ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಓಡುತ ಹೋಗುತಾದೋ ಹೊತ್ತು ನೀನು ನೋಡೇನೆಂದರೆ ಆಗದು ಮತ್ತು ಪ ಬೇಡಲು ಬಿಡದೆಲೊ ಹೆಡತಲೆಮೃತ್ಯು ಹುಡುಕಾಡಿ ಪಡಕೋ ನೀ ಕೆಡದ ಸಂಪತ್ತು ಅ.ಪ ಗಜಿಬಿಜಿಸಂಸಾರ ಸೂಡಿಗೆ ನೀನು ಗಿಜಿಗಿಜ್ಯಾಗದೆ ನಿಲ್ಲು ಕಡೆಗೆ ಸುಜನರಿಗೊಂದಿಸಿ ಭುಜಗಾದ್ರಿಶಯನನ ನಿಜಪದ ಮಜದಿಂದ ಭಜಿಸಿಕೋ ತುರ್ತು 1 ಕಾಳನಾಳಿನ ದಾಳಿಗೆಲಿದು ಸ್ಥಿರ ಬಾಳುವ ನಿಜಪದವರಿದು ನೀಲಶಾಮನ ಲೀಲೆ ಮೇಲೆಂದ್ಹಿಗ್ಗುವ ದಾಸ ರ್ಹೇಳಿಕೆ ಕೇಳಿ ನೀ ಪಾಲಿಸು ತುರ್ತು 2 ನಡೆನುಡಿ ಎರಡೊಂದೆ ಮಾಡೊ ಇನ್ನು ಜಡಮತಿ ಗಡನೆ ಈಡ್ಯಾಡೋ ಪೊಡವಿಗಧಿಕ ನಮ್ಮ ಒಡೆಯ ಶ್ರೀರಾಮನೆಂ ದ್ಹೊಡಿ ಹೊಡಿ ಡಂಗುರ ದೃಢವಾಗಿ ಅರ್ತು3
--------------
ರಾಮದಾಸರು
ಪತಿಯಿಂದಲೆ ಸದ್ಗಿತಿಯೆಂಬುವಳು ಅತಿಮತಿಯೆನ್ನುವಳು ನಮ್ಮ ಶ್ರೀದೇವಿ ಪ ಕ್ಷಿತಿಯೊಳು ತನ್ನಯ ಪತಿಯೊಳು ಸಲ್ಲದೆ ಇತರವನೆಣಿಪಳೆ ಮೂದೇವಿ ಅ.ಪ ಗಂಡನು ಪುಂಡನು ಕುರುಡನು ಕುಂಟನು ಭಂಡಾಂಗನೆಯಂ ಕಲಹಿಪಳೆ ಮೂದೇವಿ 1 ಅತ್ತೆಮಾವನ ಹೇಳಿಕೆಗೆ ಪ್ರ ತ್ಯುತ್ತರಳಲ್ಲ ಶ್ರೀದೇವಿ ಕತ್ತೆಯಂತೆ ತಾ ಬಗಳುವ ಕಳ್ಳ ಚಿತ್ತಿನಿ ಹವುದೆಲೊ ಮೂದೇವಿ 2 ಅರಿಸಿನ ಕುಂಕುಮ ಹಣೆಯೊಳಗಿಡುವಳು ಅಡಿಯಾ ಗಿರುವಳು ಶ್ರೀದೇವಿ ಅನು- ಕರಿಸಲು ಬಾರದೆ ಕಳವಳಗೊಳುವಳು ಕರಠೆಕಮಾನಳು ಮೂದೇವೀ 3 ಶಿರಬಾಗಿ ತನ್ನರಸನ ಸೇವೆಯ ಹರುಷದೊಳಿರುಪವಳೆ ಶ್ರೀದೇವೀ ಕರಸಲು ಬಾರದೆ ಕಳವಳಗೊಳುವಳು ಕರಟಕ ತನುವಳು ಮೂದೇವೀ 4 ಇರುವ ಅತಿಥಿ ಅಭ್ಯಾಗತಗಳಿಗುಪ ಚರಿಸುವಳೆ ನಮ್ಮ ಶ್ರೀದೇವಿ ಗುರುವು ತುಲಶಿರಾಮಯೆಂದೆನ್ನುತ ಭಜಿಸದೆ ಯಿರುವಳೆ ಮೂದೇವೀ 5
--------------
ಚನ್ನಪಟ್ಟಣದ ಅಹೋಬಲದಾಸರು
