ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡಿರೇನೇ ರಂಗನಾ ನಿಮ್ಮ ಮನೆಗಳಲ್ಲಿ ಕಂಡರೆ ಹೇಳಿರಮ್ಮಾ ಒಂದು ಮಾತಿನಲಿ ಬೆಂಡಾದೆನೇ ಅರಸುತ ನಾನಾದಾರಿಗಳಲ್ಲಿ ಪುಂಡರೀಕಾಕ್ಷನು ದೋರನು ಎಲ್ಲಿ ಮಣಿ ಕುಂಡಲ ಮಂಡಿತ ಗಂಡ ಕಪೊಲ ಪ್ರಚಂಡನ ಲೀಲೆ 1 ಒಮ್ಮೆ ಭಾವಿಕ ಗೋವಳರಾ ಆಟ ಪಾಟದಲಿರುವಾ ಒಮ್ಮೇ ಕಾಮುಖ ಗೊಲ್ಲತೇರಾ ಚಿತ್ತಕಾನಂದ ನೀವಾ ಒಮ್ಮೆ ಯಜ್ಞ ಪತ್ನಿಯರಾ ಸವಿಯಾಟ ಕವಲಿವಾ ಅಮ್ಮ ಒಂದೇ ಠಾರ್ವೆನೇ ಹೇಳುವಾ ಅವ ನಿಮ್ಮವನೇ ತಮ್ಮನೇ ಸುಮ್ಮನೇ ತಿರುಗುತ ಘಮ್ಮನೇ ಝುಮ್ಮನೇ ಹೊಳೆವಾ 2 ಪುಲ್ಲ ನಾಭನ ಕಾಣದಿರೇ ಕಣ್ಣು ಕುರುಡವು ನಮ್ಮ ಸೊಲ್ಲ ವಾಲಿಸದಿಹ ಹರಿಯಾ ಕಿವಿಬಧಿರವು ನಮ್ಮ ಅಲ್ಲಿ ಮನುಜ ಮಹಿಪತಿಸುತ ಪ್ರಭು ಪರಬೊಮ್ಮ ನಿಲದಪ್ಪಿ ಕೊಳಲು ಸಂಭ್ರಮಾ ಅವನೆಲ್ಲೆಲ್ಲ ನೋಡಲು ಅಲ್ಲಲ್ಲಿ ನಿಂದಿಹ ಇಲ್ಲದ ಸ್ಥಳವಿಲ್ಲವಮ್ಮಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಧುಮ್ಮಸಾಲೆಯ ನೋಡಿ ಧುಮ್ಮಸಾಲೆಯಾ ಪ ಧುಮ್ಮಸಾಲೆಯ ನೋಡಿ ಘಮ್ಮವಾದ ಪ್ರಾಣಿಗಳು | ತಮ್ಮ ಸುದ್ದಿ ತಮಗಿಲ್ಲಾ ಹಮ್ಮಿನಿಂದಲಿ | ಧಿಮ್ಮಹಿಡಿದು ಭವದೊಳು ಸುಮ್ಮನೆವೆ ಕೆಟ್ಟು ಹೋದ | ಗ್ಯಾದರೆಯು ಪರಬೊಮ್ಮನಾಮ ನೆನೆಯಿರೋ 1 ವಿದ್ಯೆಯಿಂದ ವಾದಿಸುತ ಮುದ್ದಿಯಿಂದ ಕಣ್ಣು ಮುಚ್ಚಿ | ಸದ್ಯ ಶಕ್ತಿ ಯೌವನದಿ ಗುದ್ದಿ ಹೆಟ್ಟು ತಾ | ಪರಿ ನಿಜ | ಬುದ್ಧಿ ಹೋಗಾಡಿಸಿ ಅನಿರುದ್ಧನನ ಮರೆತಿರೋ 2 ಒಂದು ಕವಡಿಯಲಾಭ ತಮಗೆ ಹೊಂದದಿದ್ದರೆ ಸರಿ | ಬಂದು ನಿಂದು ಒಳ್ಳೆವರಾ ನಿಂದೆ ಮಾಡುತಾ | ಇಂದು | ಕೂಪ ಲಿಟ್ಟರೋ 3 ಉಡಗಿ ಬಿಟ್ಟು ಹುಡಿಯಹಚ್ಚಿ ಜಡಿಯಬಿಟ್ಟು ಸಿದ್ಧಗಾಗಿ | ಪೊಡವಿಲಿನ್ನು ಲಾಭಾ ಲಾಭಾ ನುಡಿಯ ಹೇಳುವಾ | ತುಡುಗರಿಗೆ ಹೋಗಿಕಾಲ ವಿಡಿದು ಗೋಂದಲ್ಹಾಕುವರು | ಕಡಲಶಯನನ ಭಜಿಸದೆವೆ ಅಡಲು ಬಿಟ್ಟು ಹೋದರೋ 4 ಸಿರಿಯ ಸುಖಗೀಪರಿ ಪರಿಯ ವೃತ ತಪದಿಂದಾ | ಚರಿಸಿ ನೋಡು ಕಣ್ಣು ವಿದ್ದು ಕುರುಡರಾದರೋ | ಗುರುಮಹಿಪತಿ ಸ್ವಾಮಿ ಚರಣ ನಂಬಿಯಚ್ಚರದಿ | ನಿರಪೇಕ್ಷ ಭಕ್ತಿಯಿಂದಾ ತರಣೋಪಾಯ ನೋಡರೋ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಲ್ಲಾ ಸಲ್ಲಾ ಭಕುತಿಗೆ ಸಲ್ಲಾ ಸಲ್ಲಾ | ರತಿಯಿಲ್ಲದೆ ಡಾಂಭಿಕನು | ಬೆಲ್ಲದೊಳಗಿನ ಕಲ್ಲಿನಂದದಲಿಹನು | ಪರಿಪಾಕದಲ್ಯವ ದೂರಾಹನು | ಅವನೀಗ ಪ ಗುರುವಿನಂಘ್ರೀಯ ಕಂಡು | ಗುರುತಕ ಬಾರದೆ | ಧರಿಯೊಳು ವ್ಯಭಿಚಾರಿತೆರನಂದದಿ | ಗುರುಭಕ್ತನೆನುಸುವ ಗುರಶೇವೆಘೋದಲುವ | ಗುರುನಾಮ ಜಾಗಿಸುವನು ಯಲ್ಲರೊಳು | ಗುರುದಯ ದೋರಿಸು | ನಿಷ್ಠಿಗೆ | ಹುರುಳಿಲ್ಲ ಮಾನಿಸನು 1 ಎಲ್ಲಾ ಶಾಸ್ತ್ರವ ಕಲೆ ಬಲ್ಲವ ನಾನೆಂದು | ಸೊಲ್ಲು ಸೊಲ್ಲಿಗೆ ತನ್ನ ಹೊಗಳುತಲಿ | ಒಳ್ಳೆವರನು ಕಂಡು ಮನ್ನಿಸಿಕೊಳ್ಳದೆ | ನಿಲ್ಲದೇ ವಾದಿಸುವ ಅವರಾಚು ಸೊಲ್ಲಿಗೆ | ಸೊಲ್ಲಿಗೆ ಕುಂದಿಡುವ | ಆಚಾರ | ಕ್ಷುಲ್ಲಕತನದಿ ನೋಡುವಾ ಅವನಿಗೆ 2 ಘನ ಗುರು ಮಹಿಪತಿ ಸ್ವಾಮಿಯ ಸೂತ್ರದಿ | ಅನುವಾದಾ ಲಾಭಾ ಲಾಭಗಳೆನ್ನುತ | ಜನರಿಗೆ ಹೇಳುವಾತಾ ಹಾದಿತಪ್ಪುವಾ | ಧನ ಮದಾಂಧರ ಮನವಾ | ಹಿಡಿವುತ | ತನುಪರವಶ ಮಾಡುವಾ | ಸಿದ್ಧಾಂತ | ಅನುಭವ ನುಡಿಮರವಾ ಅವನೀಗ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆರ ಮುಂಧೇಳಲಿ ಕರಕರಿಯ ಈ |ಪೋರನು ಕೊಡವಲ್ಲನಲ್ಲೇ ಸೀರೆಯ ಪದಾರಿಯೊಳ್ಹೋಗಿ ಬಹರ್ಯಾರೆನ್ನ ಕಂಡರೆ |ಊರೆಲ್ಲ ಹೋಗಿ ದೂರರೇನೆ1ಸಂತಿಗೆ ಹೋಗ್ಯಾಕೆ ನಿಂತರೆಂದುಡುಕುತ |ಕಾಂತನೇ ಬಂದರೇನಂತ ಹೇಳುವಾ 2ಬತ್ತಲಾರಾಗಿ ಜಲ ಮತ್ತೀಗ ಸೇರುವಾಗಿ |ಮೃತ್ಯು ಬಂದನಂಬುದರ್ತಿವೇನೆ 3ನೀರ ಹಾವುಗಳೆಲ್ಲ ಶರೀರವ ಸುತ್ತುತಿವೆ |ಗಾರಾದೆವಲ್ಲೆ ವಾರಿಜಾಸ್ಯೆ 4ಮುಳ್ಳು ತೆಪ್ಪವು ಮೋರೆಗೆಲ್ಲ ಮುಚ್ಚುತಲಿವೆ |ಖುಲ್ಲಪೋರಗೆ ದಯೆಯಿಲ್ಲವಲ್ಲೇ 5ಜಲ ಜಂತುಗಳೆಲ್ಲ ಗುಳು ಗುಳು ಮಾಡುತವೆ |ಜಲಜಾಕ್ಷಗ್ಯೇತಕೆ ತಿಳಿಯದಮ್ಮ 6ಮೀನಾಗಳಲ್ಲಿ ಹತ್ತಿ ಏನೇನೋ ಮಾಡುತವೆ |ಏಣಾಕ್ಷಿ ನಮಗೇ ಏನು ಬಂತೇ 7ಹಿಂದತ್ತ ಹೋದರೆ ಕಂಧರದುದ್ದ ನೀರು |ಮುಂದತ್ತ ಬರೆ ಎದೆಗಿಂದ ಕೆಳಗೆ 8ಏಡಿಗಳೆಲ್ಲ ಕಾಲು ನೋಡಿ ಕಚ್ಚುತಲಿವೆ |ಮಾಡಲಿನೆ ಮೋರೆ ಬಾಡಿತಲ್ಲೆ 9ಮೂಗುತಿ ಮಣಿಯೆಲ್ಲ ಹೇಗೋ ಎಲ್ಲ್ಯೋ ಎನಲು |ಈ ಗತಿಯಾಗೆ ಮನೆಗೆ ಹೋಗೋದ್ಹ್ಯಾಂಗೆ 10ಏನಾದರಾಗಲಿ ಪ್ರಾಣೇಶ ವಿಠಲಗೆ |ನೀನೇ ಗತಿಯೋ ಕಾಯೊ ಎನ್ನಬೇಕೇ 11
--------------
ಪ್ರಾಣೇಶದಾಸರು