ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನಗಿದು ಘನವೆ-ನಿತ್ಯಾತ್ಮಕವನಜಭವಾದಿಗಳನು ಪಾಲಿಪದೇವಪ ಸದಯನೀನಾದರೆ-ಬದುಕಿಸಿ ಪಶುಗಳ ಮುದವನು ತೋರಿಸು ಮಧುಸೂಧನ ಈಗ 1 ಇದಿರಿಗೆ ನೋಡಲಾರದೆ ನಿನ್ನ ದೂರಿದೆ ಇದುವೊಂದು ತಪ್ಪುಯನ್ನದು ಎಂದು ಮುನ್ನಿಸು 2 ವಿಷದ ನೀರನು ಕುಡಿ-ದಸುವನ್ನು ಕಳಕೊಂಡ ಪಶು ಪಾಲಕರಿಗೆ ನೀನಸುವಿತ್ತು ಪೊರೆದೆ 3 ಹೊಟ್ಟೆಯೊಳಗೆ ಸತ್ತು ಹುಟ್ಟಿದ ಶಿಶುವನ್ನು ಮುಟ್ಟಿ ಜೀವನವಿತ್ತೆ ಕೃಷ್ಣಾಕೃಪಾಕರ 4 ಗುರುಸುತನನು ಯಮ ಪುರದಿಂದ ಕರೆತಂದ ಪರಮ ಶ್ರೀ ಪುಲಿಗಿರಿ ವರದ ವಿಠಲರಾಯ 5
--------------
ಸರಗೂರು ವೆಂಕಟವರದಾರ್ಯರು
ಸಾಕುಮಾಡಿಸಭವ ಕಾಕುಜನರ ಸಂಗವ ಬೇಕು ನಿಮ್ಮ ಚರಣಧ್ಯಾನ ಲೋಕದವರ ಗೊಡವಿನ್ನೊಲ್ಲೆ ಪ ಖ್ಯಾತಿವಂತರೆಂದು ಬರಿದೆ ಮಾತಿನಿಂದ ಪೇಳುತಿನಿತು ನೀತಿಮಾರ್ಗವರಿಯಧಮ ಜಾತೀಹೀನರ ಜತೆ ಜನ್ಮಕೆ 1 ಕೆಟ್ಟಗುಣದ ರಾಶಿ ಮೊಟ್ಟೆ ಹೊಟ್ಟೆಯೊಳಗೆ ಇಟ್ಟುಕೊಂಡು ಶ್ರೇಷ್ಠರಂತೆ ನಟಿಸಿ ಪರರಿಗರಿಷ್ಟವರಿಪದುಷ್ಟರ ಗೋಷ್ಠಿ 2 ನಿತ್ತು ಕಾಯೋ ಕರುಣದೆನ್ನ ಮುಕ್ತಿದಾತೆನ್ನಯ್ಯ ರಾಮ 3
--------------
ರಾಮದಾಸರು
ಚಿಂತೆ ಏತಕೊ - ಬಯಲ ಭ್ರಾಂತಿ ಏತಕೊ |ಕಂತುಪಿತನ ದಿವ್ಯನಾಮ ಮಂತ್ರವಿರಲು ಜಪಿಸದೆ ಪ.ಏಳುತುದಯಕಾಲದಲ್ಲಿ |ವೇಳೆಯರಿತು ಕೂಗುವಂಥ ||ಕೋಳಿ ತನ್ನ ಮರಿಗೆ ಮೊಲೆಯ |ಹಾಲಕೊಟ್ಟು ಸಲಹಿತೆ ? 1ಸಡಗರದಲಿ ನಾರಿಜನರು |ಹಡೆಯುವಾಗ ಸೂಲಗಿತ್ತಿ ||ಅಡವಿಯೊಳಗೆ ಹೆರುವ ಮೃಗವ |ಪಿಡಿದು ರಕ್ಷಣೆ ಮಾಳ್ಪರಾರು 2ಹೆತ್ತ ತಾಯಿ ಸತ್ತ ಶಿಶುವು |ಮತ್ತೆ ಕೆಟ್ಟಿತೆಂಬರು ಜನರು ||ಹುತ್ತಿನ ಹಾವಿಗೆ ಗುಬ್ಬಿಗೆ ಮೊಲೆಯ - |ನಿತ್ತು ರಕ್ಷಣ ಮಾಡುವರಾರು 3ಗಟ್ಟಿಮಣ್ಣಿನ ಶಿಶುವ ಮಾಡಿ |ಹೊಟ್ಟೆಯೊಳಗೆ ಇರಿಸುವಂಥ ||ಕೊಟ್ಟ ದೈವ ಕೊಂಡೊಯ್ದರೆ |ಕುಟ್ಟಿಕೊಂಡು ಅಳುವುದೇಕೆ 4ನಂಬಿಗೆಗಿವು ಸಾಲವೆಂದು |ಹಂಬಲಿಪುದು ಲೋಕವೆಲ್ಲ ||ನಂಬಿ ಪುರಂದರವಿಠಲ - |ನೆಂಬ ನಾಮ ನುಡಿದ ಮೇಲೆ 5
--------------
ಪುರಂದರದಾಸರು