ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆತ್ಮನಿವೇದನೆ ಆತನೇ ದಾತನು ಯೆತ್ತಿಕೊಡುವವನು ಭೂತದಯೆಯುಳ್ಳಂಥ ಪುಣ್ಯಾತ್ಮನು ಪ ನಿಂದು ಕೀರ್ತಿಯೆ ಪಾಡೆ ದೇಹಿಯನ್ನುತ ಬೇಡೆ ಸಿಂಧು ಜಲದಲಿ ಮಿಂದು ಭಜಿಸಲಾಗ ಬಂಧನವ ಪರಿಹರಿಸಿ ಬಹು ಪ್ರೀತಿಯಿಂದೆನಗೆ ಬಂದಿರುವ ಕಷ್ಟಗಳ ನೀಗುವರು ಯಾರೋ 1 ನಿತ್ತು ಶ್ರೀ ಹರಿಭಜಿಸೆ ಕೂತು ಶ್ರೀ ಹರಿಸ್ಮರಿಸೆ ತಾತನೇ ಗತಿಯೆಂದು ಪಾದದಲಿ ಬೀಳೇ ಹೊತ್ತು ನೋಡದೆ ಮುದದಿ ಭಿನ್ನವೆಣಿಸದೆಯನಗೆ ಯೆತ್ತಿ ಮೋಕ್ಷವ ಬೇಗನೀವ ನಾರೋ 2 ನಾನು ಬಡವನು ಜಗದಿ ದೀನಹೀನನು ಹರಿಯೆ ಏನು ಗತಿಯೆಂದೆನುತ ಚರಣ ಮರೆ ಹೊಕ್ಕೇ ಪಾನ ಮಾಡುತಲೆನ್ನ ಅವಗುಣವ ನೀಗೆನಗೆ ತಾನೆ ಭಿಕ್ಷವು ಬೇಗನೀವ ನಾರೋ 3 ಭಜನೆ ಸ್ತೋತ್ರಗಳರಿಯೆ ಪೂಜೆ ವಿಧಿಯನು ತಿಳಿಯೇ ಅಜನ ಪಿತ ಶ್ರೀಹರಿಯ ಮೆಚ್ಚಿಸಲು ಅರಿಯೇ ಸುಜನರನು ಪೊರೆವಂತೆ ಸಲಹುವನು ಯಾರೋ 4 ನಾನು ಪಾಪಿಯು ಋಣಿಯು ಕ್ಲೇಶವನು ತೊರೆದೀಗ ಇನ್ನು ಮರೆಯದೆ ನಿನ್ನ ದಾಸನಾಗುವೆನು ಚನ್ನಕೇಶವ ಸ್ವಾಮಿ ರಕ್ಷಿಸೆಂದೊದರುತಿರೆ ಪ್ರಾಣವನು ಯತ್ತೆನ್ನ ಸಲಹುವನು ಯಾರೋ 5
--------------
ಕರ್ಕಿ ಕೇಶವದಾಸ
ಕಷ್ಟಗಳ ಪರಿಹರಿಸೊ ಶ್ರೇಷ್ಠ ಮಾರುತಿಯೇ ಭ್ರಷ್ಟನಾದೆನು ಭಂಡ ಸಂಸಾರದಲ್ಲೀ ಪ ಸ್ವಾರ್ಥವೆನ್ನುವ ದುಃಖ ಸಾಗರದಿ ಮುಳುಗಿದ್ದು ಸ್ವಾರ್ಥಕೋಸುಗ ಹೀನ ಕೃತ್ಯಗಳ ಗÉೈದೂ ಅರ್ಥವನು ಗಳಿಸುತ್ತ ತುಂಬಿದೆನು ಈ ವಡಲ ವ್ಯರ್ಥವಾಯಿತು ಜನ್ಮ ಸಾರ್ಥವನು ಮಾಡೋ1 ನಿರುತದೀ ಧರ್ಮ ಕರ್ಮಗಳ ತೊಲಗಿದೆನು ಭವದಿ ಸುಖವೆಲ್ಲವೂ ಮಾಯವಾಯಿತು ದೇವಾ ಶರಣರಿಗೆ ತಂದೆ ನೀನೆಂದು ಮೊರೆಹೊಕ್ಕೇ 2 ಪರಹಿತವ ಬಯಸದಲೆ ಕೇಡು ಬಗೆದೆನು ನಿತ್ಯ ಪರಸತಿಯಪೇಕ್ಷಿಯಲಿ ನಿರುತನಾಗಿದ್ದೇ ಅರಿತೆನೀಗಲೆ ನಾನು ಸರ್ವ ನಶ್ವರವೆಂದು ನರಹರಿಯ ನೀರೆರೆಯೊ ಈ ಬಾಡು ಶಶಿಗೇ 3 ಭಕ್ತವತ್ಸಲನೆಂಬ ಬಿರುದ ಪೊತ್ತಿಹೆ ನೀನು ಭಕ್ತಿಯಲಿ ನಾ ನಿಂನ ಸೇವೆ ಮಾಡುವೆನು ಭಕ್ತದಾಯಕಯಂನ ಹಸಿವೆ ತೃಷೆಗಳ ನೀಗಿ ಮುಕ್ತಿಯನು ನೀಡೆನಗೆ ಚನ್ನಕೇಶವನೇ 4
--------------
ಕರ್ಕಿ ಕೇಶವದಾಸ
ಕಾಯೊ ಕರುಣಾಭಯ ಕೃದ್ಭಯ ನಾಶನ ಧ್ರುವ ಕಂದ ಪ್ರಲ್ಹಾದಗಾಗಿ ಸಂಧಿಸೊದಗಿನಿಂತು ಬಂದು ರಕ್ಷಿಸಿದೆ ಪ್ರಾಣ ಚಂದವಾಗಿ ನೀ 1 ಕರಿಯ ಮೊರೆಯ ಕೇಳಿ ನೆರಯ ಬಿಡಿಸಿದೆ ಎಂದು ಮೊರೆಯ ಹೊಕ್ಕೆನು ನಿಮಗೆ ಹರಿಹರಿಯೆಂದು 2 ದ್ರೌಪದಿಯ ಅಭಿಮಾನ ಕೃಪೆಯಿಂದ ನೀ ಪೂರ್ಣ ಉಪಾಯದಲಿಗಾಯ್ದ ಅಪಾರ ಮಹಿಮ 3 ಸ್ಮರಿಸಿದಾಕ್ಷಣ ಬಂದು ಕರುಣದಿಂದನ್ಯರಿಗೆ ಪರಿಪರಿಯಿಂದ್ಹೊರೆದೆ ವರಮುನಿಗಳ 4 ಶರಣು ಹೊಕ್ಕೇನು ನಿಮ್ಮ ತರಳ ಮಹಿಪತಿ ಪ್ರಾಣ ಹೊರೆದು ರಕ್ಷಿಸು ಎನ್ನ ಪರಮಪಾವನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು