ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಮ್ಮ ನೀ ಕರೆತಾರೆ ಅರವಿಂದನಯನ ಒಮ್ಯಾದರು ಬಾರ ನಮ್ಮನೆಗೆ ಬ್ರಹ್ಮನ ಪಡೆದನಗಮ್ಯಮಹಿಮನೆ ತಾ ಕಾಮ್ಯಾರ್ಥ ಕರೆವ ಶ್ರೀ ರಮ್ಮೆರಮಣನ ಪ ಘನ ಉದಕದಿ ನೋಡೆ ಗ್ರಂಥಚೋರನ ಕೊಂದು ವೇದವ ತಂದಜಗಿತ್ತು ಬರುವೊನೊ ಪಯಾಬ್ಧಿಯೊಳು ಸುಧೆ ಸುರಜನರಿಗೆ ನೀಡಿ ಮೇರುಮಂದರದಲಡಗಿಕೊಂಡಿಹನೊ 1 ಭೂಮಿ ಬಗಿದು ನೋಡ್ಹೇಮಾಕ್ಷನಂತಕನಾಗಿ ಕೋಡಿಂದಲಾ ಧರೆನೆತ್ತಿ ಬರುವೊನೊ ಉಗುರಿನಿಂದಲಿ ಉರಬಗಿದು ಕರುಳನ್ಹಾಕಿ ಮೃಗರೂಪ ಧರಿಸಿ ಕಂಬದಲಿ ಬರುವೊನೊ 2 ಗೊತ್ತನ್ಹೇಳುವೆ ಈ ಜಗತ್ತು ಸಾಲದಲ್ಹೋಗಿ ಒತ್ತಿ ಬಲಿಯ ಬಾಗಿಲ್ಹತ್ತಿಲಿರುವೊನೊ ಹೈಹಯ ಮೊದಲಾದ ಸರುವ ರಾಜರನೆಲ್ಲ ಗೆಲಿದು ಕಾಮಧೇನು ಕೊಂಡು ಬರುವನೊ3 ಒಬ್ಬ ಸತಿಯನಾಳಲಾರದೆ ಗರ್ಭಿಣಿಯ ದಬ್ಬಿ ಕಾನಡಿಗೊಬ್ಬೆ (ಕಾಡಿನಲ್ಲೊಬ್ಬೆ?) ಲ್ಲಿರುವೊನೊ ತೋಷ್ಟಪುತ್ರಿಯರು ಮೇಲಷ್ಟಭಾರ್ಯರು ಶತಪತ್ನೇರನಾಳದಿನ್ನೆತ್ತÀ ಪೋಗಿಹನೊ 4 ಬತ್ತಲೆ ತಿರುಗುವನಿತ್ತ ಬರುವನ್ಹ್ಯಾಗೆ ವಸ್ತ್ರವ ಕೊಟ್ಟು ನಮ್ಮ್ಹತ್ತಿಲೆ ಹರಿಯ ಖಡ್ಗ ಪಿಡಿದು ಕಲಿಗಳ ಕೊಲ್ಲಲ್ಹೋಗುವ ಬಿದ್ದು ಪಾದಾರವಿಂದಕ್ಕೆರಗಿ ಭೀಮೇಶಕೃಷ್ಣ(ನ) 5
--------------
ಹರಪನಹಳ್ಳಿಭೀಮವ್ವ
ತರತಮದಿ ಶರಣು ಮಾಡುವೆ ನಿಮಗೆ ಕರಣಶುದ್ಧಿಯಲ್ಲಿ ಕರುಣ ಮಾಡಿ ಎನ್ನ ಪರಿಪಾಲಿಸಬೇಕು ನಿರುತ ಬಿಡದೆ ಮನ ಸಿರಿಹರಿ ಚರಣಕ್ಕೆ ಎರಗುವಂತೆ ವರಭಕುತಿಯಲ್ಲಿ ಪ ಪರಮೇಷ್ಠಿ ವಾಯು ಸರಸ್ವತಿ ಭಾರತೀ ಉರಗ ಈಶ ಹರಿ ಸತಿಯರು ಮೂ ರೆರಡು ಜನರು ಆ ತರುವಾಯ ಸೌಪರ್ಣಿ ಸಿರಿ ಗುರು ದಕ್ಷನೆ ಶಚಿ ಮರುತ ಪ್ರವಾಹ ಮೂ ವರು ಸನಕಾದ್ಯರು ದುರಿತಶಾಸನ ಶಶಿ ತರಣಿ ಶತರೂಪ ವರುಣ ನಾರದರ 1 ಮುನಿಗಳ ಶ್ರೇಷ್ಠ ಭೃಗು ಅನಲ ಪ್ರಸೂತಗಾಧಿ ತನುಜ ವಾರಿಜಾಜನ್ನತನಯರು ವೈವಸ್ವತ ಸೂರ್ಯ ದನು ಪ್ರವಾಹವೆಂಬ ಅನಿಲನ್ನ ತಳೋದರಿ ಅನಿಲದೇವಜ ಅಶ್ವಿನಿ ದೇವತೆಗಳು ಅನಳಾಕ್ಷಸುತ ಧನಪತಿ ಪ್ರಹ್ಲಾದ ಗುಣಿಸುವೆ ವಸು ಏ ಳನು ದಶರುದ್ರರು ಇನಿತರೊಳಗೆ ಒಬ್ಬನ ಬಿಟ್ಟನು ದಿನ 2 ದಶ ವಿಶ್ವದೇವತರು ಸ್ವಶನರೊಳಗೆಗೀರ್ವರ ರಸದ್ಯುನವಕೋಟಿ ತ್ರಿದಶರೂಪ ಪಿತ್ರರೂ ಎಸವ ಸೋಮ ಪುನರ್ವಾಪಸರಿಪಶತಸ್ಥರು ನಸುನಗೆ ಕರ್ಮಜ ಋಷಿ ಈರ್ವರು ಮನು ಕುಶಲ ಸಪ್ತ್ತರಿಗೆ ತುತಿಸೆ ಕಾಲಕಾಲದಿ 3 ಮಾಂಧಾತ ಬಲಿ ಶಶಿಬಿಂದುವೆ ಪ್ರಿಯವ್ರತ ಪರೀಕ್ಷಿತ ನಂದ ಕಕುಸ್ಥ ಗಯ ಕುಂದದೆ ಯದುಕುಲದಿಂದ ಬಂದ ಹೈಹಯನು ಚಂದ್ರನ ಮಡದಿ ಏಳೊಂದನೆ ಸೂರ್ಯನು ಮಂದಹಾಸಾಂಬುಜ ಬಾಂಧವನಸತಿ ಕಲದರ್ಪನಸೂಸೆ ವೃಂದಾರಕರಿಗೆ 4 ಸದಮಲ ಸ್ವಾಹಾದೇವಿ ಬುಧಾ ಉಷಾದೇವಿ ಶನಿ ಮುದದಿಂದ ಪುಷ್ಕರ ಸಹೃದಯ ತುಂಬರರಿಂದ ಮೊದಲಾಗಿ ನೂರುಮಂದಿ ತ್ರಿದಶ ಗಂಧರ್ವರು ಚದುರೆ ಊರ್ವಸಿ ರಂಭೆ ಅದಿತಿ ಕಶ್ಯಪದಿತಿ ಹದಿನಾರು ಸಾವಿರ ಬುಧನ ಮಕ್ಕಳು ತಪೋನಿಧಿಗಳು ಎಂಭತ್ತು ತದುಪರಿ ಅಜಾನಜ ತ್ರಿದಶರು ಓಜಸ್ತರೆದರಾಗಿ ನಾನಿಂದು 5 ಹರಿಭಕ್ತರಾದ ಅಪ್ಸರ ಸ್ತ್ರೀಯರು ಕೆಲಕೆಲವು ಮರಳೆ ಚಿರಾಖ್ಯನಾಮದಿರುತಿಪ್ಪ ಪಿತೃಗಳು ಪರಿಪರಿ ನೂರುಕೋಟಿ ಪರಮಋಷಿಗಳಿಗೆ ಸುರ ಗಂಧರ್ವರ ವಿಸ್ತರ ಮನುಜ ಗಂಧರ್ವ ಧರಿಣಿಜಾಕವಿ ಮೇಲರಿದು ಜಯಂತಗೆ ಕರ ಮುಗಿವೆ ಕ್ಷಿತಿಪರನು ಕೊಂಡಾಡುತ ಇರುಳು ಹಗಲು ಉತ್ತಮರ ಮನುಜರ ಪಾಡಿ ನಿರುತ ಜಂಗಮ ಸ್ಥಾವರಗಳ ನೋಡುತ 6 ಭುಜಗಶಯನನಿಂದ ಸೃಜಿಸಿದ್ದ ಸರ್ವರಿಗೆ ನಿಜವಾಗಿ ಶಿರವಾಗಿ ಭಜಿಸುವೆ ಚನ್ನಾಗಿ ತ್ರಿಜಗದೊಳಗೆ ಎನ್ನ ರಜ ತಾಮಸ ಗುಣದ ವೃಜವೆ ಓಡಿಸಿ ನಿತ್ಯಸುಜನ ಮಾರ್ಗವ ತೋರಿ ರಜನಿ ಚರಾಂತಕ ವಿಜಯವಿಠ್ಠಲನ್ನ ಭಜಿಪೆನದಕೆ ನಿಮ್ಮ ನಿಜವ್ಯಾಪಾರದಿ ಸೃಜಿಸಿ ಕೊಡುತ ಧರ್ಮ ವೃಜಗಳೊದಗಿಸುತ್ತ ಕುಜನ ಮತದ ಮೇಲೆ ಧ್ವಜವೆತ್ತಿಸುವುದು 7
--------------
ವಿಜಯದಾಸ
ಬಂದು ನಿಲ್ಲೋ ಶ್ರೀಹರೇ-ಬಂದುನಿಲ್ಲೊ ಪ ಇಂದು ಹಿಂದು ನೀನೆಂದಿಗು ತಂದೆ ಗೋ- ವಿಂದ ಅನಿಮಿತ್ತಬಂಧು ಕಣ್ಣಮುಂದೆ ಅ.ಪ ಸ್ವಾಂಶದಿಂದ ಅಭಿವ್ಯಕ್ತಿಯಾದೆ ಪಂ- ಚಾಂಶತೋರಿ ಸರಸ ಜನನ ಮಾಡಿದೆ ಸ್ವಾಂಶನಾಗಿ ಅವತರಿಸಿ ಮೆರೆವ ಸ- ರ್ವಾಂಶದಿಂದಿಹ ತ್ರಿಂಶ ರೂಪನೇ 1 ಸ್ವಗತಭೇದವಿವರ್ಜಿತನೆನಿಸಿ ತ್ರಿಗುಣಮಯದಿ ಬ್ರಹ್ಮಾಂಡ ನಿರ್ಮಿಸಿ ಅಗಣಿತಮಹಿಮಾಧಾರನಾಗಿ ನಿಂದು ಮಿಗೆ ಶೋಭಿಸುವ ವಿರಾಟಮೂರುತಿಯೆ2 ಕಾರಣನೆನಿಸಿದ ಕರ್ಮನಿವೃತ್ತಿಗೆ ಸಾರವಾದ ಜ್ಞಾನಯೋಗ ಮಾರ್ಗವ ನಾರದಾದಿ ಮಹಾಮುನಿಗಳಿಗರುಹಿದ ನರನಾರಾಯಣ ಬದರಿ ಆಶ್ರಯನೇ 3 ಹಂಸಕಪಿಲ ದತ್ತಾತ್ರೇಯ ರೂಪನೆ ಹಂಸರಹಸ್ಯಗಳೆಲ್ಲವ ಪೇಳಿ ಸಂಶಯ ಬಿಡಿಸಿದೆ-ಜೀವಪರಮಾತ್ಮರ ಅಂಶಗಳರುಹಿದ ಹಂಸಮೂರುತಿಯೆ4 ಅಜಪಿತ ನೀ ಗಜರಾಜನ ಸಲಹಿದೆ ಭಜಿಸಿದ ವಾಲಖಿಲ್ಯರ ಕಾಯ್ದೆ ಅಜಹತ್ಯವು ವೃತ್ರವಧೆಯಿಂದ ಕಾಯ್ವ ಬಿ- ಡೌಜನ ಸಲಹಿದ ಗಜರಾಜ ವರದಾ5 ಪುರುಹೂತನ ಅಹಂಕಾರ ಖಂಡಿಸಿ ಕಿರುಬೆರಳಲಿ ಗೋವರ್ಧನಗಿರಿ ಎತ್ತಿ ಪರಿಪಾಲಿಸಿ ಗೋಬೃಂದವನೆಲ್ಲವ ಸುರರಿಂದ ಪೊಗಳಿಸಿಕೊಂಡೆ ಗೋವಿಂದ6 ಬುಧರರಿಯುಲು ಆ ವೇದ ವಿಭಾಗಿಸೆ ಉದಯಿಸಿ ಮುದದಿಂದ ಬದರಿಯ ಸದನದಿ ಬೋಧಿಸುತ್ತಲಿಹ ಬಾದರಾಯಣನೇ7 ಅಖಿಳಾಂಡಕೋಟಿಬ್ರಹ್ಮಾಂಡನಾಯಕ ವಿಕುಂಠಳೆಂಬೊ ಉದರದಿ ಜನಿಸಿ ಲಕುಮಿರೂಪಿಯಾದ ಸುಂದರಿಯ ಕೂಡ ಭೂ- ವೈಕುಂಠ ನಿರ್ಮಿಸಿದ ವೈಕುಂಠಮೂರುತಿಯೆ 8 ಸತ್ಯವ್ರತನೆಂಬೊ ಮನುವಿನುದ್ಧರಿಸಿ ಉತ್ತಮ ಔಷಧಿಗಳೆಲ್ಲವ ಸಲಹಿದೆ ದೈತ್ಯನಾದ ಉನ್ಮತ್ತನ ಕೊಂದು ಶ್ರುತಿಯ ತಂದಿತ್ತ ಮತ್ಸ್ಯಮೂರುತಿಯೆ 9 ಸುರಭಿನೆವನದಿ ಶರಧಿಮಥಿಸೆ ತಾ ಭರದಿ ಬೆನ್ನೊಳು ಧರಿಸಿಹೆ ಮಂದರ ಗಿರಿಧರನೆನಿಸಿದೆ ಕಮಠರೂಪನೆ 10 ಪ್ರಳಯ ಜಲಧಿಯೊಳು ಇಳೆಯನು ಕದ್ದಾ ಖಳಹಿರಣ್ಯನಾ ಶಿರವ ಚೆಂಡಾಡಿ ಜಲಧಿಯ ಶೋಧಿಸಿ ಇಳೆಯನು ತಂದು ಜಲಜಸಂಭವಗಿತ್ತ ಕ್ರೋಢರೂಪನೆ 11 ದುರುಳತನದಿ ತನ್ನ ತರಳನ ಬಾಧಿಪ ಹಿರಣ್ಯಕಶಿಪುವಿನ ಉದರವ ಬಗೆದು ಶರಣನಿಗಭಯವ ಕರುಣಿಸಿ ತೋರಿದ ಸರ್ವವ್ಯಾಪ್ತನೆಂದರುಹಿದ ನರಹರಿಯೇ12 ಬಲಿಯಿಂದಪಹೃತವಾದ ಸಾಮ್ರಾಜ್ಯವ ಸುಲಭದಿಂದಲಿ ಪುರಂದರಗಿತ್ತು ಸಲಹಿದೆ ಒಲಿದು ಬಲಿಯ ಭಕ್ತಿಗೆ ನೀ ಬಾ- ಗಿಲ ಕಾಯ್ದ ವಟು ವಾಮನನೆ 13 ದುರುಳತನದಿ ಆ ಹೈಹಯರೆಂಬ ನರಪರದುರ್ಮದ ಮರ್ದಿಸಲೋಸುಗ ನೃಪರ ಶಿರವನೆಲ್ಲ ತರಿದು ನಿಗ್ರಹಿಸಿದ ಭಾರ್ಗವ ಮೂರ್ತೇ 14 ಶರಧಿ ಬಂಧಿಸಿ ಸೇತುಕಟ್ಟಿ ಕಪಿ- ವೀರರೊಡನೆ ಆ ರಾವಣನಡಗಿಸಿ ಭೂ ಭಾರವನಿಳುಹಿಸಿ ಭೂಮಿಜೆಯನು ತಂದ ಅ- ಸುರ ಮರ್ದನ ದಾಶರಥಿ ರಾಘವ 15 ವಸುಮತಿಭಾರವನಿಳುಹಲೋಸುಗ ವಸುದೇವಸುತ ಶ್ರೀಕೃಷ್ಣನೆನುತಲಿ ಶಿಶುಪಾಲಾದಿಗಳಾಂತಕನೆನಿಸಿದ ಶಶಿಮುಖಿರುಕ್ಮಿಣಿ ಸಹಿತ ಶ್ರೀಕೃಷ್ಣ 16 ವೇದ ಕರ್ಮಗಳಿಗನರ್ಹರೆಲ್ಲರು ಸಾದರದಿಂದಲಿ ಅಧಮರೆಸಗುತಿರೆ ವೇದವಿರುದ್ದವಾದಗಳಿಂದಲೇ ಮೋಹವ ತೋರಿದೆ ಬುದ್ಧಸ್ವರೂಪನೆ17 ದುರುಳತನದಿ ಇಳೆಯಾಣ್ಮರುಗಳು ಕ್ರೂರತನದಿ ಪರಪೀಡಕರಾಗಿರೆ ಪರಿಹರಿಸಲು ಭೂಭಾರಕ್ಕಾಗಿ ಅವ- ತರಿಸಿ ಮೆರೆಯುವ ಕಲ್ಕಿರೂಪನೆ 18 ಏಕರೂಪ ಅನೇಕರೂಪನೆ ಏಕಮೇವ ನೀ ಪ್ರಕಟ ಮಾಡುವೆ ಪಿನಾಕಿ ಪ್ರಮುಖರು ಏಕದೇಶದಿ ಸಾಕಲ್ಯವ ತಿಳಿಯರೊ 19 ದೋಷದೂರ ಶೇಷಾಚಲವಾಸ ಪೋಷಿಸೊ ನಿನ್ನಯ ದಾಸಜನರ ಸರ್ವ ದೋಷಕಳೆದು ಮನೋಕಾಶದಲಿ ನಿಲ್ಲೊ ಶೇಷಗಿರೀಶ ಶ್ರೀ ವೆಂಕಟೇಶನೆ 20
--------------
ಉರಗಾದ್ರಿವಾಸವಿಠಲದಾಸರು
ವಿಷ್ಣುಶತಕ ಶಿರಿದೇವಿ ಹೃತ್ಕುಮುದ ಚಂದ್ರಮನೆ ಕರುಣಾರ್ಣವಾಗಣಿತ ಸದ್ಗುಣನೇ ಭಂಜನ ಮುರಾಂತಕನೇ ಪರಮಾತ್ಮ ಪಾಲಿಸು ಪರಾತ್ಪರನೇ 1 ಕಮಲಾಸನಾದ್ರಿಜೆ ಮನೋಹರ ಮು ಖ್ಯಮರಾಳಿಯಂ ಭಕುತಿಯಿಂ ಬಲಗೊಂಡು ಮ- ಹಾತ್ಮರಾದ ಗುರುಪಾದಕೆ ನಾಂ ನಮಿಸೀ ಪ್ರಬಂಧವನು ಹೇಳುತಿಹೇಂ2 