ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರನಕುಮಾರನ ಚರಣಕಮಲಗಳಿಗೆರಗಿ ಶಾರದೆಗೆ ವಂದಿಸುತ ಶರಧಿಶಯನಗೆ ಸೆರಗೊಡ್ಡಿ ಬೇಡಿಕೊಂಬೆ ಶರಧಿಸುತÉಯ ಕತೆಗ್ವರವ 1 ಸಾಕ್ಷಾತ ಶ್ರೀಹರಿ ವಕ್ಷಸ್ಥಳ ವಾಸಿಯೆ ಇಕ್ಷುಚಾಪದವನ ಪಡೆದ ಮೋಕ್ಷದಾಯಕಳೆ ಮಾಲಕ್ಷುಮಿ ಕರುಣಾಕ- ಟಾಕ್ಷದಿ ನೋಡಬೇಕೆನ್ನ 2 ಶ್ರಾವಣಮಾಸದಿ ಮೊದಲ ಶುಕ್ಕುರುವಾರ ಮಾ- ಧವನರಸಿ ಮಾಲಕ್ಷ್ಮಿ- ದೇವೇರ ಮಹಿಮೆ ಕೊಂಡಾಡುವೋದೀ ಕಥÉ ಕಿವಿಗೊಟ್ಟು ಕೇಳೋದು ಜನರು 3 ಬಡವ ಬ್ರಾಹ್ಮಣನೊಂದು ಪಟ್ಟಣದೊಳಗಿದ್ದ ಮಡದಿ ಮಕ್ಕಳ ಸಹಿತಾಗಿ ಹಿಡಿದು ತಂಬೂರಿ ತಂಬಿಗೆಯ ಗೋಪಾಳಕ್ಕೆ ಬಿಡದೊಂದು ಮನೆಯ ತಿರುಗುತಲಿ 4 ಸೊಸೆಯರು ನಾಲ್ಕು ಮಂದಿಯು ಗಂಡುಮಕ್ಕಳು ಹಸುಗೂಸುಗಳು ಮನೆತುಂಬ ಅಶನ ವಸನವಿಲ್ಲ ಹಸಿದ ಮಕ್ಕಳಿಗ್ಹಾಲು ಮೊಸರು ಅನ್ನವು ಮೊದಲಿಲ್ಲ5 ಅತಿಗುಣವಂತರು ಗತಿಯಿಲ್ಲ ಗ್ರಾಸಕ್ಕೆ ಮಿತಭೋಜನವ ಮಾಡುವರು ವ್ರತ ನೇಮ ನಿಷ್ಠೆ ನಿರುತ ದರಿದ್ರವನು ಶ್ರೀಪತಿ- ಸತಿ ದಯದಿ ನೋಡಿದಳು 6 ಒಂದು ದಿನದಿ ಬಂದ ಮಂದಿ ಮಂದಿರದಲ್ಲಿ ಚೆಂದಾದ ಸುಣ್ಣ ಸಾರಣೆಯು ರಂಗವಲ್ಲಿ ಚಿತ್ರ ಬಣ್ಣಕಾರಣೆ ಮಣಿ- ಮುಂದೆ ತೋರಣ ಕಟ್ಟುತಿರಲು 7 ಮನೆಮನೆಯಲ್ಲಿ ಮಾಲಕ್ಷ್ಮಿದೇವಿಯರ ಚಟ್ಟಿಗೆ ಬರೆವು- ದನು ತಾ ಕಂಡು ಇದು ಏನು ನೋವಿ (ನೋಂಪಿ?) ಎನಗೆ ಹೇಳಬೇಕೆಂದು ಘನ ಭಕ್ತಿಯಿಂದ ಕÉೀಳಿದನು 8 ಕ್ಷೀರಸಾಗರದಲ್ಲಿ ಹುಟ್ಟಿದ ಮಾಲಕ್ಷ್ಮಿದೇವಿ ದೇವರ ಪಟ್ಟದರಸಿ ಶ್ರಾವಣಮಾಸ ಸಂಪತ್ತು ಶುಕ್ಕುರುವಾರ ನಾವು ಪೂಜೆಯ ಮಾಡಬೇಕು9 ಎನಗೊಂದು ಚಟ್ಟಿಗೆ ಬರೆದುಕೊಟ್ಟರೆ ಎನ್ನ ಮನೆಯಲ್ಲಿ ಇಟ್ಟು ಪೂಜೆಪೆನು ವಿನಯದಿಂದ್ಹೇಳಿಕೊಂಡರೆ ಒಂದು ಚಟ್ಟಿಗೆ ಬರೆದÀುಕೊಟ್ಟರು