ಒಟ್ಟು 5 ಕಡೆಗಳಲ್ಲಿ , 1 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಲ್ಲಿ ಇಲ್ಲಿ ಮೊಸರನು ಚೆಲ್ಲಿ ಮೆಲ್ಲನೆ ಬಂದವ ಎಲ್ಲಿಹನಮ್ಮ ಪ ಬಲ್ಲಿದರಲ್ಲಿ ಬಲ್ಲಿದನಂತೆ ಇಲ್ಲಿಗೆ ಬಂದವ ಎಲ್ಲಿಹನಮ್ಮ ಅ.ಪ ಗೆಜ್ಜೆ ಪಾಡಗ ಕಡಗ | ಝಣ ಝಣ ಭಜ್ಜರ ರವವನು ಬೀರುವನಮ್ಮ ಸಜ್ಜನು ಬಲ್ಲವ ಅವನಮ್ಮ 1 ಹೊಂಗೊಳಲೂದುತ ಓಡುವನಮ್ಮ ಮಾಂಗಿರಿರಂಗನೆ | ಅವನೆನ್ನುವರಮ್ಮ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಎತ್ತಣದನಿಯಿದು ಎತ್ತಣ ಮಧುರವ ಚಿತ್ತಾಕರ್ಷಕ ಬಾನುಲಿಯೇ ಪ ಮತ್ತ ಭೃಂಗಾಳಿಯ ಝೇಂಕೃತಿ ಶ್ರುತಿಯು ಸುತ್ತ ಮಯೂರದ ನಾಟ್ಯದ ನಲವೋ ಅ.ಪ ಏಣಲೋಚನೆಯರ ಕಾಂಚನ ಕಿರುಗೆಜ್ಜೆ ವೀಣಾನಾದವ ಅಣಕಿಪುದು ತಾಣವದೆಲ್ಲಿಯೋ ಕಾಣಿರೆ ಸಖಿಯರೇ ವೇಣು ಗೋಪಾಲನ ನಾಟ್ಯವಿದಲ್ತೇ 1 ಅಲ್ಲಿ ನೋಡೇ ತಂಗಿ ಬಾನೆಡೆಯಿಂದಲಿ ಮಲ್ಲಿಗೆ ಪೂಮಳೆ ಸುರಿಯುತಿದೆ ನಲ್ಲೆಯರಿಂಚರ ಸರಿಗಮಪದನಿಯು ಎಲ್ಲ ರಾಗಗಳಲಿ ನಲಿಯುತಲಿಹುದು 2 ಅಂಗನೆಯರೆ ನಮ್ಮ ಗೆಜ್ಜೆಯ ಝಣರವ ಮಂಗಳಗಾನಕೆ ಇಂಬಿರಲಿ ಹೊಂಗೊಳಲೂದುವ ಚಿನ್ಮಯ ಮಾಂಗಿರಿ ರಂಗನ ದರ್ಶನ ಮಾಡುವ ಬನ್ನಿ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಝಣ ಝಣ ಝಣರೆಂದು ಕುಣಿವುದ ನೋಡೆ ಫಣಿಪತಿ ಶಯನನು ಕಾಣುವ ನೋಡೆ |ನಾಡೆ ಪ ಕಿಣಿ ಕಿಣಿ ಕಿಂಕಿಣಿ ಕಿಣಿರವ ಕೇಳೇ ಮಣಿ ಮಣಿದಾತನ ನಾಮವ ಪಾಡೇ ಅ.ಪ ನೋಡುವ ನಲಿಯುವ ಹೊಂಗೊಳಲೂದುವ ಪಾಡುವ ಕರೆಯುವ ನಗಿಸುವ ನಗುವಾ ಮಾಡೆ ವಂದನೆಗಳ ಸಂತಸಗೊಳುವಾ ಬೇಡುವರಿಷ್ಟವ ಕರುಣದಿ ಕೊಡುವಾ 1 ಬೃಂದಾವನದಾನಂದದ ನೋಟಾ ಮಂದಗಮನೆಯರ ನಲವಿನ ಕೂಟಾ ಇಂದಿರೆಯರಸ ಮಾಂಗಿರಿಪತಿಯಾಟಾ ಸಂದಪುದೆಮಗೆ ಬಾ ಕೃಷ್ಣನೊಳಾಟಾ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಂಗ ಬಾರೋ ರಂಗ ಬಾರೋ ರಂಗ ಬಾರೋ ಶ್ರೀರಂಗ ಬಾರೋ ಪ ತುಂಗ ಕೃಪಾಂಬಿಕ ಮಂಗಳದಾಯಕ ಅ.ಪ ಮೆಲ್ಲಮೆಲ್ಲನೆ ಬಾ ಮೆಲ್ಲಡಿಯಿಡು ಬಾ ಮೆಲ್ಲುಲಿಯುಲಿ ಬಾ ಮೆಲ್ಲು ಬೆಣ್ಣೆಯ ಬಾ ಸಲ್ಲಲಿತಾಂಗ ಬಾ ಪಲ್ಲವಾಧರ ಬಾ ಫುಲ್ಲಲೋಚನ ಬಾ ಚೆಲ್ವಮೂರ್ತಿಯೆ ಬಾ1 ಗಂಗೆಯ ಜನಕ ಬಾ ಅಂಗಜಪಿತನೆ ಬಾ ಮೂರ್ತಿ ಬಾ ಹೊಂಗೊಳಲೂದು ಬಾ ಸಂಗೀತಲೋಲ ಬಾ ಮಾಂಗಿರಿಯರಸ ಬಾ ಬಾಬಾರೊಬಾರೋ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಹೊಂಗೊಳಲೂದುತ ಬರುವ ರಂಗ ಮಂಗಳ ಗಾನಕೆ ನಲಿವ ಪ ಅಂಗನೆಯರ ಕೂಡಾಡುತೆ ಕುಣಿವ ರಂಗನ ಪಾದಕೆ ಮಣಿವ ಅ.ಪ ಕಿರುನಗೆ ನಸುನಗೆ ನಗುವ ಮರಕತಹಾರದಿ ಹೊಳೆವ ಸ್ಮರವರನಂದವ ಹಳಿವ ಕರುಣವ ಬೀರುತ ಒಲಿವ 1 ಗಾನದಿ ಮನವನು ಸೆಳೆವ ಧ್ಯಾನಕೆ ತನುಮನ ತೆರುವ ಸನ್ನುತ ಪದವಿಯ ಕೊಡುವ ಮಾಂಗಿರಿ ರಂಗಗೆ ಮಣಿವ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್