ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರಗತನಾಗಿರಲು ಶ್ರೀಕೃಷ್ಣನು ಪ ಪುರಜನಗಳಿಗಿನ್ನು ಕೊರತೆಗಳುಂಟೆ ಅ.ಪ ಪರಮದಯದಿ ತನ್ನ ನೆರಳಿನೊಳೆಲ್ಲರ ಪೊರೆಯುತಿರುವ ನಮ್ಮ ಸಿರಿವಲ್ಲಭನು 1 ನಾಡಿನ ಭಕುತರ ಕೂಡಿಸಿ ಮುದದಲಿ ಬೇಡಿದ ವರಗಳ ನೀಡುವ ದೊರೆಯು 2 ಬಿಡಿಬಿಡಿ ನಿಮ್ಮಯ ಕಡು ಕ್ಲೇಶಗಳೆಂದು ಗಡಗಡ ದುಂದುಭಿ ಹೊಡೆಸುವ ಧೀರನು 3 ಪತಿತ ಪಾವನೆಂದು ಪ್ರಥೆಯನು ಪೊಂದಿಹ ಕ್ಷಿತಿಸುರರೊಡೆಯನು ಅತಿಸುಲಭದಿಲಿರೆ 4 ಎನ್ನನು ಸೇವಿಸಿ ಧನ್ಯರಾಗಿ ಎಂದು ಸನ್ನೆಯನೀವ ಪ್ರಸನ್ನ ಶ್ರೀಮಾಧವ 5
--------------
ವಿದ್ಯಾಪ್ರಸನ್ನತೀರ್ಥರು
ಚೋದ್ಯ ಚೋದ್ಯ ಹರಿ ನಿನ್ನ ಆಟ ಸುಲಭವಲ್ಲಾರಿಗೆ ತಿಳಿಯದೀ ಮಾಟ ಪ ಉಣಿಸುವವರೊಳು ನೀನೆ ಉಣುತಿರುವವರಲಿ ನೀನೆ ಉಣಿಸುಣಿಸಿ ಅಣಕಿಸುವ ಬಿನುಗರಲಿ ನೀನೆ ಮಣಿಯುವವರೊಳು ನೀನೆ ಮಣಿಸಿಕೊಂಬರಲಿ ನೀನೆ ಕ್ಷಣಕ್ಷಣಕೆ ಬದಲ್ವಾಗ ಬಣ್ಣಕಗರಲಿ ನೀನೆ 1 ಹೊಡೆಯುವವರಲಿ ನೀನೆ ಹೊಡೆಸುವವರಲ್ಲಿ ನೀನೆ ಹೊಡೆಸಿಕೊಳ್ವರಲಿ ನೀನೆ ಬಿಡಿಸುವವರಲಿ ನೀನೆ ದುಡಿಯುವವರಲಿ ನೀನೆ ದುಡಿಸಿ ಕೊಂಬರಲಿ ನೀನೆ ಬಡವರಲಿ ನೀನೆ ಬಲ್ಲಿದರೊಳ್ನೀನೆ 2 ಕೊಟ್ಟೊಡೆಯರಲಿ ನೀನೆ ಬಿಟ್ಟೋಡ್ವರಲಿ ನೀನೆ ಕೊಟ್ವೊವಚನತಪ್ಪುವ ಭ್ರಷ್ಟರಲಿ ನೀನೆ ಶಿಷ್ಟನಿಷ್ಟರಲಿ ನೀನೆ ಬಿಟ್ಟಾಡ್ವರಲಿ ನೀನೆ ಇಟ್ಟಿಟ್ಟು ಹಂಗಿಸುವ ದುಷ್ಟರಲಿ ನೀನೆ 3 ಪಾಪಿಷ್ಟರಲಿ ನೀನೆ ಕೋಪಿಷ್ಟರಲಿ ನೀನೆ ಶಾಪಿಸುವರಲಿ ನೀನೆ ಶಾಪಕೊಂಬರಲಿ ನೀನೆ ತಾಪತ್ರದಲಿ ನೀನೆ ಭೂಪತಿಗಳೊಳು ನೀನೆ ಅಪಾರ ಸೃಷ್ಟಿ ಸರ್ವವ್ಯಾಪಕನು ನೀನೆ 4 ಇನ್ನರಿದು ನೋಡಲು ಅನ್ಯವೊಂದಿಲ್ಲವು ನಿನ್ನಪ್ರಭೆಯೆ ಸಕಲ ಜಗವನ್ನು ಬೆಳಗುವುದು ನಿನ್ನ ರೂಪವೆ ಜಗ ಎನ್ನಯ್ಯ ಶ್ರೀರಾಮ ಭಿನ್ನಬೇದ ಬಿಡಿಸೆನ್ನ ಧನ್ಯನೆನಿಸಯ್ಯ 5
