ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನಂತ ನರನೆನ್ನಬೇಕೋ ಜಾನಕೀಶನ ಧ್ಯಾನ ಮನದೊಳಿಲ್ಲದವಗೆ ಪ ಸುಕೃತ ಒಡಗೂಡಿ ಮಾನವನಾದದ್ದು ಖೂನವಿನತಿಲ್ಲದೆ ಜ್ಞಾನಶೂನ್ಯನಾಗಿ ಶ್ವಾನನಂದದಿ ಕೂಗಿ ಹೀನಭವಕೆ ಬಿದ್ದು ನರಕಕ್ಹೋಗುವನಿಗೆ 1 ತಾನಾರೆಂಬ ವಿಚಾರವು ಇಲ್ಲದೆ ಏನೇನು ಸುಖವಿಲ್ಲದ್ಹೇಯಸಂಸಾರದ ಕಾನನದೊಳು ಬಿದ್ದು ಕುನ್ನಿಯಂದದಿ ಮಹ ಜಾಣರ ಜರೆಯುತ ಜವಗೀಡಾಗುವನಿಗೆ 2 ಹೇಸಿಪ್ರಪಂಚದ ವಾಸನ್ಹಿಡಿದು ಹಿಂದ ಕ್ಕೇಸೇಸು ಜನಮದಿ ಘಾಸಿಯಾದಂಥಾದ್ದು ಸೋಸಿಲಿಂ ತಿಳಕೊಂಡು ದಾಸಾನುದಾಸರ ದಾಸನಾಗದೆ ಕಾಲಪಾಶಕ್ಹೋಗುವನಿಗೆ 3 ಮಿಥ್ಯೆ ಕಾಣುವುದೆಲ್ಲ ನಿತ್ಯವಲ್ಲೆನ್ನುತ ಸತ್ಯವೃತ್ತಿ ತನ್ನ ಚಿತ್ತದೋಳ್ಬಲಿಸಲು ನಿತ್ಯ ಸುಖವನೀವ ಉತ್ತಮವಾದಂಥ ಹೊತ್ತನು ಕಳಕೊಂಡು ಮೃತ್ಯುವಶನಾಗುವಗೆ 4 ಸುಮನಸಕಲ್ಪದ್ರುಮ ತಂದೆ ಶ್ರೀರಾಮ ನಮಿತ ಚರಣ ಕಂಡು ನಮಿಸಿ ಪ್ರಾರಬ್ದವ ಕ್ರಮದಿ ಗೆಲಿದು ನಿಜ ವಿಮಲಪದ ಪಡೆವ ಸಮಯವನರಿಯದೆ ಯಮಲೋಕ ಸೇರುವಗೆ 5
--------------
ರಾಮದಾಸರು
ಕಾಯೊ ಕಾಯೊ ಜಿತಕಾಯ ಗುರು ಬಾದ ರಾಯಣ ತತ್ವಜ್ಞರಾಯ ಪ ನಾ ಯಾರಿಗೆ ಬಿನ್ನೈಪೆ | ಹೇಯಸಂಸಾರದ ಎರಡೊಂದು ಮಠದಲಿ ಧರಿಸಿ ತೂರ್ಯಾಶ್ರಮ ಸಿರಿಯರಸನ ದಿವ್ಯ ಮೂರ್ತಿಗಳ ಕರದಿಂದ ಪೂಜಿಸಿ | ಮರುತ ದೇವನ ಮತ ಪರಮಾನಂದವೆಂದು ಧರೆಗೆ ಬೀರಿದ ಕರುಣಿ 1 ಜ್ಷಾನಿಗಳರಹುವ | ವಾಣಿಯಿಂದಲಿ ದೇ ಮೌನಿವರಿಯ ಎನ್ನ | ಹೀನಪಾತಕವೆಂಬ ಕಾನನ ದಹಿಸೆಂದು | ಸಾನುರಾಗದಿ ನೋಡಿ 2 ಭೂಸುರ ಪರಿಪಾಲ | ಶ್ರೀ ಶಾಮಸುಂದರನ ಲೇಸಾಗಿ ಒಲಿಸುತಲಿ ಕಿಟಜದಲಿ ಭಾಸುರ ಘನವೇಣಿ | ಭೇಶಪುರದಿ ನೆಲಸಿ ದಾಸರ ಮನದಭಿಲಾಷೆ ನೀಡುವ ದಾನಿ 3
--------------
ಶಾಮಸುಂದರ ವಿಠಲ