ನನ್ನ ಸ್ವಾಮಿಯು ನೀನಲೆ ಪ
ನನ್ನನುದ್ಧರಿಪುದು ನಿನ್ನದಾಗಿರಲಯ್ಯ ಅ.ಪ
ನಿನ್ನ ಚರಿತೆಯ ಕೇಳಲಿ ಕಿವಿ ನಿನ್ನನೀಕ್ಷಿಸಲೆನ್ನ ಕಂಗಳು
ನಿನ್ನ ಪೂಜಿಸಲೆನ್ನಕೈಗಳು ನಿನ್ನ ಹೊಗಳಲೆನ್ನ ರಸನೆಯು 1
ತಂದೆ ನೀನೆನ್ನತಂದೆ ನಾನು ಅದರಿಂದ ಬಂದೆ ನಿನ್ನಯ ಹಿಂದೆ
ಮುಂದೆ ಪೋಗುತಲಿ ಒಂದೆ ನಿಮಿಷದಲಿ
ಕಂದನೆನ್ನಿದಿರಿಂದ ಮರೆಯಾದೆ 2
ಅಂದಿನಿಂದ ಮುಕುಂದ ನಿನ್ನರವಿಂದಚರಣದ್ವಂದ್ವ ವಿರಹದಿ
ನೊಂದು ನಿಂದೆಡೆನಿಲ್ಲದಲೆವೆನೋ ತಂದೆ ಮಾಂಗಿರಿರಂಗ 3