ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾಯದ ಮಾತೆಲ್ಲ | ಸುಳ್ಳದೆ | ಖರೆಯಾಗಿ ನಿಂತದೆ ಪ ಗಂಧರ್ವಪುರದಿಂದ | ನೋಡಮ್ಮಾ | ಬಂಜೆಯ ಮಗತಾ ಬಂದು | ಭೀಷ್ಮನ ಮಗಳಿಗೆ | ಮದುವ್ಯಾದ 1 ಸೊಂಟನ ಕೈಯಿಂದ | ನೋಡಮ್ಮಾ | ಗಗನ ಪುಷ್ಪವ ತರಿಸಿ |ಕೊರಳೊಳು | ಮಾಲೆಯ ಹಾಕಿದರಂತೆ 2 ಪರ್ವತ ಕೊನೆ ಮೇಲೆ | ನೋಡಮ್ಮಾ | ಮೃಗಜಲ ನದಿಯಂತೆ |ಅದರೊಳು | ಕಲ್ಲಿನ ಹರಗೋಲಂತೆ 3 ಮೊಲವೆದ್ದು ಇರಿಯಲ್ಕೆ | ನೋಡಮ್ಮ | ಹರಗೋಲನ ಹರಿದು | ಒಳಗಿದ್ದ ಬಂಜಿಯ ಮಗ ಹರಿದ್ಹೋದಾ 4 ಮೀನುಗಳಿಷ್ಟೂ ಕಂಡೂ | ನೋಡಮ್ಮ | ಶವ ತೆಗೆದು ಹೊರಗ್ಹಾಕಿ | ವನಕೊಯ್ದು | ದಹನವ ಮಾಡಿದವಂತೆ 5 ಇಷ್ಟು ಕುರುಡಾ ಕಂಡಾ | ನೋಡಮ್ಮಾ | ಹೆಳವಾ ಹೇಳಲಿ ಬಂದಾ | ಕಿವುಡನಿಗೆ | ಮೂಕ ಹೇಳಿದನಂತೆ 6 ಪರಿ ಸಂಸಾರ ನೋಡಮ್ಮಾ | ಮಾಯದ ವಿಸ್ತಾರ | ಶಿವರಾಮಾ ತಾ | ಕೇಳಿ ಬೆರಗಾದಾ 7
--------------
ಶಿವರಾಮರು
ಕಾಲ ವ್ಯರ್ಥ ಹರಿಯನೇಕ ಗುಣಗಳ ಪೊಗಳಿ ಪುರುಷಾರ್ಥ ಪ ಸತಿಸುತರ ನೆಚ್ಚಿ ಕೆಡಬ್ಯಾಡಾ ನಿನ್ನ ಸಂ- ಗತಿಲೇ ಬಾಹರು ಇದನು ತಿಳಿಯೋ ಕ್ಷಿತಿಪತಿಯ ನೆನೆಯದಿರಬ್ಯಾಡಾ ಲಕ್ಷ್ಮೀ ಪತಿಯೊಬ್ಬನೇ ಗತಿ ಎಂದು ತಿಳಿ ಗಾಢಾ 1 ಇಂದೆ ಇದ್ದವ ನಾಳೆಗಿಲ್ಲಾ ಅದ ರಿಂದ ಜಗದೀಶನನು ಹಿಂದೆ ಕಳೆದ ಆಯು ಬರೋದಿಲ್ಲಾ ಇನ್ನು ಮುಂದೆ ನರಜನ್ಮ ಬರುವುದು ಭರವಸಲ್ಲಾ 2 ಸತ್ತ ನಂತರ ಬಳಗ ನಿನ್ನ ತೀವ್ರ ಹೊತ್ತು ಹೊರಗ್ಹಾಕಿರೆನ್ನುವರೋ ತಿಳಿಯನ್ನಾ ಮಿಥ್ಯ ಸುಖಕೊಳಗಾಗದಿನ್ನಾ ಏಕ ಚಿತ್ತದಿಂ ಭಜಿಸೋ ಹನುಮೇಶ ವಿಠಲನಾ 3
--------------
ಹನುಮೇಶವಿಠಲ
ನಲ್ಲೆಯರು ನಮೋ ಎಂಬೆವು ಸುರರಎಲ್ಲರ ಬಲಗೊಂಬೆವು ಪ. ಚಲ್ವೆ ಕಂಗಳೆಯರಿಗೆ ಹೊಲ್ಲವು ಎನುತಿರೆಹೊಲ್ಲ ತನವೆಲ್ಲ ಹೊರಗ್ಹಾಕಿ ಬಾಹೊಅ.ಪ. ಅಗಣಿತ ಮಹಿಮ ಹೌದೆಂದುಅಗಣಿತ ಮಹಿಮಎನುತಿರೆಮಗನ ಮುಂದಾಗಿ ಬಲಗೊಂಬೆ1 ಸಾಗರಶಯನಗೆ ಆಗುವ ಹಾಸಿಗೆ ಬ್ಯಾಗನೆ ವರವ ಕೊಡುವೋನುಬ್ಯಾಗನೆ ವರವ ಕೊಡುವ ನಾಗೇಂದ್ರನಮೋ ಎಂಬÉ ನಮ್ಮ ಗೆಲಿಸೆಂದು 2 ನಂದಿವಾಹನ ಶಿವನ ಮುಂದಾಗಿ ಬಲಗೊಂಬೆ ಇಂದಿಗೆ ಪಂಥಗೆಲಿಸೆಂದುಇಂದಿಗೆ ಪಂಥಗೆಲಿಸೆಂದು ಬ್ರಹ್ಮನ ಕಂದನ ಮೊದಲೆ ಬಲಗೊಂಬೆ 3 ಸೌಪರ್ಣವಾರುಣಿ ಅಪರ್ಣ ದೇವಿಯರು ಸೌಕರ್ಯದಿಂದ ನಮ್ಮ ಪಂಥಸೌಕರ್ಯದಿಂದ ನಮ್ಮ ಪಂಥಗೆಲಿಸೆಂದುಕರವ ಮುಗಿವೆವು ಕ್ಷಣಕ್ಕೊಮ್ಮೆ 4 ಇಂದು ರಾಮೇಶನನುಗಾಲ ನೆನೆಯುತ ಮುಂದಕ್ಕೆ ಹೆಜ್ಜೆನಿಡುವೋಣ5
--------------
ಗಲಗಲಿಅವ್ವನವರು