ಒಟ್ಟು 9 ಕಡೆಗಳಲ್ಲಿ , 5 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂತು ಜೀವಿಪೆನಯ್ಯಾ ನಿನ್ನನಗಲಿ ನಾನು ಶಾಂತ ಮೂರುತಿ ಕೃಷ್ಣ ಕೃಷ್ಣಯ್ಯಾ ಪ ದಂತಿವರದ ಭಕ್ತ ಚಿಂತಾಮಣಿಯೆ ಲಕ್ಷ್ಮೀ ಕಾಂತ ಸಕಲ ಜಗದಂತರಾತ್ಮಕ ದೇವ ಅ.ಪ. ಅಂಗಜಪಿತ ನಿನ್ನ ಅನುಪಮ ರೂಪವ ನಿತ್ಯ ನೋಡಿ ನಲಿಯುತ ತುಂಗಮಹಿಮ ನಿನ್ನ ಘನ ಕೃಪೆಯಿಂದ ಅಂತ- ರಂಗದ ಭಕ್ತ ನಾನೆಂದೆನಿಸಿರಲಾಗಿ ಮಂಗಳಾಂಗ ಮನೋಹರ ನಿನ್ನ ಸಂಗ ಬಿಟ್ಟಿರಲಾರೆನೋ ಸ್ವಾಮಿ ರಂಗ ಎನ್ನಂತರಂಗವರಿಯಯಾ ಇಂಗಿತಜ್ಞ ನೀನಲ್ಲವೇ ಕೃಷ್ಣ 1 ಇಂದಿರೇಶನೆ ನಿನ್ನ ಚರಿತೆಯ ಕೇಳಿ ಆ- ನಂದದ ಸವಿ ಕಂಡೆ ಪುಣ್ಯಾತ್ಮರಿಗೆ ಬೇರೆ ಒಂದರಲಭಿರುಚಿ ತೋರ್ಪುದೆ ಗುಣಗಣ ಸಿಂಧು ನಿನ್ನನು ಬಿಟ್ಟೇನೊಂದ ನಾನೊಲ್ಲೆನು ಸಿಂಧು ಮಂದಿರ ಸುಂದರ ನಿನ್ನ ಪೊಂದಿಕೊಂಡಿಹನಲ್ಲವೇ ಕೃಷ್ಣ ತಂದೆ ಕೈ ಬಿಡಬೇಡವೊ ಎಳ- ಗಂದಿಯೆಂಬುದ ನೆನೆದು ಪಾಲಿಸೊ 2 ದೋಷ ರಹಿತ ಯಾದವೇಶ ಭಕ್ತರ ಪೋಷ ಶ್ರೀಶ ಕರಿಗಿರೀಶ ಸಕಲ ಲೋಕೇಶ ಪಾದ ಭೂಸುರ ಪ್ರಿಯ ಎನ್ನ ದೋಷಗಳೆಣಿಸದೆ ನೀ ಸಲಹಲಿ ಬೇಕೊ ವಾಸುದೇವ ಪರಾತ್ಪರ ಕೃಷ್ಣ ಕ್ಲೇಶ ಪರಿಹರನಲ್ಲವೆ ಸ್ವಾಮಿ ದಾಸ ಜನರಭೀಷ್ಟದಾಯಕ ನಾ ಶರಣು ಹೊಕ್ಕಿಹೆನು ರಕ್ಷಿಸು 3
--------------
ವರಾವಾಣಿರಾಮರಾಯದಾಸರು
ದಾತ ನೀನೆ ಸ್ವಾಮಿ ಶ್ರೀಗುರುನಾಥ ವರ್ಮ ತೋರಿಕೊಡುವ ನಿಮ್ಮ ಧರ್ಮಗುಣ ಪ್ರಖ್ಯಾತ ಧ್ರುವ ಧರೆಯೊಳು ಸರಿಯಗಾಣೆ ಗುರುಧರ್ಮದಿಂದಧಿಕ ಕರುಣಿಸಿ ಆನಂದದಿಂದ ತೋರುತಿಹ್ಯ ಬ್ರಹ್ಮಸುಖ ವರಮುನಿಗಳ ಪ್ರಿಯ ಶರಣಜನಪಾಲಕ ಪರಮ ಸುಪಥದೋರಿ ಹೊರೆವ ಪೂರ್ಣತಾರಕ 1 ಬಡವನಾಧಾರಿ ನೀನು ಒಡಿಯನಹುದೊ ನಿಶ್ಚಯ ಕೊಡುವ ಭಕ್ತಿ ಮುಕ್ತಿದಾತ ದೃಢಭಕ್ತರಾಶ್ರಯ ಒಡಲ ಹೊಕ್ಕಿಹೆ ನಿಮ್ಮ ಕಡೆಯಗಾಣಿಸೊ ನಮ್ಮಯ್ಯ ಪಿಡಿದು ನೀ ಎನ್ನ ಕೈಯ ಕೊಡು ತೋರಿ ನಿಮ್ಮ ಸೊಹ್ಯ 2 ಪೊಡವಿಯೊಳು ಕ್ಷಮೆ ಎನಗೆ ಕೊಡು ಕರುಣಾಕಟಾಕ್ಷ ನೋಡಿ ನಿಮ್ಮ ದಯದಿಂದ ನೀಡೊ ನಿಜ ಸುಭಿಕ್ಷ ಬಿಡದೆ ಎಂದೆಂದು ನೀನು ಮಾಡೊ ಸಂರಕ್ಷ ಮೂಢ ಮಹಿಪತಿಗಿನ್ನು ಪೂರಿಸೊ ಮನದಪೇಕ್ಷ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಧ್ಯಾನ ಮೌನಗಳೆಂಬ ಜ್ಞಾನಸಾಧನಗಳನು| ಏನು ಅರಿಯದತಿ ದೀನನಾಭವಕಂಜಿ| ನಿನ್ನನೇ ಮೊರೆಯಹೋಕ್ಕಿಹನೋ|| ನಿನ್ನ ನಂಬಿದ್ದವರ ಘನ್ನಭಯ ಹರಿವೆಂದು| ನಿನ್ನನೇ ಮೊರೆಯಹೊಕ್ಕಿಹೆನೋ|| ಜಲದೊಳಗೆ ಎದ್ದೆನ್ನ ಪಾಲೊಳಗೆದ್ದೆನ್ನ| ತಿಳಿದಂತೆ ಮಾಡೋ ನೀ ಮಹಿಪತಿಸುತ ಪ್ರಾಣ|| ನಿನ್ನನೇ ಮೊರೆಯ ಹೊಕ್ಕಿಹೆನೋ
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀನಹುದೋ ಘನ ಮಹಿಮ ಮುನಿಜನರೊಡಿಯ ಪೂರ್ಣ ದೀನದಯಾಳು ನೀನೆ ಹರಿಯೆ 1 ಪತಿತಪಾವನನೆಂದು ಶ್ರುತಿ ಸಾರುವರು ಕೇಳಿ ಅತಿ ಹರುಷದಲಿ ಬಂದೆನೊ ಹರಿಯೆ 2 ಮತಿ ಹೀನನವಗುಣವ ಕ್ಷಿತಿಯೊಳು ನೀ ನೋಡದೆ ಪಥವಗೊಳಿಸುವದು ಎನಗೆ ಹರಿಯೆ 3 ಮರೆಯ ಹೊಕ್ಕಿಹೆ ನಿಮ್ಮ ಚರಣಕಮಲಕೆ ಪೂರ್ಣ ಕರುಣದ ಅಭಯ ತೋರೊ ಎನಗೆ ಹರಿಯೆ 4 ಅರಿಯೆ ನಾ ನಿಮ್ಮ ವಿನಾ ಬ್ಯಾರೆ ಇನ್ನೊಂದು ಪಥ ಶಿರವ ನಮಿಸಿಹೆನೊ ನಿಮಗೆ ಹರಿಯೆ 5 ಶರಣಾಗತರ ಹೊರೆವ ಬಿರದು ನಿಮ್ಮದು ಪೂರ್ಣ ಸಾರುವದು ತಿಳಿದುಕೊಳ್ಳೊ ಹರಿಯೆ 6 ಬಿಡಲರಿಯೆ ನಾ ನಿಮ್ಮ ಪಿಡಿದು ಶ್ರೀಪಾದವನು ನೋಡಿ ದಯಮಾಡೊ ಎನಗೆ ಹರಿಯೆ 7 ಬ್ಯಾರೆ ಗತಿ ಕಾಣೆ ನಿಮ್ಮ ಚರಣಕಮಲದಾಣೆ ಸಿರಿ ಸಕಲಪದವು ನೀನೆ ಹರಿಯೆ 8 ಭಿನ್ನವಿಲ್ಲದೆ ನೋಡಿ ಚೆನ್ನಾಗಿ ಮಹಿಪತಿಯ ಧನ್ಯಗೈಸೊ ಪ್ರಾಣವ ಹರಿಯೆ 9
