ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದು ಹೊನ್ನು ಹೂವುಗಳ ತಾರತಮ್ಯ ಪ ಇದು ಬಾಹ್ಯ ಅದು ಅಂತರಂಗಿಗೆ ರಮ್ಯ ಅ.ಪ ಹೊನ್ನಿನಿಂದಾಗುವುದು ಹೂವಿನಿಂದಾಗುವುದು ಹೊನ್ನು ಹೂವೆರಡಯ್ಯ ಬಣ್ಣ ಒಂದೇ ಹೊನ್ನು ಹೂವೆರಡಕ್ಕು ಬಣ್ಣ ಒಂದಾಗವೋ ನಿನ್ನ ಕೃಪೆಯೆಂಬ ರೇಕುಗಳಾಗಬೇಕೋ 1 ಹೊನ್ನು ಭೂಲೋಕಕ್ಕೆ ಹೂವು ಪರಲೋಕಕ್ಕೆ ಹೊನ್ನಿನಾ ಹೂವುಗಳು ಇಹಪರಕೆ ದಾನ ಹೊನ್ನುಳ್ಳವರಿಗೆಲ್ಲ ಹೂ ಹೊನ್ನುವಿಲ್ಲ ತಾನಿಲ್ಲ ಹೊನ್ನ ಹೊರುವುದಸಾಧ್ಯ 2 ಹೊನ್ನ ಕಾವುದಸಾಧ್ಯ | ಹೊನ್ನುಳ್ಳ ನರರಿಗೆ [ಮ] ಗಳಿಲ್ಲ ಹೊನ್ನುಳ್ಳ ಮನುಜ ಪಾತಕಗಳನು ಕಲಿಯುವ ಹೊನ್ನಿಲ್ಲದಾತರಿಗೆ ಹೂವೊಂದು ದೊರಕಿದೊಡೆ ಅನ್ನ ನಿದ್ರಾ ಪಾನ ಸೌಖ್ಯಂಗಳುಂಟಯ್ಯ 3 [ಹೊನ್ನುಳ್ಳವಸದಾ ಹೊನ್ನಿ ನೊಡನೆಕಲ್ಳ್ವೆ] ಹೊನ್ನಿಲ್ಲದಾತ ಶ್ರೀರಾಮಕೃಷ್ಣರ ಕಲೆವ ಹೊನ್ನಿಂದ ಬೆಣ್ಣೆತಾಂ ಸುಣ್ಣವೆನಿಪುದು ಜಗದಿ ಹೊನ್ನಿಲ್ಲದಾತಂಗೆ ಸುಣ್ಣವೇ ಬೆಣ್ಣೆ 4 ಹೊನ್ನಕೇಳನು ನಮ್ಮ ಮಾಂಗಿರಿಪುರವಾಸ ಹೊನ್ನಿಂಗೆ ಬದಲು ಭಕ್ತಿಯಹೂವ ಕೇಳ್ವುದು ಹೊನ್ನ ದಾನವಮಾಡಿ ಹೂವ ಹರಿಗರ್ಪಿಸಿರಿ ಇನ್ನಾವ ವರಗಳನ್ನು ಬೇಡ ಬೇಡಿ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜಲಜನಾಭನ ಪೂಜೆ ಅತಿ ಸುಲಭವು ಪ ಚಲಿಸಿದ ಮನವನ್ನು ಪೊಂದಿರುವ ಸುಜನರಿಗೆ ಅ.ಪ ತಾಳ ಕೇಳುವನಲ್ಲ ಮೇಳ ಕೇಳುವನಲ್ಲ ಬಾಳೆ ಮಾವುಗಳ ವೈಭವವ ಕೇಳುವನಲ್ಲ ಸೂಳೆಯಂದದಿ ಬಹಳ ನಟನೆಗಳು ಬೇಕಿಲ್ಲ ಬಾಲಕೃಷ್ಣನಲಿ ದೃಢಭಕುತಿಯುಳ್ಳವಗೆ 1 ನವರತ್ನ ಮಂಟಪದ ಝವೆಯ ಬಯಸುವನಲ್ಲ ಹವಳಗಳ ಸರದ ವೈಭವವು ಬೇಕಿಲ್ಲ ಧವಳ ಮುಕ್ತಾಹಾರಗಳ ಬಯಸುವನಲ್ಲ ಭುವನ ಭೂಷಣನೊಳತಿ ಭಕುತಿಯುಳ್ಳವಗೆ 2 ಹೊನ್ನಿನಾಭರಣಗಳನ್ನು ಬಯಸನು ವಿವಿಧ ಅನ್ನಗಳ ರುಚಿಗೆ ಲೋಭವ ಪೊಂದನು ಅನ್ನಾದಿಮಯ ಹರಿಯು ತನ್ನಲ್ಲಿ ತುಳಸೀದಳ ವನ್ನು ಭಕುತಿಯೊಳಿಡೆ ಪ್ರಸನ್ನನಾಗುವನು 3
--------------
ವಿದ್ಯಾಪ್ರಸನ್ನತೀರ್ಥರು
