ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜನ್ಮವ್ಯರ್ಥವಾಯಿತು ಶಾಙ್ರ್ಗಧನ್ವ ನಿನ್ನನಂಬದೆ ಪ ಮನ್ಮಥನಾಟದಲ್ಲಿ ಮರೆತು ಹೋಗಿಕಾಲ ನಾಕಳದೇ ಅ.ಪ ಹೊಟ್ಟೆಗೋಸಗ ಕಾಡಿಬೇಡಿ ನಿಷ್ಟುರಗಳನಾಡುತಾ ಕೆಟ್ಟವನಿವನೆನಿಸಿ ಕೊಂಡು ಕೀರ್ತಿಶೂನ್ಯನಾಗುತಾ 1 ನಿತ್ಯಕರ್ಮಮಾಡದೆ ಗೃಹಕೃತ್ಯದಲ್ಲಿ ಬಳಲುವೆ ಸತ್ಯವೆಂಬುದು ಸ್ವಪ್ನದಲ್ಲಿಯು ಸಾಧ್ಯವಾಗದು ಜನರಿಗೆ2 ಸುಳ್ಳು ಹೇಳುವವನ ಜನರು ಒಳ್ಳೆವನಿವನೆಂಬರು ಬಲ್ಲ ಹಿರಿಯರಾಡುವ ನುಡಿ ಭಕ್ತಿಯಿಂದನಂಬರು 3 ಖಲರು ನಡಿಯಲಾರದೆಯಿದು ಕಲಿಯುಗವೆಂದು ನಿಂದಿಸೀ ಕೊಲೆಗೆ ಗುರಿಯಾಗಿ ಕಾಮ ಕ್ರೋಧಗಳಿಂದ ಬಂಧಿಸಿ 4 ಹೀನ ವಿದ್ಯಗಳೆಚ್ಚಿತು ಸುಜ್ಞಾನಬೋಧೆ ತಗ್ಗಿತು ಸ್ವಾನುಭವಕೆ ಹಾನಿಕರ ನಿಧಾನಿಸೇ ಧರ್ಮ ಕುಗ್ಗಿತು 5 ದುರ್ಗುಣಿಗಳ ತೃಪ್ತಿಪಡಿಸೆ ಭರ್ಗಗಾದರು ಸಾಧ್ಯವೇ ನಿರ್ಗಮಿಸುವಧ್ಹ್ಯಾಗೆ ನಾವಿನ್ನಿರುವುದು ಭೂಮಿಭಾರವೆ6 ಲೇಶ ಸಾಧನವಾಗುವದಿಲ್ಲ ಆಸೆ ಅಧಿಕವಾದುದರಿಂದ ಘಾಶಿಪಡುವದಲ್ಲದೆ ದೇಹಾಯ್ಸವೇಕೆ ಪಡುವೆನಾಂ 7 ಮಾನವಿಲ್ಲ ಜ್ಞಾನವಿಲ್ಲ ಮಮತೆಯೆಂಬೋದು ಬಿಡದಲ್ಲಾ ಹೀನಾರನಾಸೇವಿಸಲಾರೆ ಹಿತವ ಕಾಣೆ ಸಿರಿನಲ್ಲಾ8 ಇರುಳು ಹಗಲು ನಿನ್ನ ದಿವ್ಯ ಚರಣಸೇವೆ ಪಾಲಿಸೊಗುರುರಾಮ ವಿಠಲನೆ ಪಾಮರರ ಬಿನ್ನಹ ಲಾಲಿಸೊ9
--------------
ಗುರುರಾಮವಿಠಲ
ವೈಚಾರಿಕತೆ ಆವ ಕರ್ಮವೊ ಇದು ಆವ ಧರ್ಮವೊಆವ ಕರ್ಮವೆಂದರಿಯೆ, ಹಾರುವರಿವರು ಬಲ್ಲರೆ ಪ ಸತ್ತವನು ಎತ್ತ ಪೋದಸತ್ತು ತನ್ನ ಜನ್ಮಕೆ ಪೋದಸತ್ತವನು ಉಣ್ಣುವನೆಂದುನಿತ್ಯ ಪಿಂಡವಿಕ್ಕುತೀರಿ1 ಎಳ್ಳು ದರ್ಭೆ ಕೈಲಿ ಪಿಡಿದುಪಿತರ ತೃಪ್ತಿ ಪಡಿಸುತೀರಿಎಳ್ಳು ಮೀನು ನುಂಗಿ ಹೋಯಿತುದರ್ಭೆ ನೀರೊಳು ಹರಿದು ಹೋಯಿತು 2 ಎಡಕೆ ಒಂದು ಬಲಕೆ ಒಂದುಎಡಕೆ ತೋರಿಸಿ ಬಲಕೆ ತೋರಿಸಿಕಡು ಧಾವಂತ ಪಡಿಸಿಕಟಿಯ ಹಸ್ತದೊಳಗೆ ಪಿಡಿಸುತೀರಿ 3 ಮಂತ್ರಾಕ್ಷತೆಯ ಕೈಗೆ ಕೊಟ್ಟುಮೋಕ್ಷವನ್ನು ಹಾರೈಸುವಿರಿಮಂತ್ರವೆಲ್ಲೊ ಅಕ್ಷತೆಯೆಲ್ಲೊಮೋಕ್ಷವೆಲ್ಲೊ ಮತ್ರ್ಯವೆಲ್ಲೊ4 ಹೇಳುವವನು ಅವಿವೇಕಿಕೇಳುವವನು ಅಜ್ಞಾನಿಹೇಳುವ ಕೇಳುವ ಇಬ್ಬರ ಸೊಲ್ಲಆದಿಕೇಶವಮೂರ್ತಿ ಬಲ್ಲ5
--------------
ಕನಕದಾಸ