ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ ವೇಳೆಯಲಿ ಸಲಹದಿರುವರೆಯನ್ನ ಶ್ರಿ ವತ್ಸಲಾಂಛನ ಶ್ರಿತಕಲ್ಪತರು ಹರಿ ಪ ರತಿ ರಮಣಜನಕ ಭಾರತೀರಮಣ ಸನ್ನುತನೆ ದಿತಿ ತನಯ ಸಂಹಾರಾಚ್ಯುತ ಮುಕುಂದ ಪತಿತಪಾವನ ಭವದುರಿತ ಪಾಶ ಪರಿಹರಿಸೆ- ನ್ನುತ ನಿನ್ನ ಸ್ತುತಿಸೆ ಸದ್ಗತಿ ತೋರಿ ಗೋವಿಂದ 1 ಅಕಲಂಕ ಚರಿತ ತಾರಕರೂಪ ಸರ್ವೇಶ ಸಕಲಲೋಕ ಶರಣ್ಯ ಪ್ರಕಟ ಮಹಿಮಾ ವಿಕಸಿತಾಂಬುಜ ನೇತ್ರ ಪ್ರಕಟದಾನವ ಜೈತ್ರ2 ಮೊರೆ ಹೊಕ್ಕವರನು ಕಾಯ್ವ ಬಿರುದು ನಿನ್ನದು ಕೃಪಾ ಕರ ಗರಡಗಮನ ಕರಿವರದ ಶೌರಿ ಧರಣಿಧರ `ವರಹೆನ್ನೆ ಪುರನಿಲಯ’ ಶ್ರೀಮ ನೃಹರಿ ಪರಮ ಪುರುಷ ಶಿರಿಯರಸ ಹರುಷದಲಿ 3
--------------
ಹೆನ್ನೆರಂಗದಾಸರು
ಉಗಾಭೋಗ ಪರಿಪರಿ ದೇಹ ಧರಿಸಿ ನರ ಜನ್ಮದಲಿ ಬಂದು ಕರಕರೆ ಪಡುತಲಿ ಇರುವ ಮಾನವರೊಳು ಅರಿತು ಸಾತ್ವಿಕರನು ಕರದು ಬುದ್ಧಿಯ ಪೇಳೆ ಹರಿಯ ಪಾದವ ತೋರ್ವ ಗುರುವು ಒಬ್ಬರು ಬೇಕು ಪರಮಪ್ರಿಯರು ಇವರು ಅರಿವರು ಸಾತ್ವಿಕರ ಕರದು ಉಪದೇಶವಿತ್ತು ಉದ್ಧಾರ ಮಾಡುವರು ಚರಿತೆಯ ವರ್ಣಿಸಲು ನರರಿಗೆ ಸಾಧ್ಯವಲ್ಲ ನರಹರಿಯೆ ಬಲ್ಲ ಉರಗಾಖ್ಯರ ಮಹಿಮೆ ವರಭಕ್ತರಾಗಿ ಹರಿಗೆ ಶರಣು ಹೊಕ್ಕವರನು ಕರುಣೆಯಿಂ ಸ್ವರೂಪವರಿತು ಉದ್ಧರಿಪರು ಪರತರ ಗೋಪಾಲಕೃಷ್ಣವಿಠ್ಠಲನ ಚರಣವ ತೋರುವರು ವರ ತಂದೆ ಮುದ್ದುಮೋಹನರು
--------------
ಅಂಬಾಬಾಯಿ