ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂತು ನೋಡುವಿಯನ್ನ ಅಂತ ಹರಿಯೇ| ಕಂತುಪಿತ ಕೈವಿಡಿದು ಕಡೆಗಾಣಿಸಯ್ಯಾ ಪ ಆಶೆಯೆಂಬಾ ಮಹಾ ಹೆಸರುಳ್ಳ ಆ ನದಿಯು| ಲೇಶ ಅಂತಿ-ಲ್ಲದಾ ಚಿಂತೆ ಥಡಿಯು| ಸೂಸುತಿವೆ ಇದರೊಳಗ ಮನೋರಥವೆಂಬ ಜಲ| ಘಾಸಿ ಮಾಡುವ ಬಯಕೆ ಲಹರಿ ಬರುತಿದೆ 1 ದೋರುತಿದೆ ಸಂಸಾರ ತಾಪದಾವಾನಳವು | ಹರಿದು ಬರುತಿದೆ ಕಾಳಸರ್ಪ ತಾನು | ಅರಿಷಡ್ವರ್ಗಗಳನು ಉತ್ತುಂಗ ಜಲ ಚರವು | ತೆರಗಾಣೆ ಮೋಹಸುಳಿಯಲಿ ಬಿದ್ದ ಬಳಿಕಾ 2 ನಿನ್ನ ನಾಮವೆಂಬ ಸಂಗಡಿಯನು ಕಟ್ಟಿ| ಮುನ್ನಿನ ಪರಾಧಗಳ ಕ್ಷಮೆಯ ಮಾಡಿ| ಸನ್ನುತನೆ ಮಹಿಪತಿ ಸುತ ಪ್ರಾಣದೊಡಿಯನೆ| ನಿನ್ನ ದಾಸರ ದಾಸನೆಂದು ದಯಮಾಡಿ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದುರಿತಗಜ ಪಂಚಾನನ-ನರಹರಿಯೆ ದೇವರ ದೇವ ಕಾಯೊ ಗೋವಿಂದ ಪ ಹೆಸರುಳ್ಳ ನದಿಗಳು ಒಳಗೊಂಬೊ ಸಮುದ್ರನುಬಿಸುಡುವನೆ ಕಾಲುಹೊಳೆಗಳ ಗೋವಿಂದ 1 ಒಂದು ಮೊಲಕೆ ಆರು ಹುಲಿ ಬಂದು ಕವಿದಿದೆಬಂಧನ ಬಿಡೆಸೆನ್ನ ತಂದೆ ಗೋವಿಂದ 2 ಹೆತ್ತ ಮಕ್ಕಳು ಹುಚ್ಚರಾದರೆ ತಾಯಿ ತಂದೆಎತ್ತದೆ ನೆಲಕೆ ಬಿಸುಡುವರೆ ಗೋವಿಂದ 3 ಕರ್ಮ ಬೆನ್ನ ಬಿಡದಿದ್ದರೆನಿನ್ನ ವಾಲೈಸಲ್ಯಾಕೆ ಗೋವಿಂದ4 ಆಪÀತ್ತು ತಾಪತ್ರಯ ಬೆನ್ನ ಬಿಡದಿದ್ದರೆಶ್ರೀಪತಿ ಶರಣೆನ್ನಲ್ಯಾಕೆ ಗೋವಿಂದ5 ಅರಸು ಮುಟ್ಟಲು ದಾಸಿ ರಂಭೆಯಾದಳು ದೇವಪರುಷ ಮುಟ್ಟಲು ಲೋಹ ಸ್ವರ್ಣ ಗೋವಿಂದ 6 ಮಾನಾಭಿಮಾನದೊಡೆಯ ರಂಗವಿಠಲಜ್ಞಾನಿಗಳರಸನೆ ಕಾಯೋ ಗೋವಿಂದ 7
--------------
ಶ್ರೀಪಾದರಾಜರು
ಯಾವ ಹೆಸರಿನಿಂದೆ ಕರೆದರೇನುಪಾವನಾತ್ಮನೆ ಬರನೆಸ್ವಾ ಸರ್ವೋತ್ತಮನುಪ ಸಾವಿರ ಹೆಸರುಳ್ಳ ಅವನಿಗೆ ಹೆಸರಿಂದೇನುದೇವನೊಬ್ಬನೆ ಜಗಕೆ ಎಂಬ ನುಡಿ ಸುಳ್ಳೇನುಭಾವಭಕುತಿಗಳಿಂದ ಕರೆದೊಡನೆ ಬರುವನುಠಾವು ಕಾಲಗಳಿಲ್ಲಿ ಆತನಿಗೆ ಬಹಳೇನು 1 ಅಲ್ಲಾ ಎಂದರೆ ಬರುವ ಶಿವನೇ ಎಂದರೂ ಬರುವಾಗೊಲ್ಲ ಕೃಷ್ಣನೆ ಬಾರ ಎಂದರಾತನೆ ಬರುವಅಲ್ಲಿ ಇವ ಇಲ್ಲಿ ಅವ ಎಂದು ಬಡಿದಾಡಿದರೆಖುಲ್ಲರೆಂದರೇನು ಬಲ್ಲವರು ಮರುಳಾ 2 ವಿಧವಿಧ ನುಡಿಗಳಲಿ ಬೇರೆ ಶಬುದಗಳಿರಲುಅದು ಪರಾರ್ಥವೆ ಬೇರೆ ತಾನಾಗುವದೇನುಹದಿನಾರು ಪಥಗಳನೆ ಹಿಡಿದೊಂದು ಹೋದೊಡನೆ ಅದರಿಂದಲಾ ಊರು ಸೇರಿಸುವುದಿಲ್ಲವೇನು 3 ಹೃದಯದಲಿ ನಿಜವಾದ ಭಕುತಿಯನು ಬೇಡುವನುಇದನರಿತು ಪ್ರತಿದಿನದಿ ಭಜಿಸುವರು ಮುನಿಜನರುಗದುಗಿನಲಿ ವಾಸಿಸುವ ಶ್ರೀ ವೀರನಾರಾಯಣನುಮುದದಿಂದ ಸಲಹುವನು ಸಂದೇಹವೇನು 4
--------------
ವೀರನಾರಾಯಣ
ವರವ ಕೊಡೆ ತಾಯೆ ವರವ ಕೊಡೆ ಪ. ಶರಧಿಯ ಕನ್ನೆ ನೀ ಕೇಳೈ ಸಂಪನ್ನಳೆ ಸೆರಗೊಡ್ಡಿ ಬೇಡುವೆನಮ್ಮ ವರವ ಕೊಡೆ ನೆರೆ ನಂಬಿದೆನು ನಿನ್ನ ಚರಣಕಮಲವನು ಪರಿಹರಿಸೆಮ್ಮ ದಾರಿದ್ರ್ಯ ಕಷ್ಟವ ತಾಯೆ1 ಹೊಳೆವಂಥ ಅರಸಿನ ಹೊಳೆವ ಕರಿಯ ಮಣಿ ಸ್ಥಿರವಾಗಿ ಕಟ್ಟುವಂಥ ವರವ ಕೊಡೆ ತಾಳೋಲೆ ಹೊನ್ನೋಲೆ ತೊಳೆದೊಯ್ದ ಬಿಚ್ಚೋಲೆ ಯಾವಾಗಲಿರುವಂಥ ವರವ ಕೊಡೆ 2 ಬಾಗಿಲ ತೋರಣ ಮದುವೆ ಮುಂಜಿ ನಾಮಕರಣ ಯಾವಾಗಲಾಗುವಂಥ ವರವ ಕೊಡೆ ಬಂಧುಬಳಗ ಹೆಚ್ಚಿ ಹೆಸರುಳ್ಳ ಮನೆ ಕಟ್ಟಿ ಉಂಡಿಟ್ಟಿಡುವಂಥ ವರವ ಕೊಡೆ 3 ಹಾಲ ಕರೆಯುವ ಮೇಲಾದ ಸರಳೆಮ್ಮೆ ಸಾಲಾಗಿ ಕಟ್ಟುವಂಥ ವರವ ಕೊಡೆ ಕಂಡಕಂಡವರಿಗೆ ಕರೆದು ಮೃಷ್ಟಾನ್ನವ ತಿಳಿ ನೀರು ಕೊಡುವಂಥ ವರವ ಕೊಡೆ 4 ಲಕ್ಷ್ಮೀನಾರಾಯಣನ ವಕ್ಷಸ್ಥಳದಲ್ಲಿ ಲಕ್ಷ್ಮಣವಾಗಿರುವಂಥ ಮಹಾಲಕ್ಷ್ಮಿ ಅಷ್ಟೈಶ್ವರ್ಯವು ಪುತ್ರಸಂತಾನವ ಕೊಟ್ಟು ರಕ್ಷಿಸುವವಮ್ಮ ವರವ ಕೊಡೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ವರವ ಕೊಡೆ ತಾಯೆ ವರವ ಕೊಡೆ ಪ.ಶರಧಿಯ ಕನ್ನೆ ನೀ ಕೇಳೈ ಸಂಪನ್ನಳೆಸೆರಗೊಡ್ಡಿ ಬೇಡುವೆನಮ್ಮ ವರವ ಕೊಡೆನೆರೆನಂಬಿದೆನು ನಿನ್ನ ಚರಣಕಮಲವನುಪರಿಹರಿಸೆಮ್ಮ ದಾರಿದ್ರ್ಯ ಕಷ್ಟವ ತಾಯೆ 1ಹೊಳೆವಂಥ ಅರಸಿನ ಹೊಳೆವ ಕರಿಯಮಣಿಸ್ಥಿರವಾಗಿ ಕಟ್ಟುವಂಥ ವರವ ಕೊಡೆತಾಳೋಲೆ ಹೊನ್ನೋಲೆ ತೊಳೆದೊಯ್ದ ಬಿಚ್ಚೋಲೆಯಾವಾಗಲಿರುವಂಥ ವರವ ಕೊಡೆ 2ಬಾಗಿಲ ತೋರಣ ಮದುವೆ ಮುಂಜಿ ನಾಮಕರಣಯಾವಾಗಲಾಗುವಂಥ ವರವ ಕೊಡೆಬಂಧುಬಳಗ ಹೆಚ್ಚಿ ಹೆಸರುಳ್ಳಮನೆಕಟ್ಟಿಉಂಡಿಟ್ಟಿಡುವಂಥ ವರವ ಕೊಡೆ 3ಹಾಲ ಕರೆಯುವ ಮೇಲಾದ ಸರಳೆಮ್ಮೆಸಾಲಾಗಿ ಕಟ್ಟುವಂಥ ವರವ ಕೊಡೆಕಂಡಕಂಡವರಿಗೆ ಕರೆದು ಮೃಷ್ಟಾನ್ನವತಿಳಿ ನೀರು ಕೊಡುವಂಥ ವರವ ಕೊಡೆ 4ಲಕ್ಷ್ಮೀನಾರಾಯಣನ ವಕ್ಷಸ್ಥಳದಲ್ಲಿಲಕ್ಷ್ಮಣವಾಗಿರುವಂಥ ಮಹಾಲಕ್ಷ್ಮಿಅಷ್ಟೈಶ್ವರ್ಯವು ಪುತ್ರಸಂತಾನವಕೊಟ್ಟು ರಕ್ಷಿಸುವವಮ್ಮ ವರವ ಕೊಡೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