--------------
ರಾಮದಾಸರು
ಭಾಮೆ ಲಕುಮಿ ಕೇಳಮ್ಮಾ ಪ. ಕಾಮಜನಕ ಪೂರ್ಣ ಕಾಮನಾಗಿಹನಮ್ಮ ಅಭೀಷ್ಟ ಕೊಡುವನಮ್ಮ ಅ.ಪ. ವೈಕುಂಠ ತೊರೆದನಮ್ಮಾ | ನಿನಗಲ್ಲಿ ಬ ಹು ಕಷ್ಟವೆಂಬೊನಮ್ಮಾ ನೀ ಕೊಲ್ಲಾಪುರಕೆ ಬರಲು ಖೇದಪಡುತಲಿ ಆ ಕೋಲಗಿರಿಯಲಿ ತಾನೆ ನೆಲಸಿದನಮ್ಮಾ 1 ಬಲುದಿನವಾಯಿತಂತೇ | ನಿನ್ನನು ನೋಡಿ ಛಲವಿನ್ನು ಬೇಡವಂತೆ ಲಲನೆ ಪದ್ಮಾವತಿ ದೂರದಲ್ಲಿಹಳಂತೆ ವಲಿದು ನೀ ವಕ್ಷ ಸ್ಥಳದಿ ನೆಲಸ ಬೇಕಂತೆ 2 ನೋಡಬೇಕೆಂಬೊನಮ್ಮಾ | ನಿನ್ನೊಡನೊಂದು ಆಡಬೇಕೆಂಬೊನಮ್ಮಾ ಮಾಡಿಸಿದೇಯಂತೆ ಪದ್ಮಿಣಿ ಲಗ್ನವ ಮಾಡಿದ ಉಪಕಾರ ಮರಿಯನಂತಮ್ಮ 3 ತಿಳಿದು ಮಾಡುವರ್ಯಾರಮ್ಮಾ ಲಲನೆ ನಿನ್ಹೊರತಿಲ್ಲ ಕೆÀಲಕಾಲ ಸೇವಿಪೆ ತಿಳಿದು ತಿಳಿದು ಇಲ್ಲಿ ನೆಲೆÉಸಿದೆÀ ಯಾಕಮ್ಮ 4 ವಡೆಯಳೆ ಭಾಗ್ಯವಂತೆ | ನೀ ತೊರೆಯಲು ಬಡತನ ಬಂದಿತಂತೆ ಕೊಡುವ ಜನರ ಕಪ್ಪಕೊಳುತ ದರ್ಶನವನ್ನು ಕೊಡದೆ ಹೊಡೆಸುವಂಥ ಕಡುಲೋಭ ಕಲಿತನೆ 5 ಅಷ್ಟ ಐಶ್ವರ್ಯ ಪ್ರದೆ | ಹೃದಯದಲಿರೆ ಎಷ್ಟು ವೈಭವವಿಹುದೆ ಬಿಟ್ಟೆ ನೀನೀಗೆಂದು ಎಷ್ಟು ಆಭರಣಗ ಳಿಟ್ಟು ಮೆರೆವೊನಮ್ಮ ದೃಷ್ಟಿ ಸಾಲದು ನೋಡೆ 6 ಎಷ್ಟು ಲೀಲೆಯೆ ನಿಮ್ಮದೂ | ವೈಕುಂಠವ ಬಿಟ್ಟು ಇಬ್ಬರು ಇಹುದೂ ಗುಟ್ಟು ಬಲ್ಲಂಥ ಹರಿದಾಸರಿಗೊಲಿಯುವ ಶ್ರೇಷ್ಠ ಶ್ರೀ ಗೋಪಾಲಕೃಷ್ಣ ವಿಠ್ಠಲನರಸಿ 7
--------------
ಅಂಬಾಬಾಯಿ