ಪೇಳಲಳವಲ್ಲ ನಮ್ಮಯ್ಯನಾಟ ತಿಳಿವರಾರಿಲ್ಲ ಪ ಪೇಳೇನೆಂದರೆ ನಿಲುಕೊ ಮಾತಲ್ಲ ಹೇಳಿಕೆ ಕೇಳಿಕೆಗೆ ಮೀರಿದ ಮೇಲುಮಹಿಮನ ಲೀಲಾಜಾಲವ ಅ.ಪ ಸಾಧ್ಯ ಮಾತಲ್ಲ ಜಗಸೂತ್ರನಾಟಕೆ ಆದಿ ಅಂತಿಲ್ಲ ಜಗಮೂರರೊಳಗೆ ಸಾಧನಿಕರೆಲ್ಲ ನಿಜಭೇದ ತಿಳಿದಿಲ್ಲ ಸಾಧನಿಟ್ಟು ಆವಕಾಲದಿಂ ನಾದ ತಡೆಯದೆ ವೇದಗಳ ಬಿಡ ದೋದಿ ದಣಿದು ಇನ್ನು ಆದಿಮಹಿಮನ ಪಾದಕಾಣವು 1 ಬಾಗಿ ಅನುಗಾಲ ನಿಜತತ್ವಭೇದಿಸಿ ನೀಗಿ ಭವಮಾಲ ಜಡವಾದ ದುರ್ಭವ ರೋಗಗಳುಯೆಲ್ಲ ಪಾರಾಗಿ ನಿರ್ಮಲ ರಾಗಿ ಪರಮಯೋಗ ಒಲಿಸಿ ಯೋಗಿಗಳು ಮಹ ಉಗ್ರತಪದಿಂ ಯೋಗಬೆಳಗಿನೊಳಗೆ ನೋಡಲು ನಾಗಶಯನ ಮಹಿಮೆ ತಿಳಿಯದು 2 ಸಾನಂದಾದಿಗಳು ಮಹ ಭೃಗು ಗಾರ್ಗೇಯ ಮನು ಮುನ್ಯಾದಿಗಳು ದೇವರ್ಷಿ ನಾರದ ಶೌನಕಾದಿಗಳು ಘನ ಸಪ್ತಋಷಿಗಳು ಅನಂತಾನಂತ ಪ್ರಳಯದಿಂದ ಜ್ಞಾನ ಬೆಳಗಿನೋಳ್ನಿಂತು ನೋಡಿ ಕಾಣದೆ ಶ್ರೀರಾಮಪಾದ ಮೌನದೋಳ್ಮುಳುಗೇಳುತಿಹರು 3
--------------
ರಾಮದಾಸರು
ಮೂಕನಾಗೋ ಮನವೆ ನಿನಗೆ ಯಾಕೀ ಲೋಕ ಗೊಡವೆ ಪ ಮೂಕನಾಗಿ ಬಹುಜೋಕೆಯಿಂದ ನಡಿ ಏಕಾಂತ ಗುಟ್ಟೀ ಲೋಕರಿಗರುಹುದೆ ಅ.ಪ ಹೇಳಿದರೇನಾದೋ ನೀ ಬಲು ಕೇಳಿದರೇನಾದೊ ಹೇಳಿಕೆ ಕೇಳಿಕೆ ಗಾಳಿಯ ಮೊಟ್ಟ್ಯೆಂದು ನೀಲಶಾಮನ ಮನದಾಲಯದೊಳಗಿಟ್ಟು 1 ಅವನಿ ಗೊಡವೆ ಯಾಕೋ ಹರಿಯೆಂದು ಭವಭಯವನು ಕಳಕೋ ದಿವನಿಶಿ ನಿಜದನುಭವದೊಳಗಾಡುತ ಭವಗೆಲುವಿನ ಸುದ್ದಿ ಭವಿಗಳಿಗುಸುರದೆ 2 ಪಾದ ಪಿಡಿಯೋ ಮುಂದಿನ್ನು ಹುಟ್ಟು ಸಾವು ಗೆಲಿಯೊ ದುಷ್ಟಮತಿಗಳ ಗೋಷ್ಠಿಗೆ ಹೋಗದೆ ಬಿಟ್ಟಗಲದೆ ನಿಜಪಿಡಿದು ನೀತಿ 3 ಮತ್ರ್ಯಜನರ ಇದಿರು ನೀ ಬಲು ಗುಪ್ತದಿಂದಿರು ಚದುರ ಸತ್ಯತಿಳಿದು ಹರಿ ಸರ್ವೋತ್ತಮನಂಘ್ರಿ ಚಿತ್ತದಿ ನಿಲ್ಲಿಸಿ ಅತ್ಯಾನಂದಗೂಡಿ 4 ನಂಬಿಗಿಲ್ಲದಲ್ಲಿ ಸುಬೋಧ ಡಂಬವೆನಿಪುದಲ್ಲಿ ಜಂಬವಡಿಯದೆ ಕುಂಭಿನಿಯೊಳು ನೀ ನಂಬಿ ಶ್ರೀರಾಮನ ಗುಂಭದಿಂ ಭಜಿಸುತ 5
--------------
ರಾಮದಾಸರು