ಬಲಗೈಲಿ 10 ಸಿರಿದೇವಿಚಟ್ಟಿಗೆ ಹಿಡಿದು ಗೋಪಾಳಕ್ಕೆ ಹೋದನು ಮನೆ ಮನೆಯಲ್ಲಿ ಗೂಡೆ ಅಕ್ಕಿ ಬ್ಯಾಳೆ ಬೆಲ್ಲತುಪ್ಪವ ತಂದು ನೀಡೋರು ಹಿಡಿ ಹಿಡಿರೆಂದು 11 ಕುಸುಮ ಮಲ್ಲಿಗೆ ಪತ್ರಫಲಗಳು ಪೂಜಾ ಸಾಧನ ಪದಾರ್ಥಗಳು ಆದಿಲಕ್ಷ್ಮಿದಯ ಆದಕಾರಣದಿಂದ ಆದರದಿಂದ ಕೊಡುವರು 12 ತಂದ ಪದಾರ್ಥ ತನ್ನ್ಹೆಂಡತಿ ಕರೆದು ಮುಂದಿಟ್ಟು ವಾರ್ತೆಗಳ ಹೇಳಿದನು ಇಂದು ಪೂಜೆಯ ಮಾಡು ಆ- ನಂದವ ಕೊಡುವಳು ನಮಗೆ13 ಕಬ್ಬು ಬಿಲ್ಲ್ಹಿಡಿವೋ ಕಾಮನ ಮಾತೆ ಮಾಲಕ್ಷ್ಮಿ ಉರ್ವಿಯೊಳುತ್ತಮಳೀಕೆ ಹಬ್ಬದೂಟಕÉ ಹೇಳಿ ಬಂದೆ ಬ್ರಾಹ್ಮಣಗÉ ಮ- ತ್ತೊಬ್ಬ ಮುತ್ತೈದೆಗ್ಹೇಳೆಂದ14 ಚಿಕ್ಕಸೊಸೆ ಎಣ್ಣೆ ಕುಂಕುಮ ಕೈಯಲ್ಲಿ ತಕ್ಕೊಂಡು ನಡೆದಳ್ಹಾದಿಯಲಿ ಚೊಕ್ಕ ಚಿನ್ನದ ಗೊಂಬೆಯಂಥ ಮುತ್ತೈದೆ ತಾ ಗಕ್ಕನೆ ಬಂದು ಕೇಳಿದಳು 15 ಹುಡುಗಿ ನೀ ಎತ್ತ ಪೋಗುವಿಯೆ ನಿಮ್ಮನೆಯೆಲ್ಲೆ ಅಡಿಗೆಯೇನೇನು ಮಾಡುವರು ಹಿಡಿದೆಣ್ಣೆ ಕುಂಕುಮ ಕೊಡುವೋದಿನ್ನ್ಯಾರಿಗೆ ಕೊಡಬಾರದೇನೆ ನೀಯೆನಗೆ 16 ದಾರಾದರೇನಮ್ಮ ದಾರಿ ನೋಡದ ಮುಂಚೆ ನೀನೇ ಬಾ ನಮ್ಮ ಮಂದಿರಕÉ ಹೇಳಿ ಮುತ್ತೈದೆಗೆ ಹಿಗ್ಗಿಲೆ ಬಂದತ್ತೆ ಮಾವನ ಮುಂದರುಹಿದಳು 17 ಮನೆಯ ಸಾರಿಸಿ ಸುಣ್ಣ ಕಾರಣೆ ರಂಗೋಲಿಯ ಬರೆದು ಬಾಗಿಲಿಗೆ ಬಣ್ಣವನು ಎರೆದು ಕೊಂಡೆಲ್ಲರು ಬ್ಯಾಗ 18 ಕಮಲ ಕ್ಯಾದಿಗೆ ಕಬ್ಬು ಕದÀಳಿ ಕಂಬವು ಬಾಳೆಗೊನೆ ಕಟ್ಟಿ ಚಿತ್ರ ಮಂಟಪವ ನಡುವ್ಯ್ಹಾಕಿ ಪದ್ಮ ಪೀಠಗಳ 19 ಚಟ್ಟಿಗೆಯೊಳಗಕ್ಕಿ ಐದು ಫಲವ ತುಂಬಿ ಮುತ್ತೈದೇರೆಲ್ಲ ನೆರೆದು ಕಟ್ಟಿದರ್ ಕೊರಳ ಮಾಂಗಲ್ಯ ಮಾಲಕ್ಷ್ಮಿ ಪ್ರತಿಷ್ಠೆ ಮಾಡಿದರು ಸಂಭ್ರಮದಿ 20 ಅರಿಷಿಣ ಕುಂಕುಮ ಗಂಧ ಬುಕ್ಕಿ ್ಹಟ್ಟು ಗೆಜ್ಜೆ- ವಸ್ತ್ರವು ಪಾರಿಜಾತ ಸಂಪಿಗೆಯು