪೆಸರುಗೊಂಡೆನೊ ಸನಾಥನಾಗಿಮುಂದೆ ನಾಮಸುಧೆಯನುಂಡೆನೊ ನೀ ಕೃಪಾಳುಎಂದು ನುಡಿವರನ್ನು ಕಂಡೆನೊ 2 ಹಲವು ಮಾತನಾಡಲೇನು ಒಲಿವುದಿನ್ನು ಹರಿಯೆ ನಿನ್ನಸಲಿಗೆಯೊಳೀ ಬಿನ್ನಪವನು ಸಲಿಸುತಿಹೆನು ಮುಂದಕಿನ್ನುಜಲುಮ ಬಾರದಂತೆ ವರವನು ಇತ್ತು ಎನ್ನಸಲಹೊ ದೊರೆಯೆ ನಿನ್ನ ಕರೆಯೆನೊ ಮುಂದೆ ಮುಕುತಿ-ಲಲನೆಯೊಡನೆ ಸುಖದಲಿರುವೆನು 3 ದೇಶವರಿಯೆ ನಾನು ನಿನ್ನ ದಾಸನೆಂದು ಡಂಗುರವನು ಹೊ-ಯಿಸಿ ತಿರುಗುತಿರÀಲು ಮೋಹಪಾಶವೆನ್ನ ಸುತ್ತಿಕೊಂಡುಘಾಸಿ ಮಾಡುತಿರಲು ಬಿಡಿಸದೆ ಇರುವ ಪಂಥವಾಸಿಯೇನು ಇನ್ನು ಅಲೆಸದೆ ಸಲಹೊ ಸ-ರ್ವೇಶ ನಂಬಿದವನ ಕೆಡಿಸದೆ 4 ಎನ್ನ ದುರ್ಗುಣವನ್ನು ಮರೆದು ನಿನ್ನ ಸದ್ಗುಣದಿ ಪೊರೆದುಮನ್ನಿಸಿದರೆ ಲೋಕದೊಳಗೆ ಧನ್ಯನಹೆನು ಜನಮವೆತ್ತಿಉನ್ನತಾಹುದು ನಿನ್ನ ಕೀರುತಿ ನಾಶವಾಹುದುಎನ್ನ ಭವದ ಬಹಳ ಧಾವತಿ ಸಲಹೊಚೆನ್ನ ಹಯವದನಮೂರುತಿ 5
--------------
ವಾದಿರಾಜ
ಶ್ರೀ ರಾಘವೇಂದ್ರರು ಯೋಗಿ ಕುಲವರ ಮಕುಟ ಗುರು ಶ್ರೀರಾಘವೇಂದ್ರನ ಭಜಿಸಿರೋ ಪ ಮೋದತೀರ್ಥ ಪಯೋಧಿ ಚಂದಿರಸಾಧುಜನ ಸತ್ಕುಮುದಕೇಐದು ಆನನವಾಗಿಹನು ದು ರ್ವಾದಿ ಗಜಸಮುದಾಯರೇ 1 ದೂಷಿಸುವ ಜನರುಗಳ ಗರ್ವ ಅಶೇಷ ಪರಿಹಾರಗೈಸುವಾ 2 ದಿನಪನಂದದಿ ಕಾಂತಿಬೃಂದಾ ಬನದೊಳಿದ್ದು ಪ್ರಕಾಶವಾಅಣುಗರಿಗೆ ಸಂತೃಪ್ತಿ ಸುಖವನುಅನವರತ ಪೂರೈಸುವಾ 3 ವ್ಯಾಕ್ತರಾಗಿಹ ಅಖಿಳರಿಗೆ ಫಲಪ್ರಾಪ್ತಿಗೋಸುಗ ಚರಿಸುವಾ 4 ಆಪ್ತರಿಲ್ಲದೆ ಈತನೇಯೆನಗಾಪ್ತನನುದಿನವಾಗುವಾ 5 ಕೋಲ ತನಯೆಯ ತೀರದಲಿ ಹೊ-ನ್ನಾಳಿಯಲಿ ವಿಹರಿಸುವಾಶೀಲ ಗೋಪತಿವಿಠಲನ ಕೃಪೆಗಾಲಯನು ಯೆಂದೆನಿಸುವಾ6
