ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥಾದೋ ಶ್ರೀ ವೈಕುಂಠವೆಂಥಾದೋ ಪ ಕಂತುಪಿತನ ದೇಹಕಿರಣ ಅದ ರಂತರಂಗ ಹೇಮಾಭರಣ ಕಾಂತಿ ಗಂತು ನಾಚಿದ ರವಿ ಅರುಣ ಅಹಾ ನಂತ ಕಾಲದಲ್ಲಿ ಸಂತತ ತುತಿಪರ್ಗೆ ಪ್ರಾಂತಕ್ಕೆ ನಾಲ್ಕು ನಿಶ್ಚಿಂತ ಮುಕ್ತಿಯ ಸ್ಥಾನ 1 ಪಾಲಸಾಗರ ಮಧ್ಯೆ ಕೂಟ ಒಳ ಗೇಳು ಸುತ್ತಿಸಾಗರ ದಾಟಿ ತಾಳ ಮೇಳದವರು ಮೂರುಕೋಟಿ ನಾಮ ಪೇಳ್ವ ಗಾಯಕರ ಗಲಾಟೆ ಆಹ ಶೀಲ ಮುನಿಗಳು ದೇವ ಗಂಧರ್ವರು ಜೀವನ್ಮುಕ್ತರುಗಳು ಸೇರಿಪ್ಪ ಹರಿಪುರ2 ಹೇಮ ಪ್ರಾಕಾರದ ಪುರವು ಅಲ್ಲಿ ಆ ಮಹ ಬೀದಿ ಶೃಂಗಾರವು ನೋಡೆ ಕಾಮಧೇನು ಕಲ್ಪತರುವು ಬಲು ರಮಣೀಯವಾದ ಇರವು ಆಹಾ ಶ್ರೀ ಮೂರುತಿಯೊಂದು ವೇದಾಂತಶ್ರುತಿ ಸಾರೆ ಆ ಮಹಮುಕ್ತರು ಸೇರಿಹ ಮಂದಿರ 3 ಸುತ್ತಲು ಸನಕಾದಿ ಮುನಿಯ ದಿವ್ಯ ನರ್ತನ ಗಾಯನ ಧ್ವನಿಯು ಪುಷ್ಟ ವೃಷ್ಟಿ ಚಂಪಕ ಜಾಜಿ ಹನಿಯು ಅಲ್ಲಿ ಅಷ್ಟಮ ಸ್ತ್ರೀಯರ ಮನೆಯು ಆಹಾ ಪಾದ ಸಂ ಪತ್ತಿಗೀ ಶಯನ ಸರ್ವೋತ್ತಮನ ಗೃಹ 4 ಥಳಥಳಿಸುವ ದಿವ್ಯದ್ವಾರ ಅಲ್ಲಿ ಹೊಳೆವಂಥ ರಂಗಮಂದಿರ ಮುತ್ತಿ ಭಾರ ಹೇಮ ತುಳಸಿ ಸರದ ಶೃಂಗಾರ ಆಹಾ ಹೊಳೆವ ಮಾಣಿಕದ ಮಂಟಪ ಮಧ್ಯದೊಳ್ಮೆರವ ಚೆಲುವ ಜಗನ್ನಾಥ ವಿಠಲನ ನಿಜಸ್ಥಾನ 5
--------------
ಜಗನ್ನಾಥದಾಸರು
ನಿನ್ನ ನೋಡಿದೆ ಕನ್ಯಕುಮಾರಿ | ನಿನ್ನ ನೋಡಿದೆ ಎನ್ನ ಪಾಪಗಳ ನೀಡ್ಯಾಡಿದೆ ಪ ಹಿಮರಾಜಪುತ್ರಿ | ಹೇಮಾಭರಣಗಾತ್ರಿ ಆ ಮಹಾ ಪವಿತ್ರಿ | ಆನಂದ ನೇತ್ರೆ 1 ಉಡುರಾಜನಂತೆ ತಿಲಕದಾಕಾಂತಿ ನೋಡುತಾಲಿ ನಿಂತೆ | ಓಡುತಾಲಿ ಬಂದೆ 2 ಕೋಟಿಸೂರ್ಯಕಿಂತ ಮೇಟಿ ಆ ದಂಥ ಮಾಟವಾದ ಮುಖವ ನೋಡುತ್ತಾ ನಿಂತೆ 3 ತಂದೆ ನಾರಸಿಂಹ ವಿಠಲನ್ನದಯದಿ ಬಂದೆ ಈ ದಿನದಿ ನಿಂದು ಕರುಣಿಸಿದೆ 4
--------------
ಓರಬಾಯಿ ಲಕ್ಷ್ಮೀದೇವಮ್ಮ
ರಕ್ಷಿಸೆನ್ನನು ಲಕ್ಷ್ಮೀರಮಣ ಸುರಪಕ್ಷಪಾವನ ಪದ್ಮಚರಣ ಮೋಕ್ಷದಾಯಕ ಹಿರಣ್ಯಾಕ್ಷ ಸಂಹರಣ ಪ ಅಸುರರ ಸಂಹರಣ ಶ್ರೀ ರಂಗ ನಾಮವೆ ಪಾಪಭಂಗ ಸಂಹರಣ 1 ದುರಿತನಾಶನ ನಾಮಸ್ಮರಣ ಭೂರಮಣ ತುಳಸಿ ಮಾಲಾಭರಣ 2 ಕಮಲಭವಾರ್ಜಿತ ಚರಣ ಚಾರುವಿಮಲ ಭಾಸ್ಕರ ಶಶಿಕಿರಣ ವಿಮಲಾತ್ಮಕ ಕಾಮಪಿತ ಹೇಮಾಭರಣ 3 ವಾಣಿ ಪತಿಯ ಪೆತ್ತ ಸುಗುಣ ಮಾಯಾಶ್ರೇಣಿ ಪೂತನಿಯ ಸಂಹರಣ ಹರಣ 4 ಮೇಲೆ ಬಾಣ ಭೀಮನಕೋಣೆವಾಸಿ ನಾರಾಯಣ 5
--------------
ಕವಿ ಪರಮದೇವದಾಸರು