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶ್ರೀ ಗುರುರಾಯ ನಿಮ್ಮ ಕರುಣ ಭಯಕೃದ್ಭಯ ನಾಶನ ಧ್ರುವ ಕಂದ ಪ್ರಹ್ಲಾದಗಾಗಿ ಸಂದು ವಿಗ್ರಹದೊಳು ಬಂದು ರಕ್ಷಿಸಿದೆ ಪ್ರಾಣ ಚೆಂದವಾಗಿ ನೀ 1 ದ್ರೌಪದಿಯ ಅಭಿಮಾನ ಕೃಪೆಯಿಂದ ನೀ ಪೂರ್ಣ ಉಪಾಯದಲಿ ಕಾಯಿದೆ ಅಪಾರ ಮಹಿಮೆ 2 ಕರಿಯ ಮೊರೆಯ ಕೇಳಿ ಕರಿಯ ಬಿಡಿಸಿದೆಂದು ಮೊರೆಯ ಹೊಕ್ಕೆ ನಾ ನಿಮಗೆ ಹರಿ ಹರಿಯೆಂದು 3 ಸ್ಮರಿಸಿದಾಕ್ಷಣ ಬಂದು ಕರುಣದಿಂದ ನೆರೆದೆ ಪರಿ ಪರಿಯಿಂದ ಹೊರೆದೆ ವರಮುನಿಗಳ 4 ಶರಣು ಹೊಕ್ಕಿಹೆ ನಿಮ್ಮ ತರಳ ಮಹಿಪತಿ ಪ್ರಾಣ ಹೊರೆದು ರಕ್ಷಿಸೊ ಎನ್ನ ಪರಮಪಾವನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಲಹು ಸಲಹು ಸಲಿಲಜನಯನಾ|ಎನ್ನಾ| ಇಳೆಯೊಳು ಮೊರೆಯ ಹೊಕ್ಕಿಹೆ ನಿನ್ನಾ ಪ ಕರುಣ ನೋಟಗಳಿಂದಲಿ ನೋಡಿ|ಸರ್ವ| ಭಾರ ಒಪ್ಪಿಸಿಕೊಂಡು ನಿಜ ನೀಡಿ| ದಾರಿದೋರುವ ಸುಮತಿಯ ನಿಲಿಸಿ|ಅತಿ| ತರಳನೆನುತ ಭಯವನೆ ಹರಿಸಿ 1 ಹರಿದುರಿತದ ಬಂಧನ ಬಲಿಯಾ|ತವ| ಚರಣದ ಭಕುತಿ ಕೊಡಲಿ ದೊರಿಯಾ| ಹರಿಗುಡದರಸನ ದಶಮುಖದಾ ಸಂಗ| ಲಿರಿಸು ದಾಸರ ಸಗಟವನೊದೆದಾ2 ತ್ರಿಪುಟಿಯ ಸಂಗ ಬಿಡಿಸು ಮನದಿ|ಎನ್ನ| ವಿಪುಳ ವಾಜಿಯೊಳಿರಿಸು ಧೃಡದಿ ಕೃಪೆಯಲಿ ಮಹಿಪತಿ ಸುತ ಪ್ರಾಣಾ|ಎನ್ನ| ಅಪರಾಧ ಕ್ಷಮಿಸಿ ಹೊರಿಯೊ ಪೂರ್ಣಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಲಹೊ ಶ್ರೀನಿವಾಸ-ಸುದ್ಗುಣ-ನಿಲಯವೆಂಕಟೇಶ ಜಲಜಾಂಬಕ ನೀನಲಸದೆ ಯೆನ್ನನು