ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಣನಯನೆ ಏಣಭೋಜ ಮಧ್ಯಳೆ ತೋರೆಏಣಾಂಕ ಬಿಂಬ ಮುಖಿಏಣವೈರಿಯ ವೈರಿಯ ಶಿರಕುಚಯುಗೆ ಕರೆತಾರೆಏಣಾಂಕಧರ ಸಖನ ಪ ಚಳಿಯ ಮಗಳ ತಾಯಳಿಯನ ತನಯನಇಳುಹದೆ ಪೊತ್ತಿಹನಬಳಿದುಣ್ಣಲೀಸದೆ ಸೆಳೆದುಂಡನಣ್ಣನಸಲಹಿದಾತನ ಸುತನಕಳದೊಳು ತಲೆ ಚೆಂಡಾಡಿದ ಧೀರನಬಳಿ ವಾಘೆಯನು ಪಿಡಿದನಇಳೆಯ ಮೊರೆಯನು ಕೇಳಿ ಖಳರುತ್ತಮಾಂಗವನಿಳುಹಿದಾತನ ತೋರೆಲೆ 1 ಇಪ್ಪತ್ತುನಾಲ್ಕು ನಾಮಗಳೊಳಗೇಳನುತಪ್ಪದೆಣಿಸಿ ಕಳೆದುಬಪ್ಪ ಎಂಟನೆಯ ನಾಮದ ಪೆಸರಿನೊಳ್‍ಇಪ್ಪ ಕಡೆಯ ಬೀಡಲಿಅಪ್ಪ ಜಯದರಸನ ಕೂಡೆ ಜನಿಸಿದಕಪ್ಪು ವರ್ಣದ ಮೈಯಳಅಪ್ಪನ ಮಿತ್ರನ ಮಗನೆಂಬ ಬೊಮ್ಮನಬೊಪ್ಪನ ತೋರೆನಗೆ2 ಬಿಡುಗಣ್ಣ ಬಾಲೆ ತನ್ನೊಡೆಯನ ನುಡಿಗೇಳಿದೃಢದಿಂದ ನಡೆದು ಬಂದುಜಡಿವ ಕೋಪಕೆ ಶಾಪ ಪಡೆದುಕೊಂಡಾಕ್ಷಣನುಡಿದ ದಿನವು ದಾಟಲುಪಡೆಯನೆಲ್ಲವ ನಡು ರಣದಲಿ ಸೋಲಿಸಿಜಡಿದು ಗೋವುಗಳನೆಲ್ಲಒಡನೆ ತನ್ನಯ ಪುರಕೆ ಹೊಡೆತಂದ ಧೀರನಒಡೆಯನ ತೋರೆನಗೆ 3
--------------
ಕನಕದಾಸ
ಬೇಡುವುದಿಲ್ಲನ್ಯ ನಾನೇನು ನಿನ್ನ ನೋಡಿ ಕರುಣದಿ ಬಾರೋ ಭಜಕನ ತ್ರಾಣ ಪ ಬೇಡುತಕ್ಕುದನೆ ನಾ ಬೇಡುವೆನೆಲೆ ಸ್ವಾಮಿ ನೀಡುತಕ್ಕುದನೆ ನೀ ನೀಡಿ ಕಾಪಾಡಯ್ಯ ಮೃಡಮಿತ್ರ ಜಡಜಾಕ್ಷ ಒಡೆಯ ವೈಕುಂಠ ಅ.ಪ ಎನ್ನಮನೆ ಬಾಗಿಲವ ಕಾಯೆನ್ನದಿಲ್ಲ ಎನ್ನುಳಿಸು ತಂದೆಯನು ತರಿದೆನ್ನದಿಲ್ಲ ಅಣ್ಣನ್ನ ಕೊಲ್ಲಿರಾಜ್ಯಕೊಡು ಎನ್ನದಿಲ್ಲ ಎನ್ನ ಮನೆಯಾಳಾಗಿ ದುಡಿಯೆನ್ನದಿಲ್ಲ ನಿನ್ನ ದಾಸರ ಸಂಗವನ್ನು ಕರುಣಿಸಿ ಎನ್ನನನ್ಯರಿಗೆ ಬಾಗಿಸೆ ಮನ್ನಿಸಿ ಸಲಹೆಂಬೆ ಭಿನ್ನವೇನಿದರೊಳು ಉನ್ನತಮಹಿಮ 1 ಲಲನೆಯಳ ಕೊಡಿಸಣ್ಣನ್ಹೊಡಿದೆನ್ನದಿಲ್ಲ ಬಲವಾಗೆನ್ನಯ್ಯ ಬಂಧುಗಳ ನಾಶಕೆನ್ನೊದಿಲ್ಲ ಬಲಿದೆನ್ನಿಂ ತವ ಭಕ್ತ ನೋಡಿಸೆನ್ನದಿಲ್ಲ ಸುಲಭದೆನ್ನಿಂದ್ಹೆಡಮುರಿ ಕಟ್ಟಿಸಿಕ್ಕೆನ್ನದಿಲ್ಲ ಎಲೆದೇವ ತವಪಾದನಳಿನ ನಿರ್ಮಲಧ್ಯಾನ ನಿಲಿಸು ಸ್ಥಿರವಾಗೆನ್ನ ನಾಲಗೆಯೊಳನುದಿನ ಇಳೆಭೋಗದಳಸದೆ ಸಲೆ ಸುಖದಿ ಸಲಹೆಂಬೆ 2 ಭಿನ್ನವಿಲ್ಲದೆ ಬಾ ನೀ ಕರೆದಲ್ಲಿಗೆನೆನು ಎನ್ನ ಹೊಡೆತದ ಪೆಟ್ಟು ಸೈರಿಸೆಂದೆನೆನು ಉನ್ನತ ಕುಲಗೆಡು ಎನ್ನೊಳುಂಡೆನೆನು ಅನ್ಯಮಾತೊಂದು ನಿನ್ನ ಬಯಸಿ ಬೇಡೆನು ನಾನು ಅನ್ಯರನು ಬೇಡದಂತುನ್ನತ ಪದ ನೀಡಿ ನಿನ್ನ ಮೂರುತಿಯೆನ್ನ ಕಣ್ಣೊಳು ನಿಲ್ಲಿಸಿ ಬನ್ನಬಡಿಸದೆ ಕಾಯೊ ಎನ್ನಯ ಶ್ರೀರಾಮ 3
--------------
ರಾಮದಾಸರು
ಬೋಧ ಬಂದನು ಮಾ | ಪ್ರಪಂಚ ಗೆಲುವವ ನಾರೆಲಮಾ ನಮ್ಮ | ಪತಿ - ಭಕ್ತರು ಕಾಣಿಲಮಾ ಪ ಎನಗಾರು ಇದಿರಿಲ್ಲ ಸ್ವರಾಜ್ಯದೊಳಗಿಂದು | ನೀನಾರೋ ಪರದೇಶಿ ಹೇಳಲಮಾ | ನಾನೆಂಬ ಹಮ್ಮಿನ ಬಿರುದನ ಬಿಡಿಸುವ | ನಾನೆಂಬ ಹಮ್ಮಿನ ಬಿರುದವ ಬಿಡುಸುವ | ಜ್ಞಾನ ಶಸ್ತ್ರಧಾರಿ ಬೋದನುಮಾ 1 ಸರಸಿದ ಭವರುದ್ರ ಇಂದ್ರರ ಬಗೆಯದ | ನೆರೆ ಕಾಮ ಗೆಲುವವ ರಾರೆಲಮಾ | ಭಾಗವತ ಶುಕ ಹನುಮಂತನು ಮೆರೆವ ಭೀಷ್ಟ ದೇವ ನಲ್ಲೇನುಮಾ 2 