ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಚ್ಚರಿಯೊಳಚ್ಚರಿಯು ಅಚ್ಯುತನ ನಾಮವಿದು ತುಚ್ಛ ಬುದ್ಧಿಯ ಬಿಟ್ಟು ಎಚ್ಚೆತ್ತು ನೋಡೊ ಪ ನಿಧಿಯು ತನ್ನೆದುರಿಗಿರೆ ವದರಿ ದುರ್ಯೋಧನನು ಮದಡನಾದನು ಬರಿದೆ ದಳವ ಕೊಂಡು ಸದಮಲಾತ್ಮನ ದಿವ್ಯ ಪದವನರ್ಜುನ ಪಿಡಿದು ಮುದದಿ ಭಾಗ್ಯವ ಪಡೆದನದ್ಭುತವ ನೋಡ 1 ಹರಿಯ ಯೋಗದ ಸಿರಿಯು ಇರುವ ನಿಜವರಿಯದೆ ಕುರುಡನಣುಗನು ಜರಿದು ಹಾಳಾದನು ಉರುತರದ ಭಕ್ತಿಯಿಂದೆರಗಿ ಕರಗಳ ಮುಗಿದು ನರ ತನ್ನ ಹೆಸರನ್ನು ಸಾರ್ಥಕವಗೈದ 2 ನೀಚಯುಕ್ತಿಗಳಿಂದ ಗೋಚರಕೆ ಬಹನಲ್ಲ ವಾಚಾಮಗೋಚರನು ಶ್ರೀಕಾಂತನು ಕೀಚಕಾರಿ ಪ್ರಿಯನ ಶ್ರೀ ಚರಣ ಭಕ್ತಿ ಭವ-ಮೋಚನಕೆ ಸೂಚನೆಯು ಆಚರಿಸಿ ನೋಡೋ 3
--------------
ಲಕ್ಷ್ಮೀನಾರಯಣರಾಯರು
ಬಾಲಚಂದ್ರನ ರೂಪಾ ಭಯನಿವಾರಣ ನೋಡೋ ಬಾಲೆಯರೆಲ್ಲರು ಬಂದು ಕಾದಿರುವಾ ಲೊಲಾನವನ್ನು ಕಂಡು ಹೇಳಲು ನಾ ಬಂದೆ ಆಲಯಕ್ಕೆ ನೀ ಬಾ ಹಸೆಗೇಳೋ ಸೋಬಾನೆ 1 ಪನ್ನಂಗಶಯನ ಬಾರೊ ಚನ್ನಕೇಶವನಲ್ಲ ದಿನ್ನು ಬೇಕಾದ ಹೆಸರನ್ನು ಪಡೆದಿರುವೆ ಕನ್ನೆ ಸೀತೆಗೆ ಕೊಟ್ಟ ಹೊನ್ನವುಂಗರ ಕೊಡುವೆ ಬಿನ್ನಾಣದಿಂದ ಹಸೆಗೇಳೋ ಸೋಬಾನೆ 2 ಸುದತಿಯರೈವರು ಕದಳಿಹುವ್ವಿನ ಪೀಠ ಹದಮಾಡಿ ಕುಂತಿರುವರದೆ ಹೇಳಬಂದೆ ಮದನ ಜನಕ ಹಸೆಗೊದಗಿ ಅಲ್ಲಿನ ದಿವ್ಯ ಚದುರತನವನೋಡೊ ಹಸೆಗೇಳೋ ಸೋಬಾನೆ 3 ಋಷಿಗಳೆಲ್ಲರು ಜ್ಞಾನದೋಯ ಹಾಸನದೊಳೂ ಬಿಸಜಾಕ್ಷಿವರದನೆ ಗುರುವು ತುಲಸಿರಾಮಾ ಪಶುಪತಿಯಾದೆಯಾ ಹಸೆಗೇಳೋ ಸೋಬಾನೆ 4
--------------
ಚನ್ನಪಟ್ಟಣದ ಅಹೋಬಲದಾಸರು