ಒಟ್ಟು 21 ಕಡೆಗಳಲ್ಲಿ , 14 ದಾಸರು , 21 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದು ಕಾಂಬೆನೆ ಯದುವರನಾ| ತಂದು ಲೋಲಿಸೆ ಸಖಿಜಿತ ರೂಪಸ್ಮರನಾ ಪ ಶಿರಿದೇವಿ ಪ್ರೀಯನ ಶರಣಾಶ್ರಯನಾ| ಭವ ಭವ ಮುಖರೊಡೆಯನಾ 1 ವಿಮಲೆ ಚರಣನಾ ಕಮಲೇಕ್ಷಣನಾ| ದುರಿತ ಕುಲದೀನೋದ್ಧರನಾ 2 ಹೇಮಾಂಬರನಾ ಶಾಮಸುಂದರನಾ| ಕಾಮಿತಾರ್ಥವ ನೀವ ಕರುಣಾ ಸಾಗರನಾ 3 ತಂದೆ ಮಹಿಪತಿಯಾ ನಂದನ ಸಾರಥಿಯಾ| ಹೊಂದಿದವ ಕಾಂಬಾನಂದ ಮೂರಿತಿಯಾ4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಮಲ ಸಂಭವೆ ಹಿಮನಗಜಾರಮಣ ಸನ್ನುತೆ ತಮರಿಪು ಶತ ಸಮಸನ್ನಿಭೆ ಇಭ ಇಂದಿರೆ ಶೋಭಾನೆ ಪ ಶೃಂಗಾರ ತರಂಗ ಹೆಳಲಾ ಬಂಗಾರವ ಪೊಂಗ್ಲಾದಿಗೆ ಬಲಿ ವಂಗನೆ ಶಿರೋಮಂಗಳ ಮಡಿ ಜಡ ಜಂಗಮ ವ್ಯಾಪ್ತಿ ಅಂಗಜ ಶರ ಕಂಗಳೆ ದ್ವಿಜೋ ತ್ತುಂಗಮ ರಂಗನ ನಿಜ ಅ ರ್ಧಾಂಗಿನಿಯೆ ಬಾ ಹಸಿಯ ಜಗುಲೀಗೆ 1 ಪೊಸುಕುಸುಮ ಶಿರಸದಲೊಪ್ಪುವ ನೊಸಲಲಿ ರಂಜಿಸುವ ಕಸ್ತೂರಿ ದಿಶದುಂಬಿದ ಬಿಸಿಜಾನನ ಪ್ರಭೆ ಎಸೆವ ಕಂಧರ ಕಕ್ಕಜ ಕುಚಕು ಪ್ಪುಸದಲ್ಲತಿ ಶೋಭಿಸುತಿಹ ಪವಳ ದಾ ಸರವ ತೂಗುವ ಅಸಮೇ ಬಾ ಹಸೆಯ ಜಗುಲೀಗೆ 2 ಕರಿಸೊಂಡಿಲುತೆರ ಚತುರಕರ ವರ ಅಭಯಸರಸಿಜಯುಗಧರ ಜಠರಾ ವರತ್ರಿವಳಿ ಗಂಭೀರನಾಭಿ ಕ ಟಸೂತರೆ ಹೇಮಾಂಬರೆ ಚರಣಂದಿಗಿ ಸಪಳಿ ಪೊಂಗೆಜ್ಜೆಯಾ ಮೆರೆಯುತ ಸರಸಳೆ ಬಾಹಸಿಯ ಜಗುಲೀಗೆ 3 ಮೃಗಲಾಂಛನೆ ಮಿಗೆ ಶೋಭಿಪ ಪದ ನಖ ಪಂಕ್ತಿಗಳೊಪ್ಪುವ ಗತ ಅಗಣಿತ ಮಹಿಮಳೆ ಸುಗುಣ ಸಂಪನ್ನೆ ಭಗವಂತನ ಜಘನದಿ ಪೊಳೆಯುತ ಖಗರಾಜನ ಪೆಗಲನೇರಿ ಅಮ ರ ಗಣವ ಚಿರ ಬಾ ಹಸಿಯ ಜಗಲೀಗೆ 4 ಅಂಭೃಣಿ ಸ್ವಾಯಂಭೂ ಸುರ ನಿಕು ರುಂಬಕರ ಅಂಬುಜ ಪೂಜಿತೆ ನಂಬಿದ ಜನರ್ಹಂಬಲಿಸುವ ಫಲ ಸಂಭ್ರಮದಿ ಕೊಡುವಾ ಗಂಭೀರಾ ಸು ಖಾಂಬೋಧಿ ಹರಿ ನಿತಂಬೆ ಪ ಯಾಂಬೋಧಿ ಸುತೆ ಜಗದಂಬೆ ಬಾ ಹಸಿಯ ಜಗುಲೀಗೆ 5 ಮಾಯೆ ನಾರಾಯಣಿ ಶ್ರೀ ಭೂ ಕೃತಿ ಆಯತಾಕ್ಷಳೆ ಕಾಯಜನ ತಾಯೆ ಶರಣೆ ಪ್ರಿಯ ಪಾವನ್ನೆ ವಾಯುಭುಕು ಶಾಯಿ ಅಮರಾಧೇಯಾ ಜಗನ್ನಾಥವಿಠಲನ ಜಾಯೆ ಬಾ ಹಸಿಯ ಜಗುಲೀಗೆ 6
--------------
ಜಗನ್ನಾಥದಾಸರು
ಕಾಯಿ ಕಾಯಯ್ಯಾ | ಅನಾಥ ಬಂಧೋ ಪ ಶರಣರ ದುರಿತಪಹರಣ ಸುಪಾವನ | ಚರಣನೆ ಕೌಸ್ತುಭಾಭರಣ ಹೇಮಾಂಬರಾ | ತರಣಿ ಶತ | ಕಿರಣ ವಿರಾಜಿತ ಕರುಣಾ ಸಿಂಧೋ 1 ವಾರಣಭಯ ನಿವಾರಣ ಸುರಜನ | ತಾರಣ ದೈತ್ಯ ವಿದಾರಣ ಸೃಷ್ಟಿಯೆ | ಕಾರಣ ಚಿತ್ಸುಖ ಪೂರಣ ಮುನಿಜನ | ಪ್ರೇರಣ ಫಣಿಮದ ಹಾರಣ ಧೀರಾ2 ಚಕೋರ ಸು | ಚಂದಿರ ಸ್ಮರಚಿತ ಸುಂದರ ಸದ್ಗುಣ | ಮಂದಿರ ವಿಧಿಹರ ವಂದ್ಯ ಮುಕಂದನೇ | ತಂದೆ ಮಹಿಪತಿ ನಂದನ ಪ್ರಾಣಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗಿರಿತನುಜಾ ತನಯಂ ವಂದೇತಂ ಪ ಹರಿಹರ ವಿನುತಂ ಸುರಪತಿನಮಿತಂ ಕರಧೃತ ಪಾಶಾಂಕುಶ ದಯಭರಿತಂ ಅ.ಪ ಸಾಮಜವದನಂ ಮಣಿಮಯರದನಂ ಹೇಮಾಂಬರಧರ ಕರುಣಾಸದನಂ ಕಾಮಿತ ಫಲದಂ ಸರಸಿಜನಯನಂ ಶ್ರೀಮಾಂಗಿರಿವರದಾ ಭಾವಿತಮದನಂ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಚಿಂತಯಾಮಿ ತ್ವಾಮದ್ಯಾಹಂ ಚಿಂತಯಾಮ್ಯಹಂ ಚಿಂತಿತಾರ್ಥದಂ ಭಜತಾಂ ಚಿಂತಾಮಣಿಂ ಚಿಂತಾಪಹಂ ಪ ಭಾನುನಿಭ ನಖರಾಜಂ ಜ್ಞಾನಾಶ್ರಯಪಾದಾಂಭೋಜಂ ದೀನಜನ ಭಯೋದ್ವೇಜಂ ಜಾನೂರು ಸುರುಚಿ ಭಾಜಂ 1 ಹೇಮಾಂಬರ ವಿರಾಜಿತಂ ಹೇಮಸೂತ್ರ ಸುಶೋಭಿತಂ ವ್ಯೋಮಾಲಯ ಪಾದಯುಕ್ತಂ ಕೋಮಲ ಶ್ಯಾಮಾಂಗ ದ್ಯುತಿಂ 2 ಇಂದಿರಾಶ್ರಿತ ವಕ್ಷಸಂ ಗಂಧಹಾರಮಣಿಭಾಸಂ ಮಂದರಮಾಲಾವತಂಸಂ ಕಂದರ್ಪಕೋಟಿ ವರ್ಚಸಂ 3 ಚಕ್ರಾದ್ಯಾಯುಧ ಭ್ರಾಜಿತಂ ನಕ್ರಕುಂಡಲ ಶೋಭಿತಂ ಶಕ್ರಾನನಂ ಸುವಿಸ್ಮಿತಂ ವಕ್ರಾಳಕ ತತಿ ತತಂ 4 ಕಸ್ತೂರೀ ತಿಲಕ ಫಾಲಂ ವಿಸ್ತøತಮೌಳಿ ಭಾಜಾಲಂಪ್ರಸ್ತುತ ವೆಂಕಟಶೈಲಂ ಸುಸ್ಥಿತ ಕೀರ್ತಿವಿಶಾಲಂ 5
--------------
ತಿಮ್ಮಪ್ಪದಾಸರು
ಧೀಮಂತಮನಂತಂ ಚಿಂತಯಾಮಿ ಭಗವಂತಂ ಪ ಹೇಮಾಂಬರವೇಷ್ಟಿತಂ ಸಾಮಜವರಪೂಜಿತಂಅ.ಪ ವಾಸವಾದಿ ಸನ್ನುತಂ ಮಾರುತಾತ್ಮಜಾನತಂ ವಾಸುದೇವಮಚ್ಯುತಂ ಸೋಮಶೇಖರಾರ್ಚಿತಂ 1 ಭಾಸಮಾನಮಣಿಯುತಂ ಮೌನಿನಿಕರಸೇವಿತಂ ಕೋಸಲೇಯ ಮಾಂಗಿರೀಶಿಖರ ನಿಲಯರಾಜಿತಂ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾಲಿಸು ಪರಮೇಶ್ವರಿ ಅಂಬಾ ಪ ಶ್ರೀಲಲಿತೇ ಗೌರಿ ಶೌರಿಸಹೋದರಿ ಫಾಲಾಕ್ಷಸಹಚರಿ ಬಾಲೇಂದುಶೇಖರಿ ಅ.ಪ ಭ್ರಮರಾಂಬೆ ದುರಿತಾರಿ ಹಿಮವಂತ ಸುಕುಮಾರಿ ಹೇಮಾಂಬರಧಾರಿ ಜಗದೀಶ್ವರೀ ಜಂಭಾರಿ ವಿನುತೆ ಮಾಹೇಶ್ವರಿ ಶ್ರೀಮಾಂಗಿರೀನಾಥ ಪ್ರೇಮಾಂಬುಲಹರೀ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬೆಳಗಿರೆ ಹರುಷದಿ ಆರುತಿಬೇಗ | ಸತಿ ಮುದದಿ ಶಿರಿ ನಿಲಯನಿಗೀಗ ಪ ನಿರಂಜನ | ನಿರಾಮಯ | ನೀರೇರುಹದಳ ಲೋಚನ ನರಪ್ರಿಯ | ಸುಮಹಿತ ಸುಚರಿತ ಮರುತ ವಿನುತಗೆ 1 ದೀನಾಪ್ತಗೆ | ಶ್ರೀನಾಥಗೆ | ಆನಂದಾತಿಶಯದಲಿ ಸಭೆಯೊಳು ಮಾನಿನಿಯಳ ಅಭಿಮಾನ ಕಾಯ್ದವಗೆ 2 ಹೇಮಾಂಬರ | ಶ್ರೀಮಾವರ | ಪ್ರೇಮಾದರದಿ | ಸು ಶುಭಮೂರುತಿಗೀಗ ಆರುತಿ ಬೇಗ 3
--------------
ಶಾಮಸುಂದರ ವಿಠಲ
ಭೀಮಸೇನನ ಸ್ತ್ರೀವೇಷ ಭೀಮನು ಸರ್ವಜನಾ ಮೋಹಿಸುವಂಥಕಾಮಿನಿ ರೂಪವ ತೊಟ್ಟನು ಪ ಸೋಮ ಸಮಾನನ ತಾಮರಸಾಂಬಕಹೇಮಾಂಬರ ಕಂಠೀಮಣಿ ಗಣ ಸು -ತ್ರಾಮ ಕಾಮಿನಿಯಾ ಮೋಹಿಪ ಅಬಿ -ರಾಮರೂಪ ನಿಸ್ಸೀಮ ಬಲಾಢ್ಯ ಅ.ಪ. ಬಟಕುಚಪಟ ಕರಪುಟದಿಂದ ಹಿಗ್ಗಿಸಿ ತೀಡುತ ಅಂ-ಗುಟ ತುದಿಲೆಳೆದೆಳೆದುಟಿ ರಕ್ತಿಮೆಯನು ನೋಡುತಕುಟಿಲಾಳಕನ್ಯಾವರಿಸುತ ಪಟುಮಾತಾಡುತವಿಟರಿಗೆ ಸ್ಮರಸಂಕಟವನು ಹೃದಯದಲೂಡುತ ಪುಟ್ಟಚಂಡ ಹಾರಿಸಿ ನಟನೆ ಮಾಡುವಾ -ರ್ಭಟಕಂಜಿಹ ವಿಟಪಟಲ ಹಾಂಗಿರಲದುವಟುರಿದ್ದರು ಯತಿ ಮಠಮಂದಿರ ಲಂ -ಪಟವ ಬಿಟ್ಟ ಮಿಟಿಮಿಟಿ ನೋಡುವರೋ 1 ಕರಿಕಲಭಗಮನ ಸೊರಗಿದ ಕಟಿಕಂಠೀರವುವಿಠಲ ನಯನಜತ ಎರಳೆಗಳ್ ಮನೆಯನು ಸೇರವುಸರಸ ಸ್ವರದಿಂದ ಪರಿಭ್ರಮಿಸಿತು ಕಲಕಿರವುಸುರನರವರ ಸುಂದರಿಯರ ಚಲುವಿಕೆ ಮಾರವು ಹೆರಳ್ ಬಂಗಾರವು ಮಲ್ಲಿಗೆ ಸರಗೀ ಸರಹರಳ್ ಕಂಕಣ ಬಳೆ ಸರಳ್ ಬೆರಳುಂಗುರಅರಳ್ ಮಲ್ಲಿಗೆ ಸರ ಕೊರಳ್ ಗಂಧವ ಕಂಡುಮರುಳ್‍ಗೊರಡ ಜನ ಹಗಲಿರುಳು ಧೇನಿಪರೊ 2 ಮೃಗಮದತಿಲಕವು ಮುಗುಳ್ ನಗೆಮೊಗ ಬಿಂಬಾಧರಖಗಯುಗದಂದದಿ ಝಗಝಗಿಸುತಿಹ ಪಯೋಧರಅಘಹರ ರಾಜಗೋಪಗ ಸಖ ಪಾರ್ಥ ಸಹೋದರಬಗೆ ಬಗೆಯಲಿ ಮನದಗ ಅಘಹರನ ಕೃತಾದರಮುಗುಳ್ ಮಲ್ಲಿಗೆ ಸರ ತೆಗೆತೆಗೆದ್ಹಾಕುತಸೊಗಸು ಸುಗುಣರೂಪ ತಗುಬುಗಿಲೆನುತಿರೆಜಗದ ಜನರ ಮನ ಭುಗಿಭುಗಿಲೆನುತಿರೆಬಗೆ ಬಗೆಯಲಿ ಒಂದ್ಹಗಲ್ಯುಗವಾಗೆ 3
--------------
ರಾಜಗೋಪಾಲದಾಸರು
ಮಾನವ ಸಿಂಗನ ಪಾಡಿರೈ ಪ ಇಂಗಡಲಜೆಪತಿ | ಮಂಗಳ ಚರಿತ ಭು ಜಂಗಶಾಯಿ ಶುಭಾಂಗ ಅ.ಪ ಲಾಲಿಸಿ ದೇವ | ಮಹಾನುಭಾವ | ಅವತರಿಸಿದನು ಅಸುರಾಂತಕ | ಪ್ರೇಮದಲಿ ಗೋಕುಲದಲ್ಲಿ | ವಿಧಿ ಕುಲ ಜಾತ 1 ತಂದೆ ತಾಯ್ಗಳ ಬಂಧನ ಬಿಡಿಸಿದ ಧೀರ | ಭಕ್ತಮಂದಾರ | ಒಂದೆ ಬೆರಳಲಿ ಗೋವರ್ಧನ ಶೈಲವನು | ತಾ ಧರಿಸಿದನು ಮದವನು ಮುರಿದ | ಮೋದವಗರೆವ ಕರವ | ಕರುಣದಿ ಪಿಡಿವ 2 ಶ್ವೇತ ವಾಹನ ಸೂತ ಕಾಮಜನಕ ಸತ್ಯಭಾಮೆ ರಮಣ ಗೋಪಾಲ | ಸ್ವಾಮಿ ಕುಲಾಲ ಭೀಮಗೊಲಿದ ನಿಸ್ಸೀಮ ಮಹಿಮಾ ಶ್ರೀ ಗೌರಿ | ಮಾತುಳವೈರಿ ಹೇಮಾಂಬರಧರ ಶಾಮಸುಂದರ ವಿಠಲ | ಧೃತವನಮಾಲ3
--------------
ಶಾಮಸುಂದರ ವಿಠಲ
ರಾಜೀವ ನಯನೆಯ ಪೂಜೆ ಮಾಡುವ ಬನ್ನಿರೆ ಪ. ಪೂಜೆ ಮಾಡುವ ಬನ್ನಿ ಮೂಜಗದಂಬೆಯ ರಾಜರಾಜೇಶ್ವರಿಯ ಪದರಾಜೀವಗಳಿಗೆರಗಿ ವಿನಯದಿ ಅ.