ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೆದರಿಕೆ ಬರುತದೆಲೋ ಪದುಮಾಕ್ಷ ನಿನ್ನ ಮುಂದೆ ಹೇಳಿಕೊಳ್ಳಲು ಎನಗೆ ಪ ಹೆದರಿಕೆ ಬರುತಿದೆ ಜಗದ ಜನರು ನಿನಗೆ ವಿಧವಿಧದಾಡುವ ಸುದ್ದಿಯ ಪೇಳಲು ಅ.ಪ ಹಳಿವರು ಹೆಳವನೆಂದು ಅಂಜದೆ ನಿನಗೆ ತಲೆಯಿಲ್ಲದವನೆನುವರು ಇಲ್ಲದೆ ಹೊಟ್ಟಿಗೆ ಹುಲ್ಲುಮೆದ್ದವನೆಂದು ಹಲವು ಬಗೆಯಲಿ ಹೀಯಾಳಿಪುದ್ಹೇಳಲು 1 ದೃಢದಿ ಭಕುತಜನರು ಬೇಡಿದ ವರವು ಕೊಡಬೇಕಾಗುವುದೆನುತ ಓಡಿ ಹಾವಿನಮೇಲೆ ಪವಡಿಸಿದ ಮಹ ಕಡುಲೋಭಿಯೆಂದೆಂಬ ನುಡಿನಿನ್ನೊಳ್ಪೇಳಲು 2 ಒದೆಸಿಕೊಂಡ್ವೊಯ್ಕುಂಠದಿ ಶೇಷಾಚಲದಿ ಸದನಗೈದನುಯೆಂಬರು ಇದು ಅಲ್ಲದತಿ ವಿಧವಿಧ ಲೋಕ ಸುಲಿದರ್ಥ ನಿಧಿಗಳಿಸಿದ ಚಿನಿವಾರೆಂಬದ್ಹೇಳಲು 3 ಕುದುರೆಮಾವುತನೆಂಬರು ಎಲವೋ ರಂಗ ಕದನಗಡಕನೆನುವರು ಹದಿನಾರು ಸಾವಿರ ಸುದತಿಯರೊಶನಾದ ಸುಧೆಗಳಜಾರನೆಂಬ ವಿಧಿಯನ್ನು ಪೇಳಲು 4 ವಿಪಿನವಾಸಿಕನೆನುವರು ನಿಷ್ಕರುಣದಿ ನೀ ಕಪಿವರನ ತರಿದೆನುವರು ಕಪಟ ತಿಳಿಯುವರಾರು ಅಪರೂಪಮಹಿಮನೆ ಕೃಪಾನಿಧಿ ಶ್ರೀರಾಮ 5
--------------
ರಾಮದಾಸರು
ಈ ವಸುಧೆಯೊಳೆಲ್ಲರಿಗಿಂತ ಕೃಷ್ಣನು ಆವುದರಿಂದಧಿಕಾ ಪವಾರಿಧಿಮನೆಯಲ್ಲೆ ಈಗಿನರಸರಿಗೆ |ನೀರೊಳಗೇಸೊಂದು ಊರಿಲ್ಲವೇ ||ಶಾಙ್ರ್ಗ ಧನುವಾದರೇನು ದುರ್ಲಭವಲ್ಲ |ಧಾರಿಣಿಯೊಳು ಮನೆ ಮನೆಯಲ್ಲಿ ಕಾರ್ಮುಖವು 1ಲೇಸೇನು ಕೌಸ್ತುಭವೊಂದೆಯೇ ಮಣಿಗಳು |ಏಸೊಂದಿಲ್ಲದೆ ಭಾಗ್ಯವಂತರಲ್ಲಿ ||ಶೇಷನ ಹಾಸಿಗೆ ಹಾವಾಡಿಸಿ ಹೊಟ್ಟೆ |ಪೋಷಿಸಿಕೊಳ್ಳರೆ ಗಾರುಡಿಗರೆಲ್ಲ 2ಪೀತಾಂಬರಂತು ಎಲ್ಲರಿಗಿಹದು ದೊಡ್ಡ |ಮಾತಲ್ಲ ವನಮಾಲೆವೈಜಯಂತಿ||ಖ್ಯಾತಿಗೆ ಶಂಖಚಕ್ರವು ಹೇಳಿಕೊಳ್ಳಲು |ಜಾತಿಕಾರಗಿಲ್ಲೇ ಬಡಿವಾರವೇತಕೆ3ಶ್ರೀವತ್ಸ ಶ್ರೀವತ್ಸವೆಂಬರು ಮಂದೆಲ್ಲ |ಆವ ಹುಣ್ಣಿನ ಕಲೆಯಾಗಿಹದೋ ||ಆವಾನಿ ಹಯರಥ ಮುದಿಹದ್ದುಯೇರುವ |ಕೋವಿದರೆಲ್ಲೇನು ನೋಡಿ ವಂದಿಸುವರೋ 4ವೈಕುಂಠ ಮೊದಲಾದ ಮೂರೇ ಊರವನಿಗೆ |ಲೋಕದೊಳರಸರಿಗೇಸೋ ವೂರು ||ಶ್ರೀಕಾಂತ ಪ್ರಾಣೇಶ ವಿಠಲನ ಸಂಗ |ಬೇಕೆಂದು ಬಯಸುವರೆಲ್ಲರೂ ತಿಳಿಯದೆ 5
--------------
ಪ್ರಾಣೇಶದಾಸರು