ಒಟ್ಟು 6 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದು ಏನೋ ನಿನ್ನ ಗುಡೀ ಗುಡೀ |ಒಳಗಿನ ಕಸವನು ಹೊಡೀ ಹೊಡೀ ಪ ಹಗಲಿರುಳೊ ನೀ ಬದುಕ ಮಾಡಿ |ಏನು ಗಳಿಸಿದ್ಯೋ ಹುಡೀ ಹುಡೀ ||ಜಗದೊಳು ದೇವನ ತಿಳಿಯಲೊಲ್ಲಿ |ತಿಳಿದೀತೊ ಅಲ್ಲಿಗೆ ನಡೀ ನಡೀ 1 ಹಸಿದು ಬಂದು ನೀ ವಸ್ತಿಯಾಗಿಳಿದರೆ |ಮತ್ತೇನಾರ ಕೊಡೂ ಕೊಡೂ ||ಅಸ್ತಮಯಾದಿತು ಉದಯದಲೆದ್ದು |ತಪ್ಪದೆ ಇಲ್ಲೆಂಬೊ ನುಡೀ ನುಡೀ 2 ನಾಕು ಕಾಯದೊಳು ಎರಡಿಟ್ಟನು ನೀ |ಎರಡನೆ ದೇವರಿಗೊಡೀ ಒಡೀ ||ಲೋಕಪಾಲಕ ಭವತಾರಕನಂಘ್ರಿಯ |ಈ ಕಾಯದಿ ದಯಾ ಪಡೀ ಪಡೀ 3
--------------
ಭಾವತರಕರು
ಸ್ಮಾರ್ತರ ನಿಂದನೆ ಮಾಡುವ ಕೆಟ್ಟ ಧೂರ್ತನ ಬಾಯ ಮೇಲೆ ಹೊಡೀ ಹೊಡೀ ಪ ಕರ್ತಾರ ಸ್ವರ ಸಮನೆನಿಸುವವರ ಪುರು- ಷಾರ್ಥಯುತ ಶೃತಿ ಶಾಸ್ತ್ರ ಪ್ರವರ್ತರ ಅ.ಪ ಪ್ರಮಾಣವನುಸರಿಸುವರ ವಿಹಿತವಾಗಿ ತಮ್ಮಂತೆ ಸರ್ವರನು ವಿಶೇಷದಿಂದರ್ಚಿಸುವವರ ಪ್ರಕಾಶಿಸುವವರ ಕರ್ಮ ಸಮ್ಯಜ್ಞಾನವಸಂಪಾದಿಸುವರ 1 ವೇದಾಭ್ಯಾಸದಿ ಕಾಲವ ಕಳೆಯುತ ವಿಹಿತರಿವರೆನಿಸಿಕೊಳ್ಳುವರ ಭೇದಾಭೇದಗಳರಿಯುತಲೀ ಬ್ರಹ್ಮವಾದದಲಿ ಸಂತೋಷಿಪರ ಪ್ರೀತಿಯ ಮಾಡುವರ ಹೃದ್ಗುಹೆಯಲಿ ನೋಳ್ಪರ 2 ನಂಬಿರುವವರ ವಿಧಿ ಪರೇಶನಲ್ಲಿಸಮನ್ವಯಿಸುವರ ಭಕ್ತಿಯಲಿ ಪೂಜಿಪರಾ ಸಂಪಾದಿಸೆ ಪಾತ್ರರಾದವರ 3
--------------
ಗುರುರಾಮವಿಠಲ
ಹೊಡೀ ನಗಾರಿ ಮೇಲೆ ಕೈಯಾ ಕಡ ಕಡ ಪ ದೃಢಮತಿಯಲಿ ಕಡು ವಾದಿರಾಜರು ರುಜುಗುಣಪರೆಂದ್ಹೊಡೇ ಅ.ಪ. ಕಾಮನಯ್ಯನ ನೇಮದಿ ಸ್ಮರಿಸುವ ಕಾಮರಹಿತ ನಿಷ್ಕಾಮ ಕರೆವರೆಂದ್ಹೊಡೀ 1 ಅವನಿಯೊಳಗೆ ತಾ ಬಂಧುರ ಕುಲೇಂದ್ರಿನಿ ಗೊಲಿದವ ನಿಂದ್ಯಂದ್ಯರೆಂದೊಡಿ2 ಮೋದ ಮುನಿಯ ಮತ ಮೋದದಿ ಸಾಧಿಪ ಸದ್ವಾದಿರಾಜ ಗುರು ಮೋದತೀರ್ಥರು ಸಮರೆಂದ್ಹೊಡಿ 3 ಶೋಣಿತ ಶೂನ್ಯರಿವತೆಂದ್ಹೊಡಿ4 ಕಾಮಿನಿಗೋಸುಗ ಪ್ರೇಮದಿ ಕುಸುಮವ ತಂದಿಟ್ಟತುಳ ಭೀಮನ ಸರಿಸಮರಿವತೆಂದ್ಹೊಡಿ 5 ಸೀತೆಯಗೋಸುಗ ಸೇತುವೆಗಟ್ಟಿದ ರಘುನಾಥನ ಪ್ರೀತಿಯ ಘನವಾತನಪದ ಪೊಂದುವರೆಂದ್ಹೊಡಿ 6 ಇಂದಿರೇಶನ ಪದಮಂದಿರದಲಿ ಭಜಿಸುವ ನಂದಿವಾಹ ಮುಖವೃಂದ ವಂದ್ಯರೆಂದ್ಹೊಡಿ 7 ವೃಂದಾವನದೊಳು ಕೂತುಚ್ಛಂದದಿ ದ್ವಿಜರಿಗೆ ಬೋಧಿಪರಿವರೆಂದ್ಹೊಡಿ 8 ಕಂತುವಿನಲಿ ತಾನಿಂತು ಜಪಿಸುವ ತಂದೆವರದಗೋಪಾಲವಿಠಲನ ಪ್ರೀತಿಮಂತ್ರಿಯೆನಿಪವರೆಂದೊಡಿ 9
--------------
ತಂದೆವರದಗೋಪಾಲವಿಠಲರು