ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಳಯ್ಯ ರಂಗಯ್ಯ ಪ ತಮ್ಮವರೆಂದು ತಾಳಿ | ಸುಮ್ಮನಿರುವವರಲ್ಲ ||ಹಮ್ಮಿಲಿ ಹರಿಸಿ ಬಂದು ನಮ್ಮನೆ ದೂರುವರೋ 1 ಮೊಸರನ್ನೆಲ್ಲ ಸುರಿದಾನೆಂದುಸುರು ಹಾಕಿದರೆ |ನಮ್ಮ ಹೆಸರಿಗೆ ಮರಗಿ ಮುಖವು ಹಸಿರಿಡುದಯ್ಯಾ 2 ಬಾಲಕರ ಹೆಗಲನೇರಿ | ಪಾಲನೆಲ್ಲವಕಿತ್ತೆಳೆದು |ಬಾಲೇರ ಬಳಲಿಸುವದು ಬಾಲ ಬೇಕೇನೋ 3 ಸರಿಯಿಲ್ಲದವರ ಕೂಡ | ಮರೆಯಿಲ್ಲದೆ ಮಾತಾಡಿ |ಸೆರಗ ಸೆಳೆದರೆ ನಮ್ಮ ಹಿರಿಯತನವೇನೋ 4 ಚಿಕ್ಕತರದವರು ನಮಗೆ | ಸೊಕ್ಕಿನವನೆಂಬುವರು |ರುಕ್ಮಭೂಷಗೆ ಈ ಮಾತು ತಕ್ಕದಹುದೇನೋ 5
--------------
ರುಕ್ಮಾಂಗದರು
ಗುರುವೆನ್ನ ತಾಯಿ ಸದ್ಗುರುವೆನ್ನ ತಂದೆ ಗುರುಕೃಪೆ ಪಡೆದು ನಾ ಹೆಸರಿಗೆ ಬಂದೆ ಪ ಗುರುವೆನ್ನ ಪ್ರಾಣಲಿಂಗಾ ಗುರುವೆನ್ನ ಇಷ್ಟಲಿಂಗಾ ಗುರುಪ್ರಕಾಶವು ಬೆಳಗುತಿರೆ ಸರ್ವಾಂಗಾ ಗುರುಸ್ಮರಣೆ ಸುಖರಂಗಾ ಗುರುಕರುಣಾ ಕೃಪಾಂಗಾ ಗುರುವಿಂದಧಿಕ ಕಾಣೆ ಶಿವನಾಣೆ ಗುರುವೆನ್ನ 1 ಗುರುವೆ ಈ ಪೃಥವಿಯು ಗುರುವೆ ಆಕಾಶವು ಗುರುವೆ ಸ್ಥಾವರ ಜಂಗಮವೆಲ್ಲವು ಗುರುರೂಪವೆಂದು ಶ್ರೀ ಗುರು ಕರುಣದಂದರಿತು ಗುರು ಸರ್ವರಿಗೆ ಸರಿಯಲ್ಲಾ ಶಿವಬಲ್ಲ 2 ಗುರುವೆ ದೇವಾಂಗಾ ಶ್ರೀ ಗುರುವೆ ಬಸವಲಿಂಗಾ ಗುರು ಬ್ರಹ್ಮವಿಷ್ಣುರುದ್ರ ಸ್ವರೂಪ ಗುರು ಧರಣಿಪಾಲಾ ಗುರು ವಿಮಲಾನಂದ ಲೋಲಾ ಗುರು ಸಿದ್ಧೇಶ್ವರಸ್ವಾಮಿ ಭಕ್ತ ಪ್ರೇಮಿ 3
--------------
ಭಟಕಳ ಅಪ್ಪಯ್ಯ
ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಗುರುನಾಥ ಬಾಹ್ಯಾಂತ್ರ ಪರಿಪೂರ್ಣ ನೀನೆ ಸದೋದಿತ ಸಹಕಾರ ನಿಜವಸ್ತು ನೀನೆ ಅಖಂಡಿತ ಗುಹ್ಯ ತಿಳಿಯದೊ ನಿನ್ನ ಸದ್ಗುರು ಸಮರ್ಥ 1 ಸೆರಗ ಸಿಲುಕದೆಂದು ತಿರುಗಿತು ವೇದ ಸರಸ್ವತಿ ಸ್ತುತಿಗೆ ತಾ ತೀರಲಿಲ್ಲ ಬೋಧ ವರಣಿಸಲಿಕ್ಕೆ ಶೇಷ ತಲೆಯು ಬಾಗಿದ ಮೊರೆ ಇಡುತಿಹುದೆಲ್ಲ ನಿನಗೆ ಗೋವಿಂದ 2 ಋಷಿಮುನಿಗಳಿಗೆ ತಾ ಪೆಸರೊಡೆಯದು ತುಸು ಕೊರತೆಲ್ಲ ತಾ ಪಸರಿಸಿಹ್ಯದು ಮಸಿ ಮಣ್ಣಾಯಿತು ಲೋಕ ಹೆಸರಿಗೆ ಬಂದು ದೆಸೆಗೆಟ್ಟಾಯಿತು ಬಹಳ ಉಸುರೊಡಿಯೆಂದು 3 ಮಾಡದ ಮಾಡಿತು ಲೋಕ ನೋಡೊ ನಿನಗಾಗಿ ಬಡದ ಭವಣೆಬಟ್ಟು ಹಿಡಿಯಲಿಕ್ಕೆ ಹೋಗಿ ಕೊಡಲಿಲ್ಲ ನಿಜಗುಟ್ಟು ಇವ್ಹನೀ ಅಡಗಿ ಯೋಗಿ 4 ಇದೆ ಮುಂದಣುವಾದ ನನ್ನದೇನು ಪಾಡು ಸಾಧಿಸಿ ಸದ್ಗುರು ಕೃಪೆ ನೀನೆ ದಂiÀiಮಾಡು ಒದಗಿ ಮಹಿಪತಿ ನೀ ದಯದಿಂದ ನೋಡು ಸದಮಲ ಸುಖವಾದ ಸುಧಾರಸವ ಕೊಡು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು