ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದು ದೂರಮಾಡುವಿ ಎನ್ನ ಬಂಧನವನು ಸಿಂಧುಶಯನ ತಂದೆ ಈ ಭವದಂದುಗವನು ಸಹಿಸಲಾರೆ ಪ ಸತಿಪತಿಯ ರತಿಯ ಕಲಹದಿ ಪತನಾದಿಂದ್ರಿಯಿಂದೆ ನಾನು ಪೃಥಿವಿಮೇಲೆ ಬಿದ್ದು ಘನ ವ್ಯಥೆಯಬಡುವ ತಾಪತ್ರಯವ 1 ಮಂದಭಾಗ್ಯನಾಗಿ ಆಗಿ ನಾನಾ ಸಂದಿನೊಳಗೆ ಬಂದು ಬಂದು ಮಂದಿಸೇವೆಗೈದು ನರಕ ಬಂಧರುರುಳವಂಥ ಕೆಡುಕು 2 ಆಸೆದೆಳಸಿ ಪರರಾಸ್ತಿ ಮೋಸತನದಿ ಕದಿಸಿ ಯಮನ ಪಾಶದೊಳಗೆ ನೂಕುವಂಥ ಹೇಸಿ ಎನ್ನ ನಾಶಬುದ್ಧಿ 3 ಅವನಿಯೊಳು ಜನಿಸಿಬಿಟ್ಟ ಬವಣೆ ನೆನೆಸಿ ನೆನೆಸಿ ಎನಗೆ ಸವೆಯದಯ್ಯೋ ದು:ಖ ಈ ದು ರ್ಭವ ಪಾಪ ಸಂಕಟ 4 ದಾಸಜನರ ಪ್ರಾಣಪ್ರಿಯ ಶ್ರೀಶ ಶ್ರೀರಾಮ ನಿಮ್ಮ ಚರಣ ಧ್ಯಾಸ ಮರೆಗೆ ಬಳಲಿಸುವ ಹೇಸಿಭವದ ವಾಸನವ 5
--------------
ರಾಮದಾಸರು
ಶ್ರೀ ಪ್ರಾಣೇಶ ದಾಸರಾಯರ ಸ್ತೋತ್ರ ಸಾನುರಾಗದಲಿ ಸ್ಮರಿಸುವರ ಭಕುತಿಯನ್ನು ಕೊಡುತಿಹರು ಪ ವರಕಾಶ್ಯೊಪಸದ್ಗೋತ್ರದಿ ಲಿಂಗಸು - ಗುರು ಕರಣಿಕರಲಿ ಸಂಜನಿಸಿ ತಿರುಕಾರ್ಯರ ಪರತನುಭವಯೋಗೀಂ - ದ್ರರು ಯಂಬ ಸುನಾಮದಿ ಕರಿಸಿ 1 ಕೆಲವುಕಾಲ ಲೌಕಿಕವನುಸರಿಸುತ ಲಲನೆ ತರಳರಿಂದೊಡಗೂಡಿ ಬಲು ವಿನಯದಿ ಸಾಧುಗಳರ್ಚಿಸಿ ನಿ - ರ್ಮಲ ವೈರಾಗ್ಯ ಮನದಿ ಕೂಡಿ2 ಮೂಜಗದೊಳು ಪ್ರಖ್ಯಾತರೆನಿಸಿದ ಶ್ರೀ ಜಗನ್ನಾಥಾರ್ಯರ ಪಾದಾಂ - ಭೋಜ ಭಜಿಸಿ ಪ್ರಾಣೇಶಾಂಕಿತವನು ತಾಜವದಿಂದವರಲಿಪಡೆದ 3 ಶ್ರೀಶಪಾದಯುಗ್ಮಗಳಲಿ ಸದ್ರತಿ ದಾಸಜನಗಳಲಿ ಸದ್ಭಕುತಿ ಹೇಸಿಭವದ ಸುಖದಾಸೆ ಜರಿದು ಸಂ - ತೋಷದಿ ಧರಿಸಿಹ ಸುವಿರಕುತಿ 4 ನೇಮದಿ ಯಮನಿಯಮವ ವಹಿಸಿ ತಾ ಮುದದಲಿ ನಲಿಯುತ ಕೀರ್ತಿಸುತಿಹ ಶ್ರೀ ಮನೋಹರನ ಸುಗುಣರಾಶಿ 5 ಪರಿಪರಿ ಹರಿಕಥೆವರ ಪ್ರಮೇಯಗಳ ಸರ್ವಜ್ಞ್ಞರ ಉಕ್ತ್ಯನುಸರಿಸಿ ವಿರಚಿಸಿ ಹರಿಮಂದಿರದ ಸುಪಥ ಪಾ - ಮರರಿಗೆ ಸೌಕರ್ಯವಗೈಸಿ 6 ವರದೆಂದ್ರರ ಪದಸರಸಿಜ ಸೇವಿಸಿ ಹರುಷದಲವರ ಕರುಣ ಪಡೆದ ವರವೃಂದಾವನ ಸಂಸ್ಥಾಪಿಸಿ ಪರಿಪರಿಯಿಂದಲಿಯಾರಾಧಿಸಿದ7 ಜ್ಞಾನದಿಲಯವನು ಚಿಂತಿಸುತಾ ಚಿತ್ರ ಬಾನುಸಪ್ತಮಿ ಯಾಶ್ವಿಜಶುದ್ಧ ಜಾನಕಿ ಪತಿಪದ ಧೇನಿಸಿಹರಿಪುರ ಕೀನರ ದೇಹ ಜರಿದು ಸಾರ್ದ 8 ಪರಮಭಾಗವತರೆನಿಸುವರಿವರನ ವರ ತನದ ಸುಮಾಲಿಕೆ ಸತತ ಸ್ಮರಿಸುವ ಭಕುತರ ಪುರುಷಾರ್ಥಗಳನು ವರದೇಶವಿಠಲನ ಕೊಡುವ ತ್ವರಿತ 9
--------------
ವರದೇಶವಿಠಲ
ಶ್ರೀ ರಘುದಾಂತರ ಚಾರುಚರಣಗಳು ಸೇವಿಪರಘಗಳನು ದೊರಗೈಸಿ ಕೃತಕೃತ್ಯನಾದೆನಾನು ಭವಭಯವೆನಗೇನು ಪ ಹೇಸಿಭವದಿ ಸುಖಲೇಶಕಾಣದಿರಲು ಬೇಸರವಾಗಲು ದೇಶ ದೇಶದೋಳು ಬರುಪರಿಯರಿತಿರುಗಿ ಚರಿಸಿ ತೋಷಬಡದೆ ಭವ ಬಂಧ ಕಡಿದೆ 1 ಹೀನಜನರ ಸಂಸರ್ಗದೋಷವನು ಕಲಿಮಲ ಕಲುಷವನು ದಹಿಪವು ಬಿಡು ಭ್ರಾಂತಿ ನಾನಾತೀರ್ಥ ಕ್ಷೇತ್ರ ಯಾತ್ರೆಫಲವು ಒದಗಿಸಿಕೊಡುತಿಹವು ಗುರುಗಳ ಪದಯುಗವು 2 ಗುರುಪದರಜದ ಮಹಿಮೆಯ ಪರಿಮಿತವು ವರ್ಣಿಸಲಸದಳವು ಶಿರದಿ ಧರಿಸೆಸಾರಿಸಕುಲಪಾವನವು ಎನಿಪುದು ನಿಶ್ಚಯವು ಶರೀರಕೆ ಲೇಪಿಸೆ ಸಕಲವ್ಯಾಧಿ ಭಯವು ಪರಿಹರವಾಗುವವು ನಿರುತಸೇವಿಸೆ ಮುಕುತಿಯೆ ಕರಗತವು ಅಹುದು ಶಾಶ್ವತವು 3 ತಿಳಿ ಮನಸಿಗೆ ತಂದು ಈ ನುಡಿ ಸಿದ್ಧಾಂತ ಕರುಣಿಪ ಕೈಬಿಡದೆ ಮನದಲಿ ಪೊಳೆಯುವನು 4 ಸಂತತ ಲಭಿಸುವವು ಪರಿಶುದ್ಧ ಭಕುತಿಯು ಬಡದಿರು ಸಂಶಯವ ಬಹುದುಃಖವ ಬಡುವ5
--------------
ವರದೇಶವಿಠಲ