ನೂರಾದ ಪದ್ಯಗಳೊಳಾಂ ಸಕಲಂ ಧಾರಾಳವಾಗಿ ತವ ಸನ್ನಿದಿಯೋಳ್ ಸಾರಂಗಳಂ ಗ್ರಹಿಸಿ ಬಿನ್ನಯಿಪೇಂ ಶ್ರಿರಾಮನೀಂ ದಯದಿ ಲಾಲಿಸಿ ಕೇಳ್ 3 ಕವಿತಾ ಧುರೀಣತೆಯು ಬಂದುದು ನಿ_ ನವ ಯುಕ್ತಿ ಚತುರತೆಗಳೊಂದರಿಯೇಂ 4 ಜೀವಕ್ಕೆ ನೀನು ಮಿಗೆ ಚಿತ್ತದಿ ಶ್ರೀ ದೇವೀ ಮನೀಷದೊಳು ಬ್ರಹ್ಮನಿಹಂ ಯಾ ವಿಶ್ವನಾಥ ಸಹ ರುದ್ರ ಮನೋ ಭಾವಂಗಳಿಂಗೊಡೆಯನಾಗಿರುವಂ 5 ಸಲೆ ಹಮ್ಮಿಗಾ ತ್ರಿಪುರ ಸಂಹರನೇ ಉಳಿದಿಂದ್ರಿಯಗಳಿಗೆ ಜಿಷ್ಣುಮುಖರ್ ಒಳಗಿದ್ದು ಒಳ್ಳಿದನು ಕೆಟ್ಟುದನೂ ಬಲವಿತ್ತು ಮಾಡಿಸುವರೈ ಹರಿಯೆ 6 ಜಲಜಾತ್ಮಜಾಭಿಮತ ಬಂಧು ಪಥಂ ಗಳು ಮೂರು ಬಗೆಯು ನೋಡಿದರೆ 7 ಮಿಗೆ ಕರ್ಮಕರ್ಮವು ವಿಕರ್ಮಗಳೂ ಜಗದಲ್ಲಿ ಎಲ್ಲರಿಗು ಮೂಲವಿದೂ ತ್ರಿಗುಣ ಪ್ರಬದ್ಧರಹ ಜೀವಗಣಾ ಖಗರಾಜ ವಾಹನನೆ ಸಾಕ್ಷಿಯು ನೀಂ 8 ಸದಸದ್ವಿವೇಕಾವನು ಕಾಣದೆ ಸ ಚಿದಚಿದ್ವಿಲಕ್ಷಣನು ನೀನೆನದೇ ಮದಗರ್ವದಿಂದ ಮೆರೆದಾಂ ಕೆಡುವೇಂ 9 ಕುಹುಕಾತ್ಮರಾದವರ ಸಂಗದಿ ಬಂ- ದಿಹ ನೋವು ನಾನಕಟ ಬಣ್ಣಿಸೇಂ10 ಅಂತವರ್ಗವಾರ್ವರು ಶರೀರದೊಳಿ ದುರ್‍ವೃತ್ತಿ ಪುಟ್ಟಿಸುತ ಕೊಲ್ಲುತಿಹರ್ ಪರಮಾತ್ಮ ನಿನ್ನವರ ಸೇರಿರುವೇಂ 11 ಮಲಮೂತ್ರ ಕೂಪವಹ ದೇಹವಿದು ಜಲಗುಳ್ಳೆ ಎಂದರಿತಡಂ ಬರಿದೇ ಕಲುಷಾತ್ಮನಾದೆ ಕರಿರಾಜವರದಾ 12 ಹಸನಾಗಿ ತೋರುತಿಹ ದುರ್ವಿಷಯಂ ಬಿಸಿನೀರು ತುಂಬಿರುವ ಬಾವಿಯಿದುಂ ಕುಸುಮಾಸ್ತ್ರನೆಂಬ ಕಡುಗಳ್ಳನು ತಾ ನೆಸಗೀ ಪ್ರವಾಹದಲಿ ನೂಕುತಿಹಂ13 ಪಾದ ಪದ್ಮಂಗಳ ನಂಬಿದೆ ವೆಂ- ಮ್ಮವಮಾನ ಮಾನಗಳು ನಿನ್ನದುದೆಂ- ದ್ವ್ಯವಸಾಯವಂತರೆ ಮಹಾತ್ಮಕರೂ 14 ಜನುಮಗಳನೆತ್ತುತಲಿ ಜೀವರು ನಿಂ ನನು ಕಾಂಬ ಯೋಚನೆ ತಿರಸ್ಕರಿಸೀ ಘನ ಕಾಮಭೋಗಗಳಪೇಕ್ಷಿಸಿತಾಂ ಧನಕಾಗಿ ದುರ್ಜನರ ಸೇವಿಸುವರು 15 ಹಿತದಿಂದ ಎಲ್ಲರಿಗೆ ನೀನೆ ಇದಂ ಮತಿಹೀನರಾದವರು ಬಾಹ್ಯರ ನಂ- ಬುತ ದುಃಖದಿಂದಲವಿವೇಕರಹರ್ 16 ಗುಣಶೂನ್ಯ ನೀನೆನುತ ಕೊಂಚ ಜನಂ ಗಣಿಸಲ್ಕಸಾಧ್ಯವಹ ವಾದಗಳಿಂ ಘನ ತರ್ಕದಿಂದ ಅನುವಾದಿಸಿ ದುರ್ ಜನ ಮುಖ್ಯರೆನಿಸುತಿಹರ್ ಭುವಿಯೊಳ್ 17 ಅನುಮಾನವೇ ತಮಗೆ ಮುಖ್ಯವೆನು- ತನುಸಾರಿ ರಾಜಸದಿ ತಾಂ ಮುಳುಗೀ ವನಜಾಕ್ಷ ಕೋರಿಕೆಗಳಿಂ ಭಜಿಪರ್ 18 ಉದರ ಪ್ರಯುಕ್ತ ಪರರಾಶ್ರಯಿಸಿ ಪದ್ಯ ಪದ್ಯ ಪೇಳಿ ಬಹುನೀಚನು ನಾ- ನುದಯಾಸಮುದ್ರರೆಲೆ ನೀವೆನುತೇ ಸುದುರಾತ್ಮರಂ ಪೊಗಳಿ ಕೆಟ್ಟೆನು 19 ಹಿತತತ್ವ ಭಾವದಲಿ ದುರ್ಜನರು ಮತಿವಂತರಂತೆ ಬಹಿಯೋಳ್ ನಟಿಸಿ ಸತಿ ಪುತ್ರ ವಿತ್ತಗಳ ಮೋಹದಲೀ ವ್ಯಥೆಪಟ್ಟು ಬಾಯ್ಬಿಡುತ ನೋಯುತಿಹರ್20 ಮೊದಲಾಗಿ ಎಲ್ಲರನು ಮಾಯದಿ ನಿ- ನ್ನುದ ರಾಖ್ಯ ವಾರಿನಿಧಿಯಿಂದಲಿ ತಾವ್ ಉದಿಸಿರ್ಪರೆಂದುಸುರುಗುಂ ಶ್ರುತಿಗಳ್ 21 ಅನುಮಾನವುಳ್ಳ ಜನಕೆಂದಿಗು ಪಾ- ಮೂರ್ತಿ ನಿನ್ನ ಘನ ಜ್ಞಾನ ಸುಖಂ ತೃಣ ಮಾತ್ರವೂ ಬರದು ಸ್ವಪ್ನದೊಳು ಜನದಲ್ಲಿ ಕೀರ್ತಿ ಬಹಿಯೊಳ್ ಬರಿದೆ 22 ಗುರುಸೇವೆಯಿಂದ ತನುದಂಡಿಸಿ ತಾ ನಿರುತಂ ಸುಶಾಸ್ತ್ರಗಳ ನೋಡುತಲಿ ಸ್ಥಿರ ಚಿತ್ತನಾಗಿ ಶ್ರವಣಾದಿಗಳಿಂ ಹರಿಭಕ್ತರಿಂದ ಕಡೆಸೇರುತಿಹಂ 23 ಕವಿಯಾದವರ್ ನಿರುತವುಂ ಮಿಗೆ ಭಾ- ಗವತಾದಿ ಗ್ರಂಥಗಳ ಸಜ್ಜನರಿಂ ಕಿವಿಯಿಂದ ಕೇಳುವುದಕಂ ಬಹು ಜ- ನ್ಮವು ಪಕ್ವವಾಗಿ ಸಲೆ ಪ್ರಾಪ್ತಿಸುಗುಂ 24 ಹರಿಕೃಷ್ಣ ಕೇಶವ ಮುಕುಂದ ನೃಕೇ- ಸರಿ ವಿಷ್ಣುವಾಮನ ತ್ರಿವಿಕ್ರಮ ಶ್ರೀ ಪದ್ಮನಾಭ ಮಧುಸೂದನ ಹೇ ಪುರಷೋತ್ತಮೌಚ್ಯುತ ಜನಾರ್ದನನೇ 25 ವಸುದೇವ ನಂದನ ಮುರಾಂತಕನೇ ಹೃಷಿಕೇಶ ನಾರೇಯಣ ಮಾಧವನೇ ಪರಿ ಪಾ- ಲಿಸುಪೇಂದ್ರ ಭಕ್ತರ ಅಧೋಕ್ಷಜನೇ 26 ಪರಮಾತ್ಮ ನೀನೆಮಗೆ ಎನ್ನುತನಂ- ಬರು ನಿನ್ನ ತಾಮಸರು ಸತ್ಯವಿದು ನೆರೆ ನೋವಿನಿಂಬಳಲಿ ತಾವ್ ಮಿಗೆ ಸಂ- ಸರಣ ಪ್ರವಾಹದೊಳು ಬೀಳುತಿಹರ್ 27 ದ್ಗುಣದಲ್ಲಿ ದುರ್ಗುಣಗಳೇ ಗಣಿಸಿ ಘನ ಮೋಹ ದುಃಖದೊಳು ಸತತ ನಿ- ನ್ನನು ಕಾಂಬ ಯೋಚನೆಯ ಬಿಟ್ಟಿರುವರ್ 28 ನ್ನನು ನಂಬಿ ನಂಬಿದಲೆ ತಾವ್ ನಿರತಂ- ಘನ ಕಾಮ ಕ್ರೋಧ ಮದ ಮತ್ಸರದಿಂ ಜನದಿಂದ ಯತ್ನವನು ಮಾಡುತಿಹರ್ 29 ದೇವಾದಿದೇವ ದಿವಿ ಭೂಮಿಗಳೋಳ್ ಭಾವ ಪ್ರಭೇದದಲಿ ಧ್ಯಾನಿಪರಿಂ- ಗೀ ವೇಷ್ಟಸಿದ್ಧಿಗಳ ನೀನೆ ಸದಾ 30 ಯೋಗಿ ಜನವಂದಿತ ಸ- ಜ್ಜನಕಲ್ಪವೃಕ್ಷ ಜಗದೇಕ ವಿಭೋ ವನಜಾಕ್ಷ ಇಂದಿರೆಯ ವಲ್ಲಭ ಬ್ರಾ- ಹ್ಮಣ ಪ್ರೀಯ ಭಕ್ತಸುಖದಾಯಕನೇ 31 ರವಿಕೋಟಿತೇಜ ರಮಣೀಯ ಕಥಾ- ತವನಾಮ ಕೀರ್ತನೆಯ ಮಾಳ್ಪರ ಪಾ- ಪವ ನೀನೆ ಓಡಿಸುವುದೇನರಿದೈ 32 ವರಾಹ ನೃಕೇ- ಸರಿ ವಾಮನಾವನಿ ಸುರೋತ್ತಮ ಭಾ- ಸ್ಕರ ವಂಶ ಚಂದ್ರವಸುದೇವಜ ಭಾ ಬುದ್ಧ ಕಲ್ಕ ವಪುಷೇ ನಮಃ 33 ಮುನಿಕರ್ದಮಂಗುದಿಸಿ ತಾಯಿಗೆ ಪಾ ವನ ರಾಜಯೋಗವನು ಬೋಧಿಸಿದೈ ಘನಯೋಗಿವರ್ಯ ಕಪಿಲಾಖ್ಯನೆನಿ- ನ್ನನು ನಂಬಿ ಪ್ರಾರ್ಥಿಸುವೆನಾನನಿಶಂ 34 ರ್ಜುನ ಕಾರ್ತವೀರ್ಯಗುಪದೇಶಿಸಿದೇ ಘನಯೋಗ ಬೋಧೆಯನು ಹೈಹಯರ್ ತಾ ವನುವಾದ ಶಿಷ್ಯರೆಲೆದತ್ತವಿಭೋ 35 ಋಷಭಾಖ್ಯನಾಗಿ ಸುತರಿಂಗೆ ಮಹಾ ಋಷಿಚರ್ಯ ಬೋಧಿಸಲವರ್ ತಿಳಿದು ದಶಯೋಗಿವಂದಧಿಕ ಎಂಬತ್ತು ಭೂ- ಮಿಸುರಕ್ರಿವೃತ್ತಿಯಲಿ ಶೋಭಿಸಿದರ್ 36 ಜಂಭ್ವಾಖ್ಯ ದ್ವೀಪದೊಳು ಖಂಡಗಳಿಂ ಅಂಭೋಜನಾಭ ತವನೇಮದಲೀ 37 ಹರಿ ನೀನೆ ಪುಟ್ಟಿಯದು ಸ್ಥಾಪಿಸಿ ದು ರ್ನರರನ್ನು ಕೊಂದು ಶರಣಾಗತರಂ ಪರಿಪಾಲಿಸುತ್ತಿರುವೆ ಸಂತತವುಂ 38 ಕಲಿಕಾಲವೀಗ ಖಳರೆಲ್ಲರು ಸ- ತ್ಕುಲದಲೆ ಪುಟ್ಟಿ ನೆರೆ ಸಾಧುಗಳಂ ಬಲುಬಾಧಿಸುತ್ತ ದುರಿತಂ ಘಳಿಸೇ ನರಕಂಗಳಲ್ಲಿ ನೆರೆಯಾಗುತಿಹರ್ 39 ಪರಮಾತ್ಮ ತತ್ವದಲಿಯೇ ಮರವು ದುರ್ವಿದ್ಯವಭ್ಯಸಿಪುದಕೆ ಮನವು 40 ಪರರನ್ನು ನೋಡಿಯವರಂತೆ ತಾ ವಿರಬೇಕೆನ್ನುತ್ತಲನಿಶಂ ಬಳಲೀ ಗುರುಯತ್ನಮಾಡಿ ವಿಫಲಾಗಲು ಶ್ರೀ ಹರಿ ನಿನ್ನದೂರುತಿರುವರ್ ದುರುಳರ್41 