ವೈಕುಂಠದೊಳು ಸನಕಾದಿಕರೊಳು ಹೊಕ್ಕ | ಆ ಕೋಪ ಕಾನುವ ನಾರೆಲಮಾ | ಸಾಕಿ ಬೆಳೆಸಿದ ಶಾಂತಿಯ ನೆಲೆಯಿಂದ | ಪ್ರಖ್ಯಾತ ಕದರಿಯು ಕೇಳಲಮಾ 3 ಧರಿಯಿತ್ತ ರಾಮಗ ಸ್ಥಳ ವಿಲ್ಲೆಂದರು ಬ್ರಾ | ಹ್ಮರು ಲೋಭಗೆದ್ದ ವನಾರೆಲಮಾ | ಮರುಳ ಕೇಳು ಧನ ತೃಣ ಸಮ ಬಗೆದರು | ಕರ್ಣ ರಲ್ಲೇನು ಮಾ 4 ಬೆಟ್ಟದಿ ಉಡಿಹಾಕಿ ಕೊಳ್ಳಲು ಹೋದನ | ಶಿಷ್ಯ ಮೋಹನ ಗೆಲುವ ನಾರೆಲ ಮಾ | ಮುಟ್ಟಿ ಬೇಡಲುಳಿವ ಮಹನ ತಂದಿಟ್ಟನು | ಸೃಷ್ಟಿ ಮನುಜ ಚಿಲ್ಹಾಳಲ್ಲೇನು ಮಾ 5 ಭ್ರಗು ಮುನಿದಕ್ಷನು ಕಾರ್ತೃ-ವೀರ್ಯಾದಿಯ | ಬಗೆಯದ್ದ ಮದ-ವಳಿ ದಾರೆಲ ಮಾ | ಜಗ ಹೊಡೆತನವಿದ್ದು ಬಾಗಿ ನಡೆದ ನಮ್ಮ | ಸುಗುಣ ಜನಕರಾಯ ನಲ್ಲೇನು ಮಾ 6 ಹುಚ್ಚಾದ ವಶಿಷ್ಟನೊಳು ವಿಶ್ವಾಮಿತ್ರನು | ಮತ್ಸರಿಲ್ಲದವ ನಾರೆಲ ಮಾ | ಎಚ್ಚರಿಸಿದ ಸುಯೋಧನಗ ವಿಜಯತನ | ಸಚ್ಚರಿತ ಧರ್ಮ ನಿಲ್ಲೇನು ಮಾ 7 ಬಗೆ ಬಗೆ ವಿಷಯ ದುಪಾಯಗಳೆನಗುಂಟು | ನಿಗದಿಯ ನಡೆನುಡಿ ಕೇಳೆಲ ಮಾ | ಭಗವದ್ಭಾವ ಸರ್ವ ಭೂತದಿ ನೋಡಲು | ವಿಗುಣವೆ ಸದ್ಗುಣ ಭಾಸುದ ಮಾ 8 ನಿನ್ನ ಬಲವ ಕಂಡೆ ಶರಣವ ಹೊಕ್ಕೆನು | ಬೋಧ ಕೇಳೆಲ ಮಾ | ಸನ್ನುತ ಮಹಿಪತಿ ಸುತ ಪ್ರಭು ನೆಲೆದೋರಿ ಮನ್ನಿಸಿ ಹೊರೆವನು ಬಾರೆಲಮಾ 9
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮರೆವುದೆಂತು ನಿನ್ನ ಪರಮ ದಯವ ಕರುಣಾವಾರಿಧೇ ಪ ಅರಿಯದ ಅಜ್ಞಾನಿ ಎನ್ನ ಹಿರಿಯನೆನಿಸಿ ಪೊರೆದ ಬಗೆಯ ಅ.