ಪ ವಾತವುಮಿತಿಮೀರಿ ಪಿತ್ತವ್ರಾತದೊಡನೆ ಸೇರಿ ಹೆಚ್ಚಿದ ಹೇತುವನೋಡಿ1 ಶ್ವಾಸನಿರೋಧದಲಿ ಸೇರಿದ-ಕಾಸಗಳುದರದಲಿ ಹೆಚ್ಚಿ ಬಲು ಘಾಸಿಪಡಿಸುತಿದೆ 2 ಕಾಯದ ಬಲವೆಲ್ಲಾ-ಕದಲುತ-ಮಾಯವಾದವಲ್ಲ ದಾಯತಪ್ಪಿ ದುರ್ವಾಯುವಿಂದ ತಲೆನೋಯುತ ದೇಹದೊಳಾಯಸ ಹೆಚ್ಚಿತು 3 ನಿದ್ರೆ ಬಾರದಯ್ಯಾ-ನಿಶಿಯೊಳ-ಗೆದ್ದಿರಬೇಕಯ್ಯಾ ಬಿದ್ದಾದ್ದಾಡಿಸುತಿದೆ 4 ಅನ್ನವರೊಚಕವು ಆಪ್ತರೊಳನ್ಯತೆಗೊಚರವು ಮುನ್ನವೈದ್ಯರುಗಳನ್ನು ಕಾಣೆ ನೀ ಕಣ್ಣತೆರದುನೊಡೆನ್ನ ಕಟಾಕ್ಷದಿ5 ರೋಗವುಘನವಯ್ಯಾ-ರೋದನೆ-ಯಾಗಿಹುದೆನಗಯ್ಯಾ ನೀನೇ ಗತಿಯೆಂದಿಗು 6 ಪರಮ ಪುರುಷ ನಿನ್ನ-ಚರಣವ ಮರಹೊಕ್ಕಿಹೆಮುನ್ನ ವರದ ವಿಠಲ ದೊರೆ ವರದಯಾನಿಧೇ 7
--------------
ಸರಗೂರು ವೆಂಕಟವರದಾರ್ಯರು
ಸಲಹೋ ಶ್ರೀನಿವಾಸ ಸದ್ಗುಣನಿಲಯ ವೆಂಕಟೇಶ ಪ ಜಲಜಾಂಬ ನೀನಲಸದೆ ಎನ್ನನು ಅ.ಪ ವಾತವು ಮಿತಿಮೀರಿ ಪಿತ್ತವ್ರಾತದೊಡನೆ ಸೇರಿ ಘಾತವು ಹೆಚ್ಚಿದ ಸೇರುವ ನೋಡಿ 1 ಶ್ವಾಸ ನಿರೋಧದಲಿ ಸೇರಿದ ಕಾಸುಗಳುದರದಲಿ ಕೇಶರಂಧ್ರವಕಾಶದೊಳೂಧ್ರ್ವ ಬಲು ಶ್ವಾಸ ಹೆಚ್ಚಿ ಘಾಸಿಪಡಿಸುತಿದೆ 2 ಕಾಯದಬಲವೆಲ್ಲಾ ಕದಲುತ ಮಾಯವಾದವಲ್ಲ ನೋಯುತ ದೇಹದೊಳಾಯಾಸ ಹೆಚ್ಚಿತು 3 ನಿದ್ರೆಬಾರದಯ್ಯ ನಿಶೆಯೊಳಗೆದ್ದಿರಬೇಕಯ್ಯಾ ಗುದ್ದಿಕೊಂಡು ಬಿದ್ದೊದ್ದಾಡಿಸುತಿದೆ4 ಅನ್ನವರೋಚಕವು ಅಪ್ತರೊಳನ್ಯತೆಗೋಚರವು ಕಾಣಿ ಕಣ್ಣತೆರೆದು ನೋಡೆನ್ನ ಕಟಾಕ್ಷದಿ5 ರೋಗವು ಘನವಯ್ಯಾರೋದನೆಯಾಗಿಹುದೆನಗಯ್ಯಾ ಭವ ರೋಗ ವೈದ್ಯ ನೀನೇಗತಿಯೆಂದಿಗು 6 ಪರಮಪುರುಷ ನಿನ್ನ ಚರಣವ ಮೆರೆಹೊಕ್ಕಿಹೆ ಮುನ್ನ ವರದವಿಠಲದೊರೆ ವರದದಯಾನಿಧೆ7
--------------
ವೆಂಕಟವರದಾರ್ಯರು