ಮುಡಿಸಿ ಮಲ್ಲಿಗೆದಂಡೆ ಒಡೆಸೆ ತೆಂಗಿನಕಾಯಿ ಉಡಿ ತುಂಬುತ್ತತ್ತಿ ಫಲಗಳು 21 ಭಕ್ಷ್ಯಶಾವಿಗೆ ಪರಮಾನ್ನ ಚಿತ್ರಾನ್ನ ಸಣ್ಣಕ್ಕಿ ಶಾಲ್ಯಾನ್ನ ಸೂಪಗಳು ಚಕ್ಕುಲಿ ಗಿಲಗಂಜಿ ಚೆಂದ ಚಿರೋಟಿ ಹಪ್ಪಳ ಸಂಡಿಗೆ ಆಂಬೊಡೆಗಳು22 ಘೃತ ಕ್ಷೀರ ಸಕಲ ಪಕ್ವಾನ್ನ ಮಂಡಿಗೆ ಬೀಸೋರಿಗೆ ಗುಳ್ಳೋರಿಗೆಯು ಚಂದ್ರನಂತ್ಹೊಳೆವೊ ಶಾವಿಗೆಯ ಫೇಣಿಯು ದಿವ್ಯ ಬುಂದ್ಯ ಬುರುಬುರಿ ಅನಾರಸವು23 ಬೇಕಾದ ಬೇಸನ್ನು ಬಿಳಿಯದಳಿಯದುಂಡೆ (?) ಮೋತಿಚೂರು ಚೂರ್ಮಲಾಡು
--------------
ಹರಪನಹಳ್ಳಿಭೀಮವ್ವ
ಕೇಳೆ ಯಶೋದೆ ನಿನ್ನ ಬಾಲಕನಾಟಗಳೂ |ಹೇಳಿಕೊಂಡರೆ ಸುಳ್ಳೇ ಕಾಣಿಸಿತಮ್ಮ ಪನೀರೊಳಾಡುವನಲ್ಲೆ, ಪೋರರ ಕೂಡಿಕೊಂಡು |ಮಾರಿಯೆಂಬೊದೇನು ಸಾರಿ ಬಾಹೊದೆ 1ಎಲ್ಲರಂತುಂಡು ಮನೆಯಲ್ಲಾಡಬಾರದೆ |ಕಲ್ಲೆತ್ತುವನೆ ಯಂಥ ಬಲ್ಲಿದನಂತೆ 2ನಿಮ್ಮ ಹಿತಾರ್ಥನಾಗಿ ಸಮ್ಮೀಸಿ ಪೇಳಿದರೆ |ಬೊಮ್ಮನ ಮಗನಂತೆ ನಮ್ಮನ್ನೇ ಬೈವ 3ಮೂರು ಕಣ್ಣವಪರನಾರೇರ ಮುಟ್ಟಲಾರ |ಊರೊಳಗಿವ ಬಲು ಮೀರಿದನಮ್ಮ 4ಸಣ್ಣವನೆನಬೇಡ ನಿನ್ನ ಮಗನಗೋಪಿ|ಅನ್ನಿಥವಾಡೆವೆಮ್ಮ ಚಿನ್ನಗಳಾಣೆ 5ಬೆಂಕಿಗಂಜದೆ ನಿರಾತಂಕದರೊಳಗಿಹ |ಮಂಕುತನವ ನೋಡೆ ಪಂಕಜನೇತ್ರೆ6ಇನ್ನೊಂದು ಮಾತು ಕೇಳೆ ಮೊನ್ನೆ ಮೊನ್ನೆ ಒಬ್ಬ |ಹೆಣ್ಣಿನ ಕೊಂದನಲ್ಲೆ ಅನ್ಯಾಯ ನೋಡೆ 7ಕಿತ್ತಿದನೊಂದು ಮರ ಮತ್ತೆರಡು ಮೂರೀದ |ಮತ್ತಗಜವ ಕೊಂದುನ್ಮತ್ತನ ನೋಡೆ 8ಸದ್ಯ ಹೋಗಲೀನಿತು ಇದ್ದೊಬ್ಬವನು | ಅಪ್ರ-ಬುದ್ಧನಾಗಬಾರದು ಬುದ್ಧಿಯ ಹೇಳೇ 9ಅಧಮರೊಡನೆನಿತ್ಯಕದನಮಾಡುವದೇಕೆ |ಮಧುಸೂದನನ್ನು ಒಳ್ಳೆ ಹದನದಲ್ಲೀಡೆ 10ಕಾಣ ಬಂದದ್ದಾಡಲು ಪ್ರಾಣೇಶ ವಿಠಲಗೆ |ಹೀನ ತೋರುವದಮ್ಮಾ ಏನನ್ನಬೇಕೆ 11
--------------
ಪ್ರಾಣೇಶದಾಸರು