ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಗದಂತರ್ಯಾಮಿಯೆಂದೆನುತ ನಿನ್ನನಿಗಮ ಸಾರುವ ಮಾತು ಪುಸಿಯೆ ರಂಗ ಪ ಸಿರಿ ಸಂಪತ್ತುಗಳನೀವಶ್ರೀದೇವಿ ನಿನ್ನ ಹಿರಿಯರಸಿಯೋ ದೇವ 1 ಎಂಬತ್ತುನಾಲ್ಕು ಲಕ್ಷ ಜೀವರಾಶಿಗಳನ್ನುಬೊಂಬೆಗಳ ಮಾಡಿ ಭವರಂಗದಲಿತುಂಬಿ ಕಲೆಗಳನೊತ್ತಿ ನೊಸಲ ಬರೆಹವ ಬರೆವಅಂಬುಜೋದ್ಭವ ನಿನ್ನ ಹೆಮ್ಮಗನು ದೇವ 2 ಸಕಲ ಜೀವರಾಶಿಗಳನು ಕಲ್ಪಿಸುವ ಬೀಜಸುಖದಿಂದ ಮಾಯಾಂಗನೆಯರೊಡಲೊಳುಅಕ್ಕರದಿ ಪಿಂಡಾಂಡಗಳ ಕಟ್ಟಿ ಬಲಿಸುವಮಕರಾಂಕ ನಿನ್ನ ಕಿರಿಮಗ ದೇವ 3 ರಾಮನಾಮವ ಜಪಿಸಿ ಪರಮ ವೈಷ್ಣವನಾಗಿಹೇಮಗಿರಿ ಸನಿಹ ಸಾಹಸ್ರನಾಮಪ್ರೇಮದಲಿ ಜಪಿಸುತ್ತ ವೈರಾಗ್ಯನಿಧಿಯಾದಸೋಮಶೇಖರನು ನಿನ್ನ ಮೊಮ್ಮಗನು 4 ಜಂಗಮ ಸ್ಥಾವರಕಾಧಾರವಾಗಿಹಳುಭಂಗಪಡುವ ಜನರ ಕರ್ಮವ ಕಳೆವಳುಹಿಂಗದೆ ಜಗವ ಪಾವನವ ಮಾಡುವ ಪುಣ್ಯಗಂಗೆಯೆಂಬಾಕೆ ನಿಮ್ಮಯ ಮಗಳು ದೇವ 5 ಶುದ್ಧ ಬುದ್ಧಿಯನುಳ್ಳ ಪ್ರದ್ಯುಮ್ನನಾ ಮಗಳುಶ್ರದ್ಧೆಯೆನಿಸಿಕೊಂಡು ಸೂತ್ರಗೆ ಸತಿಯಾಗಿಸದ್ಯೋಜಾತನ ಪಡೆದು ಪ್ರಸಿದ್ಧವಹ ದೇವಿ ಈ ಧರೆಯೊಳು ಪುಟ್ಟಿ ನಿನ್ನ ದಾಸಿಯಾದಳು 6 ಇಂತು ಅಣುರೇಣು ತೃಣ ಕಾಷ್ಠದೊಳಗೆಲ್ಲಸಂತೋಷವಾಗಿಹುದು ನಿನ್ನ ಸ್ಮರಣೆಯಂತ್ರವಾಹಕನೆಂಬ ಬಿರುದು ಸಲುವುದು ನಿನಗೆಕಂತುಪಿತ ಕಾಗಿನೆಲೆಯಾದಿಕೇಶವನೆ 7
--------------
ಕನಕದಾಸ
