ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಚನಗಳು ಬಲ್ಲೆ ಬಲ್ಲೆನೆಂಬರು ಬಲ್ಲವಿಕಿ ಕೀಲು ಮರೆವರು | ಬಲ್ಲವಿಕಿ ಮಾರ್ಗವ ಮೆಚ್ಚಿ ಬಲ್ಲರಕೂಡ ಶಣಸುವರು | ಮಂಡೆಗೆ ಬೂದಿ ರುದ್ರಾಕ್ಷವನಿಟ್ಟು ದಿಂಡೇರು ಶಿವಭಕ್ತರೆಂದು ಹೆಮ್ಮಿಲಿ | ಕಂಡ ಜಾತಿಗಳಲಿ ಕೊಳವಮೆದ್ದು | ಜೊಂಡು ಗಡ್ಡವ ಬಿಟ್ಟು | ಮಿಂಡೇರ ಘಲ್ಲಿಸುವ ತುಂಡವರೆತ್ತ ಶಿವಶÀರಣರೆತ್ತ | ಆ ಮೊಂಡ ರೆಳೆದೊಯ್ದು ತುಂಡಿಸಿ ಮೂಗನು ಭಂಡ ಸಾಸಿವೆಯ ತುಂಬಿ ದಂಡಿಸುವಾ ಯಮನೇ ಗುರುಜಂಗ ಮನಯ್ಯಾ ಮಹಾಗುರು
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನಾರಿಸುವಿ ಹರಿಯೇ ಎನ್ನವಗುಣಾ ಅನಂತಾನಂತ ತಪ್ಪು ಮಾಡಿದ ಪಾಮರೊಳೇನಾ ಪ ಉದಯ ಉದ್ಯೋಗನೆನುವೆ ಮಧ್ಯಾಹ್ನಕ ಕ್ಷುಧೆ ತೃಷೆಯಲ್ಲಿ ದಣಿವೆ ಇರುಳಿಗಿನ್ನು ವದಗಿ ನಿದ್ರೆ ಯನುವೆ ಇದರೊಳು ನಿನ್ನ ನಾಮನೆನೆಯದೆ ದಿನಗಳೆದೇನಾ 1 ನಿನ್ನ ಕಥೆಯಾ ಕೇಳದೇ ಮಂಗಳಂಗುಟ ಕಣ್ಣಿನೊಳಿಟ್ಟು ನೋಡದೇ ಸರ್ವಾಂಗದಿ ಚೆನ್ನಾಗಿ ಮಾಡದೇ ಎನ್ನ ಕಾಯವು ಸತಿಸುತರಿಗೆ ಮಾರಿದೇನಾ 2 ಹರಿ ಭಕ್ತಿ ಮುದ್ರೆ ಧರಿಸೀ ಹೆಮ್ಮಿಲಿ ದುರಾಚರಣೆ ಮಾಡಿದ ಕ್ಷಮಿಸೀ ಸತ್ಸಂಗದಿ ಅರಿವಿಗೆ ಮನನೀಲಿಸೀ ಹೊರೆವದು ಗುರು ಮಹಿಪತಿಸ್ವಾಮಿ ಕರುಣಿಸಿ ಎನ್ನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡು ನಿನ್ನೊಳು ನಿನ್ನುಗಮ ಮನವೆ ಧ್ರುವ ನೋಡು ಒಡನೆ ಖೂನ ಬಿಡದೆ ಸಾರುತದೆ ನಿಗಮಾ ದೃಢ ಭಾವದಲಿ ಪಡೆದು ಸದ್ಗುರು ದಯ ವಿಡಿದು ಸೆರಗ ಕುಡುವದಿದು ಸುಗಮ 1 ಉಗಮಸ್ಥಾನದ ಉದ್ಭವ ತಿಳಿಯದೆ ಬಿಗಿದ್ಹೆಮ್ಮಿಲಿಹುದ್ಯಾಕೆ ಬಗೆ ಬಗೆ ಸಾಧನ ಶ್ರಮಗೊಂಡು ಜಗಜಾಲದಿ ಭ್ರಮಿಸುವುದಿದೇಕೆ 2 ನಿರ್ಮಳ ನಿಶ್ಚಳ ನಿಜಘನವರಿತು ಕರ್ಮ ಬಂಧನವ ಗೆಲಿಯಾ ಮರ್ಮಿಲಿ ಮಹಿಪತಿ ಗುರುಯೋಗಧರ್ಮದಿ ನಿರ್ಮನದಲಿ ನಿಜಗೂಡ ಮನವೇ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು