ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇಶದೊಳಗೀ ಕ್ಷೇತ್ರ ಬಲು ಉತ್ತಮಾ ದಾಸೋಹಂ ಎಂದೆನಲು ಗತಿಗೆ ಪಥವ ಕೊಡುವ ಪ ಹರಿಸರ್ವೋತ್ತಮನೆಂದು ನೆರಪಿದಂಥ ಮುನಿ ವರನ ಶಾಪದಲಿ ಪಾವಕನು ಬಂದು ಪರಮತಪ ಮಾಡಿದನು ವರವಿತ್ತ ಪುಷ್ಕರಣಿ ಎನಿಸುವುದು1 ದಿವಿಜರಿಗೆ ಸೋತು ದಾನವರು ಶುಕ್ರಗೆ ಹೇಳಿ ಶಿವನೊಲಿಸೆ ಅಮೃತವ ಮಾಳ್ಪೆನೆಂದು ಕವಿ ಇಲ್ಲೆ ತಪಮಾಡೆ ಅಂದು ಸುರಧೇನು ವಾ ಸವನ ಕೈಕೊಳಲು ಶ್ರೀರಾಮನಿಂದಲಿಗತಿ 2 ರಾಯ ಋಷಿಗಾಧೇಯು ಬ್ರಹ್ಮತ್ವಗೋಸುಗ ಗಾಯತ್ರಿ ಒಲಿಸಿದನು ಈ ಸಿಲೆಯಲೀ ಆಯು ಉಳ್ಳದರೊಳಗೆ ಇಲ್ಲಿ ಕುಳಿತು ಬಂದು ಗಾಯತ್ರಿ ಮಂತ್ರವನು ಜಪಿಸೆ ನರನು ಮುಕ್ತಾ 3 ಅಗಸ್ತೀಶ್ವರವಿಡಿದು ರಾಮಲಿಂಗ ಪರಿಯಂತ ಬಗೆಬಗೆ ತೀರ್ಥ ಎರಡೊಂದು ಪದ್ಮ ಮಿಗೆ ಷೋಡಶಕೋಟಿ ಅರವತ್ತು ಸಾವಿರ ಸೊಗಸಾಗಿವಿಪ್ಪವಿಲ್ಲಿ ಕಾವೇರಿ ಮಧ್ಯದಲ್ಲಿ 4 ರಾಮನಾಥನ ಪುರವೆಂಬೊ ಪೆಸರೆ ಉಂಟು ವ್ಯೋಮಕೇಶನು ನಾಲ್ಕು ಹೆಸರಿನಿಂದಾ
--------------
ವಿಜಯದಾಸ
ಯಾವ ಹೆಸರಿನಿಂದೆ ಕರೆದರೇನುಪಾವನಾತ್ಮನೆ ಬರನೆಸ್ವಾ ಸರ್ವೋತ್ತಮನುಪ ಸಾವಿರ ಹೆಸರುಳ್ಳ ಅವನಿಗೆ ಹೆಸರಿಂದೇನುದೇವನೊಬ್ಬನೆ ಜಗಕೆ ಎಂಬ ನುಡಿ ಸುಳ್ಳೇನುಭಾವಭಕುತಿಗಳಿಂದ ಕರೆದೊಡನೆ ಬರುವನುಠಾವು ಕಾಲಗಳಿಲ್ಲಿ ಆತನಿಗೆ ಬಹಳೇನು 1 ಅಲ್ಲಾ ಎಂದರೆ ಬರುವ ಶಿವನೇ ಎಂದರೂ ಬರುವಾಗೊಲ್ಲ ಕೃಷ್ಣನೆ ಬಾರ ಎಂದರಾತನೆ ಬರುವಅಲ್ಲಿ ಇವ ಇಲ್ಲಿ ಅವ ಎಂದು ಬಡಿದಾಡಿದರೆಖುಲ್ಲರೆಂದರೇನು ಬಲ್ಲವರು ಮರುಳಾ 2 ವಿಧವಿಧ ನುಡಿಗಳಲಿ ಬೇರೆ ಶಬುದಗಳಿರಲುಅದು ಪರಾರ್ಥವೆ ಬೇರೆ ತಾನಾಗುವದೇನುಹದಿನಾರು ಪಥಗಳನೆ ಹಿಡಿದೊಂದು ಹೋದೊಡನೆ ಅದರಿಂದಲಾ ಊರು ಸೇರಿಸುವುದಿಲ್ಲವೇನು 3 ಹೃದಯದಲಿ ನಿಜವಾದ ಭಕುತಿಯನು ಬೇಡುವನುಇದನರಿತು ಪ್ರತಿದಿನದಿ ಭಜಿಸುವರು ಮುನಿಜನರುಗದುಗಿನಲಿ ವಾಸಿಸುವ ಶ್ರೀ ವೀರನಾರಾಯಣನುಮುದದಿಂದ ಸಲಹುವನು ಸಂದೇಹವೇನು 4
--------------
ವೀರನಾರಾಯಣ
ಮಲವು ತೊಳೆಯಬಲ್ಲುದೆಮನವ ತೊಳೆಯದನಕ ಪಹಲುವು ನೀರಿನೊಳಗೆ ಪೊಕ್ಕುಹಲುಬಿದರಿನ್ನೇನು ಫಲ? ಅಪಬೋಗಫಲವನುಂಡು ವಿಷಯ ಭೋಗದಿಂದ ಮತ್ತರಾಗಿಭೋಗಬೇಡಿ ಜನರು ಜೀವಕಾಗಿ ಮುನಿವರುಯೋಗಿಯಂತೆ ಜನರ ಮೆಚ್ಚುಗಾಗಿ ಹೋಗಿ ಉದಯದಲ್ಲಿಕಾಗೆಯಂತೆ ಮುಳುಗಿದರೆ ಅಮೋಘ ಫಲವು ಬಾಹೊದೆ? 1ಪರರ ಕೇಡಬಯಸಿಗುರು - ಹಿರಿಯರನ್ನು ನಿಂದಿಸುತಪರಮ ಸೌಖ್ಯದಿಂದ ಪರಸ್ತ್ರೀಯರನ್ನ ಆಳುತಪರಮಯೋಗನಿಷ್ಟೆಯೆಂದು ಧರೆಯ ಮೇಲೆ ಡಂಭತೋರಿಹರಿವ ನದಿಯ ತೀರದಲ್ಲಿ ಪರಿಯು ಬಕ ಧ್ಯಾನದಂಥ 2ತಂದೆ - ತಾಯಿ ತಿರುತಿನ್ನಲು ಒಂದು ದಿವಸ ಕೇಳಲಿಲ್ಲಮಂದಗಮನೆಯರೊಡನೆ ಆನಂದದಿಂದ ನಲಿಯುತತಂದೆಯ ಹೆಸರಿನಿಂದ ನೂರು ಮಂದಿಗುಣಿಸಿ ಹರುಷದಿಂದತಂದೆ ತೃಪ್ತನಾದನೆಂಬ ಮಂದಮತಿಯ ಜನರುಗಳ 3ಕಾಸವೀಸಕ್ಕಾಗಿ ಹರಿಯದಾಸನೆಂದು ತಿರುಗಿ ತಿರುಗಿದೇಶದಿಂದ ದೇಶಕಿಳಿದು ಕಾಶಿಯಾತ್ರೆ ಮಾಡಲುಆಶಾಪಾಶ ಬಿಡದ ಮನದ ಕೂಸಿನಂತೆ ಕಾಡುತಿಪ್ಪವೇಶಧಾರಿಗಳಿಗೆ ಆ ಕಾಶಿಯ ಫಲ ಬಾಹೊದೆ? 4ಏನು ಮಾಡಲೇನು ಫಲ - ಏನು ನೋಡಲೇನು ಫಲಜ್ಞಾನವಿಲ್ಲದಚ್ಯುತನ ಧ್ಯಾನವಿಲ್ಲದವರಿಗೆಮೌನ ನೇಮ ನಿಷ್ಠೆ ಪರಾಧೀನವೆಂಬುದ ತಿಳಿದುಕೊಂಡುದೀನನಾಥ ಪುರಂದರವಿಠಲನ ನಿಲುಕಲೊಲ್ಲದೆ 5
--------------
ಪುರಂದರದಾಸರು