ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದೇ ಜ್ಞಾನವೊ ಇದೇ ಮಾನವೊ ಧ್ರುವ ಕೇಳಿ ಕೇಳಿ ಕೇಳಿ ಕೇಳುವ ಮಾತಿದು ಕೇಳಿದಂತೆ ನೀವು ಬಾಳಿ ಬಾಳಿದ ಮ್ಯಾಲಿನ್ನು ಹೇಳ್ಯಾಡುವ ಮಾತಿನ ಮೊಳೆ ಅಂಕುರನೆ ಸೀಳಿ ಒಳಿತಾಗಿದೆ ಪೂರ್ಣ ಕೇಳಿ ಕಳೆದ ದುಸ್ಸಂಗವು ಕೇಳುವನಾದರೆ ತಿಳಿಸಿಕೊಡುವನು ಗುರು ಹೇಳಿ 1 ಸೂಟಿ ತಿಳಿದು ನಿಜಧಾಟಿಗೆ ಬಂದರೆ ಕೋಟಿಗವನೇ ಒಬ್ಬ ಙÁ್ಞನಿ ನೀಟಾಗಿಹ್ಯ ಘನಕೂಟವು ತಿಳಿದರೆ ನೋಟದಲ್ಲವ ಬಲು ತ್ರಾಣಿ ನೋಟದಲ್ಲಿಹುದು ತ್ರಾಟಿವ ಬಲ್ಲನೆ ಬೂಟಕ ದೇಹಾಭಿಮಾನಿ ನಾಟಿ ಮನದೊಳು ಮಾಟಿಸಿಕೊಂಬುದು ಘಟಿಸಿತಿದೆ ಸಾಧನ 2 ನೆನೆಯಲಿಕ್ಕೆ ಮನ ಘನಬೆರದಾಡುವ ಖೂನಾಗುವದಿದೆ ರಾಜಯೋಗ ಅನುಭವಿಗಳಿಗೆ ಅನುಕೂಲವಾಗಿನ್ನು ಅನುವಾಗಿದೋರುದು ಬ್ಯಾಗ ಭಾನುಕೋಟಿತೇಜ ತಾನೆತಾನಾದನು ಎನ್ನ ಮನದೊಳು ಈಗ ದೀನ ಮಹಿಪತಿಗೆ ಸನಾಥಮಾಡುವ ಸ್ವಾನುಭವದ ಬ್ರಹ್ಮಭೋಗ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇ ಸಾಧಿಸಿನೋಡಿ ಮನ ಉನ್ಮನÀಮಾಡಿ ಘನಸುಖ ಭೇಧಿಸಿದರ ಭಾಸುತದೆ ತನ್ನೊಳು ತಾನೆ ಕೌತುಕಧ್ರುವ ನೋಡಿ ನೋಡಿ ಖೂನ ಅರುಹು ಇಲ್ಲದೆ ಜನದೊಳು ಬರುದೆ ಹೇಳ್ಯಾಡುದೇನ ನಿರ್ವಿಕಲ್ಪನ ನಿಜನೆಲೆನಿಭವರಿತು ನೋಡಿ ಸ್ಥಾನ ಸರ್ವಸಾಕ್ಷಿ ಸರ್ವಾತೀತವೆಂಬ ವಸ್ತು ನೋಡಿ ಪೂರ್ಣ 1 ಕಣ್ಣಿನ ಕೊನೆ ಮುಟ್ಟಿ ಕರಗಿ ಮನವು ನೋಡಿ ಪೂರ್ಣ ಬೊಧ ಸಣ್ಣ ದೊಡ್ಡವರೊಳಗಿದೆ ಒಂದು ಸಾರುತಿದೆ ವೇದ ಧನ್ಯ ಧನ್ಯಗೈಸುವ ನಿಜ ಪುಣ್ಯ ಗುರುಪಾದ ಚನ್ನಾಗ್ಯನುಭವದಿಂದ ನೋಡಲಿಕ್ಯಾಗದು ಸ್ವಾದ 2 ಸುರಿಮಳಿಗರೆವುತಲ್ಯದೆ ಸ್ವಸುಖದಾನಂದೊ ಬ್ರಹ್ಮ ತೆರೆತಿಳಿಯಲಿಕ್ಕೆ ಗುರು ಶರಣ ಹೋಗಬೇಕು ಇದೇ ವರ್ಮ ಹರುಷಗೈಸಿದ ನೋಡಿ ಪತಿತಪಾವನ ಸದ್ಗುರು ನಮ್ಮ ತರಳ ಮಹಿಪತಿಗಿದೆ ನಿತ್ಯಭಿನವದ ನೋಡಿ ಸಂಭ್ರಮ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನುಡಿ ಜ್ಞಾನದ ಮಾತು ಒಡನೆ ನಂಬುದ್ಹೇತು ನಡಿ ಜ್ಞಾನದ ಮಾತು ಕಡೆಗಾಣಿಸಿತು ಧ್ರುವ ನುಡಿಯ ಒಡಲೊಳಗಿಟ್ಟು ನಡಿಯೊಳಗ ನುಡಿದೋರಿ ಕೊಡುವರಿಗ್ಯದೆ ಘನಮಹಿಮೆ ನೋಡಿ ನುಡಿದಂತೆ ನಡೆದರೆ ನಡೆನುಡಿ ಆಗುವದು ನುಡಿ ಅಡಿ ತೋರುವರಿಗೆಲ್ಲಿ ನಡೆನುಡಿ 1 ನಡೆಯೊಳಗ ನುಡಿಯದೆ ಪಡೆದುಕೊಂಬವ ಬಲ್ಲ ಒಡನೆ ಸದ್ಗುರು ದಯದೊಲವಿಲಿದ್ದು ನಡೆನುಡಿ ನಿಜವಾಗಲರಿಯದೆ ನಾಡೊಳಗೆ ಅಡಿಗಡಿಗೆ ಹೇಳ್ಯಾಡು ಮಾತೆ ಬರದು2 ನುಡಿವುದೆ ವೇದಾಂತ ನಡೆವುದೆ ಸಿದ್ಧಾಂತ ನಡೆನುಡಿಗೆ ಸಾಕ್ಷ ಶ್ರೀದೇವದತ್ತ ನುಡಿಗೆ ನಿಜ ನೆಲೆದೋರಿ ನಡಿಗೆ ನಿಲುಕಡೆ ಮಾಡಿ ಕೊಡುವನೊಬ್ಬನೆ ಮಹಿಪತಿ ಗುರು ಸಮರ್ಥ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬರಿಯ ಮಾತಲಿಲ್ಲ ಶ್ರೀಹರಿಯ ಪ್ರೀತಿರಣ್ಣ ಮಧ್ವಾಚಾರ್ಯರುಪದೇಶವೆ ಮುಕ್ತಿಪುರದೊಳು ಖ್ಯಾತಿರಣ್ಣ ಪ.ರಂಗನ ಪ್ರತಿಮೆಯನು ಬಿಡದೆ ಬಹಿರಂಗದಿ ಪೂಜೆಯ ಮಾಡಿಕಂಗಳುತುಂಬಲು ಮೆಲ್ಲನೆ ಅಂತರಂಗದಿ ಪೀಠದಿ ನೋಡಿಹಿಂಗದೆ ಗುರುಶಿಕ್ಷಾಕ್ರಮದಲಿ ಧ್ಯಾನಂಗತನಾಗ್ಯೊಲಿದಾಡಿಲಂಘಿಸಿ ಜನ್ಮಾಯುಷಗಳ ತುದಿಯಲಿಮಂಗಳ ಬಿಂಬವ ನೋಡದೆ ನೋಡಿ 1ಒಮ್ಮಿಂದೊಮ್ಮೆ ಹೃದಯದದ್ದಕೆಧರ್ಮವ ಜರಿದರೆ ಹೀನನಿರ್ಮಳ ಶೌಚಾಚಮನವೆ ಗಳಿಸಿದಸಮ್ಯಕ್‍ಜ್ಞಾನ ನಿಧಾನತಮ್ಮವಗುಣ ರೋಗಕೆ ಔಷಧವುಕರ್ಮದ ಮೂಲವೆ ಸ್ನಾನಹಮ್ಮಿಲಿ ಸನ್ಮಾರ್ಗಕೆ ಕುಂದಿಡದೆಇಮ್ಮಡಿ ಸಾಧಿಸಿ ನವನವೀನ 2ಸದ್ವ್ವ್ರತ ದೀಕ್ಷೆಯು ಧ್ರುವಪದ ಮುಕ್ತಿಯುಸುದ್ವಾರವ ಬಿಡಬಹುದೆಮಧ್ವೇಶನ ಮಹಿಮೆಯ ಕೇಳದೆ ರಕ್ಷಾಧ್ವರ ಕಥೆ ಕೇಳಬಹುದೆವಿಧ್ವಂಸಿಸುವ ಚೋರರು ಹೇಳ್ಯಾಡುವಸದ್ವಚನದಿ ಸುಖವಾಹುದೆಅದ್ವಯ ಪ್ರಸನ್ವೆÉಂಕಟೇಶನ ಪಾದಕಮಲದ್ವಯ ಬಿಟ್ಟಗೆ ತಮಸಹುದಹುದೆ 3
--------------
ಪ್ರಸನ್ನವೆಂಕಟದಾಸರು