ಒಟ್ಟು 4 ಕಡೆಗಳಲ್ಲಿ , 1 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದೇ ನೋಡಿರೋ ನಿಜನೋಡಿರೋ ಧ್ರುವ ನೋಡಿನೋಡಿ ನೋಡಿ ನೋಡುದರೊಳು ಕೂಡಿ ನೋಡುವದೇನೆಂದು ನೋಡಿ ನೋಡಿದ ಮ್ಯಾಲಿನ್ನು ಮೂಡಿಬಂದರ ಘನ ನೋಡುವದೇ ಖೂನ ಮಾಡಿ ಮಾಡಿದ ಮಾಟವು ಕೂಡಿಬಂದರೆ ಕೈಯ ನಾಡಗೂಡ ಹೇಳಬ್ಯಾಡಿ ಗೂಢ ಗುಹ್ಯದ ಮಾತು ಒಡೆದು ಹೇಳುವದಲ್ಲಾ ನೋಡಿ ನಿಮ್ಮೊಳು ಬೆರೆದಾಡಿ 1 ಓದಿದರೋದಬೇಕಿದೊಂದೇ ಅಕ್ಷರ ಭೇದಿಸುವಂತೆ ಬ್ರಹ್ಮಾಂಡ ಇದೇ ಸಾಧಿಸಿನ್ನು ಮೂಲವ ತಿಳಿಯದೆ ಓದುವದ್ಯಾಕೆ ಉದ್ದಂಡ ಹಾದಿ ತಿಳಿಯದಿದ್ದರೆ ಹೇಳಿಕೊಡುವನು ಸದ್ಗುರು ಘನಪ್ರಪಂಚ ಭೋದಿಸಿ ಬ್ರಹ್ಮಾನುಸಂಧಾನದ ಸುಖ ಉದಯ ಮಾಡುವ ಅಖಂಡ 2 ನಾನ್ಯ ಪಂಥವೆಂಬ ಮಂತ್ರದನುಭವ ಚನ್ನಾಗ್ಯಾಗಬೇಕು ಖೂನ ಇನ್ನೊಂದು ಬ್ಯಾರೆಂಬ ಭಿನ್ನವಳಿದ ಮ್ಯಾಲೆ ತನ್ನೊಳಾಯಿತು ಸಮ್ಯಕಙÁ್ಞನ ಧನ್ಯ ಧನ್ಯ ಧನ್ಯ ಧನ್ಯಗೈಸುವದಿದು ಕಣ್ಣಾರೆ ಕಾಂಬೊ ಸಾಧನ ಉನ್ಮತವಾಗದೆ ಸನ್ಮತದೋರದು ಇನ್ನೊಬ್ಬರ ಕೇಳುವದೇನ 3 ಸರ್ವಮಿದಂ ಖಲು ಬ್ರಹ್ಮವೆಂಬುವ ಮಾತು ದೋರ್ವಾಂಗೆ ನೆಲೆಗೊಳಬೇಕು ಸರ್ವ ಸಾಕ್ಷಿ ಸರ್ವಾಧಾರವು ತಿಳಿಯದೆ ಗರ್ವಿತಲ್ಯಾಡುವ ಮಾತು ಹೋತು ಗುರ್ವಿನಂಘ್ರಿಗಿನ್ನು ಗುರುತವ ಕೇಳದೆ ಮವ್ರ್ಹಿನೊಳೀಹುದು ಮುಸುಕು ನಿರ್ವಿಕಲ್ಪನ ನಿಜ ಸ್ಮರಿಸುವಾಂಗೆ ಕಣ್ಣ ದೆರ್ವದಿದೊಂದೇ ಸಾಕು 4 ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಎಂದು ಗುರುವಿಗೆ ಕೇಳಿ ನಿಜ ವಂದ ದೇಹದ ಒಳಗಿಹ್ಯ ದ್ಯಾವರ ತಿಳಿದರ ಜನ್ಮಕೆ ಬಂದುದು ಚಂದ ಸೋಹ್ಯ ಸೊನ್ನೆಯ ಗುಹ್ಯವ ತಿಳಿದರ ಭವ ಮೂಲದಿಂದ ಬಾಹ್ಯಾಂತ್ರ ಪರಿಪೂರ್ಣ ಭಾಸುತಲ್ಯದೆ ಮಹಿಪತಿಗಿದೆ ಬ್ರಹ್ಮಾನಂದ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪ್ರಾಣಿ ದಿನ ಮೋಸಗಳೆಯಬ್ಯಾಡ ಧ್ರುವ ವಂದಿಸದೆ ಸಾಧು ಸಜ್ಜನರ ಶ್ರೀಪಾದವನು ಬರುದೆ ಶೋಧವಿಯ ನೀ ಮಾಡಬ್ಯಾಡ ಅರಿಯದ ಧಮರಸಂಗ ಕೂಡಬ್ಯಾಡ ಪರನಿಂದೆ ದೂಷಣೆಯ ಮಾಡಬ್ಯಾಡ ಗುರುಹಿರಿಯರ ಮಾತು ಮೀರಬ್ಯಾಡ 1 ಏನೆಂದು ತಿಳಿಯದೆ ಜ್ಞಾನಿಗಳ ಮಹಿಮೆಯನು ಅಜ್ಞಾನತನದಲಿ ಉಳಬ್ಯಾಡ ಹೀನ ಗುಣದಲಿ ನೀ ಬಾಳಬ್ಯಾಡ ಅನ್ಯಾಯತನವೆ ನೀ ಕೇಳಬ್ಯಾಡ ನಿನ್ನ ಸ್ತುತಿ ನೀನೆವೆ ಹೇಳಬ್ಯಾಡ 2 ನಿನ್ನೊಳು ನಿನ್ನ ಸ್ಥಿತಿಗಳನು ತಿಳಿಯದೆ ಕುಂದ ನೀ ನೋಡಬ್ಯಾಡ ನಾನೆ ದೊಡ್ಡವನೆಂದು ಆಡಬ್ಯಾಡ ಮಹಿಪತಿ ನೀ ದಗಿಯ ಬೀಳಬ್ಯಾಡ ಗುರು ಆಜ್ಞೆಯಿಂದ ಕಡಿಗ್ಯಾಗಬ್ಯಾಡ ಪ್ರಾಣಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಾತಿನಂತಲ್ಲನುಭವ ಜ್ಞಾನ ಮರುಳಜನ ಬಲ್ಲವೇನ ಯತಿಮುನಿಗಳು ಸಾಧಿಸುವ ಖೂನ ಮನೋನ್ಮನದ ಸಾಧನ ಧ್ರುವ ನುಡಿಜ್ಞಾನಾಡಿ ತೋರಬಹುದು ನಾಡ ಲೋಕದೊಳೆಲ್ಲ ನಡಿಜ್ಞಾನದೆ ದುರ್ಲಭವದು ಆಡಿ ದೋರಲಿಕ್ಕಿಲ್ಲ ಗುಹ್ಯ ನಿಜಬೋಧಿದು ಒಡೆದ್ಹೇಳುವದಲ್ಲ ಒಡನೆ ಸದ್ಗುರು ಘನ ದಯದಲಿದು ಪಡೆದವನೆ ತಾಂ ಬಲ್ಲ 1 ಕಲಿತಾಡುವ ಮಾತಿಗೆ ಸಿಲುಕದ ಮೂಲವಸ್ತುದ ಖೂನ ನೆಲೆನಿಭವೆ ತಾ ಅಗಮ್ಯಿದು ಬಲು ಸೂಕ್ಷ್ಮಸ್ಥಾನ ಬಲಿಯದೆ ರೇಚಕ ಪೂರ್ವಿದು ನೆಲೆಗೊಳ್ಳುದು ಸಾಧನ ನಿಲಕಡ್ಯಾಗದೆ ಕುಂಭಕಲಿದು ಬಲಿಯದು ಗುರುಙÁ್ಞನ 2 ಸ್ವಾನುಭವ ಸುಖ ಸಾಧಿಸಿ ಅನುದಿನದಿ ನೋಡಿ ಮನಗೆದ್ದು ಜನಕೆ ಮೋಹಿಸುವ ಅನುಭವ ಹೇಳಬ್ಯಾಡಿ ಭಾನುಕೋಟಿತೇಜನೊಲಿದು ತಾ ಖೂನಾಗುವ್ಹಾಂಗ ಮಾಡಿ ದೀನ ಮಹಿಪತಿ ಸ್ವಾಮಿ ಮನಗಂಡು ಮನೋಹರ ಕೊಂಡಾಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶ್ರೀಗುರು ಸೇವೆಯ ಮಾಡಿ ಸಾಯೋಜ್ಯ ಸದ್ಗತಿ ಕೂಡಿ ಧ್ರುವ ಮೂರು ರತ್ನದ ಪ್ರಭೆ ನೋಡಿ ಮೂರು ವಟ್ಟೆಯಾ ಮುರಿಗೂಡಿ ಆರು ಸ್ಥಳವ ಮುಟ್ಟಿನೋಡಿ ಏರಿಸು ಪಥವನು ಕೂಡಿ 1 ತುಟ್ಟತುದಿಯಲೇರಿ ನೋಡಿ ಮುಟ್ಟಿ ಚಿದ್ಘನ ಬೆರೆದಾಡಿ ನಟ್ಟನೆವೆ ಒಡಗೂಡಿ ಗುಟ್ಟುಗುಹ್ಯ ನಿಜವು ಹೇಳಬ್ಯಾಡಿ 2 ಮಹಿಪತಿ ನಿನ್ನೊಳು ನೋಡಿ ಐವರೊಂದಾಗಿನ್ನು ಕೂಡಿ ಪಾದ ಮಾಡಿ ಪಥ ಬೆರೆದಾಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು