ಒಟ್ಟು 5 ಕಡೆಗಳಲ್ಲಿ , 1 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸಬಾರದೇನು ಶರಣೆಂಬೆ ನಾನು ಕರುಣಿಸ ಬಾರದೆ ಮೊರೆಯ ಹೊಕ್ಕವನ ಶರಣಾಗತ ಪಂಜರನೆಂಬೊ ಬಿರುದಿರೆ ಪ ಸ್ತಂಭದಿ ನೀ ಬಂದು ದೈತ್ಯನ ಬೇಗ ಶೀಳಿಕೋಪದಿಂದ ಇರಲು ಆಗ ಬ್ರಹ್ಮೇಂದ್ರ ರುದ್ರ ವೃಂದ ಬೆದರಿ ಪೋಗೆ ಪ್ರಹ್ಲಾದನಾಗ ಇಂದಿರಾವರ ಗೋವಿಂದ ಕೃಪೆಯ ಮಾಡೆಂದು ಸ್ತುತಿಸೆ ಆನಂದದಿ ಕಾಯ್ದತಿ ಸುಂದರಮೂರ್ತಿ ಮುಕುಂದ ಧರಣಿಧರ ಸಿಂಧುಶಯನ ಅರವಿಂದನಯನ ಹರಿ 1 ದಶರಥ ಸುತನೆನಸಿ ಮುನಿಯಧ್ವರ ಕುಶಲದಿನ್ನುದ್ಧರಿಸಿ ಪಶುಪತಿ ಧನು ಭಂಜಿಸಿ ಸೀತೆಯ ಕೋರಿ ದಶರಥನಾಜ್ಞೆ ವಹಿಸಿ ಕಾನನದಿ ಚರಿಸಿ ಕುಶನಿಧಿಯನು ಬಂಧಿಸಿ ರಾವಣನ ದಶ ಶಿರಗಳ ಭರದಿಂದಲಿ ಖಂಡಿಸಿ ಅವನನುಜಗ ನಿಶದೊಳ್ ಶಿರಿಲಾಲಿಸಿ ಪೊರೆದ ಶ್ರೀಶಶಿಧರನÀು ಹರಿ 2 ನಕ್ರ ಭಂಗಬಡಿಸೆ ಗಜಗಳರಸ ರಂಗ ಮುರಾರಿ ದೇವೋತ್ತುಂಗ ಶ್ರೀ ಶ್ಯಾಮಲಾಂಗ ಭಕ್ತಾಭಿಮಾನಿ ಮಂಗಳಾರಸತ್ಸಂಗ ಜಗದಂತರಂಗ ವಿಹಂಗ ಸಿರಿ ನರಸಿಂಹ ಬಂದು ಶಾಪಂಗಳ ತರಿದೆ ಭುಜಂಗತಲ್ಪ ಕಾನಂಗಪಿತ 'ಹೆನ್ನೆರಂಗ' ಶರಣು ರಣರಂಗ ಭೀಮ ಹರಿ 3
--------------
ಹೆನ್ನೆರಂಗದಾಸರು
ರಂಗ ಬಂದನೋ ಮೋಹನಾಂಗ ಬಂದನೋ ರಂಗ ಬಂದ ನೋಡಿ ಹೆನ್ನೆರಂಗ ದೇವೋತ್ತುಂಗ ಕೃಷ್ಣ ಪ ಭೋಗಿಶಯನ ಭವರೋಗಹರಣ ನಿಗಮಾ ಗಮಗನುತ ಶರಣಾಗತ ಪೋಷ 1 ಮಂದರಧರ ಮುಚುಕುಂದವರದ ರಾಕೇಂದುವದನ ಗೋವಿಂದ ಮುಕುಂದ 2 ತಾಪಸವಂದಿತ ಶ್ರೀಪತಿ ಘನ ಹೆನ್ನೆಪುರ ನರಹರಿ ಭೂಪರಿಪಾಲನ 3
--------------
ಹೆನ್ನೆರಂಗದಾಸರು
ರಾಮ ರಮಣಾರಘು ಪ ಸುಂದರವದನಾಸುರಮನಿ ಪಾಲಕ ಮಾಧವ ಕೃಷ್ಣ ಹರಿ 1 ಕುಂಡಲೀಶ ಶಯನ ಕೋದಂಡಧರ ಘನ ಮಂಡಲಾಧಿಪತಿ ಮಹಾಮಹಿಮ ರಘುಪತಿ 2 ಶ್ರೀ ಜಗನ್ನಾಯ್ಕನೆ ಶ್ರೀತಜನಪೋಷಕ ರಾಜಾಧಿರಾಜ ಮತ್ರ್ಯರಾಜನೆನಿಸಿಹ 3 ವೆಂಕಟರಮಣ ಅಕಳಂಕ ಮಹಿಮ ಪಂಕಜೋದ್ಭವನಯ್ಯಾ ಪರಮಭಕ್ತರ ಪ್ರಿಯ 4 'ಹೆನ್ನೆರಂಗ ' ಬಿಲವಾಸ ಹೆನ್ನ ಚಿನ್ಮಯ ರೂಪ ಶ್ರೀ ಚಿತ್ತಜನಯ್ಯ ಭೂಪ 5
--------------
ಹೆನ್ನೆರಂಗದಾಸರು
ವಂದೇ ಹಂ ಶ್ರೀವರ ಕರಿವರದಂ ವೃಂದಾರಕನುತ ಸುಂದರಪಾದಂ ಪ ಈಶ ಭಕ್ತ ಭವಪಾಶನಾಶ ವಾಗೀಶ ಜನಕ ಲಕ್ಷ್ಮೀಶ ಪರೇಶ 1 ರಾಮತ್ರಿಜಗದಭಿರಾಮ ನೀರದ ಶ್ಯಾಮ ಸುರಾರಿಸ್ತೋಮ ವಿರಾಮ 2 ವಿಹಂಗ ಗಮನಯದು ಪುಂಗವ `ಹೆನ್ನೆರಂಗ ' ಕೃಪಾಂಗ 3
--------------
ಹೆನ್ನೆರಂಗದಾಸರು
ವಿಷ್ಣೋ ಭೋ ಸಂಸೇವಿತ ಜಿಷ್ಣೊ ಉಷ್ಣಾಂಶಾಯುತ ಪುರುರೋಚಿಷ್ಣೊ ಪ ಸುಜನ ಭವಪಾಶನಾಶ ವಾಗೀಶಜನಕ ಲಕ್ಷ್ಮೀಶ ಪರೇಶ 1 ನೀರದ ಶ್ಯಾಮ ಸುರಾರಿಸ್ತೋಮ ವಿರಾಮ 2 ವಿಹಂಗ ಗಮನಯದು ಪುಂಗವ `ಹೆನ್ನೆರಂಗ ' ಕೃಪಾಂಗ 3
--------------
ಹೆನ್ನೆರಂಗದಾಸರು