ನಿನಗಿದು ಹಿತವೇ | ಇದು ಹಿತವೇ ಪ ಕಂಸಾರಿ ಚರಣವ ನಂಬದೇ ಕ್ಷಣಿಕದ | ಸಂಸಾರದಲಿ ಬೆರಿಯಬೇಡಾ 1 ಕನ್ನಡಿಯೊಳಗಿನಾ ಹೊನ್ನಿನಾ ಗಂಟ ನೋಡಿ | ಕಣ್ಣಗೆಟ್ಟಿರುವರೇ ಮೂಢಾ 2 ಬಿಸಿಲಿನ ನೀರಿನಿಂದೆ ತೃಷೆಯಾರಿಸುವದುಂಟೆ | ಹಸಗೆಡದಿರು ವಿಷಯ ಕೂಡಾ | 3 ಕನಸಿನ ಸಂಪದವನೆನೆಸಿ ತಾ ಹಿಗ್ಗುವರೆ | ಮನವೇ ನೀ ಮಥನಿಸಿ ನೋಡು 4 ದಾವನು ಗುರು ಮಹಿಪತಿ ಪ್ರಭು ಭಜಿಸನು | ಅವಗಿಲ್ಲ ಸುಖಸುರವಾಟಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬೇಗ ನೀಗಿಸು ದುರ್ಭೋಗದ ಸೆರೆಯ ನಾಗಶಯನ ಬಾಗಿ ಬೇಡುವೆ ಪ ನೀತಿಗೆಡಿಸಿ ಮಂಗನೆನಿಸಿ ಮಾತುಮಾತಿಗೆ ಭಂಗಬಡಿಸಿ ಪಾತಕನೆನಿಸಿ ದಂಗು ಹಿಡಿಸಿ ಘಾತಮಾಳ್ಪ ಹೊನ್ನಿನಾಸೆ 1 ಕುನ್ನಿಯಂದದಿ ಕುಣಿಸಿ ಕುಣಿಸಿ ಬನ್ನ ಬಡಿಸಿ ಬನ್ನಂಗನೆನಿಸಿ ಉನ್ನತ ಸುಖಗೆಲಿಪ ಹೇಸಿ ಗನ್ನಗತಕ ಹೆಣ್ಣಿನಾಸಿ 2 ಮೋಸಪಾಶದೊಳಗೆ ಮುಳುಗಿಸಿ ದೋಷದೆಳಸಿ ಮುತಿಯಕೆಡಸಿ ನಾಶ ಯಮನ ಕೊಲೆಗೀಡೆನಿಸಿ ಘಾಸಿ ಮಾಳ್ಪ ಹೆಣ್ಣಿನಾಸಿ 3 ಇಷ್ಟೆ ಜಗದ ಸುಖವಿದನು ಎಷ್ಟುನಂಬಿ ಫಲವೇನು ಅಷ್ಟು ಮಾಯವೆನಿಸಿ ಎನ್ನನು ನಷ್ಟಗೊಳಿಪ ಕೆಟ್ಟಾಸಿಯನು 4 ಮೀರಿ ಮಹ ಘೋರಬಡಿಸಿ ಸಾರಸುಖದ ಮಾರ್ಗ ಕೆಡಸಿ ಧೀರ ಶ್ರೀರಾಮ ನಿನ್ನ ಮರೆಸಿ ಗಾರುಮಾಳ್ಪ ಪಾಪರಾಸಿ 5
--------------
ರಾಮದಾಸರು
ಡಂಬಕ ಭಕುತಿಗೆ ಮೆಚ್ಚಿಕೊಳ್ಳನೊ ಕೃಷ್ಣ - ಹಾರಿ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಡೊಂಬಲಾಗ ಹಾಕಿ ಹೊರಳಿದರಿಲ್ಲ ಪ.ವಟವಟನೆ ಕಪಿಯಂತೆ ಒದರಿಕೊಂಡರೆ ಇಲ್ಲ |ಬೆಟ್ಟದಿಂದಲಿ ಕೆಳಗೆ ಬಿದ್ದರಿಲ್ಲ ||ಬಿಚ್ಚಿಟ್ಟರೆ ಇಲ್ಲ ನಿರ್ಭಾಗ್ಯರ್ಗೆಂದೆಂದು |ಅಚ್ಯುತಾನಂತನ ದಯವಿಲ್ಲದೆ 1ಕೆಟ್ಟೆನೆಂದರೂ ಇಲ್ಲ ಕ್ಲೇಶಪಟ್ಟರೂ ಇಲ್ಲ |ಸುಟ್ಟ ಸಂಸಾರದೊಳು ಸುಖವು ಇಲ್ಲ ||ಕೋಟಲೆಗಂಜಿದರಿಲ್ಲ ಕೊಸರಿಕೊಂಡರು ಇಲ್ಲ |ವಿಠಲನ ದೂರಿದರಿಲ್ಲ ವಿಧಿಯ ಬೈದರಿಲ್ಲ 2ಕನ್ನಹೊಕ್ಕರು ಇಲ್ಲ ಕಡಿದಾಡಿದರು ಇಲ್ಲ |ಕುನ್ನಿಯಂತೆ ಮನೆಮನೆಯ ಕೂಗಿದರಿಲ್ಲ ||ಹೊನ್ನಿನಾಸೆಗೆ ಹೋಗಿ ಹೊಡೆದುಕೊಂಡರು ಇಲ್ಲ |ಪನ್ನಗಾದ್ರಿ ಪುರಂದರವಿಠಲನ ದಯವಿರದೆ 3
--------------
ಪುರಂದರದಾಸರು