ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಳ್ಳು ಕಾಳಿನಷ್ಟು ಭಕ್ತಿ ಎನ್ನೊಳಗಿಲ್ಲ ಪ ಕಳ್ಳರಿಗೆ ಕಳ್ಳನಂತೆ - ಬೆಳ್ಳಕ್ಕಿಯಂದದಿ ಡಂಭಅ ಗಾಣದೆತ್ತಿನಂತೆ ಕಣ್ಣಮುಚ್ಚಿ ಪ್ರದಕ್ಷಿಣೆಯ ಮಾಡಿಕಾಣದೆ ತಿರುಗುವೆನೆರಡು ಕಣ್ಣಿದ್ದು ನಾನುಮಾಣಿಕ್ಯದ ರಾಶಿಯಲ್ಲಿ ಅಂಧಕರೈವರು ಕೂಡಿಆಣಿಮುತ್ತ ಹಿಡಿದು ಹಿಡಿದು ಬಿಡುವ ಭ್ರಮಿತನಯ್ಯ1 ಗುಂಡು ಮುಳುಗನ ಹಕ್ಕಿಯಂತೆ ಕಂಡ ಕಂಡ ನೀರ ಮುಳುಗಿಮಂಡೆ ಶೂಲೆ ಬಾಹೋದಲ್ಲದೆ ಗತಿಯ ಕಾಣೆನೊಮಂಡೂಕನಂದದಲಿ ನೀರ ತಡಿಯಲಿ ಕುಳಿತುಕೊಂಡುಮುಂಡೆ ಮುಸುಕನಿಕ್ಕಿ ಮೂಗು ಹಿಡಿದು ಬಿಡುವ ಭ್ರಮಿತನಯ್ಯಾ 2 ಇಕ್ಕುಳದ ಕೈಯಲ್ಲಿ ಹಿಡಿದ ಕಾದ ಕಬ್ಬಿಣದಂತೆಸಿಕ್ಕಿ ಸಿಡಿಮಿಡಿಗೊಂಬೆ ಗತಿಯ ಕಾಣದೆಹೊಕ್ಕುಳ ಹೂವಿನ ಬಾಡದಾದಿಕೇಶವನ ಮೊರೆಹೊಕ್ಕೆನಿಂದು ಮನ್ನಿಸಿ ಕಾಯೋ ದೇವದೇವೋತ್ತಮನೆ 3
--------------
ಕನಕದಾಸ
ಗತಿಯೆಂದು ನಂಬಿದೆ ನಿನ್ನ ಕಾಯೊ ಎನ್ನ | ಲಕ್ಷ್ಮೀ ವಿಶ್ವಮೋಹನ್ನ ಪ ಗತಿಯಿಲ್ಲದವರಿಗೆ ಗತಿನೀನಲ್ಲವೆ ಸ್ವಾಮಿ ಸತತನಿನ್ನಯ ಪಾದಾಶ್ರಿತರಲ್ಲವೆ ನಾವು ಅ.ಪ ಅಗಣಿತಗುಣಪೂರ್ಣನೆಂದು ದೀನಬಂಧು | ಸ- ರ್ವಗಸರ್ವಾಂತರ್ಯಾಮೀ ಮೊರೆಹೊಕ್ಕೆನಿಂದು ಜಗದಾದಿಕಾರಣ ಜಲಜಾತ ನಯನ ಪ- ಶೌರಿ 1 ನಾಥನು ನೀನು ಅನಾಥರಿಗೆಲ್ಲ 2 ಶರಣಾಗತ ರಕ್ಷಾನತಸುರಧೇನು ಗುರುರಾಮವಿಠ್ಠಲ ಕರುಣಾಸಾಗರನು ಎಂ- ದರಿತು ನಿನ್ನಡಿಗಳ ಭಜಿಸಿ ಬೇಡುವೆನು 3
--------------
ಗುರುರಾಮವಿಠಲ
ಗುರುದತ್ತ ದಿಗಂಬರ ಸ್ತುತಿ ಈಸಲಾರೆ ಗುರುವೆ ಸಂಸಾರಶರಧಿಯ ಮೋಸದಿಂದ ಬಿದ್ದು ನಾನು ಘಾಸಿಯಾಗಿ ನೊಂದೆ ಗುರುವೆ ಪ ಗುರುವೆ ಬೇರೆ ಗತಿಯ ಕಾಣೆ ನೀನೆಗತಿ ದಿಗಂಬರೇಶ ಮರಯ ಹೊಕ್ಕೆನಿಂದು ನಿಮ್ಮ ಚರಣ ಕಮಲವ ತರುಣ ದಿಂದಲೆನ್ನ ಭವದ ಶರಧಿಯನ್ನು ದಾಟುವಂಥ ಪರಿಯನೊರೆದು ನಾವೆಯಿಂದ ದಡವ ಸೇರಿಸೋ 1 ಮಡದಿ ಮಕ್ಕಳೆಂಬುದೊಂದು ನೆಗಳುಖಂಡವನ್ನು ಕಚ್ಚಿ ಮಡುವಿಗೆಳೆದು ತಿನ್ನು ತಾವೆ ತಡೆಯಲಾರೆನು ನಡುವೆ ಸೊಸೆಯು ಎಂಬನಾಯಿ ಜಡಿದು ಘೋರ ಸರ್ಪದಂತೆ ಕಡಿಯೆ ವಿಷಮ ನೆತ್ತಿಗಡರಿ ಮಡಿವಕಾಲ ಬಂದಿತು 2 ಹಲವು ಜನ್ಮದಲ್ಲಿ ಬಂದು ಹಲವು ಕರ್ಮವನು ಮಾಡಿ ಹಲವು