ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಿಳಿದು ನೋಡಿ ತನುವಿನೊಳು ತಮ್ಮ ನಿಜಖೂನ ಸುಳುಹು ದೋರಿಕುಡುವ ನೋಡಿ ನಿಜಾನಂದ ಘನ ಧ್ರುವ ತಮ್ಮ ಶುದ್ಧಿ ತಮಗಿಲ್ಲವೊ ಹೆಮ್ಮೆ ಬಹಳ ಘಮ್ಮ ಆದರೆ ಎಲ್ಲ ನೋಡಿ ಹೊಕ್ಕು ಮೃಗಜಲ ನಮ್ಮ ನಿಮ್ಮದೆಂದು ಹೊಡೆದಾಡಿ ಬಿತ್ತು ಬೀಳ ಸಮ್ಯಗ್ ಜ್ಞಾನದಿಂದ ತಿಳಿದವನೆ ವಿರಳ 1 ತನ್ನ ತಾ ತಿಳಿದವಗೇನು ಭಿನ್ನಭೇದವಿಲ್ಲ ಉನ್ಮನವಾಗಿ ಪೂರ್ಣ ತಿಳಿದವನೆ ಬಲ್ಲ ಧನ್ಯವಾದ ಮಹಿಮರಿನ್ನು ಮನಿಮನಿಗೆ ಇಲ್ಲ ಕಣ್ಣಾರೆ ಕಾಣುತಿಹ್ಯ ಗುಪ್ತಗುಹ್ಯವೆಲ್ಲ 2 ತಿಳುಹದೋರಿಕೊಟ್ಟ ಗುರು ಎನ್ನೊಳÀಗೆ ಪೂರ್ಣ ಹೊಳೆಹುತಿಹ್ಯಾನಂದ ಘನಸದ್ಗುರು ಪೂರ್ಣ ಥಳಥಳಿಸುತಿಹದು ಸದ್ಗತಿ ಸಾಧನ ಕಳೆದ ಮಹಿಪತಿ ನೋಡಿ ಜನನ ಮರಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮನವೇನೆಂಬುದನರಿಯೋ ಮನುಜ ಮನ ವೇನೆಂಬುದನು ಧ್ರುವ ಮನವೇನೆಂಬುದನನುಭವಕೆ ತಂದು ಖೂನದಲಿಡದೆ ಜ್ಞಾನದಲಿ ನಾನಾ ಶಾಸ್ತ್ರವ ಓದಿ ನೀ ಅನುದಿನ ಏನು ಘಳಿಸಿದ್ಯೊ ಮರುಳ ಮನುಜ1 ಉತ್ಪತ್ತಿ ಸ್ಥಿತಿ ಲಯ ಕರ್ತನೆಂದೆನಿಸಿ ಪ್ರತ್ಯೇಕರವನು ತೋರುತಲಿ ಮತ್ತೆ ಬ್ಯಾರ್ಯಾದ ಪರಬ್ರಹ್ಮೆಂದು ತಾ ಚಿತ್ತ ಭ್ರಮಿಸುದು ದಾವುದೊ ಮನುಜ 2 ಏಕೋ ವಿಷ್ಣು ವೆಂದೆನಿಸಿ ಮುಖದಲಿ ಪೋಕ ದೈವಕೆ ಬಾಯದೆರೆಸುತಲಿ ನಾಕುವೇದವ ಬಲ್ಲವನೆಂದೆನಿಸಿ ವಿಕಳಿಸುತಿಹ್ಯದು ದಾವುದೊ ಮನುಜ 3 ಉತ್ತಮೊತ್ತಮರ ಕಂಡಾಕ್ಷಣ ಹರುಷದಿ ನಿತ್ಯಿರಬೇಕೀ ಸಹವಾಸವೆನಿಸಿ ಮತ್ತೊಂದರಘಳಿ ಗಾಲಸ್ಯವ ತೋರಿ ಒತ್ತಿ ಆಳುವದು ದಾವುದೊ ಮನುಜ 4 ಪಾಪವ ಮಾಡಬಾರದು ಎಂದೆನಿಸಿ ವ್ಯಾಪಿಸಿಗೊಡದೆ ಕಾಣದನಕ ಉಪಾಯದಲಿ ಅಪಸ್ವಾರ್ಥವು ಇದಿರಡೆ ಅಪಹರಿಸುವದು ದಾವುದೊ ಮನುಜ 5 ಪ್ರಾಚೀನವೆ ತಾಂ ನಿಜವೆಂದರುಹಿಸಿ ಆಚರಣೆಯ ಬ್ಯಾರೆ ತೋರುತಲಿ ನೀಚ ಊಚ ಹೊಡೆದಾಡಿಸುತ ನಾಚಿಸುತಿಹುದು ದಾವೊದೊ ಮನುಜ 6 ಸಗುಣ ನಿರ್ಗುಣ ಬ್ಯಾರೆರಡನೆ ತೋರಿ ಬಗೆ ಬಗೆ ಸಾಧನ ತೋರಿಸುತ ಬಗೆದೊಂದೆವೆ ಭಕುತಿಗೆ ನೆಲೆಗೊಳಿಸಿದ ಪ್ರಗತಿ ತೋರುವುದು ದಾವುದೊ ಮನುಜ 7 ಧ್ಯಾನಕೆ ಕೂಡಿಸಿ ಮೋನವ ಹಿಡಿಸಿ ಅನುದಿನ ಜಪವನು ಮಾಡಿಸುತ ಘನವಾಗಿಹÀ ಅನುಭವ ಸುಖದಾಟದ ಖೂನ ದೋರಿಸುದು ದಾವುದೊ ಮನುಜ 8 ಮರವಿಗೆ ತಾನೆ ಅರಿವೇ ಕೊಟ್ಟು ತಿರಿವು ಮರವಿನಂಕುರದ ಕುರ್ಹುವಿನ ಇರಹು ತೋರಿಸುದು ದಾವುದೊ ಮನುಜ 9 ಮನವಿನ ಮೂಲವು ತಿಳಿವದು ಭಾನುಕೋಟಿ ಪ್ರಕಾಶನ ಕರುಣದಲಿ ನಾನು ನಾನೆಂಬವರಿಗೆ ಇದರ ಖೂನ ಲೇಶ ತಿಳಿಯದೊ ಮನುಜ 10 ಹರಿಯೆ ಗುರುವೆಂದರುಹಿಸಿ ಆತ್ಮಲಿ ಶರಣಹೋಗುವ ಭಾವನೆದೋರಿ ತರಳಮಹಿಪತಿ ಗುರುದಯ ಪಡಕೊಂಡಿಂದು ಯೋಗ್ಯನಾಗುವದಿದೊಂದೆ ಮನುಜ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಲ್ಲಿ ನೋಡಲು ರಾಮ ಅಲ್ಲಿ ನೋಡಲು ರಾಮ |ಎಲ್ಲೆಲ್ಲಿ ನೋಡಲು ರಾಯಚಂದ್ರನು ಪಮೂಲೋಕದಲ್ಲಿ ತ್ರೈಮೂರ್ತಿರೂಪಗಳಲ್ಲಿಎಲ್ಲೆಲ್ಲಿ ನೋಡಲು ಅಲ್ಲಲ್ಲಿ ರಾಮರೂಪ ಅ.ಪರಾವಣನ ಮೂಲಬಲವ ಕಂಡು ಕಪಿಗಳುಆವಾಗಲೆ ಹೊರಟೋಡುತಿರೆಈವಾಗ ನರನಾಗಿ ಇರಬಾರದೆಂದೆನುತದೇವ ರಾಮಚಂದ್ರ ಬಹುರೂಪ ತಾನಾದ 1ಅವನಿಗೆ ಇವ ರಾಮ ಇವನಿಗೆ ಅವ ರಾಮಬುವಿಯೊಳಗೆ ಬೇರೆ ರೂಪವುಂಟೆಅವನಿಯೊಳಿರುತಿಪ್ಪದುರುಳ ಜನರೆಲ್ಲಅವರವರೆ ಹೊಡೆದಾಡಿ ಹತವಾಗಿ ಹೋದರು 2ಹನುಮಂತಾದಿ ಸಾಧುಜನರು ಅಪ್ಪಿಕೊಂಡುಕುಣಿದಾಡಿದರು ಅತಿ ಹರುಷದಲಿಕ್ಷಣದಲಿ ಪುರಂದರವಿಠಲರಾಯನುಕೊನೆಗೆ ರಾಮಚಂದ್ರನೊಬ್ಬನಾಗಿ ನಿಂತ 3
--------------
ಪುರಂದರದಾಸರು