ಪ. ಸನ್ನುತಾಂಗಿಯರೆಲ್ಲರೂ ಬನ್ನಿರೆ ಸಂ ಪನ್ನ ಗುಣಯುತರು ಚಿನ್ನದ ಕಲಶದೋಳ್ ತುಂಬಿದ ಪನ್ನೀರಿಂ ಸೆನ್ನಿಯಂ ತೊಳೆದು ಸಿರಿಪದ ವನ್ನು ಸಂಸ್ಮರಿಸಿ ಹರಿಯನು 1 ಪ್ರೇಮಗೌರವವೆಂಬ ಹೇಮಾಂಬರವ ಭಾಮಿನಿಗಳವಡಿಸುವ ಭಾವರಾಗದ ಕುಂಕುಮ ತಿದ್ದಿಫಾಲದೆ ಭಾವನಾಯೋಗದೊಳ್ ನಲಿಯುತ 2 ಗುರುಗಳಾಣತಿಯಂದದಿ ಶ್ರೀಪಾದದಿ ಶರಣು ಬೇಡಿರೆ ಮೋದದಿ ವರಶೇಷಗಿರೀಶನ ಕರುಣಾರೂಪಿಣಿಯೆನಿಪ ಭರಿತ ಮಾನಸರಾಗಿ ಸಂತತೆ 3
--------------
ನಂಜನಗೂಡು ತಿರುಮಲಾಂಬಾ
ಶ್ರೀ ಮಹಾಲಕ್ಷ್ಮೀ ಮಾತೆ ತ್ರಿಭುವನ ಜನನಿಶ್ರೀಮಂತ ವಿಷ್ಣುವಾಮಾಂಕಸದನಿ ಪ. ತಾಮರಸಾಸನ ವ್ಯೋಮಾಳಕ ಸುರ-ಸ್ತೋಮ ವಿನುತೆ ಹೇ ಸೋಮ ಸಹೋದರಿಅ.ಪ. ಕರ್ಮ ಇಂಧನ ಕಾಲವೆ ಮಹಾಅನಳ ಜನರ ಸಾಧನವೆಂಬ ದರ್ವಿಲಿಇನಿತು ಪಾಕವ ಮಾಡಿ ಘನಮಹಿಮನ ಭೋ-ಜನಕನುಕೂಲ ಮಾಡ್ದ ವನರುಹನಯನೆ 1 ಕಳೇವರ ಕೊಳುತಲಿಹಲವು ವಿಧಾರ್ಚನೆಗಳಲಿ ಪತಿಯನುಒಲಿಸಿ ವಲ್ಲಭನ ತೋಳಲಿ ಬಿಗಿದಪ್ಪಿದಬಲುಸುಖಜಲನಿಧೆ ಸಲಹೆ ನಮಿಸುವೆ 2 ಹೇಮಾಂಬರ ಚಾರು ಶ್ರೋಣಿಅಮಿತ ಸುಗುಣೆ ಶೋಭಿತ ಅಬ್ಜಸದನೆತಮಹಾರಿ ಗೋಪಾಲವಿಠಲನರ್ಧಾಂಗಿಯೆಸಮರೂಪ ಸಮಕಾಲ ಸಮದೇಶ ವ್ಯಾಪುತೆರಮೆ ಅನುಪಮೆ ಸಮೆ ನಮಿಸುವೆ ಎನ್ನ ಭವ-ಶಮಲವಳಿದು ಹೃತ್ಕಮಲದಿ ಹರಿತೋರೆ 3
--------------
ಗೋಪಾಲದಾಸರು
ಶ್ರೀ ವನಿತೆ ವೈನತೇಯ ವಾರುತೆ ದೇವಾದಿ ವರವಿನುತೆ ಕಾವದು ಯೆನ್ನ ನೀ ವದಿಗಿ ಮುನ್ನೆ ಈವದು ವರ ಆವದುವಲ್ಲೆ ರಾಜೀವ ಚರಣದ ಸೇವೆಯ ಪಾಲಿಸು ಕೋವಿದರೊಡನೆ ಪ ಸಮಸ್ತಲೋಕ ವಂದಿತೆ ಸಂತತ ಮತ್ತೆ ತಾಮಸ ಜ್ಞಾನ ಹರತೆ ಸಾಮಗಾಯನ ಪ್ರೀತೆ ಸಕಲವಿದ್ಯಾತೀತೆ ರೋಮ ರೋಮ ಗುಣ ಭರಿತೆ ರಾಮನ್ನ ಪದ ನಾಮವನ್ನು ನಾ ಮರೆಯದಂತೆ ನೀ ಮನಸು ಕೊಡು ಹೇಮಾಂಬರೆ ಕಾಂಚಿದಾಮೆ ಅಮಮ ನಿ- ವನಧಿ ಸೋಮೆ ಕಾಮ ಜನನಿ ತ್ರಿಧಾಮೆ ಪುಣ್ಯನಾಮೆ ಕೋಮಲಾಂಗಿ ಸತ್ಯಭಾಮೆ ರಮೆ ಪೂರ್ಣ ಕಾಮೆ ಸುರಸಾರ್ವಭೌಮೆ 1 ಚಂದನ ಗಂಧಲೇಪಿನೀ ಚತುರವಾಣೀ ಮಂದಹಾಸಗಮನೀ ಗಂಧಕಸ್ತೂರಿ ಜಾಣಿ ಗಂಭೀರ ಗುಣಶ್ರೇಣಿ ಸಿಂಧುತನಯೇ ಕಲ್ಯಾಣಿ ಇಂದಿರೆ ಪದ್ಮಮಂದಿರೆ ಕಂಬು ಕಂಧರೆ ಸರ್ವಸುಂದರೆ ಮಾಯೆ ಬಂದೆನು ಕರುಣದಲಿಂದ ನೋಡು ಶತ - ಕಂಧರÀರಿಪು ಸುಖಸಾಂದ್ರ ನಿರಾಮಯೆ ಹಿಂದಣ ಕಲ್ಮಷ ವೃಂದಗಳೋಡಿಸಿ ನಿಂದೆ ನಮೋನಮೋ ಯೆಂದೆ 2 ನಿತ್ಯ ಸಲ್ಲಾಪೆ ಅನ್ನಂತಾನಂತ ರೂಪೆ ಕನ್ಯಾಮಣಿಯೆನಿಪೆ ನಿನ್ನ ಕಡೆಗಣ್ಣಿನ ನೋಟ- ವನ್ನು ಹರಹಿ ಹಿರಣ್ಯಗರ್ಭಾದಿ- ಅನುದಿನ ಧನ್ಯನ ಮಾಳ್ಪಳೆ ಅನ್ಯರಿಗೆ ಕಾರ್ಪಣ್ಯ ಬಡದಂತೆ ಚನ್ನ ವಿಜಯವಿಠ್ಠಲನ್ನ ಪೂಜಿಪ ಗುರು ರನ್ನೆ ಪುರಂದರರನ್ನ ಪೊಂದಿಸು ಸಂ-ಪನ್ನೆ ಯೆನ್ನ ಪ್ರಾಸನ್ನೆ 3
--------------
ವಿಜಯದಾಸ
ಶ್ರೀಕಾಮಕೋಟಿ ಲಾವಣ್ಯಮೋಹನ ರೂಪಿನ ಶ್ರೀಕಾಂತ ಮಂಗಳ ಮೂರುತಿ ವರದೇವಾ ಪ ಶ್ರೀಮಣಿಮೌಳಿ ಮಸ್ತಕದ ಕಸ್ತುರಿಯ ಲ ಲಾಮವೆಸೆವ ವರ ಫಣಿಯಾ ಭ್ರೂಮಧ್ಯದೊಳೆಳೆವರೆಯಂತೊಪ್ಪುವ ನಾಮದ ಪಿರಿನೊಸಲಾ1 ತಾಮರಸಾಯತನೇತ್ರದಾನತಸು ಕ್ಷೇಮಾಂಕುರದ ನೋಟದ ಚಾಮೀಕರ ಕುಟ್ಮಲ ನಾಸಿಕದಭಿ ರಾಮ ಸುಮೌಕ್ತಿಕದಾ2 ಮಾ ಮನೋಹರ ಚುಬುಕಾಗ್ರದ ನವಪಲ್ಲ ವಾ ಮಿಳಿತಾಧರದ ಸೋಮವದನದೆಳನಗೆಯೂ ಪೊಳೆವಟ್ಟ ಕೌಮುದಿಯಾ ಸೊಗಸಿನಾ 3 ರಾಮಣೀಯಕವದನ ಮಕರಕುಂಡಲದ ಸು ರಾಮಯದ ಕದಪಿನ ಕಾಮನೀಯ ಕಂಬುಕಂಠದ ಸಿರಿತುಳ ಸೀ ಮಂದಾರಮಾಲೆಯ 4 ಜೀಮೂತ ಸವಿಯನೆ ರಂಜಿಪ ಸು ಶ್ಯಾಮಲ ರುಚಿರಾಂಗದ ಕಮಲ ಕಂಬು ನಿ ಸ್ಸೀಮ ಚಕ್ರಾಯುಧಂಗಳಾ 5 ಶ್ರೀಮೆರೆವುರದ ಶ್ರೀವತ್ಸಕೌಸ್ತುಭ ದಿ ವ್ಯಾಮೋದ ಗಂಧ ಲೇಪದ ಸೌಮಾನಜಂ ತಾಳ್ದುಪವೀತದ ಮಣಿ ಸ್ತೋಮಾಭರಣಂಗಳಾ 6 ಸಾಮಾಜಿಕರ ಸನ್ನಿಭ ರಂಜನದು ದ್ದಾಮ ಸುಬಾಹುಗಳಾ ನೇಮಿತಾಂಗದ ತೋಳಬಂದಿ ಕಂಕಣಮುಂ ಗೈಮುರಾರಿ ಮುದ್ರೆಯಾ 7 ಐಮೊಗದಹಿಯ ತೆರದ ಕರಕಮಲದ ಸೈಮಿರುಪಂಗುಲಿಗಳಾ ರೋಮಾವಳಿಯ ಪೊಳೆವ ಪೊಡೆವಲರ ಪಿ ತಾಮಹಮುದಿತ ನಾಭಿಯಾ 8 ಹೇಮಾಂಬರದಸಿಮಧ್ಯದ ಕಾಂಚೀ ಧಾಮದ ಕಟಿತಟದ ಪ್ರೇಮಿತ ಊರುಗಳ ಸಜಾನುಗಳ ಮುದದಿಂ ತಾಳ್ದ ವಾಮಜಂಫೆಯ ತೊಡರಿನ ಪೊಂಗೆಜ್ಜೆಗಳ9 ಭೂಮಿ ಪಾವನ ಗಂಗೆಯುದಿಸಿದುಂಗುಟದ ಯ ಶೋ ಮಹಿಮೆಯ ಚೆಲ್ವಿನಾ ಪ್ರೇಮದೊಳಾನತರಂ ಸಲಹುವ ಸುರಪುರ ಮ - ಹಾಮಾತೆ ಲಕ್ಷ್ಮೀಪತಿ ಪಾದಪದ್ಮದ 10
--------------
ಕವಿ ಲಕ್ಷ್ಮೀಶ
ಸಾರಸನಯನ ನಮೋ ನಮೋ ಪ ನಾರಾಯಣ ಗೋವಿಂದ ನಮೋ ಅ.ಪ. ದೀನ ಜನಾವನ ದಾನವ ಮಥನ ಶ್ರೀ ನಿಕೇತನ ಕೌಸ್ತುಭಾಭರಣ 1 ದಾಮೋದರ ದುರಿತಾರಿ ಪರಾತ್ಪರ ಹೇಮಾಂಬರಧರ ವನಮಾಲಾಧರ 2 ಸಾರಸಾಪ್ತನು ಸಾರುತಿಹನು ತವ ಸಾರಸಪಾದದ ಚಾರುದರುಶನಕೆ 3 ಮಾರ್ತಾಂಡನ ಬಲು ಚಂಡಕಿರಣವೆಮ್ಮ ನೇತ್ರಪಟುತ್ವ ಕುಂದಿಸುವುದು ಕೇಳ್ 4 ತರಣಿ ಪ್ರಕಾಶದಿ ತಪಿಸುತಿಹೆವು ನಾವ್ ಪೊರೆವುದೆಮ್ಮನು ಕರಿಗಿರೀಶನೆ 5
--------------
ವರಾವಾಣಿರಾಮರಾಯದಾಸರು