--------------
ಗೋಪತಿವಿಠಲರು
ಶ್ರೀ ಲಕ್ಷ್ಮೀವಲ್ಲಭ ನಂಘ್ರಿಗೆ ಪ ಮತ್ಸ್ಯನಿಗೊಂದು ಸಲ್ಲಾಮು ನೀರೊಳಗಾಡುತ ಗಿರಿಯನೆತ್ತಿದ ಆದಿಕೂರ್ಮ- ರೂಪನಿಗೊಂದು ಸಲ್ಲಾಮು ವರಾಹಗೊಂದು ಸಲ್ಲಾಮು ಸೀಳ್ದನಾರಸಿಂಹನಿಗೊಂದು ಸಲ್ಲಾಮು 1 ಮಾಡಿದವನಿಗೊಂದು ಸಲ್ಲಾಮು ಮಾಡಿದಗೊಂದು ಸಲ್ಲಾಮು ವಾರಿಧಿಯನು ಕಟ್ಟಿ ಲಂಕಾಪುರೀಶನ ತರಹೊ- ಯ್ದವಗೊಂದು ಸಲ್ಲಾಮು ನಾಳಿದಗೊಂದು ಸಲ್ಲಾಮು 2 ಬೌದ್ಧನಿಗೊಂದು ಸಲ್ಲಾಮು ಕಲ್ಕಿರೂಪನಿಗೊಂದು ಸಲ್ಲಾಮು ಭಕುತಿಯಿಂ ದೊರೆವೆ ಸಲ್ಲಾಮು 3
--------------
ಕವಿ ಪರಮದೇವದಾಸರು
ರಂಗ ರಂಗ ಎಂಬ ನಾಮವ ನೆನೆವರ |ಸಂಗದೊಳಿರಿಸು ಎನ್ನ ಪಅಂಗದೊಳ್ಲೆವರು ದೆಸೆದಸೆಗೆಳೆಯುವ |ಭಂಗವ ಬಿಡಿಸೊ ಹರಿಯೆ-ಸ್ವಾಮಿ ಅ.ಪಹರೆಕೃಷ್ಣ ಎಂದೆಂಬೆಜಿಹ್ವೆತಾನಿರುತಿರೆ |ಬರಿಯೆ ಮಾತಾಡುವೆ ನಾ ||ಗುರು-ಹಿರಿಯರ ವಂದನೆಗೆ ಕರ-ಶಿರವಿರೆ |ಗುರುವಹಂಕಾರತನ ||ಪರಿಪರಿ ಪುಷ್ಪದಲಿ ಪೂಜಿಸದೆ ಅಚ್ಯುತನ |ಮರೆತಿಹೆ ನಾನನುದಿನ |ಅರಿವ ನೋಡಿದರೆ ಎನ್ನಲಿ ಕಾಣೆನೈ ದೇವ |ಮೊರೆಹೊಕ್ಕೆ ಸಲಹೊ ಎನ್ನ-ಸ್ವಾಮಿ 1ವೇದ ಶಾಸ್ತ್ರ ಪುರಾಣ ನಾಮವ ನೆನೆವರ |ಚೋದ್ಯವ ನಾನರಿಯೆನು ||ಹಾದಿಬೀದಿ ತಿರುಗುವ ಜಾರಸ್ತ್ರೀಯಳ ಕಂಡು-ವಿ-|ನೋದಗಳ ಮಾಡುತಿಹೆನು ||ಮಾಧವಗೋವಿಂದ ಎನ್ನದೆ ಕಾಲನ |ಬಾಧೆಗಳಿಗೊಳಗಾದೆನೊ ||ಈ ಧರೆಯೊಳಗೆನ್ನ ರಕ್ಷಿಸುವವರ ಕಾಣೆ |ಶ್ರೀಧರ ನೀನೆ ಸಲಹೊ-ಸ್ವಾಮಿ 2ಮಡದಿ-ಮಕ್ಕಳಿಗೆಲ್ಲ ಒಡವೆ ಬೇಕೆಂಬುವ |ಕಡುಲೋಭತನವ ಬಿಡಿಸೊ ||ಅಡಿಗೆ ಅಡಿಗೆ ನಾರಾಯಣನೆಂಬ ನಾಮವನು |ನುಡಿವ ನಾಲಗೆಗಿರಿಸೊ ||ಪೊಡವಿಯೊಳುಪುರಂದರವಿಠಲರಾಯನೆ ನಿನ್ನ |ಅಡಿಯದಾಸನೆನಿಸೊ-ಸ್ವಾಮಿ 3
--------------
ಪುರಂದರದಾಸರು
ಲೋಕನೀತಿ379ಇಂದೀಗ ಹರಿದಿನವು ಏಕಾದಶಿಯೆಂದುಶೋಭಿಪ ದಿನವುಪಚಂದಾದಿ ವಿಷ್ಣುಸಾಯುಜ್ಯ ಹೊಂದುವುದಕ್ಕೆಅಂದವಾಗಿಹ ದಿನ ಸಂದೇಹವಿಲ್ಲವುಅ.ಪಶರಧಿಮಥಿಸೆ ಸುಧೆಯೂ ಬರಲು ಕಂಡುದುರುಳರೊಯ್ಯಲೂ ಹರಿಯೂಸರ್ವರಿಗುಪವಾಸವೆಂದು ತಾನ್ ಸೆಳೆದನುವರವಿತ್ತ ಮಾಸಕ್ಕೆ ಎರಡೇಕಾದಶಿಯೆಂದೂ1ದಶಮಿ ಒಂದಶನಾಗೈದೂ ಏಕಾದಶಿ ದಿವಸುಪವಾಸವಿರ್ದುಕುಸುಮನಾಭನ ಪೂಜೆಗೈದು ತೀರ್ಥವಗೊಂಡುನಿಶೆಯೊಳ್ ಜಾಗರವಿದ್ದು ಹರಿಕಥೆ ಕೇಳ್ವುದೂ2ವೀಳ್ಯ ಭೋಜನ ಪಾನವೂ ಈ ದಿನರತಿಕೇಳಿನಿದ್ರೆಯು ವಜ್ರ್ಯವೂಖೂಳನಾದರೆ ಯಮನಾಳೊಳ್ ಪಿಡಿದೊಯ್ದುಗೋಳುಗುಡಿಸುವ ಹೇಳಲಸಾಧ್ಯವು3ಅಶನಕ್ಕೆ ಬಿಸಿ ಮಳಲು ತಿನಿಸೀ ವೀಳ್ಯವ್ಯಸನ ಪಾನಕೆ ಉಕ್ಕಂ ತರಸಿ ಬಾಯ್ಗೆರಸಿಮುಳ್ಳು ಹಾಸಿಗೆ ಮೇಲೆ ಮಲಗೆಂದು ಹೊ-ರಳಿಸಿ ಉರಿಕಂಭ ಧರಿಸೆಂಬರ್ಸತಿಪುರುಷರಿಗೆ4ಧ್ರ್ರುವ ಹರಿಶ್ಚಂದ್ರ ಪ್ರಹ್ಲಾದ ತನ್ನಭುವನಕಟ್ಟಳೆಯೊಳ್ ರುಕ್ಮಾಂಗದಭವಹರವ್ರತಗೈದು ಹರಿಪಾದ ಸೇರ್ವರುಭುವನದಿ ಸರ್ವರಿಗ್ಯೋಗ್ಯವೀ ವ್ರತವೂ5ದ್ವಾದಶಿ ವ್ರತವೆಂಬುದು ಶ್ರೇಷ್ಠವು ಬೇಗಸಾಧಿಸಿ ಪಾರಣೆಗೈವುದೂಮೇದಿನಿಯೊಳಂಬರೀಷ ನೀ ವ್ರತಗೈದೂಆದಿಮೂರುತಿ ಗೋವಿಂದನ ಪಾದಸೇರ್ದನೂ6<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>
--------------
ಗೋವಿಂದದಾಸ