ಬಾರೊ ಮಹೇಶತನಯ ಗಣೇಶ ವರ ವಿಷ್ಣುಪದಕÀಭಿಮಾನಿ ವಿಘ್ನೇಶ ಪ ನಿನ್ನ ಪೂಜಿಸಿ ಧರ್ಮರಾಜನು ಗೆದ್ದ ನಿನ್ನ ಪೂಜಿಸದೆ ದುರ್ಯೋಧನ ಬಿದ್ದ ನಿನ್ನ ಪೂಜಿಸಿ ರಾಮ ಸತಿಯನೆ ಪಡೆದ ನಿನ್ನನರ್ಚಿಸದ ದಶಕಂಠನು ಕೆಟ್ಟ 1 ಸುರಮುಖ್ಯರೆಲ್ಲರು ನಿನ್ನ ಪೂಜಿಪರು ಪರಮಾತ್ಮನಿಗೆ ನೀನು ಮರಿಮಗನಿರುವಿ ಸುರಮುನಿ ದಿತಿಜಾದಿಗಳಿಗತಿಪ್ರಿಯನೆ ಸರುವರಿಂದಲು ಮೊದಲು ಪೂಜೆಗೊಂಬನೆ 2 ರಾಜೀವಾಕ್ಷಗೆ ಸತ್ಯಾದೇವಿಯೊಳ್ಜನಿಸಿ ಮೂಜಗದಲಿ ನೀನು ಪೂಜ್ಯನೆಂದೆನಿಸಿ ಕಂಜಜತನಯನ ಹೆಮ್ಮಗ ಕಂಡ್ಯಾ 3
--------------
ವಿಶ್ವೇಂದ್ರತೀರ್ಥ
ಎಂಥ ಶ್ರೀಮಂತಾನಂತನೆ ಶ್ರೀಕಾಂತೆಯ ಕಾಂತಎಂಥ ಶ್ರೀಮಂತಾನಂತನೆ ಪ.ಬೊಮ್ಮನು ಹೆಮ್ಮಗ ಮೊಮ್ಮ ಮೃಡಮ್ಮರಿಮೊಮ್ಮ ಶಚಿಮನೋರಮ್ಮ ಸ್ಮರಮ್ಮಗಅಮ್ಮರಸಮ್ಮೂಹ ನಿಮ್ಮನುಗಮ್ಯರುನಮ್ಮೊ ನಮ್ಮೊ ಪರಮ್ಮ ಮಹಿಮ್ಮ 1ಪನ್ನಗಾಪನ್ನ ಶಯನ್ನಕ್ಕೆ ಬೆನ್ನೀವಪನ್ನಗಾಶನ್ನ ವಾಹನ್ನ ರತುನ್ನ ಭವನ್ನ ಸುಖೋನ್ನತರನ್ನಾಗರ ನಿಜನಿನ್ನಿದಿರಿನ್ನಾರೆನ್ನೊಡೆಯನ್ನೆ 2ಬಲ್ಲ ಕೈವಲ್ಯಜÕರೊಲ್ಲಭ ಸುಲ್ಲಭಬಲ್ಲಿದಕ್ಷುಲ್ಲರದಲ್ಲಣನಲ್ಲವೆಹುಲ್ಲಲುಗಲಳವಲ್ಲ ನೀನಿಲ್ಲದೆಸಲ್ಲದು ಸೊಲ್ಲದು ನಿಲ್ಲದಿದೆಲ್ಲ 3ಅಂಗಕೆ ಹೆಂಗಳಾಲಿಂಗನಾಂತ ಗಡಮಂಗಳಾಪಾಂಗ ವಿಶ್ವಂಗಳ ಮಂಗಳಸಿಂಗರದುಂಗುಟ ಸಂಗದಗಂಗೆ ಜಗಂಗಳಘಂಗಳ ಹಿಂಗಿಪಳು ರಂಗ 4ಅಂಬರದಂಬುಗೆ ತುಂಬೆ ವಿಶ್ವಂ ಬಸುರಿಂಬಿಲಿ ಇಂಬಿಟ್ಟುಕೊಂಬ ಕೃಪಾಂಬುಧಿಡಿಂಬಕದಂಬದ ಬಿಂಬ ಪ್ರಸನ್ವೆಂಕಟನಂಬಿದರ್ಗಿಂಬೀವನೆಂಬ ಕುಟುಂಬಿ 5
--------------
ಪ್ರಸನ್ನವೆಂಕಟದಾಸರು