ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಂಡು ಬರುತಿದೆ ಆರೇರ ದಂಡು ಬರುತಿದೆ ಬಂದೆವು ನಾಲ್ಕು ಮಂದಿ ಪ ಅಮ್ಮ ಲಿಮ್ಮಿ ಬೊಮ್ಮಿ ನಾನು ಸುಮ್ಮನೊಂದು ಮರೆಯಲಿರಲು ಜಮ್ಮನವರು ಬಂದು ಹಿಡಿದು ಗುಮ್ಮಿಹೋದರು ನಮ್ಮನ್ನೆಲ್ಲ 1 ಅತ್ತೆಮಾವ ಮೈದುನರು ಎತ್ತಹೋದರೋ ಕಣ್ಣಲಿಕಾಣೆ ಕತ್ತೆ ಹೆಣ್ಣೆ ಹೋಗು ಎಂದು ಬತ್ತಲೆಬಿಟ್ಟರು ಎನ್ನ 2 ದಿಂಡ್ಯ ದಿಂಡ್ಯ ಜವ್ವನೆಯರು ಕಂಡ ಕಂಡೆಗೆ ಹೋಗಿ ಬೇಗ ದಂಡಿನವಗೆ ಸಿಕ್ಕಿ ಕೆಟ್ಟು ಕೊಂಡು ಬಾಳ್ವುದೊಳ್ಳಿತಲ್ಲ 3 ರಂಡೆ ಮುಂಡೆರೆಂದವರು ಬಿಡರು ಕಂಡಮಾತ ಹೇಳುತೇನೆ ಪೆಂಡಾರರಿಗೆ ಸಿಕ್ಕು ಕೆಟ್ಟು ಗಂಡು ಕೂಸು ಪಡೆಯದಿರಿ 4 ಮಾನವುಳ್ಳ ಹೆಣ್ಮಕ್ಕಳು ನಾನು ಪೇಳ್ವಮಾತಕೇಳಿ ತಾನೆ ಸೇರಿ ಲಕ್ಷ್ಮೀರಮಣ ಧ್ಯಾನವನ್ನು ಮಾಡುಕಂಡ್ಯಾ 5
--------------
ಕವಿ ಪರಮದೇವದಾಸರು
ಸಾರಿ ದೂರಿ ಹೇಳುತೇನೆ ಕೆಟ್ಟಿ ಕಂಡ್ಯ ಬಡ್ಡಿ ಮನವೆ ಪ ದೂರೋ ಬುದ್ಧಿ ಮಾಡಬೇಡ ಕೈಯೊಳಿಕೋ ಕಡ್ಡಿನಿನ್ನ ಕೈಯೊಳಿಕೋ ಕಡ್ಡಿ ಅ ಕೋಪವನ್ನೆ ಮಾಡದಿರು ಪಾಪಕೆ ಗುರಿಯಾಗದಿರುಶ್ರೀಪತಿಯ ನಾಮವನು ನೀ ಪಠಿಸುತಲಿರು ಮನವೆ 1 ಅಷ್ಟಮದದಿ ಮೆರೆಯದಿರು ನಷ್ಟಕೆ ಗುರಿಯಾಗದಿರುದುಷ್ಟಸಂಗವನ್ನು ಮಾಡಿ ಭ್ರಷ್ಟನಾಗಬೇಡ ಮನವೆ 2 ಸಿರಿಯ ಮೆಚ್ಚಿ ಮೆರೆಯದಿರು ಬರಿದೆ ಹೊತ್ತ ಕಳೆಯದಿರುಪರರ ನಿಂದೆಯನ್ನು ಮಾಡಿ ನರಕಿಯಾಗಬೇಡ ಮನವೆ 3 ಕಾಯವನ್ನು ನಂಬದಿರು ಮಾಯಕೆ ಮರುಳಾಗದಿರುಸ್ತ್ರೀಯರನ್ನು ಕಂಡು ನೀನು ಬಯಸದಿರು ಮರುಳು ಮನವೆ 4 ನಿನ್ನ ನಿಜವ ನಂಬದಿರು ಉನ್ನತಾಸೆ ಮಾಡದಿರುಚೆನ್ನಾದಿಕೇಶವನ ಪಾದವನ್ನು ನೀನು ನಂಬು ಮನವೆ 5
--------------
ಕನಕದಾಸ