ಯೋನಿಯಲ್ಲಿ ಹುಟ್ಟಿ ಹಲವು ನರಕವ ಹಲವು ಪರಿಯ ಲುಂಡು ದಣಿಯ ನೆಲೆಯ ಗಾಣದೆನ್ನಜೀವ ತೊಳಲಿತಿನ್ನುಗತಿಯ ಕಾಣೆ ಗುರು ಚಿದಂಬರ 3 ಕಾಲವೆಲ್ಲಸಂದು ತುದಿಯಕಾಲ ಬಂತು ಕಂಡ ಪರಿಯೆ ತಾಳಿ ಕಿವಿಗೆ ಊದ್ರ್ವಗತಿಗೆ ಪೋಪಮಂತ್ರವನ್ನು ತಿಳಿಸಿ ನಿರಾಳ ವಸ್ತುವನ್ನು ತೋರೋವರ ದಿಗಂಬರಾ 4 ಆಸೆಯೆಂಬ ನಾರಿಯನ್ನು ನಾಶಗೈದು ಗುರುವಿನಡಿಗೆ ಹಾಸಿತನುವ ದಡದಂತೆ ಬೇಡಿಕೊಂಡೆನು ಈಸ ಮಸ್ತಲೋಕವನ್ನು ಪೋಷಿಸುವ ಲಕ್ಷ್ಮೀಪತಿಯ ದಾಸಗಭಯವಿತ್ತು ಕಾಯೋವರ ದಿಗಂಬರ 5
--------------
ಕವಿ ಪರಮದೇವದಾಸರು
ಮಳೆಯ ಪಾಲಸಯ್ಯ ಮಂಗಳ- ನಿಳಯ ಪಾಲಿಸಮ್ಮ ಪ ಬಿನೆಯೊಳು ಮಳೆಯನು ತಳೆಯದೆ ತೃಣಗಳು ಬೆಳೆಯದ ಗೋವುಗಳಳವುವಯ್ಯ ಅ.ಪ ಗೋವಿಪುರ ಕುಲವ ಕಾಯುವ ದೇವನು ನೀನಲ್ಲವೇ ಮೇವುಗಳಿಲ್ಲದೆ ಗೋವುಗಳೆಲ್ಲವು ಸಾವುವು ನಿನ್ನೊಳಿದಾವನು ಕಾವನು 1 ಕರೆಯೊಳು ನೀರಿಲ್ಲ ಬಾವಿಗ- ಳೊರತೆಯ ಸೋರಿಲ್ಲ ತುರುಗಳು ಜೀವನದಿರವನು ಕಾಣದೆ ಹರಣವ ಬಿಡವುವು ಕರುಣದಿ ಬೇಗನೆ 2 ಬಲರಿಪುಖತಿಯಲಿ ಬಾಧಿಪೆ ಜಲಮಯ ರೀತಿಯಲಿ ಚಲಿಸದೆ ಕೊಡೆವಿಡಿದಳುಹಿದೆ ಕರದೊಳು ಚಲವನು ಗೋವ್ಗಳ ಬಳಗವನೀಗಳು 3 ಜಲನಿಧಿ ಕೃತ ಶಯನ ಶಾರದ ಜಲರುಹದಳನಯನ ಜಲಜರ ಮೂರುತಿ ಜಲಜಕರಗಳು ಜಲದಾಗರದಿಂ 4 ದಾರಿಯ ಜನರೆಲ್ಲ ಬಹು ಬಾ- ಯಾರಿ ಬರುವರಲ್ಲ ದೂರಗಿಂ ತಂದಿಹ ನೀರನು ಲೋಭದಿ ನಾರಿಯರೆಲ್ಲ ವಿಚಾರಿಸುತಿರ್ಪರು 5 ಬೆಳೆದಿಹ ಸತ್ಯಗಳು ಬಿಸಿಲಿನ ಜಳದಲಿ ಬಾಡಿಹುವು ನಡಿನ ನಯನ ನಿನ್ನೊಲುಮೆಯ ತೋರಿಸಿ ಘಳಲನೆ ಪೈರುಗಳಳಿಯುತ ತೆರದೊಳು 6 ಕರುಣಾನಿಧಿಯೆಂದು ನಿನ್ನನು ಶರಖಹೊಕ್ಕೆನಿಂದು ಶರಣಭರಣ ಪುಲಿಗಿರಿಯೊಳು ನೆಲೆಸಿಹ ವರದ ವಿಠಲ ದೊರೆ ವರದ ದಯಾನಿಧೆ 7
--------------
ವೆಂಕಟವರದಾರ್ಯರು
ಬಾರೊಭಾವಜನಯ್ಯಭಾನುಸಾಸಿರ ಮೈಯದೂರ ಮಾಡದಲೆನ್ನ ದುರಿತವಿದಾರಿ ಪ.ಕಡೆ ಮೊದಲಿಲ್ಲದ ಕೆಡಕು ಯೋನಿಗೆ ಬಿದ್ದುಕಡಲಶಾಯಿ ನೀಯೆಂದು ಒಡಲ್ಹೊಕ್ಕೆನಿಂದು 1ಕ್ಷಣಲವ ಮಾಳ್ಪಘಕೆಣಿಕೆ ಇಲ್ಲೆಲೆ ದೇವಘನಕೃಪೆಯಲಿ ನನ್ನ ಮನಮನೆಗಾಗಿ2ಮುನ್ನೆ ನಿನ್ನಯ ಮೊರೆಯ ಅನುಕರಿಸಿದವರಮನ್ನಿಸಿ ಪೊರೆದ ಪ್ರಸನ್ನವೆಂಕಟದಾತ3
--------------
ಪ್ರಸನ್ನವೆಂಕಟದಾಸರು