ಪ ಜ್ಞಾನಿಗೆ ಲಭ್ಯನೆಂದು ನಿನ್ನ ಮಾನತತಿಯು ಪೊಗಳುತಿರಲು ಜ್ಞಾನವೀಯದಿರಲು ನಿನ್ನ ಜ್ಞಾನಿಜನಗಳೇನೆನುವರೋ 1 ರಾಗ ದ್ವೇಷದಿಂದ ಶಿರವ ಬಾಗದಿದ್ದ ಎನ್ನ ದುರಿತ ನೀಗಿ ದಿವ್ಯಯೋಗವೀಯಲು ತ್ಯಾಗ ನಿನ್ನದು ಯೋಗವೆನ್ನದು 2 ಮಡುವಿನಲ್ಲಿ ಬಿದ್ದು ಸುಳಿಯ ಹೊಡೆತದಿಂದ ಮುಳುಗುತಿರಲು ದಡಕೆ ತಂದು ರಕ್ಷಿಸಿದ ಎನ್ನೊಡೆಯ ವರ ಪ್ರಸನ್ನ ಮೂರುತೆ 3
--------------
ವಿದ್ಯಾಪ್ರಸನ್ನತೀರ್ಥರು
ಹೋಯಿತು ಪರಶುರಾಮನ ದಂಡಿಲಿ ನಷ್ಟ ವಾಯಿತು ಜನರೆಲ್ಲ ಹೊಡೆತ ಕಡಿತದಿ ಪ ಮೇಧಿನಿಯೊಳಗಣ ಜನರಿಂಗೆ ದಂಡಿಂದ ಮಣಿ ಮುತ್ತು ತೀರ್ದುದು ಕಂಚು ತಾಮ್ರಗಳು ಬಹುಕಾಲ ಸಾಧಿಸಿದೊಡವೆ ಸಾಧನ ಸಂಪತ್ತುಗಳೆಲ್ಲ 1 ಉಡುವ ತೊಡುವ ಜವಳಿ ಅಡಕೆ ಮೆಣಸು ಭತ್ತ ಕಡಿತ ಕಂಠಗಳಾಬ್ರ ಮುಡಿ ಉಪ್ಪುಗುಢಕಲ್ಲು ಗಡಿಗೆ ಮಡಕೆ ಎಣ್ಣೆ ಕೊಡವು ಕಬ್ಬಿಣದ ಕತ್ತಿ ಅಡಿಯಿಟ್ಟ ಚಿಟ್ಟು ಪಾಟ್ಟಿಗಳೊಂದುಳಿಯದಂತೆ 2 ಕೊಟ್ಟದೊಳಗೆ ಇಟ್ಟವಸ್ತು ವಡವೆಯೆಲ್ಲ ನಷ್ಟವಾಯಿತು ಹಾರೆ ಕೊಡಲಿ ಗುದ್ದಲಿ ಕುಳ ಬಟ್ಟಲು ಹಂಡೆ ಕೊಪ್ಪರಿಗೆ ಇಕ್ಕುವ ಗುಂಡಿ ಮಣಿ ಮರಿಗೆ ಸರ್ವಸ್ವವು 3 ನಗ ಯೊತ್ತು ಉಂಗುರ ಜಪಮಣಿ ಮಾಲೆ ಹವಳ ಯಾ ರೆತ್ತುವ ನಗನಾಣ್ಯವೆಲ್ಲ ಸುಲಿಗೆಯಿಂದ 4 ಅಂಧಕಾರಕೆ ನೆರವಾದಂತೆ ದುರ್ಭಿಕ್ಷ ಬಂದಿತು ಸಂಗಡ ತಂಡುಲ ಗದ್ಯಾಣವೊಂದಕೈದಾಗಿ ಮುಗಿತು ಹರಿನಂದನ ಕೋಣೆ ಲಕ್ಷ್ಮೀಶನೊಬ್ಬನೆ ಬಲ್ಲ 5
--------------
ಕವಿ ಪರಮದೇವದಾಸರು