ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲೋಕನೀತಿ (ಆ) ಇರುವುದೆಲ್ಲ ಮನೆಯೊಳಗಿದ್ದರೆ ಆಡಿಗೆಗೆ ಯಾತಕ್ಕೆ ತಡವಾಗೋದು | ಪ ತರಬೇಕೇಂದು ನೂರು ತಡವೆ ನಾ ನುಡಿದರು ಅರಿಯದವರ ಪರಿತಿರುಗುತ್ತಲಿರುವದು ಅ.ಪ ಮನೆ ಮನೆಯಲಿವಂದು ಮಾನಾರ್ಧಮಾನಗಳು ಮೆಣಸಿನಪುಡಿ ಉಪ್ಪು ಅಕ್ಕಿ ಸಾಲ ದಿನ ದಿನ ಮಧ್ಯಾಹ್ನ ತಿರುಗಿದ ಮೇಲೆ ಮನೆಗೆ ಬಂದು ಹಸಿವೆನುತ ಪೇಳುವದು 1 ಎಣ್ಣೆವಗ್ಗರಣೆಯಲ್ಲದೆ ಕಾಣೆನಭಿಗಾರ ಮುನ್ನೆ ಪಿತ್ಥ ಹೆಚ್ಚಿ ತಲೆ ನೋಯ್ವುದು ನಿನ್ನೆಮೊನ್ನೆ ಹೇಳಿದುದಕೆ ಹೊಡೆಸಿಕೊಂಡೆ ದೊಣ್ಣೆಪೆಟ್ಟಿನಿಂದ ಬೆನ್ನು ಬಾತಿರುವದು 2 ವರುಷಕ್ಕಾಗುವ ಮಟ್ಟಿಗೆಲ್ಲಾ ಪದಾರ್ಥ ಶೇ- ಖರವ ಮಾಡುವುದು ಈ ಮನೆಯೊಳಿಲ್ಲಾ ಹಿರಿಯರಿಂದ ಬಂದ ಸಂಪ್ರದಾಯವಿದೇನೊ ಇಂಥಾಮನೆಯ ಸೇರಿ ಈ ಸುಖ ಪಡುವೆ 3 ಮದುವೆಯಲ್ಲಿದ್ದದ್ದು ಪ್ರಸ್ತದೊಳಗೆಯಿಲ್ಲ ಬದಲು ಸೀರೆಯು ನಾನುಟ್ಟರಿಯೆ ವಿಧಿಲಿಖಿತವು ತಪ್ಪುವುದೆಯೆಂದಿಗಾದರು ವದರಿ ಕೊಂಡರೆಯೇನು ಇದರೊಳು ಫಲವುಂಟು 4 ಜ್ಞಾನ ಶೂನ್ಯರು ಮನೆಯೊಳಿಹರೆಲ್ಲರು ಈ ನರಜನ್ಮವು ಇಷ್ಟಕ್ಕೆಸಾಕೆಂದು ಧೇನಿಸಿ ಗುರುರಾಮವಿಠಲನ ಬೇಡುವೆ 5
--------------
ಗುರುರಾಮವಿಠಲ
ಈ ಪರಿಯ ಅಧಿಕಾರ ಒಲ್ಲೆ ನಾನು |ಶ್ರೀಪತಿಯೆ ನೀನೊಲಿದು ಏನ ಕೊಟ್ಟುದೆ ಸಾಕು ಪಚಿರಕಾಲ ನಿನ್ನ ಕಾಯ್ದು ತಿರುಗಿದುದಕೆ ನಾನು |ಕರುಣದಲಿ ರಚಿಸಿ ನೀ ಈ ದುರ್ಗದಿ ||ಇರ ಹೇಳಿದುದಕೆ ನಾ ಹೊಕ್ಕು ನೋಡಿದೆ ಒಳಗೆ |ಹುರುಳ ಲೇಶವು ಕಾಣೆ ಕರಕರೆಯು ಬಲುನೋಡು 1ದಾರಿಯಲಿ ಹೋಗಿ ಬರುವವರಉಪಟಳಘನ|ಚೋರರಟ್ಟುಳಿಗಂತೂ ನೆಲೆಯೆ ಇಲ್ಲ ||ವೈರಿವರ್ಗದ ಜನರು ಒಳಗೆ ಬಲು ತುಂಬಿಹರು |ಮಿರಿ ನಿನ್ನಲಿ ಮನವನೂರಿ ನಿಲಗೊಡರು 2ಸರಿಬಂದ ವ್ಯಾಪಾರ ಮಾಡಿ ತಾವೆನ್ನನ್ನು |ಬರಿಯ ಲೆಕ್ಕಕೆ ಮಾತ್ರ ಗುರಿಯ ಮಾಡಿ ||ಕರಕರೆಯ ಬಡಿಸಬೇಕೆಂದು ಯೋಚಿಸುತಿಹರು |ಕರೆದು ವಿಚಾರಿಸಿ ನ್ಯಾಯ ಮಾಡಿಸು ದೊರೆಯೇ 3ನಾಮಾಂಕಿತಕೆ ಮಾತ್ರ ಅಧಿಕಾರವೆನಗಿತ್ತೆ |ಸ್ವಾಮಿತ್ವವೋನೋಡುಮನೆಮನೆಯಲಿ ||ಭೀಮ ವಿಕ್ರಮರವರು ದುರ್ಬಲಾಗ್ರಣಿ ನಾನು |ಗ್ರಾಮ ಒಪ್ಪಿಸೆ ನಮಿಪೆ ಸಂಬಂದ ತೆರಮಾಡು 4ಕಾಲಕ್ಕೆ ಕರೆಯ ಬಂದವರಿಗೆ ಒಳಗಾಗಿ |ಪಾಳೆಯವನೊಪ್ಪಿಸಿ ಕೊಡುವೆವೆಂದು ||ಆಲೋಚಿಸಿಹರಯ್ಯ ಈಗಲೆನಗೆ ನಿನ್ನ |ಆಳುಗಳ ಬಲಮಾಡಿ ಎನ್ನ ರಕ್ಷಿಸು ದೊರೆಯೆ 5ಕ್ಷಣಕೆ ನೂರುಪಟಳ ಈ ಕೋಟೆಗೆಲೊ ರಾಯ |ಅನುವಾದ ದಿವಸವೊಂದಾದರಿಲ್ಲ ||ಮೊನೆಗಾರ ಜನವಿಲ್ಲ ಇದ್ದವರು ವಶವಿಲ್ಲ |ಕೊನೆಗೊಂಡು ಗ್ರಾಮ ಕಾಪಾಡುವ ತೆರನೆಂತೊ 6ಎನಗೆ ಈ ಬಹುನಾಯಕರ ಕೊಂಪೆಯೊಳು ವಾಸ-|ವನು ಬಿಡಿಸಿ ನಿನ್ನ ನಿಜ ಪಟ್ಟಣದೊಳು ||ಮನೆ ಮಾಡಿಕೊಡಲು ನಾನಿನ್ನ ನೋಡಿಕೊಳುತ |ಅನುಗಾಲಬದುಕುವೆನೊ ಪುರಂದರವಿಠಲ7
--------------
ಪುರಂದರದಾಸರು