ಕರ್ಣ ಮುಖರಿಂದಲಿ ಸಂ ಗರದಲ್ಲಿ ಕಾದಿ ಮಡಿದಂ ಬರಿದೇ42 ಜಮದಗ್ನಿ ಪುತ್ರನಿಗೆ ಶಿಷ್ಯನು ಭೀ ಷ್ಮಮಹಾ ಪರಾಕ್ರಮಿಯು ದ್ರೋಣನುತಾಂ ಕಮಲಾಪ್ತಪುತ್ರ ಕಲಿ ಶಲ್ಯ ಮುಖ್ಯರ್ ಭ್ರಮೆಯಿಂದಲನ್ನಕಸುಗಳ್ ತೊರೆದರ್ 43 ಯಮಜಂ ವೃಕೋದರನು ಫಲ್ಗುಣನೂ ಯಮಳರ್ ತವಾಂಫ್ರಿಸ್ಮøತಿಯೇ ಬಲವಾ- ಗಿ ಮಹಾಪದಂಗಳನು ದಾಂಟಿದರೈ ಸುಮಬಾಣನಯ್ಯನೆ ಮಹಾತ್ಮರವರ್ 44 ಹರಿ ನಿನ್ನ ಡಿಂಗರಿಗರಿಗಾಶ್ರಯವೇ ವರಭಾಗ್ಯ ನಿತ್ಯಸುಖವೆನ್ನುತಲೀ ಅರಿದುತ್ತಮರ್ ಬಯಸರೆಂದಿಗು ಪಾ- ಮರರಂತೆ ತುಚ್ಛಗಳ ಸ್ವಪ್ನದೊಳು 45 ಸಲೆ ಚಿನ್ನ ಬೆಳ್ಳಿ ಬೆಲೆ ಹೆಚ್ಚು ಪಟ ಗಳ ಗೃಹಕ್ಷೇತ್ರ ಸುತದಾರ ಧನ- ಗಳ ನಿತ್ಯವೆಂದರಿದು ಲೆಕ್ಕಿಸದೇ ಜಲಜಾಕ್ಷ ನಿನ್ನ ಭಜಿಪರ್ ಸುಜನರ್ 46 ಸುಜನಾಬ್ಧಿ ಚಂದ್ರ ಸುಗುಣಾರ್ಣವ ನೀ ನಿತ್ಯ ನಿರವದ್ಯ ಸ್ವಭಾ ವಜ ಕರ್ಮದಿಂ ಸಕಲ ಪ್ರಾಣಿಗಳೂ ನಿಜಯೋಗ್ಯತೆಯಂತೆ ವರ್ತಿಪುದು 47 ಕರುಣಾನಿಧೇ ಕಮಲಲೋಚನನೆ ಸು- ರರಾಜ ಸೋದರನೆ ಭಾವಜನೈ ಯರಮಾಧಿನಾಥ ಯದುವಂಶ ಭೂ ರಥಾಂಗ ಪಾಣಿಯೆ ಜನಾರ್ದನನೇ 48 ರಘುವಂಶಕೇತು ರವಿಮಂಡಲದೋಳ್ ಭಗವನ್ನಿರಂತರದಿ ನೀನಿರುತೆ ಜಗಕೆಲ್ಲ ಕಾಲದನುಸಾರದಿ ನೀ ನಘನಾಳಿಯಿಂದ ಮಳೆಯಂ ಕೊಡುವೇ 49 ವಿಭುದಾಗ್ರಗಣ್ಯರಹ ಜ್ಞಾನಿಗಳೂ ಶುಭವನ್ನು ಲೋಕಕೆ ಸದಾಚರಿಸಿ ನಭ ಭೂಮಿ ಮಧ್ಯದಲಿ ಕೀರ್ತಿ ಸೌ- ರಭವಾಗಿ ಸ್ಥಾಪಿಸಿ ವಿಮುಕ್ತರಹರ್ 50 ಯೋಗ ಪ್ರವರ್ತನೆಯಲೇ ಸುಖಿಸಿ ರೋಗಾದ್ಯುಪದ್ರಗಳು ಇಲ್ಲದಲೇ ರಾಗಾದಿ ದೋಷಗಳ ಸುಟ್ಟಿರುವರ್ 51 ಮನವಾಕ್ಕು ಕಾಯಗಳೊಳೊಂದೆ ವಿಧಂ ಋಣಮುಖ್ಯ ಸೂತಕಗಳಿಲ್ಲದೆಲೇ ಗುಣವಂತರೆನ್ನಿಸಿಯೇ ಶೋಭಿಸುತಾ ಜನದಲ್ಲಿ ಮೌನದಲಿ ವರ್ತಿಸುವರ್ 52 ನರರೊಳ್ ದಿವೌಕಸರು ಪುಟ್ಟುತಲೀ ಹರಿಭಕ್ತಿಯುಕ್ತರೆನಿಸುತ್ತಲಿಸ- ತ್ವರದಿಂದ ಸಾಧನವ ಮಾಡುತಲೀ<
--------------
ಗುರುರಾಮವಿಠಲ